Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
5000 ವರ್ಷಗಳ ಹಿಂದೆ ನೀರಿನಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕಾ ನಗರದ ಕುರಿತ ಆಸಕ್ತಿಕರ ಸಂಗತಿಗಳು
ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದರೆ ಅದು ರಾಮಾಯಣ, ಮಹಾಭಾರತ.. ನಿಜವಾಗಲು ಆ ಪುಸ್ತಕಗಳು ಒಬ್ಬ ವ್ಯಕ್ತಿ ಮಧ್ಯಮದಿಂದ ಉತ್ತಮನಾಗಲು ಯಾವ ಗುಣಗಳನ್ನು ಹೊಂದಿರಬೇಕು ಎಂಬ ಮಾರ್ಗದರ್ಶನಗಳನ್ನು ಆ ಎರಡು ಪವಿತ್ರ ಗ್ರಂಥಗಳು ಮಾಡುತ್ತವೆ. ಕೆಲವರು ರಾಮಾಯಣ, ಮಹಾಭಾರತವನ್ನು ಕಾಲ್ಪನಿಕ ಕತೆ ಎಂದು ಹೇಳುತ್ತಾರೆ, ಆದರೆ ಹಿಂದೆ ಮಹಾಭಾರತ ಹಾಗೂ ರಾಮಾಯಣದ ಕತೆಗಳು ನಿಜವಾಗಿ ನಡೆದಿತ್ತು ಎಂಬುವುದಕ್ಕೆ ಈಗಲೂ ಹಲವಾರು ಸಾಕ್ಷಿಗಳು ದೊರೆಯುತ್ತದೆ.
ಅದಕ್ಕೆ ಪ್ರಮುಖ ಸಾಕ್ಷಿ ದ್ವಾರಕಾ ನಗರ. ಈ ದ್ವಾರಕಾ ನಗರ ಈಗಲೂ ಇದೆ, ಆದರೆ ಆಳ ಸಮುದ್ರದಲ್ಲಿ ಮುಳುಗಿ ಹೋಗಿದೆ, ಇದೀಗ ಪ್ರಧಾನು ಮೋದಿ ಆಳವಾದ ನೀರಿನಲ್ಲಿ ಸ್ಕೂಬಾ ಡೈವ್ ಮಾಡಿ ದ್ವಾರಕಾಧೀಶ ದೇವಾಲಯಕ್ಕೆ ಭಾನುವಾರ ಪ್ರಾರ್ಥನೆ ಸಲ್ಲಿಸಿದರು. ನಂತರ ದೈವಿಕ ಅನುಭವ ಎಂದು ಕೂಡ ಬಣ್ಣಿಸಿದ್ದಾರೆ.

ದ್ವಾರಕಾ ಶ್ರೀಕೃಷ್ಣನ ನಗರ, ಈ ನಗರದ ಬಗ್ಗೆ ಪುರಾತತ್ವ ಶಾಸ್ತ್ರಜ್ಞರು ಸಾಕಷ್ಟು ಬರಹ ಬರೆದಿದ್ದಾರೆ, ಆದರೆ ಅದನ್ನು ನೋಡುವ ಸೌಭಾಗ್ಯ ಪ್ರಧಾನಿಯವರಿಗೆ ಸಿಕ್ಕಿದೆ. 'ನಾನಿಂದು ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡಿದೆ. ಅದೀಗ ನೀರಿನಲ್ಲಿ ಮುಳುಗಿದೆ, ಆ ದೇವಾಲಯವನ್ನು ದರ್ಶನ ಮಾಡಿದ ಕ್ಷಣ ಪುರಾತನ ಕಾಲಕ್ಕೆ ಮರಳಿದೆ, ಭಕ್ತಿ ಭಾವ ನನ್ನಲ್ಲಿ ಉಕ್ಕಿ ಬಂತು, ಭಗವಂತ ಶ್ರೀ ಕೃಷ್ಣನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ' ಎಂದು ಹೇಳಿದ್ದಾರೆ.
ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದ ಬಗ್ಗೆ ಆಸಕ್ತಿಕರ ಸಂಗತಿಗಳೆಂದರೆ
5000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಿದೆ
ದ್ವಾರಕಾ ನಗರ ನಿರ್ಮಾಣವಾಗಿದ್ದು ದ್ವಾಪರ ಯುಗದಲ್ಲಿ. ಸುಮಾರು 5000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಡೆಯಾಗಿದೆ. ಈ ದ್ವಾರಕಾ ನಗರದ ಅವಶೇಷಗಳು ಈಗಲೂ ಇದೆ ಎಂದು ಹೇಳಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಇಲ್ಲಿಯ ದೇವಾಲಯದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯುವ ಮೂಲಕ ಮತ್ತೆ ದ್ವಾರಕಾ ನಗರ ಟ್ರೆಂಡ್‌ನಲ್ಲಿದೆ.
ಈ ದ್ವಾರಕಾ ಎಲ್ಲಿದೆ?
ಗುಜರಾತ್‌ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150 ಅಡಿ ಆಳದಲ್ಲಿ ಈ ದ್ವಾರಕಾ ನಗರವಿದೆ.
ಪುರಾತನ ನಗರಗಳಲ್ಲಿ ಈ ದ್ವಾರಕಾ ನಗರವೂ ಒಂದಾಗಿದೆ. ಇದು ಶ್ರೀಕೃಷ್ಣನ ಚಾರ್‌ಧಾಮ(ನಾಲ್ಕು ಧಾಮ)ಗಳಲ್ಲಿ ಒಂದಾಗಿದೆ. ಕೃಷ್ಣನು ಮಥುರೆಯಲ್ಲಿ ಯುದ್ಧವನ್ನು ಪರಿತ್ಯಜಿಸಿ ಮಥುರಾದಿಂದ ಬಿಟ್ಟು ದ್ವಾರಕೆಗೆ ಬಂದು ನೆಲೆಸಿದನು. ಇದು ಒಕಾ ಮಂದಿರಿನ ಸಮೀಪದಲ್ಲಿದೆ. ಇಲ್ಲಿಯ ಶ್ರೀ ಕೃಷ್ಣ ತನ್ನ ಜೀವನದ ಉಳಿದ ಸಮಯವನ್ನು ಕಳೆದನು, ಶ್ರೀ ಕೃಷ್ಣನ ಈ ಭೂಮಿ ವಾಸ ಅಂತ್ಯವಾದ ಬಳಿಕ ಈ ನಗರ ಮುಳುಗಿತು ಎಂದು ಹೇಳಲಾಗುವುದು.
ದ್ವಾರಕಾ ಎಂದರೆ ಅರ್ಥವೇನು?
ದ್ವಾರಕಾ ಎಂಬುವುದು ಸಂಸ್ಕೃತದ ದ್ವಾರ್ ಎಂಬ ಪದದಿಂದ ಬಂದಿದೆ. ದ್ವಾರ್ ಎಂದರೆ ಬಾಗಿಲು, ಇದು ಬ್ರಹ್ಮನ ಬಾಗಿಲು ಎಂದು ಕರೆಯಲಾಗುವುದು. ಈ ದ್ವಾರಕಾ ಶ್ರೀಕೃಷ್ಣನ ಸ್ಥಳವಾಗಿದ್ದು ಹಲವು ಅದ್ಭುತ ಧಾರ್ಮಿಕ ರಹಸ್ಯಗಳನ್ನು ಹೊಂದಿದ ಸ್ಥಳವಾಗಿದೆ. ದ್ವಾರಕಾದ ಶ್ರೀಕೃಷ್ಣನಲ್ಲಿ ಎರಡು ದ್ವಾರಗಳಿವೆ. ಗೋಮತಿ ನದಿಯ ಸಮುದ್ರದೆಡೆಗೆ ಹರಿದು ಸೇರುವ ಸಂಗಮವನ್ಉ ಈ ದೇವಾಲಯದಲ್ಲಿ ಕಾಣಬಹುದು. ಈ ದ್ವಾರಕಾದಲ್ಲಿ ವಸುದೇವ, ದೇವಕಿ, ಬಲರಾಮ, ರೇವತಿ ಸುಭದ್ರ, ರುಕ್ಮಿಣಿ, ಜಾಂಬಾವತಿ ಹಾಗೂ ಸತ್ಯಾಭಾಮರ ಮೂರ್ತಿಗಳು ಈ ದ್ವಾರಕಾದಲ್ಲಿದೆ.
ಇದೀಗ ಪ್ರಧಾನಿ ಮೋದಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿಗೆ ಬಂದು ಕೃಷ್ಣ ಭಕ್ತರು ಈ ದೇವಾಲಯ ದರ್ಶನ ಪಡೆಯುವವರ ಸಂಖ್ಯೆ ಖಂಡಿತ ಹೆಚ್ಚಾಗಲಿದೆ.



Click it and Unblock the Notifications
