Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾರುಕಟ್ಟೆಯಿಂದ 14 ಉತ್ಪನ್ನ ಹಿಂಪಡೆದ ಪತಂಜಲಿ..! ಯಾವುದೆಲ್ಲಾ ಗೊತ್ತಾ?
ಯೋಗಗುರು ಬಾಬಾ ರಾಮ್‌ದೇವ್ ಅವರ ಮಾಲೀಕತ್ವದ ಪತಂಜಲಿ ಉತ್ಪನ್ನಗಳ ಕುರಿತು ನಿಮಗೆಲ್ಲ ತಿಳಿದೇ ಇದೆ. ಸಾವಿರಾರು ಕೋಟಿ ಮೌಲ್ಯದ ಕಂಪನಿ ಇದು. ಕೆಲವೇ ವರ್ಷದಲ್ಲಿ ಅತ್ಯಂತ ದೊಡ್ಡ ಕಂಪನಿಯಾಗಿ ಬೆಳೆದ ಸಂಸ್ಥೆ. ಆದರೆ ಕೆಲವು ವಿಚಾರದಲ್ಲಿ ಈ ಸಂಸ್ಥೆಗೆ ವಿಚಾದ, ಚರ್ಚೆ ಹುಟ್ಟುಹಾಕುತ್ತಲೇ ಬಂದಿದೆ.
ಇತ್ತೀಚಿಗೆ ಪತಂಜಲಿ ಎಲೈಚಿ "ಸೋನ್ ಪಾಪಡಿ" ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇತ್ತೀಚಿಗೆ ಕಂಪನಿ ಸುದ್ದಿಯಾಗಿತ್ತು. ಅಲ್ಲದೆ ಕಂಪನಿಯ ಹಲವು ಅಧಿಕಾರಿಗಳು ಜೈಲು ಕಂಬಿ ಎಣಿಸಬೇಕಾಗಿತ್ತು. ಸೆಪ್ಟೆಂಬರ್ 17, 2019 ರಂದು ಪಾಠಕ್ ಅವರ ಅಂಗಡಿಯಿಂದ ಪತಂಜಲಿ "ಎಲೈಚಿ ನವರತ್ನ ಸೋನ್ ಪಾಪಡಿ" ಸಿಹಿಯನ್ನು ತೆಗೆದುಕೊಂಡು ಅದರ ಮಾದರಿಯನ್ನು ಪರೀಕ್ಷೆ ಒಳಪಡಿಸಿದ್ದರು.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವರದಿ ಬಂದ ಬಳಿಕ 2021ರಲ್ಲಿ ಪತಂಜಲಿ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿತ್ತು.
ಆದರೆ ಈಗ ಈ ಪತಂಜಲಿ ಸಂಸ್ಥೆಯ ಇತ್ತೀಚಿಗೆ ತನ್ನ 14 ಉತ್ಪನ್ನಗಳ ಮಾರಾಟ ಹಿಂಪಡೆದುಕೊಂಡಿದೆ. ಈ ವಸ್ತುಗಳನ್ನು ಮಾರಾಟದಿಂದ ತೆಗೆದುಹಾಕಲು 5,606 ಫ್ರ್ಯಾಂಚೈಸ್ ಔಟ್‌ಲೆಟ್‌ಗಳಿಗೆ ನಿರ್ದೇಶನ ನೀಡಿದೆ. ಇದೇ ವರ್ಷ ಮೇ 14 ರಂದು, ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ದೇವ್, ಅವರ ಸಹವರ್ತಿ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ನೀಡಿದ ನ್ಯಾಯಾಂಗ ನಿಂದನೆ ನೋಟಿಸ್‌ನ ನಿರ್ಧಾರವನ್ನು ನ್ಯಾಯಾಲಯ ಕಾಯ್ದಿರಿಸಿತ್ತು.
ಇದರ ಜೊತೆಗೆ ಈ ಉತ್ಪನ್ನಗಳಿಗೆ ಸಂಬಂಧಿಸಿದಂತೆ. ಎಲ್ಲಾ ಜಾಹೀರಾತುಗಳನ್ನು ಎಲ್ಲಾ ಮಾಧ್ಯಮಗಳಿಂದ ವಾಪಾಸು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ತಿಳಿಸಿತ್ತು, ಈ ಆದೇಶದ ನಡುವೆಯೇ ಮಾರುಕಟ್ಟೆಯಿಂದ 14 ಉತ್ಪನ್ನಗಳ ಹಿಂಪಡೆದುಕೊಂಡಿದೆ.
ಇನ್ನು ಇದೇ ಪ್ರಕರಣ ಸಂಬಂಧ ಜುಲೈ 30ರಂದು ವಿಚಾರಣೆ ಸಹ ನಡೆಯಲಿದೆ. ಉತ್ತರಾಖಂಡ್ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 30 ರಂದು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯಿಂದ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮಾರುಕಟ್ಟೆಯಿಂದ ಪತಂಜಲಿ ಹಿಂಪಡೆದ ಉತ್ಪನ್ನಗಳು ಯಾವುದು?
1. ಸ್ವಸಾರಿ ಗೋಲ್ಡ್
2. ಸ್ವಸರಿ ವತಿ
3. ಬ್ರಾಂಕೋಮ್
4. ಸ್ವಸರಿ ಪ್ರವಾಹಿ
5. ಸ್ವಸಾರಿ ಅವಲೆಹ್
6. ಮುಕ್ತವತಿ ಎಕ್ಸ್ಟ್ರಾ ಪವರ್
7. ಲಿಪಿಡಮ್
8. ಬಿಪಿ ಗ್ರಿಟ್
9. ಮಧುಗ್ರಿತ್
10. ಮಧುನಾಶಿನಿವತಿ ಎಕ್ಸ್ಟ್ರಾ ಪವರ್
11. ಲಿವಾಮೃತ್ ಅಡ್ವಾನ್ಸ್
12. ಲಿವೋಗ್ರಿಟ್
13. ಐಗ್ರಿಟ್ ಚಿನ್ನ
14. ಪತಂಜಲಿ ದೃಷ್ಟಿ ಐ ಡ್ರಾಪ್
ಇದಿಷ್ಟೇ ಅಲ್ಲದೆ ಕೊರೊನಾ ಲಸಿಕೆ ಕುರಿತಂತೆ ಬಾಬಾ ರಾಮ್‌ದೇವ್ ನೀಡಿದ್ದ ಹೇಳಿಕೆ ಸಂಬಂಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಕೋರ್ಟ್ ಈಗ ವಿಚಾರಣೆ ನಡೆಸುತ್ತಿದೆ. ಅಲ್ಲದೆ ಹಲವು ಉತ್ಪನ್ನಗಳ ಸಂಬಂಧ ಕೆಲ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ.
ಪತಂಜಲಿ ಎಲೈಚಿ "ಸೋನ್ ಪಾಪಡಿ" ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಲ್ಲಿನ ಉತ್ತರಾಖಂಡ್‌ನ ನ್ಯಾಯಾಲಯ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಪಿಥೋರಗಢ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಸಿಂಗ್ ಅವರು ಶನಿವಾರ ಜೈಲು ಶಿಕ್ಷೆಯ ಜೊತೆಗೆ ₹ 5,000 ರಿಂದ ₹ 25,000 ವರೆಗೆ ದಂಡ ವಿಧಿಸಿ ಆದೇಶಿಸಿರುವುದು ಇಡೀ ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿತ್ತು.



Click it and Unblock the Notifications
