Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಗಳೂರು ಟ್ರಾಫಿಕ್‌ನಲ್ಲಿದ್ದ ವ್ಯಕ್ತಿಗೆ ಬಂತು ಪಿಜ್ಜಾ ಪಾರ್ಸಲ್, ವೀಡಿಯೋ ವೈರಲ್
ಬೆಂಗಳೂರಿನಲ್ಲಿದ್ದವರಿಗೆ ಅಲ್ಲಿಯ ಟ್ರಾಫಿಕ್ ಹೇಗಿರುತ್ತೆ ಎಂಬ ಅನುಭವವಿರುತ್ತದೆ. ನಮ್ಮ ಆಯಸ್ಸಿನ ಅರ್ಧ ಭಾಗ ನಾವು ಟ್ರಾಫಿಕ್‌ನಲ್ಲಿಯೇ ಕಳೆಯುತ್ತೇವೆ ಎಂದರೆ ತಪ್ಪಾಗಲಾರದು. ಒಂದು ಕಿ. ಮೀ ನಡೆದುಕೊಂಡು ಹೋಗಲು 10-15ನಿಮಿಷ ಸಾಕಾಗುತ್ತೆ, ಆದರೆ ಕೆಲವೊಮ್ಮೆ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಾಕಿಕೊಂಡರೆ ಗಾಡಿಯಲ್ಲಿ ಒಂದು ಕಿ. ಮೀ ಕ್ರಮಿಸಲು ಒಂದು ಗಂಟೆಗೂ ಅಧಿಕ ಸಮಯ ಬೇಕಾಗುತ್ತದೆ ಅಲ್ವಾ?

ಈ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಾಕಿಕೊಂಡಾಗ ಹೊಟ್ಟೆ ಹಸಿವಾದರಂತೂ ತಲೆನೇ ಕೆಟ್ಟು ಹೋಗುತ್ತದೆ ಅಲ್ವಾ? ಅಂಥ ಸಂದರ್ಭದಲ್ಲಿ ಟ್ರಾಫಿಕ್‌ನಲ್ಲಿ ಇರುವಾಗಲೇ ನಮಗೆ ಫುಡ್ ಡೆಲಿವರಿಯಾದರೆ? ಇದೇನು ಕಲ್ಪನೆಯ ಕತೆಯೇ ಎಂದು ಕೇಳಬೇಡಿ, ಇಲ್ಲೊಬ್ಬರಿಗೆ ಟ್ರಾಫಿಕ್‌ನಲ್ಲಿ ಇರುವಾಗಲೇ ಪಿಜ್ಜಾ ಡೆಲಿವರಿ ಮಾಡಲಾಗಿದ್ದು ಅದನ್ನು ಅವರು ವೀಡಿಯೋ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಂತೆ ತುಂಬಾನೇ ವೈರಲ್ ಆಗುತ್ತಿದೆ.
Rishivaths ಎಂಬ ಟ್ವಿಟ್ ಬಳಕೆದಾರರು ತಮಗೆ ಟ್ರಾಫಿಕ್‌ನಲ್ಲಿ ಫುಡ್ ಡೆಲಿವರಿ ಆದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರಾಫಿಕ್‌ನಲ್ಲಿದ್ದಾಗ ಡೊಮಿನೋಸ್ ಪಿಜ್ಜಾಆರ್ಡರ್ ಮಾಡಿದ್ದಾರೆ, ಡೊಮಿನೋಸ್ ಪಿಜ್ಜಾ ಡೆಲಿವರಿ ಬಾಯ್ ಲೈವ್ ಲೊಕೇಷನ್ ಟ್ರೇಸ್ ಮಾಡಿ ಪಿಜ್ಜಾ ನೀಡಿದ್ದಾರೆ. ಡೆಲಿವರಿ ಬಾಯ್‌ನ ಕರ್ತವ್ಯ ನಿಷ್ಠೆಗೆ ಒಂದು ಹ್ಯಾಟ್ಸಪ್ ಹೇಳಲೇಬೇಕು.
ಟ್ರಾಫಿಕ್‌ನಲ್ಲಿದ್ದಾಗ ಫುಡ್ ಆರ್ಡರ್ ಮಾಡುವುದು ಸರಿಯೇ?
ನಾವು ಟ್ರಾಫಿಕ್‌ನಲ್ಲಿದ್ದಾಗ ಫುಡ್ ಆರ್ಡರ್ ಮಾಡುವುದು ಸರಿಯೇ? ಎಂದು ಕೇಳಿದರೆ ತಪ್ಪು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಟ್ರಾಫಿಕ್‌ನಲ್ಲಿ ಸಿಕ್ಕಾಕಿಕೊಂಡಿದ್ದೇವೆ ಎಂದ ಮಾತ್ರಕ್ಕೆ ನಾವು ಒಂದೇ ಕಡೆ ನಿಂತಿರುವುದಿಲ್ಲ, ಗಾಡಿ ಚಲಿಸುತ್ತಲೇ ಇರುತ್ತದೆ, ನಾವಿರುವ ಲೈವ್ ಲೊಕೇಷನ್ ನೋಡಿ ಆ ಜಾಗಕ್ಕೆ ಬಂದು ಅವರು ಪಾರ್ಸಲ್ ಕೊಡೋಣ ಅಂತ ಗಾಡಿ ನಿಲ್ಲಿಸಿದರೆ ನಮ್ಮ ಗಾಡಿ ಮತ್ತೆ ಮುಂದೆ ಹೋದರೆ ಪಾಪ ಆ ಡೆಲಿವರಿ ಬಾಯ್ ಪಾಡೇನು. ಅಷ್ಟು ಮಾತ್ರವಲ್ಲ, ನಮ್ಮ ಗಾಡಿ ಮಧ್ಯದಲ್ಲಿದ್ದು ನಮ್ಮ ಅಕ್ಕ-ಪಕ್ಕ ಗಾಡಿಗಳಿದ್ದರೆ ಅದನ್ನು ದಾಟಿಕೊಂಡು ಬಂದು ನಮಗೆ ಫುಡ್ ಡೆಲಿವರಿ ಮಾಡಬೇಕು. ನಮಗೆ ಹೊಟ್ಟೆ ಹಸಿವಾದರೆ ಗಾಡಿಯನ್ನು ಒಂದು ಕಡೆ ನಿಲ್ಲಿಸಿ, ಅಲ್ಲಿಗೆ ಫುಡ್ ಆರ್ಡರ್ ಮಾಡಿಸಿ, ಆದರೆ ಚಲಿಸುತ್ತಿರುವಾಗ ಮತ್ತೊಬ್ಬರ ವೃತ್ತಿಯನ್ನು ಅಣಕಿಸುವ ಪ್ರಯತ್ನ ಬೇಡ್ವೆ ಬೇಡ ( ಇದು ನನ್ನ ಅಭಿಪ್ರಾಯ, ನಿಮ್ಮ ಅಭಿಪ್ರಾಯ ಭಿನ್ನವಾಗಿರಬಹುದು, ಅದನ್ನು ಸ್ವಾಗತಿಸುತ್ತೇವೆ)
ಈ ವೀಡಿಯೋ ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು ಈ ಐಡಿಯಾ ಪರ -ವಿರುದ್ಧ ಅಭಿಪ್ರಾಯಗಳಿವೆ.
ಛೇ.. ಇಂಥದ್ದೊಂದು ಐಡಿಯಾ ನಮಗೆ ಮೊದಲೇ ಗೊತ್ತಿದ್ದರೆ ಟ್ರಾಫಿಕ್‌ನಲ್ಲಿದ್ದಾಗ ನಾವು ಕೂಡ ಫುಡ್ ಆರ್ಡರ್ ಮಾಡಿ ತರಿಸಿ ತಿಂದು, ಹೊಟ್ಟೆಯನ್ನು ಸಮಧಾನ ಮಾಡುತ್ತಿದ್ದೆವು ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು Just imagine.. if half of the commuters placed order for online food😬 ಎಂದು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ಟ್ರಾಫಿಕ್‌ನಲ್ಲಿ ನಮ್ಮ ಪ್ರೆಟ್ರೋಲ್ ಹಾಗೂ ಅಮೂಲ್ಯ ಟೈಮ್ ವೇಸ್ಟ್ ಮಾಡುತ್ತೇವೆ, ಕುಡೋಸ್ ಟು ಡೋಮಿನೋಸ್, ಆದರೆ ಇದು ಒಳ್ಳೆಯ ಐಡಿಯಾ ಎಂದು ಕೂಡ ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ತಿಳಿಸಿ...
When we decided to order from @dominos during the Bangalore choke. They were kind enough to track our live location (a few metres away from our random location added in the traffic) and deliver to us in the traffic jam. #Bengaluru #bengalurutraffic #bangaloretraffic pic.twitter.com/stnFDh2cHz
— Rishivaths (@rishivaths) September 27, 2023



Click it and Unblock the Notifications