Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್‌ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ನವೆಂಬರ್ 30 ಜೀವನ್ ಪ್ರಮಾಣ್ ಪತ್ರ ಸಲ್ಲಿಸಲು ಕೊನೆ ದಿನ: ಇಲ್ಲದಿದ್ದರೆ ಪಿಂಚಣಿ ಬಂದ್!!
ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ಪಿಂಚಣಿ ಪಡೆಯುವುದು ನೋಡಬಹುದು. ಅದ್ರಲ್ಲೂ ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ದಾಖಲೆಗಳ ನೀಡುವುದು ಸಾಮಾನ್ಯ. ಆದ್ರೆ ಪಿಂಚಣಿ ಪಡೆಯಲು ನೀವು ನೀಡಬೇಕಾದ ಹಲವು ದಾಖಲೆಗಳ ಪೈಕಿ ಜೀವನ್ ಪ್ರಮಾಣ್ ಪತ್ರ ಕೂಡ ಒಂದಾಗಿದೆ.
ನೀವು ಜೀವಂತವಾಗಿದ್ದೀರಿ ಎಂಬ ದಾಖಲೆಯೇ ಈ ಜೀವನ್ ಪ್ರಮಾಣ್ ಪತ್ರವಾಗಿದೆ. ಸದ್ಯ ಪ್ರತಿ ವರ್ಷ ನೀವು ಈ ಪ್ರಮಾಣ ಪತ್ರವನ್ನು ಆಯಾ ಬ್ಯಾಂಕ್, ಅಂಚೆ ಕಚೇರಿಗೆ ನೀಡಬೇಕಾಗುತ್ತದೆ. ಈ ರೀತಿಯ ಪ್ರಮಾಣ ಪತ್ರ ನೀಡಿದಿದ್ದರೆ ನಿಮ್ಮ ಪಿಂಚಣಿ ಅಂತ್ಯವಾಗಲಿದೆ. ಹಾಗೆ ಈ ಬಾರಿ ನವೆಂಬರ್ 30ರ ಒಳಗೆ ಈ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.

ಭಾರತದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಕುಟುಂಬದಲ್ಲಿ ಕೇಂದ್ರ ಪಿಂಚಣಿ ಯೋಜನೆಯಲ್ಲಿದ್ದಾರೆ. ಪಿಂಚಣಿದಾರರು ಪಿಂಚಣಿ ವಿತರಣಾ ಅಧಿಕಾರಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಬೇಕಾಗುತ್ತದೆ. ಈ ಸಮಯದಲ್ಲಿ ಸರ್ಕಾರ ಜೀವನ್ ಪ್ರಮಾಣ (DLC) ಅನ್ನು ಜಾರಿಗೆ ತಂದಿತು. ಇದರಿಂದ ವ್ಯಕ್ತಿ ಖುದ್ದು ಅಧಿಕಾರಿ ಮುಂದೆ ಹಾಜರಾಗುವ ಅಗತ್ಯವಿಲ್ಲ. ಹಾಗೆ ಇದು ಡಿಜಿಟಲ್ ಪ್ರಮಾಣ ಪತ್ರದ ಮೂಲಕ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡಲಾಗಿದೆ.
ಜೀವನ್ ಪ್ರಮಾಣ್ ಡಿಜಿಟಲ್ ಪತ್ರ ಎಂದರೇನು? ಪಡೆಯುವುದು ಹೇಗೆ?
ಜೀವನ್ ಪ್ರಮಾಣ್ ಪತ್ರವು ಆಧಾರ್ ಕಾರ್ಡ್ ಆಧಾರಿತವಾಗಿ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಪ್ರಮಾಣ ಪತ್ರವಾಗಿದೆ. ಇದನ್ನು ಪಿಂಚಣಿ ವಿತರಿಸುವ ಸಂಸ್ಥೆಯು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಿದೆ. ಇದರಲ್ಲಿ ಆಧಾರ್ ಕಾರ್ಡ್ ಹಾಗೆ ಇತರೆ ಕಾರ್ಡ್‌ಗಳಲ್ಲಿ ಇರುವಂತೆ ವಿಭಿನ್ನ ಹಾಗೆ ವಿಶಿಷ್ಟ ಐಡಿ ನಂಬರ್ ಸಹ ಇರಲಿದೆ.
ಈ ಪ್ರಮಾಣ ಪತ್ರವನ್ನು ಹೊಸದಾಗಿ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರವೇ ತಮ್ಮ ಇಲಾಖಾವಾರು ಪಿಂಚಣಿ ಹಂಚಿಕೆಯಲ್ಲಿ ವ್ಯವಸ್ಥೆ ಮಾಡಿರಲಿದೆ. ನೀವು ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ನಿರ್ವಹಿಸುತ್ತಿರುವ ವಿವಿಧ ಜೀವನ್ ಪ್ರಮಾಣ ಕೇಂದ್ರಗಳ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವು ಪಡೆಯಬಹುದು.
ಜೀವನ ಪ್ರಮಾಣ್ ಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಮನೆಯಲ್ಲಿ ಕುಳಿತಲ್ಲೇ ಸಲ್ಲಿಸಬಹುದು. ಜೀವನ ಪ್ರಮಾಣಪತ್ರ ಸಲ್ಲಿಸಲು ಸೂಪರ್ ಸೀನಿಯರ್ ಪಿಂಚಣಿದಾರರು, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪ್ರತಿ ವರ್ಷ ಅಕ್ಟೋಬರ್ 1 ರಿಂದ ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಬಹುದು.
80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಲು ನವೆಂಬರ್ 1ರ ವರೆಗೆ ಕಾಯಬೇಕು. ಹಾಗೆ 30 ಕೊನೆಯ ದಿನವಾಗುತ್ತದೆ. ಪ್ರತಿ ವರ್ಷ ಪಿಂಚಣಿದಾರರಿಗೆ ಇದು ಕಡ್ಡಾಯವಾಗಿದೆ.
ಈ ನಿಮಯ ಜಾರಿ ಮಾಡಿದ್ದು ಏಕೆ?
ಈ ಹಿಂದೆ ಡಿಜಿಟಲ್ ಅನುಮೋದನೆಗಳು ಇರದ ಕಾರಣ ಎಲ್ಲವು ದಾಖಲೆ ಪತ್ರಗಳ ಮೂಲಕ ಪಿಂಚಣಿ ಸೇವೆ ನಡೆಯುತ್ತಿತ್ತು. ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟರು ಅವರ ಹೆಸರಿನಲ್ಲಿ ಪಿಂಚಣಿ ಸೌಲಭ್ಯವನ್ನು ಅಕ್ರಮವಾಗಿ ಅನುಭವಿಸುತ್ತಿದ್ದ ಹಲವು ಪ್ರಕರಣಗಳು ವರದಿಯಾಗುತ್ತಿದ್ದವು. ಈ ಪಿಂಚಣಿ ವ್ಯವಸ್ಥೆ ದುರುಪಯೋಗ ತಡೆಯವ ಉದ್ದೇಶದಿಂದ ಈ ಡಿಜಿಟಲ್ ಪ್ರಮಾಣ ಪತ್ರ ಯೋಜನೆ ಜಾರಿ ಮಾಡಲಾಗಿತ್ತು. ವ್ಯಕ್ತಿ ತಾವು ಬದುಕಿರುವ ಕುರಿತು ದೃಢೀಕರಣ ಪ್ರಮಾಣ ಪತ್ರ ಸಲ್ಲಿಸದೆ ಇದ್ದರೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಸದ್ಯ ಕೇಂದ್ರ ಸರ್ಕಾರದ ಪಿಂಚಣಿ ಪಡೆಯುವ ಮಂದಿಗೆ ಇದು ಬಹಳ ಅನುಕೂಲಕರವಾಗಿದೆ.



Click it and Unblock the Notifications
