Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ನಿತ್ಯ ಹಸುವಿಗೆ ಆಹಾರ ನೀಡಿದರೆ ನವಗ್ರಹ ದೋಷದಿಂದ ಮುಕ್ತಿ ಸಿಗಲಿದೆ!
Insync
oi-Shwetha Salian
ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ನಿಮಗೆಲ್ಲಾ ಗೋ ಪೂಜೆಯ ಬಗ್ಗೆ ಗೊತ್ತಿರಹುದು. ದೀಪಾವಳಿ ಸಂದರ್ಭದಲ್ಲಿ ಕಡ್ಡಾಯವಾಗಿ ಹಿಂದೂ ಸಂಪ್ರದಾಯದಂತೆ ಗೋವಿಗೆ ಪೂಜೆ ಮಾಡಿ ಅದಕ್ಕೆ ಆಹಾರವನ್ನು ಅರ್ಪಿಸುವ ಕ್ರಮವಿದೆ.
ಅದೇ ರೀತಿ ನಮ್ಮ ಜಾತಕದಲ್ಲಿರುವ ಕೆಲವೊಂದು ದೋಷ ಪರಿಹಾರವಾಗಬೇಕೆಂದರೆ ಗೋ ಪೂಜೆ ಮಾಡುವುದು ಒಳ್ಳೆಯದು. ಗೋ ಪೂಜೆ ಮಾಡಿ, ಗೋವುಗಳಿಗೆ ಆಹಾರವನ್ನು ಅರ್ಪಿಸಿದರೆ ಜಾತಕದಲ್ಲಿದ್ದ ದೋಷಗಳು ಪರಿಹಾರವಾಗುತ್ತೆ ಎನ್ನುವ ನಂಬಿಕೆಯಿದೆ. ಅಷ್ಟಕ್ಕು ಗೋ ಪೂಜೆ ಮಾಡೋದ್ರಿಂದ ಏನೆಲ್ಲಾ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.

- ಒಬ್ಬ ವ್ಯಕ್ತಿಯು ಹಸುವಿಗೆ ಆಹಾರವನ್ನು ನೀಡುವಾಗ ಹಸು ಉಸಿರಾಡುವ ಸದ್ದು, ಹಾಗೂ ಅದರ ವಾಸನೆಯನ್ನು ಅನುಭವಿಸುತ್ತಾನೆ. ಇದರಿಂದ ರಾಹುವಿಗೆ ಸಂಬಂಧಿಸಿದ ನಕಾರಾತ್ಮಕ ಅಂಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತಂತೆ.
- ಹಸುವಿನ ಹತ್ತಿರ ಹೋದರೆ ಜನರ ಕೋಪ ಮತ್ತು ಉದ್ವೇಗವನ್ನು ಜಯಿಸಲು ಸಹಾಯ ಮಾಡುತ್ತಂತೆ. ಅಷ್ಟೇ ಅಲ್ಲ, ನಮ್ಮ ಬದುಕಿನಲ್ಲಿ ಶಾಂತಿ ಮತ್ತು ನಿರಾಳತೆಯನ್ನು ನೀಡುತ್ತಂತೆ.
- ಹಸುವಿಗೆ ಆಹಾರ ನೀಡೋದ್ರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೇ, ನಾವು ಸಂತೋಷವಾಗಿರಲು ಸಾಧ್ಯವಾಗುತ್ತಂತೆ.
- ನಮ್ಮ ಜಾತಕದಲ್ಲಿ ಚಂದ್ರ ಅನುಕೂಲಕರ ಸ್ಥಿತಿಯಲ್ಲಿ ಇಲ್ಲದಿದ್ದರೆ ಅದರಿಂದ ನಮಗೆ ಮೂತ್ರದ ಸೋಂಕು ಉಂಟಾಗುವ ಸಾಧ್ಯತೆಯಿದೆ. ಇಂತಹ ಸಮಸ್ಯೆಯನ್ನು ಹೋಗಲಾಡಿಸಬೇಕೆಂದರೆ ಗೋ ಮೂತ್ರ ಬಳಕೆ ಮಾಡುವುದು ಉತ್ತಮ.
- ಹಸುವಿಗೆ ಆಹಾರ ನೀಡೋದ್ರಿಂದ ನಿಮಗೆ ಯಾವುದೇ ರೀತಿ ಮಾನಸಿಕ ಸಮಸ್ಯೆ ಎದುರಾಗೋದಿಲ್ಲ. ಖಿನ್ನತೆ, ಆತಂಕಗಳಂತಹ ಸಮಸ್ಯೆಯನ್ನು ದೂರ ಮಾಡುತ್ತದೆ
- ಬೆಳಗ್ಗೆ ಹಸುವಿಗೆ ಚಪಾಯಿಯನ್ನು ನೀಡಿದರೆ ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗುತ್ತದೆ
- ಗೋಮೂತ್ರ ಕುಡಿಯೋದ್ರಿಂದ ಕೆಟ್ಟ ಕನಸುಗಳು ಮತ್ತು ರಾಹುವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ
- ನಿಮ್ಮ ಜಾತಕದಲ್ಲಿ ಚಂದ್ರನ ದುರ್ಬಲ ಸ್ಥಾನದಿಂದುಂಟಾದ ಆರ್ಥಿಕ ಸಮಸ್ಯೆಯನ್ನು ಹಸುವಿಗೆ ಆಹಾರವನ್ನು ನೀಡುವುದರ ಮೂಲಕ ಬಗೆಹರಿಸಿಕೊಳ್ಳಬಹುದು.
- ನಮ್ಮ ಜಾತಕದಲ್ಲಿ ಬುಧ ದುರ್ಬಲ ಸ್ಥಾನದಲ್ಲಿದ್ದಾಗ ಸಂವಹನ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಉಂಟಾಗುತ್ತದೆ. ಅದನ್ನು ಹಸುವಿಗೆ ಮೇವು ನೀಡೋದ್ರ ಮುಖಾಂತರ ಪರಿಹರಿಸಿಕೊಳ್ಳಬಹುದು.
- ನಮ್ಮ ನಮ್ಮ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿ ಇಲ್ಲದಿದ್ದಾಗ ನಮ್ಮಲ್ಲಿ ಹತಾಶೆ ಹಾಗೂ ಕೋಪ ಹೆಚ್ಚಾಗುತ್ತದೆ. ಹಾಗೂ ವೃತ್ತಿ ಜೀವನದಲ್ಲೂ ಕೂಡ ನಾವು ಯಶಸ್ಸು ಸಾಧಿಸೋದಕ್ಕೆ ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಹಸುಗಳಿಗೆ ಗೋಧಿ ನೀಡಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತಂತೆ.
- ಜಾತಕದಲ್ಲಿ ಶುಕ್ರ ಗ್ರಹದ ದುರ್ಬಲ ಸ್ಥಾನವನ್ನು ಬಲಪಡಿಸಲು ಶುಕ್ರವಾರದಂದು ಹಸುವಿಗೆ ಅನ್ನವನ್ನು ತಿನ್ನಿಸಬೇಕು. ಇನ್ನೂ ಉತ್ತಮ ಫಲಿತಾಂಶಗಳನ್ನು ಪಡೆಯಲು ಅಕ್ಕಿಯ ಜೊತೆಗೆ ಏನಾದರೂ ಸಿಹಿ ನೀಡಿದರೆ ಒಳ್ಳೆಯದಂತೆ.
- ಶನಿವಾರದಂದು ಸಾಸಿವೆ ಎಣ್ಣೆಯಲ್ಲಿ ತಯಾರಿಸಿದ ಚಪಾತಿಯನ್ನು ಹಸುವಿಗೆ ತಿನ್ನಿಸುವುದರಿಂದ ನಮ್ಮ ಜಾತಕದಲ್ಲಿ ಶನಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.
- ಯಾರ ಜಾತಕದಲ್ಲಿ ಕೇತು ದುರ್ಬಲ ಸ್ಥಾನದಲ್ಲಿದ್ದಾನೋ ಅವರು ಹಸುವಿಗೆ ಎಳ್ಳು ಮತ್ತು ಗೋಧಿಯನ್ನು ತಿನ್ನಿಸಬೇಕು.
- ಗುರುವಾರ ಹಸುವಿಗೆ ಗೋಧಿ ಹಿಟ್ಟಿನಿಂದ ಮಾಡಿದ ಆಹಾರವನ್ನು ತಿನ್ನಿಸುವ ಮೂಲಕ ನಮ್ಮ ಜಾತಕದಲ್ಲಿ ಗುರು ಗ್ರಹದ ಸ್ಥಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
- ನಿಮ್ಮ ಜಾತಕದಲ್ಲಿ ಗ್ರಹಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ಕೂಡ ನಿಮ್ಮ ಸಂತೋಷ ಮತ್ತು ಸಮೃದ್ಧ ಜೀವನಕ್ಕಾಗಿ ಹಸುಗಳಿಗೆ ಆಹಾರವನ್ನು ನೀಡಬಹುದು.
ಹಸುವು ಪೂಜ್ಯನೀಯ ಸ್ಥಾನದಲ್ಲಿ ಇರೋದ್ರಿಂದ ಹಸುವಿಗೆ ಆಹಾರ ನೀಡೋದ್ರಿಂದ ನಮ್ಮ ನಾನಾ ರೀತಿಯ ದೋಷಗಳಿಗೆ ಪರಿಹಾರ ಕಂಡುಕೊಳ್ಳಬಹುದು.
Comments
English summary
Positive Effects of Feeding Cows Based on Astrology in Kannada
Story first published: Saturday, June 24, 2023, 17:00 [IST]
Other articles published on Jun 24, 2023



Click it and Unblock the Notifications
