Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಸಮುದ್ರದಲ್ಲಿ ಮೂತ್ರ ಮಾಡಿದರೆ ಬೀಳುತ್ತೆ67,000 ದಂಡ: ಹೇಗೆ ಗೊತ್ತಾಗುತ್ತೆ ಎಂಬುವುದೇ ಯಕ್ಷ ಪ್ರಶ್ನೆ
ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಬೀಳುತ್ತಂತೆ ಬರೋಬರಿ ರುಪಾಯಿ 67,000 ದಂಡ, ಅಷ್ಟಕ್ಕೂ ಈಗ ದಂಡದ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಸಮುದ್ರದ ಉಪ್ಪು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಗೊತ್ತಾಗುವುದು ಹೇಗೆ ಎಂಬುವುದೇ ಯಕ್ಷ ಪ್ರಶ್ನೆ!

ಕೆಲವೊಮ್ಮೆ ಅಧಿಕಾರಿ ತಲೆಬುಡ ಇಲ್ಲದೆ ದಂಡ ಹಾಕುತ್ತಾರೆ, ಅದರ ಹಿಂದೆ ಯಾವ ಲಾಜಿಕ್ ಕೂಡ ಇರಲ್ಲ, ನಮ್ಮಲ್ಲಿ ಕಾರಿನಲ್ಲಿ, ಲಾರಿನಲ್ಲಿ ಹೋದವರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ನೀಡಲಾಗಿತ್ತು ಅಲ್ವಾ? ಅದೇ ರೀತಿ ಇದು ಕೂಡ, ಸಮುದ್ರದ ಉಪ್ಪು ನೀರಿಗೆ ಮನುಷ್ಯ ತನ್ನ ದೇಹದ ಉಪ್ಪು ನೀರು ಬಿಟ್ಟರೆ ತಿಳಿಯುವುದಾದರೂ ಹೇಗೆ? ನಗು ಬರುತ್ತಿರಬಹುದು ಅಲ್ವಾ? ಆದರೆ ಇಂಥದ್ದೊಂದು ಸಂಗತಿ ಇದೆ, ಒಂದು ಸಮಧಾನಕರ ಸಂಗತಿ ಎಂದರೆ ಈ ರೀತಿ ಫೈನ್ ಹಾಕಿರುವುದು ಸ್ಪೇನ್‌ನ ಮಾರ್ಬೆಲ್ಲಾದಲ್ಲಿ.
ಹಾಗಾಗಿ ನೀವು ಮಲ್ಪೆ ಬೀಚ್‌ಗೆ , ಗೋರ್ಕಣ ಬೀಚ್‌ಗೆ, ಗೋವಾದ ಬೀಚ್‌ಗಳಿಗೆ ಹೋದಾಗ ಧೈರ್ಯದಿಂದ ಆಟ ಆಡಬಹುದು, ಆದರೆ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳುತ್ತಿಲ್ಲ, ಪಾಪ ಆ ನೀರಿನಲ್ಲಿ ನಿಮ್ಮ ಅಕ್ಕ-ಪಕ್ಕ ಎಷ್ಟೊಂದು ಜನ ಆಡುತ್ತಿರುತ್ತಾರೆ, ಹಾಗಾಗಿ ಆ ರೀತಿ ಮಾಡಲು ನಿಮಗೆ ಮನಸ್ಸು ಬರಲ್ಲ ಇರಲಿ, ಅದೇನೇ ಇರಲಿ ಈಗ ನಾವು ಈ ಪ್ರಕರಣ ಬಗ್ಗೆ ನೋಡುವುದಾದರೆ
ಸ್ಪೇನ್‌ನ ಮಾರ್ಬೆಲ್ಲಾದಲ್ಲಿ ಈ ರೀತಿಯ ಹೊಸ ನಿಯಮ ಬಂದಿದೆ
ಬೀಚ್‌ನಲ್ಲಿ ಆಟ ಆಡುವಾಗ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ 67,000 ದಂಡ ಪಾವತಿಸಬೇಕೆಂದು ಹೇಳಿದೆ, ಆದರೆ ಮೂತ್ರ ವಿಸರ್ಜನೆ ಮಾಡಿದರೆ ಇವರಿಗೆ ಗೊತ್ತಾಗುವುದಾದರೂ ಹೇಗೆ ಅಂತ? ಡಯಾಪರ್ ಬಿಸಾಡಬೇಡಿ, ಪ್ಲಾಸ್ಟಿಕ್ ಬಾಟಲಿ ಬಿಸಾಡಿ ಬೇಡಿ ಎಂದರೆ ಒಂದು ಲೆಕ್ಕ, ಇಲ್ಲಿ ನೋಡಿದರೆ ಮೂತ್ರನೇ ಮಾಡಬಾರದು ಎಂದು ಹೇಳಿದೆ, ಉಪ್ಪು ನೀರಿನಲ್ಲಿ ಸ್ವಲ್ಪ ಉಪ್ಪು ನೀರು ಬೆರೆತರೆ ಅದನ್ನು ತಿಳಿಯುವುದು ಹೇಗೆ, ಅವರ ಅಲ್ಲಿ ಬೀಚ್‌ನಲ್ಲಿ ಆಡುವವರ ದೇಹಕ್ಕೆ ಏನಾದರೂ ಡಿವೈಸ್ ಫಿಕ್ಸ್ ಮೂತ್ರ ಮಾಡಿದ್ದಾರಾ? ಎಂದು ತಿಳಿಯುತ್ತಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ, ಒಟ್ಟಿನಲ್ಲಿ ಸಕತ್ ನಗೆಪಾಟಲಿಗೆ ಗುರಿಯಾಗಿದೆ ಈ ಹೊಸ ನಿಯಮ.
ಪ್ರವಾಸಿಗರು ತಮ್ಮ ಮೋಜಿನ ಜೊತೆಗೆ ಪ್ರಕೃತಿ ಕಡೆಗೆ ಗಮನಹರಿಸಬೇಕು
ಹೌದು ಪ್ರವಾಸಿಗರು ಮೋಜು ಮಸ್ತಿಗೆ ಅಂತ ಸುಂದರ ತಾಣಗಳಿಗೆ ಬರ್ತಾರೆ, ನಂತರ ಅಲ್ಲಿ ತಿಂದಿದ್ದು ಕುಡಿದಿದ್ದು ಎಲ್ಲಾ ಎಸೆದು ಹೋಗುತ್ತಾರೆ, ಮಕ್ಕಳಿಗೆ ಹಾಕಿರುವ ಡಯಾಪರ್ ಕೂಡ ರಸ್ತೆಯಲ್ಲಿ ಅಥವಾ ನದಿಯೊಳಗಡೆ ಹಾಕಿ ಹೋಗುವ ದುಷ್ಟರೇನು ಕಡಿಮೆಯಿಲ್ಲ, ಇವರ ತಲೆಯಲ್ಲಿ ಬುದ್ಧಿ ಇದೆಯೋ ಸಗಣಿ ಇದೆಯೋ ಎಂದನಿವಷ್ಟು ಬೇಜಾವಬ್ದಾರಿಯಿಂದ ವರ್ತಿಸುತ್ತಾರೆ.
ಎಲ್ಲೇ ಹೋಗಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ
ಸುಂದರ ತಾಣಗಳಿಗೆ ಹೋಗಿ ಅಲ್ಲಿ ಕಸದ ರಾಶಿಯನ್ನೇ ಹಾಕಿ ಬರುತ್ತಾರೆ, ಇಂಥವರ ವಿರುದ್ಧ ಕಠಿಣ ಕ್ರಮ ತೆಗೆವಿದೇಶದಲ್ಲಿ ತುಂಬಾನೇ ಕಟ್ಟುನಿಟ್ಟಿನ ಕಾನೂನು ಇದೆ, ನಮ್ಮಲ್ಲಿ ಸ್ವಲ್ಪ ಸಡಿಲವಿದೆ, ಹಾಗಾಗಿ ಜನರು ಸುಂದುಕೊಳ್ಳಬೇಕು. ಕ ರಸ್ತೆಯಲ್ಲ ಕಸ ಎಸೆದವರನ್ನು ತಡೆದು ನಿಲ್ಲಿಸಿ ಕಸ ಎತ್ತಿಸಿರುವ ಹಲವು ಪ್ರಕರಣ ನೋಡಿದ್ದೇವೆ, ಪ್ರತಿಯೊಬ್ಬ ನಾಗರಿಕನು ಇಂಥ ವ್ಯಕ್ತಿಗಳನ್ನು ಕಂಡಾಗ ಅವರ ಕೈಯಿಂದಲೇ ಕಸ ಎತ್ತಿಸಬೇಕು, ಆವಾಗಲೇ ಬುದ್ಧಿ ಬರುವುದು. ಹೊರಗಡೆ ಹೋದಾಗ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.



Click it and Unblock the Notifications
