Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಂದಿನಿಂದ ಪಿತೃ ಪಕ್ಷ ಆರಂಭ..! ಯಾವಾಗ ಅಂತ್ಯ..! ಇದರ ಮಹತ್ವವೇನು?
ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷವಾಗಿದೆ. 2023ನೇ ಸಾಲಿನಲ್ಲಿ 16 ದಿನಗಳ ಕಾಲ ಪಿತೃ ಪಕ್ಷ ಆಚರಿಸಬಹುದು. ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ.
ಜನರು ಶಾಂತಿ ಮತ್ತು ಮೋಕ್ಷವನ್ನು ಹುಡುಕಲು ಸಹಾಯ ಮಾಡಲು ಅಗಲಿದವರಿಗೆ ಪಿಂಡ ದಾನ ಮಾಡುತ್ತಾರೆ. ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಸೆಪ್ಟೆಂಬರ್ 17ರಂದು ಆರಂಭಗೊಂಡು ಅಕ್ಟೋಬರ್ 2ರಂದು ಅಂತ್ಯವಾಗುತ್ತದೆ. ಈ ದಿನ ಪೂರ್ವಜರ ಫೋಟೋಗಳ ಇಟ್ಟು ಪೂಜೆ ಸಲ್ಲಿಸಿ ಪಿಂಡ ಪ್ರದಾನ ಮಾಡುವುದು ಇಲ್ಲವೆ ಊಟ ಬಡಿಸುತ್ತಾರೆ. ಅದರಲ್ಲು ಅವರ ಇಷ್ಟದ ಖಾದ್ಯಗಳು ಈ ಊಟಕ್ಕೆ ರೆಡಿಯಾಗಿರುತ್ತೆ.

ಆದ್ರೆ ಮನೆಯಲ್ಲಿ ಹಿರಿಯರ ಫೋಟೋ ಇಟ್ಟು ಅಂದು ಪೂಜೆ ಮಾಡುವ ನಿಯಮವೇನು? ಪೂಜೆ ಹೇಗೆ ಮಾಡಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ವಾಸ್ತು ಶಾಸ್ತ್ರದಲ್ಲಿ, ನಮ್ಮ ಮೃತ ಪೂರ್ವಜರ ಫೋಟೋಗಳನ್ನು ಮನೆಯಲ್ಲಿ ಇರಿಸುವ ನಿಯಮಗಳನ್ನು ಉಲ್ಲೇಖಿಸಲಾಗಿದೆ. ನಮ್ಮ ಪೂರ್ವಜರ ಫೋಟೋವನ್ನು ಮಲಗುವ ಕೋಣೆ, ದೇವಸ್ಥಾನ ಅಥವಾ ಅಡುಗೆಮನೆಯಲ್ಲಿ ಇಡಬಾರದಂತೆ. ಅವುಗಳನ್ನು ಇಲ್ಲಿ ಇಡುವುದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು ಎಂದು ಹೇಳಲಾಗಿದೆ.
ಪೂರ್ವಜರ ಫೋಟೋವನ್ನು ಈ ದಿನ ತೊಳೆದು ಇಲ್ಲವೆ ಒದ್ದೆ ಬಟ್ಟೆಯಿಂದ ಒರೆಸಬೇಕು. ಹಾಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಬೇಕು. ಇದಲ್ಲದೇ ಅಮವಾಸ್ಯೆಯ ದಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಹಾಗೆ ಫೋಟೋವನ್ನು ದಕ್ಷಿಣ ದಿಕ್ಕಿಗೆ ಇಡಬೇಕು ಎಂದು ಹೇಳಲಾಗಿದೆ.
ಮಹಾಲಯ ಅಂದರೆ - "ಮಹಾ" - ದೊಡ್ಡ "ಲಯ" - ನಾಶ - ಸಮುದ್ರ ಮಂಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.
ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಮವಾಸ್ಯೆಯು ಅಗಲಿದ ಆತ್ಮಗಳಿಗೆ ಸಮರ್ಪಿತವಾಗಿದೆ. ನೀವು ಈ ದೇಹವನ್ನು ತೊರೆದಾಗ ಪುರೂರವ, ವಿಶ್ವದೇವ ಎಂಬ ದೇವತೆಗಳಿಂದ ಇನ್ನೊಂದು ಜಗತ್ತಿಗೆ ಮಾರ್ಗದರ್ಶನ ಪಡೆಯುತ್ತೀರಿ. ಬಹುತೇಕ ಮಹಾಲಯ ಅಮಾವಾಸ್ಯೆಯಂದು ಮಾಂಸಹಾರ ಹಾಗೂ ಸಸ್ಯಹಾರದ ಖಾದ್ಯವನ್ನು ಸವಿಯಲಾಗುತ್ತದೆ.
ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ಪಿತೃ ಪಕ್ಷದ ಮಹತ್ವ
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ಮೊದಲ ವರ್ಷದಲ್ಲಿ ಶ್ರಾದ್ಧ ಆಚರಣೆಗಳನ್ನು ಮಾಡಲು ಸೂಚಿಸಲಾಗಿದೆ ಏಕೆಂದರೆ ಸಾವಿನ ನಂತರ ಒಂದು ವರ್ಷದ ನಂತರ ಅವರಿಗೆ ತಿನ್ನಲು ಆಹಾರ ಪಡೆಯುತ್ತಾರೆ. ಮೊದಲ ವರ್ಷದಲ್ಲಿ ಈ ಪಿತೃಪಕ್ಷದಲ್ಲಿ ನಾವು 13 ದಿನಗಳ ಕಾಲ ಆಹಾರ ನೀಡಬೇಕು ಎಂದು ನಂಬಲಾಗಿದೆ.



Click it and Unblock the Notifications
