Latest Updates
-
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು?
ಪಿತೃಪಕ್ಷ: ಮಹಿಳೆಯರಿಗೆ ಯಾವ ದಿನ ಶ್ರಾದ್ಧ ಮಾಡಬೇಕು, ಚಿಕ್ಕ ಪ್ರಾಯದಲ್ಲಿ ಮರಣವೊಂದಿದ್ದರೆ ಯಾವ ದಿನ ತರ್ಪಣ ನೀಡಬೇಕು?
ಪಿತೃಪಕ್ಷ ಸೆಪ್ಟೆಂಬರ್ 17ರಿಂದ ಶುರುವಾಗಿದೆ, ಅಕ್ಟೋಬರ್2ಕ್ಕೆ ಮುಕ್ತಾಯವಾಗಲಿದೆ, ಈ ಕಾರ್ಯಗಳಲ್ಲಿ ಶ್ರಾದ್ಧವನ್ನು ಮಾಡಿದರೆ ಪಿತೃದೋಷದಿಂದ ಮುಕ್ತರಾಗುತ್ತಾರೆ.
ಕೆಲವರು ಚಿಕ್ಕ ಪ್ರಾಯದಲ್ಲಿಯೇ ಅಂಥವರಿಗೆ ಈ ಸಮಯದಲ್ಲಿ ಶ್ರಾದ್ಧ ಮಾಡಬಹುದೇ? ರ್ದುಮರಣವನ್ನಪ್ಪಿದ್ದರೆ ಅ ವರಿಗೆ ತರ್ಪಣ ನೀಡಲು ಯಾವ ದಿನ ಸೂಕ್ತವಾಗಿದೆ? ಮಹಿಳೆಯರಿಗೆ ಯಾವ ದಿನದಂದು ಶ್ರಾದ್ಧ ಮಾಡಲಾಗುವುದು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಸೆಪ್ಟೆಂಬರ್ 19 ತೃತೀಯಾ ಶ್ರಾದ್ಧ
ಸೆಪ್ಟೆಂಬರರ್ 21: ಚತುರ್ಥಿ ಶ್ರಾದ್ಧ
ಸೆಪ್ಟೆಂಬರ್ 21: ಮಹಾಭರಣಿ ಶ್ರಾದ್ಧ
ಸೆಪ್ಟೆಂಬರ್ 22, ಭಾನುವಾರ: ಪಂಚಮಿ ಶ್ರಾದ್ಧ
ಸೆಪ್ಟೆಂಬರ್ 23, ಸೋಮವಾರ: ಷಷ್ಠಿ ಶ್ರಾದ್ಧ
ಸೆಪ್ಟೆಂಬರ್ 23, ಸೋಮವಾರ: ಸಪ್ತಮಿ ಶ್ರಾದ್ಧ
ಸೆಪ್ಟೆಂಬರ್ 24, ಮಂಗಳವಾರ: ಅಷ್ಟಮಿ ಶ್ರಾದ್ಧ
ಸೆಪ್ಟೆಂಬರ್ 25, ಬುಧವಾರ: ನವಮಿ ಶ್ರಾದ್ಧ
ಸೆಪ್ಟೆಂಬರ್ 26, ಗುರುವಾರ: ದಶಮಿ ಶ್ರಾದ್ಧ
ಸೆಪ್ಟೆಂಬರ್ 27, ಶುಕ್ರವಾರ: ಏಕಾದಶಿ ಶ್ರಾದ್ಧ
ಸೆಪ್ಟೆಂಬರ್ 29, ಭಾನುವಾರ: ದ್ವಾದಶಿ ಶ್ರಾದ್ಧ
ಸೆಪ್ಟೆಂಬರ್ 29, ಭಾನುವಾರ: ಮಘಾ ಶ್ರಾದ್ಧ
ಸೆಪ್ಟೆಂಬರ್ 30, ಸೋಮವಾರ: ತ್ರಯೋದಶಿ ಶ್ರಾದ್ಧ
ಅಕ್ಟೋಬರ್ 1, ಮಂಗಳವಾರ: ಚತುರ್ದಶಿ ಶ್ರಾದ್ಧ
ಅಕ್ಟೋಬರ್ 2, ಬುಧವಾರ: ಸರ್ವ ಪಿತೃ ಅಮವಾಸ್ಯೆ
ಯಾರು ಯಾವಾಗ ಶ್ರಾದ್ಧ ಮಾಡಬೇಕು?
ಮುತ್ತೈದೆ ಸಾವಾಗಿದ್ದರೆ (ಗಂಡ ಜೀವಂತವಾಗಿದ್ದು, ಹೆಂಡತಿ ತೀರಿ ಹೋಗಿದ್ದರೆ) ಅವರಿಗೆ ನವಮಿ ತಿಥಿಯಂದು ಶ್ರಾದ್ಧವನ್ನು ಮಾಡಲಾಗುವುದು.
ತೀರಿ ಹೋದವರು ಅವರ ಹಿರಿಯರ ಜೊತೆ ಸೇರಲಿ ಎಂದು ಏಕಾದಶಿಯಂದು ಶ್ರಾದ್ದ ಮಾಡಲಾಗುವುದು.
ಮಹಿಳೆ ತೀರಿ ಹೋದ ದಿನಾಂಕ ತಿಳಿಯದಿದ್ದರೆ ನವಮಿಯಂದು ಶ್ರಾದ್ಧ ಮಾಡಲಾಗುವುದು
ಆಯುಧ ತಾಗಿ ಅಥವಾ ಅಪಘಾತ, ಅತ್ಮಹತ್ಯೆ ಈ ರೀತಿ ಆಯುಸ್ಸು ಮುಗಿಯುವ ಮುನ್ನ ಸಾವನ್ನಪ್ಪಿದರೆ ನಾಲ್ಕನೇ ದಿನ ಅಂದರೆ ಚತುರ್ದಶಿಯಂದು ಆಚರಿಸಲಾಗುವುದು.
ಹಾವು ಕಡಿತ, ಪರಿಸರ ವಿಕೋಪ, ಸಿಡಿಲು ಬಡಿದು, ಪ್ರಾಣಿಗಳ ದಾಳಿಯಿಂದ ಅಥವಾ ಮಾರಾಣಾಂತಿಕ ಸೋಂಕು, ಕಾಯಿಲೆಯಿಂದ ಸಾವನ್ನಪ್ಪಿದ್ದರೆ ಚತುರ್ದಶಿ ಅಥವಾ ಅಮವಾಸ್ಯೆಯಂದು ಶ್ರಾದ್ಧ ಮಾಡಲಾಗುವುದು.
ಅಲ್ಲದೆ ಸಾವಿನ ಬಳಿಕ ಶ್ರಾದ್ಧ ಕಾರ್ಯ ಮಾಡದೇ ಇದ್ದರೆ ಅಥವಾ ನಮ್ಮ ಕುಟುಂಬದಲ್ಲಿ ಶ್ರಾದ್ಧ ಮಾಡದೆ ಮೋಕ್ಷ ಸಿಗದೆ ಇರುವವರು ಇದ್ದರೆ ಶ್ರಾದ್ಧವನ್ನು ಅಮವಾಸ್ಯೆಯಂದು ಮಾಡಿದರೆ ಮೋಕ್ಷ ಸಿಗುವುದು.
ಶ್ರಾದ್ಧ ಕಾರ್ಯವನ್ನು ಯಾವಾಗ ಮಾಡಬೇಕು?
ಶ್ರಾದ್ಧ ಕಾರ್ಯವನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮಾಡಬೇಡಿ. ಮಧ್ಯಾಹ್ನ 12 ಗಂಟೆಯ ನಂತರ ಶ್ರಾದ್ಧ ಕಾರ್ಯವನ್ನು ಮಾಡುವುದು ಒಳ್ಳೆಯದು ಎಂದು ಹೇಳಲಾಗುವುದು. ರೋಹಿಣಿ ಮುಹೂರ್ತ ಇನ್ನೂ ಒಳ್ಳೆಯದು.
ಶ್ರಾದ್ಧ ಕಾರ್ಯವನ್ನು ನದಿ ತೀರದಲ್ಲಿ ವಿಧಿ ವಿಧಾನಗಳ ಮೂಲಕ ಮಾಡಬೆಕು.
ಪಿತೃದೋಷವಿದ್ದಾಗ ಯಾವೆಲ್ಲಾ ತೊಂದರೆಗಳಾಗುವುದು?
ಪಿತೃದೋಷಿವಿದ್ದಾಗ ವೈವಾಹಿಕ ಬದುಕಿನಲ್ಲಿ ತೊಂದರೆಗಲಾಗುತ್ತದೆ, ಮನೆಯಲ್ಲಿ ನಿತ್ಯ ಜಗಳ, ಗಂಡ-ಹೆಂಡತಿ ನಡುವೆ ತುಂಬಾನೇ ಭಿನ್ನಾಭಿಪ್ರಾಯ, ಗರ್ಭಧಾರಣೆಯಾಗದಿರುವುದು, ಅಂಗವೈಕಲ್ಯದ ಮಕ್ಕಳ ಜನನ, ಬಡತನ, ಆರ್ಥಿಕ ತೊಂದರೆಗಳು, ನಿರಂತವಾಗಿ ಕಾಡುವ ಆರೋಗ್ಯ ಸಮಸ್ಯೆ ಇವೆಲ್ಲಾ ಪಿತೃದೋಷವಿದ್ದರೆ ಉಂಟಾಗುವುದು.
ಈ ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗುತ್ತಾರೆ, ಅವರ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸುವುದು ಎಂದು ಹೇಳಲಾಗುವುದು.
ಯಾರಿಗೆ ಪಿತೃದೋಷ ಉಂಟಾಗುವುದು?
ಪೋಷಕರನ್ನು ಅವರ ಜೀವಿತಾವಧಿಯಲ್ಲಿ ಚೆನ್ನಾಗಿ ನೋಡಿಕೊಳ್ಳದೆ ಇದ್ದರೆ ಅಥವಾ ಪಾಪಕರ್ಮಗಳನ್ನು ಮಾಡಿದರೆ, ಕುಂಡಲಿಯಲ್ಲಿ ಪಿತೃದೊಷವಿದ್ದರೆ ಅವರು ಪಿತೃದೋಷದಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಪಿತೃಪಕ್ಷದಲ್ಲಿ ಪಿತೃಗಳಿಗೆ ಮೋಕ್ಷ ಸಿಕ್ಕರೆ ಪಿತೃದೋಷದಿಂದ ಮುಕ್ತಿಹೊಂದಬಹುದು.
ಈ ಸಮಯದಲ್ಲಿ ಮಾಡುವ ದಾನ ಧರ್ಮಕ್ಕೆ ಕೂಡ ತುಂಬಾನೇ ಮಹತ್ವವಿದೆ, ಈ ಸಮಯದಲ್ಲಿ ಪಿತೃತರ್ಪಣ ಮಾಡದೆ ಇರುವವರು ಮಹಾಲಯ ಅಮವಾಸ್ಯೆ ಸಮಯದಲ್ಲಿ ನೀಡುತ್ತಾರೆ.



Click it and Unblock the Notifications