Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮೆದುಳು ಶಸ್ತ್ರ ಚಿಕಿತ್ಸೆ ವೇಳೆ ಜೂ.ಎನ್‌ಟಿಆರ್ ಸಿನಿಮಾ ನೋಡಿದ ರೋಗಿ..! ಏಕೆ ಗೊತ್ತಾ?
ವೈದ್ಯಕೀಯ ಕ್ಷೇತ್ರದಲ್ಲಿ ಈಗ ಶಸ್ತ್ರಚಿಕಿತ್ಸೆ ಬಹಳ ಸುಲಭದ ವಿಧಾನವಾಗಿದೆ. ಈಗ ರೋಬೋಟಿಕ್ ಯಂತ್ರಗಳು, ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ವಿಧಾನಗಳು ಬಂದ ಬಳಿಕ ಶಸ್ತ್ರ ಚಿಕಿತ್ಸೆ ಬಹಳ ಕ್ಲಿಷ್ಟಕರವಾಗಿ ಉಳಿದಿಲ್ಲ ಬದಲಿಗೆ ಸುಲಭದ ಚಿಕಿತ್ಸಾ ವಿಧಾನವಾಗಿದೆ. ಹೀಗಾಗಿಯೆ ಈಗ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳಿಂದ ಹಿಡಿದು ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗೂ ಯಾರು ಸಹ ಹೆದರುವುದಿಲ್ಲ.
ಹಾಗೆ ಇತ್ತೀಚಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ವೇಳೆ ರೋಗಿಗಳಲ್ಲಿ ಭಯ ಹೋಗಲಾಡಿಸಲು, ಆತ್ಮಸ್ಥರ್ಯ ತುಂಬಲು ಅವರ ಮುಂದೆ ಶ್ಲೋಕಗಳು ಹೇಳುವುದು, ಸಂಗೀತ ನುಡಿಸುವುದು, ಹಾಡು ಹಾಕುತ್ತಿದ್ದ ಕೆಲವು ಪ್ರಕರಣಗಳನ್ನು ನಾವು ನೋಡಿದ್ದೆವು. ಆದ್ರೆ ಈಗ ಈ ಸಾಲಿಗೆ ರೋಗಿಯೊಬ್ಬ ತನ್ನ ಮೆದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ಸಿನಿಮಾ ನೋಡಿ ಎಲ್ಲರ ಅಚ್ಚರಿಗೆ ಕಾರಣನಾಗಿದ್ದಾನೆ.

ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಂಕೀರ್ಣವಾದ ಮೆದುಳಿನ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯೊಬ್ಬ ಜೂನಿಯರ್ ಎನ್‌ಟಿಆರ್ ಅವರ ಸಿನಮಾ ವೀಕ್ಷಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವೇಕ್ ಕ್ರಾನಿಯೊಟೊಮಿ ಎನ್ನುವುದು ಕಾರ್ಯವಿಧಾನದ ಸಮಯದಲ್ಲಿ ರೋಗಿಯು ಪ್ರಜ್ಞಾ ಸ್ಥಿತಿಯಲ್ಲಿಯೇ ನೆರವೇರಿಸಬೇಕಾಗಿದ್ದು ಇದಕ್ಕಾಗಿ ರೋಗಿಗೆ ಸಿನಿಮಾ ನೋಡಲು ಹೇಳಲಾಗಿದ
ಕಾಕಿನಾಡದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ 55 ವರ್ಷದ ರೋಗಿಯು ಎ.ಅನಂತಲಕ್ಷ್ಮಿ ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಮೆದುಳಿ ಎಡಭಾಗದಲ್ಲಿ 3.3 x 2.7 ಸೆಂ.ಮೀ ಗೆಡ್ಡೆಯನ್ನು ಗುರುತಿಸಲಾಯಿತು. ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಲು ನಿರ್ಧರಿಸಲಾಗಿತ್ತು. ಆದರೆ ರೋಗಿ ಈ ವೇಳೆ ಎಚ್ಚರದಿಂದ ಇರುವುದು ಅಗತ್ಯವಾಗಿತ್ತು.
ಆದರೆ ಶಸ್ತ್ರ ಚಿಕಿತ್ಸೆಯ ನೋವು ಅವರ ಅರಿವಿಗೆ ಬಾರದೆ ಇರಲಿ ಎಂಬ ಕಾರಣಕ್ಕೆ ಜೂನಿಯರ್ ಎನ್‌ಟಿಆರ್ ಅವರ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವೈದ್ಯರು ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಐದು ದಿನಗಳಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಅವೇಕ್ ಕ್ರಾನಿಯೊಟಮಿ, ಇದನ್ನು ಅವೇಕ್ ಬ್ರೈನ್ ಸರ್ಜರಿ ಎಂದೂ ಕರೆಯುತ್ತಾರೆ, ಇದನ್ನು ಆರಂಭದಲ್ಲಿ ಅಪಸ್ಮಾರದ ಶಸ್ತ್ರಚಿಕಿತ್ಸಾ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು ಮತ್ತು ಈಗ ಇದನ್ನು ಸಾಮಾನ್ಯವಾಗಿ ಗೆಡ್ಡೆಗಳ ತೆರವು ಮಾಡುವಾಗ ಬಳಸಲಾಗುತ್ತಿದೆ. ರೋಗಿಯು ಎಚ್ಚರವಾಗಿದ್ದಾಗ, ನರಶಸ್ತ್ರಚಿಕಿತ್ಸಕ ನರವೈಜ್ಞಾನಿಕ ಕಾರ್ಯವನ್ನು ಸಂರಕ್ಷಿಸುವಾಗ ಗೆಡ್ಡೆಯನ್ನು ಹೊರತೆಗೆಯಲು ಸಹಕಾರಿಯಾಗಲಿದೆ.
ಒಂದು ವಾರದ ಹಿಂದೆ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ವೈದ್ಯರು ಇದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ತೆಗೆದುಹಾಕಿದ್ದರು. ಆದರೆ ಇಲ್ಲಿ ರೋಗಿ ತನ್ನ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದ. ಇದಕ್ಕೂ ಮೊದಲು ದೆಹಲಿಯ ಏಮ್ಸ್‌ನಲ್ಲಿ ಬಾಲಕಿಯೊಬ್ಬಳಿಗೆ ಕ್ರಾನಿಯೊಟಮಿ ಶಸ್ತ್ರ ಚಿಕಿತ್ಸೆ ನೆರವೇರಿಸುವಾಗ ಆಕೆ ಎಚ್ಚರಿಕೆಯಿಂದಿದ್ದನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಈ ರೀತಿ ಎಚ್ಚರವಾಗಿದ್ದಾಗಲೇ ಶಸ್ತ್ರ ಚಿಕಿತ್ಸೆ ನೆರವೇರಿಸುವುದು ಕೂಡ ಶಸ್ತ್ರ ಚಿಕಿತ್ಸೆಯಲ್ಲಿ ನೆರವಾಗಲಿದೆ. ಹೀಗಾಗಿ ಈ ವಿಧಾನ ಬಹುಬೇಗ ಖ್ಯಾತಿ ಪಡೆದಿದೆ. ಅದರಲ್ಲೂ ಮೆದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ಈ ವಿಧಾನ ಹೆಚ್ಚು ಬಳಕೆಯಲ್ಲಿದೆ. ಇನ್ನು ಈ ವಿಧಾನ ನೋಡಿದ ಮಂದಿ ಮಾತ್ರ ಅಚ್ಚರಿಗೆ ಒಳಗಾಗಿದ್ದಾರೆ. ಆತ ಸಿನಿಮಾ ನೋಡುವಾಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆಯೇ ಅಥವಾ ಶಸ್ತ್ರ ಚಿಕಿತ್ಸೆ ವೇಳೆ ಸಿನಿಮಾ ನೋಡುತ್ತಿದ್ದಾನೆಯೇ ಎಂಬ ಅನುಮಾನ ಹಲವಿಗೆ ಮೂಡಿದೆ.
ಎಲ್ಲಾ ಶಸ್ತ್ರ ಚಿಕಿತ್ಸೆಯ ವೇಳೆಯೂ ಈ ವಿಧಾನ ಬಳಕೆಯನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಹಲವು ಶಸ್ತ್ರ ಚಿಕಿತ್ಸಾ ವಿಧಾನಗಳು ರೋಗಿಯು ಅರೆಪ್ರಜ್ಞಾ ಸ್ಥಿತಿಯಲ್ಲಿಯೇ ನೆರವೇರಿಸುತ್ತಾರೆ.



Click it and Unblock the Notifications