Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾಂಕ್ರೀಟ್ ನೆಲ ಕಿತ್ತೆಸೆದು ಗಿಡಗಳ ನೆಡುತ್ತಿರುವ ನಗರ ಮಂದಿ..! ಏಕೆ ಗೊತ್ತಾ?
ನಗರಗಳು ಬೆಳೆದಂತೆಲ್ಲಾ ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಸಂಚಾರ ದಟ್ಟಣೆ, ಅರಣ್ಯನಾಶ, ಪ್ರವಾಹದ ಪರಿಸ್ಥಿತಿ ಎದುರಾಗಲು ಪ್ರಮುಖವಾಗಿ ನಗರೀಕರಣ ಕಾರಣವಾಗಿರುತ್ತದೆ. ಇಲ್ಲಿ ನಗರಗಳು ದೊಡ್ಡದಾದಂತೆ ಮಣ್ಣು ತನ್ನ ಫಲವತ್ತೆ ಕಳೆದುಕೊಂಡು ಕಾಂಕ್ರೀಟ್ ಕಾಡು ಹುಟ್ಟುಕೊಳ್ಳಲಿದೆ.
ನೆಲವೆಲ್ಲಾ ಕಾಂಕ್ರೀಟ್‌ನಿಂದ ಆವರಿಸಿಕೊಂಡು ನೀರು ಇಂಗದೆ ಅಂತರ್ಜಲ ಮಟ್ಟ ಕುಸಿಯುವಿಕೆಗೂ ಇದು ಕಾರಣವಾಗುತ್ತದೆ. ಜೊತೆಗೆ ನಗರಗಳಲ್ಲಿ ಸಣ್ಣ ಸಣ್ಣ ಮಳೆಗೂ ಪ್ರವಾಹ ಉಂಟಾಗುವುದು, ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗುವುದು, ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುವುದು ಹೀಗೆ ಹತ್ತಾರು ಸಮಸ್ಯೆಗಳು ಎದುರಾಗುವುದನ್ನ ನಾವು ನೋಡಿರಬಹುದು.

ಆದರೆ ಇದಕ್ಕೆ ಪರಿಹಾರ ಹುಡುಕುವ ಬದಲು ನಾವು ಮತ್ತಷ್ಟು ಕಟ್ಟಡಗಳು, ಅರಣ್ಯ ನಾಶಕ್ಕೆ ಮುಂದಾಗಿದ್ದೇವೆ, ಈಗ ಹೊರಗೆ ನೈಸರ್ಗಿಕವಾಗಿ ಮಣ್ಣು ನೋಡಲು ಸಿಗುವುದಿಲ್ಲ. ಫುಟ್‌ಪಾತ್‌ಗಳು, ಸಿಮೆಂಟ್ ರಸ್ತೆ ಹೀಗೆ ಎಲ್ಲವು ಸಿಮೆಂಟ್‌ನಿಂದ ತುಂಬಿ ಹೋಗಿವೆ. ನಗರದಲ್ಲಿ ರಸ್ತೆಗಳನ್ನು ಹೊರತುಪಡಿಸಿ ಉಳಿದಂತೆ ಜನರು ಓಡಾಡುವ ಕಡೆಯಲೆಲ್ಲ ಸಿಮೆಂಟ್‌ನಿಂದ ಆವೃತವಾಗಿರುವ ನೆಲವನ್ನು ನಾವು ನೋಡಬಹುದು.
ಆದರೆ ಇದರಿಂದ ಅನಾಹುತಗಳೇ ಹೆಚ್ಚಾಗುತ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜನರೇ ಈಗ ಇಂತಹ ಸಿಮೆಂಟ್ ನೆಲವನ್ನು ತೆಗೆದು ಮಣ್ಣು ಹಾಕಿ ಗಿಡಗಳ ನೆಡಲು ಮುಂದಾಗಿದ್ದಾರೆ. ಯುನೈಟೆಡ್ ಕಿಂಗ್‌ಡಮ್, ಬೆಲ್ಜಿಯಂ ಮತ್ತು ಫ್ರಾನ್ಸ್‌ನಲ್ಲಿ ಈಗ ಡಿಪಾವಿಂಗ್ ಎಂಬ ಆಚರಣೆ ಭಾರೀ ಪ್ರಸಿದ್ಧಿ ಪಡೆಯುತ್ತಿದೆ, ಇಲ್ಲಿ ನೆಲಕ್ಕೆ ಸಿಮೆಂಟ್ ಹಾಕಿ ಮಳೆ ನೀರು ಇಂಗಲು ಜಾಗ ಬಿಡದೆ ಇರುವ ಕಡೆಗಳಲ್ಲಿ ಜನರೇ ಸಿಮೆಂಟ್ ನೆಲ ಕಿತ್ತೆಸೆದು ಮಣ್ಣು ಹಾಕಿ ಸುಂದರ ಹೂವು ಬಿಡುವ ಗಿಡಗಳ ನೆಡುವ ಮೂಲಕ ಬದಲಾವಣೆ ತರಲು ಮುಂದಾಗಿದ್ದಾರೆ.
ನಗರದಲ್ಲಿ ಅನಗತ್ಯವಾಗಿ ಈ ಸಿಮೆಂಟ್ ನೆಲಗಳ ಮಾಡಲಾಗಿದೆ. ಇಲ್ಲಿ ನೀರುಗಳು ಇಂಗಲು ಸಹ ಜಾಗವಿಲ್ಲದಂತೆ ಸಿಮೆಂಟ್ ಬಳಸಲಾಗಿದೆ. ಇಂಟರ್‌ಲಾಕ್‌ಗಳು, ಸಿಎಂಟ್ ಬ್ಲಾಕ್‌ಗಳ, ಟೈಲ್ಸ್, ಮಾರ್ಬಲ್ಸ್ ಹಾಕಿ ನೆಲವನ್ನು ನೀರು ಇಂಗದಂತೆ ಮಾಡಲಾಗಿದೆ. ಹೀಗಾಗಿ ಜನರ ಈಗ ಸ್ವಯಂ ಪ್ರೇರಿತವಾಗಿ ಇಂತಹ ಜಾಗಗಳಲ್ಲಿ ಮರಳಿ ಜೀವ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಈ ಗಿಡಗಳು ನಗರದ ಸೌಂದರ್ಯ ಹೆಚ್ಚಿಸುವ ಜೊತೆಗೆ ನೆಲದಲ್ಲಿ ನೀರು ಇಂಗಲು ಸಹಾಯವಾಗುತ್ತದೆ, ಇದು ಅಂತರ್ಜಲ ಮಟ್ಟ ಹೆಚ್ಚಾಗುವ ಜೊತೆಗೆ ನಗರದ ಆರೋಗ್ಯಕ್ಕೆ ಬಹಳ ಉತ್ತಮ ಎನಿಸಿದೆ. ಹೀಗಾಗಿಯೇ ನಗರಳಲ್ಲಿ ಈ ಸಿಮೆಂಟ್ ನೆಲಗಳ ತೆರವಿನ ಡಿಪಾವಿಂಗ್ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಪೋರ್ಟ್‌ಲ್ಯಾಂಡ್‌ನಲ್ಲಿ ಡೆಪಾವ್ ಎಂಬ ಸ್ವಯಂ ಸೇವಕರ ಗುಂಪು ಹುಟ್ಟಿಕೊಂಡಿತ್ತು. ಈ ಗುಂಪು ಈ ಸಿಮೆಂಟ್ ನೆಲವನ್ನು ತೆಗೆದು ಅಲ್ಲಿ ಗಿಡಗಳ ನೆಟ್ಟು ಅವುಗಳ ಬೆಳೆಸುವ ಅಭಿಯಾನ ಆರಂಭಿಸಿತ್ತು. 2008 ರಿಂದಲೂ ಡಿಪಾವಿಂಗ್ ಕೆಲಸ ನಡೆಯುತ್ತಲೇ ಇದೆ. ಈ ವಿಧಾನವು ನೀರು ನೆಲದಲ್ಲಿ ಇಂಗಲು ಸಹಾಯ ಮಾಡುತ್ತದೆ. ಬರು ಬರುತ್ತಾ ಈ ಡಿಪಾವಿಂಗ್ ಪ್ರಕ್ರಿಯೆ ಹಲವು ದೇಶಗಳಿಗೆ ಹರಡಿದೆ. ಹೆಚ್ಚು ನೀರುಳನ್ನು ಹಿಡಿದಿಟ್ಟುಕೊಳ್ಳುವಂತಹ ಗಿಡಗಳ ನೆಡಲು ಈ ಗುಂಪು ಮುಂದಾಗಿದ್ದು, ಈಗ ಯೂರೋಪ್‌ನಲ್ಲಿ ಭಾರೀ ಪ್ರಸಿದ್ಧಿ ಪಡೆದಿದೆ.
ಈಗ ಈ ಗುಂಪಿಗೆ ಉತ್ಸಾಹಿ ಪರಿಸರ ಪ್ರೇಮಿಗಳು ಸೇರಿಕೊಳ್ಳುತ್ತಾ ಇದ್ದು, ಈ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಾಗತೊಡಗಿದೆ. ಸದ್ಯ ಈ ಗುಂಪು ವಿಶ್ವದ ಹಲವು ಭಾಗದಲ್ಲಿ ವ್ಯಾಪಿಸಲು ಮುಂದಾಗಿದೆ. ಅಲ್ಲದೆ ಪರಿಸರಕ್ಕೆ ಒಗ್ಗೂಡಿಕೊಂಡು ನಗರಗಳು ಹುಟ್ಟಿಕೊಳ್ಳಬೇಕೇ ವಿನಃ ಕಾಡುಗಳ ಕಡಿದು, ಹಸಿರನ್ನು ನಾಶ ಮಾಡಿ ಕಟ್ಟಿದ ನಗರಗಳು ಮುಂದೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಈ ಗುಂಪಿನ ವಾದವಾಗಿದೆ.



Click it and Unblock the Notifications