Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಮನೆಯಲ್ಲೇ ಮುತ್ತು ಬೆಳೆದ ಸಾಹಸಿಗ: ವರ್ಷಕ್ಕೆ ₹10 ಲಕ್ಷ ಆದಾಯ..! ಬೆಳೆಯೋದು ಹೇಗೆ?
ಕಡಲ ಆಳದಲ್ಲಿ ಸಿಗುವ ಮುತ್ತು ಬಹಳ ದುಬಾರಿ. ಅದರಲ್ಲೂ ಮುತ್ತಿನ ಹಾರ, ಮುತ್ತಿನಿಂದ ಮಾಡಲಾದ ಆಭರಣಗಳ ಬೆಲೆಯಂತು ಸಾಮಾನ್ಯ ಆಭರಣಕ್ಕೆ ಹೋಲಿಸಿದರೆ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಮುತ್ತಿಗೆ ಬಹಳ ಬೇಡಿಕೆಯೂ ಇದೆ. ಹೈದರಾಬಾದ್ ನಗರವನ್ನ ಮುತ್ತಿನ ನಗರಿ ಎಂದು ಕರೆಯಲಾಗುತ್ತೆ. ಅಲ್ಲಿ ಮುತ್ತಿನಿಂದ ಮಾಡಲಾದ ಅತ್ಯಂತ ಸುಂದರ ಆಭರಣಗಳು ಹಾಗೆ ಪರಿಶುದ್ಧ ಮುತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಮುತ್ತಿನಲ್ಲಿ ಹಲವು ರೀತಿಯ ಗುಣಮಟ್ಟ ನಾವು ನೋಡಬಹುದು. ಕೆಲವೊಂದು ಮುತ್ತು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹಾಗೆ ಕೆಲವು ದುಬಾರಿ ಅಲ್ಲದೆ ಅವುಗಳ ಗಾತ್ರ ಹಾಗೂ ತೂಕದ ಮೇಲೂ ಅವುಗಳ ಬೆಲೆ ನಿಗಧಿಯಾಗುತ್ತೆ. ಇನ್ನು ಮುತ್ತಿನ ಹಾರ, ಆಭರಣ ಧರಿಸೋದು ಅಂದ್ರೆ ಮಹಿಳೆಯರಿಗೆ ಇನ್ನಿಲ್ಲದ ಇಷ್ಟವಿರುತ್ತೆ. ಆದರೆ ಅದರ ಹುಡುಕಿ ತರುವುದು ಕಷ್ಟವಾಗೋದ್ರಿಂದ ಬೆಲೆ ದುಬಾರಿಯಾಗಿರಲಿದೆ.

ಚಿನ್ನ ಬೆಳ್ಳಿಯನ್ನು ತಾವು ತಯಾರಿಸಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ಗಣಿಗಾರಿಕೆ ಮೂಲಕ ತೆಗೆಯಲಾಗುತ್ತದೆ. ಹಾಗೆ ಮುತ್ತು ಸಮುದ್ರದ ಆಳದಲ್ಲಿ ನಮಗೆ ಸಿಗುತ್ತದೆ. ಆದ್ರೆ ಮುತ್ತನ್ನು ಮನೆಯಲ್ಲೇ ಕೃಷಿ ಮಾಡಿದರೆ ಹೇಗೆ? ನಿಮ್ಮಲ್ಲಿ ಈ ರೀತಿಯ ಆಲೋಚನೆಯೂ ಬಂದಿರುವುದಿಲ್ಲ. ಆದ್ರೆ ಇಲ್ಲೊಬ್ಬರು ಈ ರೀತಿ ಮನೆಯಲ್ಲೇ ಮುತ್ತಿನ ಕೃಷಿ ಮಾಡಿ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಲಾಭ ಮಾಡುತ್ತಿದ್ದಾರೆ.
ಹೌದು ರಾಜಸ್ಥಾನ ಮೂಲದ ಗೌರವ್ ಪಚೌರಿ ಎಂಬ ವ್ಯಕ್ತಿ ತಮ್ಮ ಕೆಲಸ ಬಿಟ್ಟು ತಮ್ಮ ಊರಿನಲ್ಲಿ ಮುತ್ತನ್ನೇ ಬೆಳೆಯುವ ಕೃಷಿ ಆರಂಭಿಸಲು ಮುಂದಾದರು. ಕೆಲವರಿಗೆ ಇದು ಅಚ್ಚರಿ ಎನಿಸಬಹುದು ಮುತ್ತು ಬೆಳೆಯುವುದು ಹೇಗೆ? ಎಂಬ ಪ್ರಶ್ನೆಯಂತು ಮೂಡುವುದು ಸಹಜ. ಆದ್ರೆ ಇಂತಹದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
2017 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಆದರೆ ಅವರು ಸರ್ಕಾರಿ ಹುದ್ದೆ ಪಡೆಯುವ ಉದ್ದೇಶದಿಂದ ಮತ್ತೆ ಓದಿಕೊಳ್ಳಲು ಆರಂಭಿಸಿದ್ದರು. ದೆಹಲಿಗೆ ತೆರಳಿ ತಯಾರಿ ನಡೆಸಿದರು. ಆದ್ರೆ ಯಶಸ್ಸು ಮಾತ್ರ ಸಿಗಲಿಲ್ಲ. ಹೀಗಾಗಿ ವಿಶೇಷವಾಗಿ ಏನಾದರು ಮಾಡಬೇಕು ಎಂದುಕೊಂಡಿದ್ದರು. ಒಂದು ದಿನ ಟಿವಿಯಲ್ಲಿ ಈ ಸಿಹಿ ನೀರಿನಲ್ಲಿಮ ಮುತ್ತು ಬೆಳೆಯುವ ಕುರಿತಂತೆ ಒಂದು ವಿಚಾರ ನೋಡಿದ್ದರಂತೆ. ಇದು ಅವರ ತಲೆಯಲ್ಲಿ ಹೊಸ ಐಡಿಯಾ ಹುಟ್ಟುಹಾಕಿತು.
ಮುತ್ತು ಕೃಷಿ ಎಂಬ ಹೊಸ ವಿಧವಾದ ಕೃಷಿ ಅವರ ಗಮನ ಸೆಳೆದಿತ್ತು. ತಡ ಮಾಡದೆ ಅವರು ಈ ಕೃಷಿಗೆ ಏನೆಲ್ಲಾ ತಯಾರಿ ಬೇಕು ಎಂಬುದನ್ನು ಹುಡುಕಾಡಿದರು. 2 ವರ್ಷಗಳ ಕಾಲ ಕುಟುಂಬಸ್ಥರ ಮನವೊಲಿಸಿದರು. ಬಳಿಕ 2022ರಲ್ಲಿ ಗೌರವ್ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮುತ್ತು ಕೃಷಿ ಕೊಳಗಳನ್ನು ವೀಕ್ಷಣೆಗೆಂದು ತೆರಳಿದ್ದರು. ಹಾಗೆ 5 ದಿನ ತರಬೇತಿ ಸಹ ಪಡೆದರು.
ಹೇಗೆ ಮುತ್ತುಗಳನ್ನು ಬಿತ್ತನೆ ಮಾಡಬೇಕು. ಅದಕ್ಕೆ ಏನೆಲ್ಲಾ ಚಿಕಿತ್ಸೆ ನೀಡಬೇಕು, ಆರೈಕೆ ಹೇಗೆ?, ಎಷ್ಟು ದಿನದಲ್ಲಿ ಮುತ್ತು ಬೆಳೆಯುತ್ತದೆ. ಹೀಗೆ ಹತ್ತಾರು ವಿಚಾರಗಳ ತರಬೇತಿ ಪಡೆದರು. ಸೆಪ್ಟೆಂಬರ್ 2022 ರ ಹೊತ್ತಿಗೆ ಭರತ್‌ಪುರ ಜಿಲ್ಲೆಯ ತನ್ನ ಗ್ರಾಮದಲ್ಲಿ 150 x 80 ಅಡಿಗಳ ಕೊಳವನ್ನು ಸಿದ್ಧಪಡಿಸಿ 1.15 ಲಕ್ಷ ಮಸ್ಸೆಲ್‌ಗಳನ್ನು ನೀರಿಗೆ ಬಿಟ್ಟರು. ಮಸ್ಸೆಲ್‌ಗಳೆಂದರೆ ಮುತ್ತುಗಳು ಬೆಳೆಯುವ ಕಪ್ಪೆ ಚಿಪ್ಪುಗಳಾಗಿವೆ.
ಅವುಗಳಿಗೆ ಆಹಾರ ನೀಡುವುದು, ನೀರು ಬದಲಾಯಿಸುವುದು, ತಾಪಮಾನ ಕಾಪಾಡುವುದು ಸೇರಿ ಎಲ್ಲಾ ಕ್ರಮ ತೆಗೆದುಕೊಂಡರು. ಒಟ್ಟಾರೆ ಅವರು 21 ಲಕ್ಷ ರೂಪಾಯಿ ಖರ್ಚು ಮಾಡಿ 55 ಲಕ್ಷ ರೂಪಾಯಿ ಆದಾಯ ಗಳಿಸಿದರಂತೆ. ಒಮ್ಮೆ ಮುತ್ತುಗಳು ಪಕ್ವವಾಗಲು ಸುಮಾರು 21 ತಿಂಗಳ ಕಾಲ ಬೇಕಾಗುತ್ತದೆಯಂತೆ. ಈಗ ಅವರು ವರ್ಷಕ್ಕೆ 10 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ.



Click it and Unblock the Notifications