Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ: ಹೀಗೆ ಮಾಡಿದರೆ ಪೂಜ್ಯ ಫಲ ಹೆಚ್ಚುತ್ತೆ
ಹಿಂದೂಗಳಿಗೆ ಏಕಾದಶಿಯ ದಿನ ತುಂಬಾ ಮಹತ್ವವಾದ ದಿನ. ಈ ದಿನ ಯಾರು ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರ ಇಷ್ಟಾರ್ಥಗಳು ನೆರವಾಗುವುದು ಎಂದು ಹೇಳಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಆಗಸ್ಟ್ 12ಕ್ಕೆ ಪರಮ ಏಕಾದಶಿಯನ್ನು ಆಚರಿಸಲಾಗುವುದು. ಈ ಪರಮ ಏಕಾದಶಿಯನ್ನು ಆಚರಿಸುವುದರಿಂದ ಪರಮಾತ್ಮನ ಕೃಪೆಗೆ ಪಾತ್ರರಾಗಬಹುದು, ಆದ್ದರಿಂದ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಶ್ರೀ ವಿಷ್ಣುವಿನ ಬಲವಾದ ನಂಬಿಕೆ.

ಏಕಾದಶಿ ತಿಥಿ ಪ್ರಾರಂಭ" ಆಗಸ್ಟ್ 11 ಸಂಜೆ 05:06ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಆಗಸ್ಟ್ 12 ಸಂಜೆ 06:01ಕ್ಕೆ
ವ್ರತ ಪಾರಣ ಸಮಯ: ಆಗಸ್ಟ್ 13 ಬೆಳಗ್ಗೆ 05:49ರಿಂದ 08:19ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ
ಈ ವರ್ಷ ಪರಮ ಏಕಾದಶಿ ತುಂಬಾನೇ ಶುಭಯೋಗವಾದ ಹರ್ಷಣ ಯೋಗದಲ್ಲಿ ಬಂದಿದೆ
ಹರ್ಷಣ ಯೋಗ ಎಂದರೇನು?
ಜ್ಯೋತಿಷ್ಯ ಪ್ರಕಾರ 27 ಯೋಗಗಳಲ್ಲಿ ಹರ್ಷಣ ಯೋಗ ಕೂಡ ಒಂದಾಗಿದೆ. ಸೂರ್ಯ, ಚಂದ್ರ ಅಶ್ವಿನಿ ನಕ್ಷತ್ರದಲ್ಲಿದ್ದಾಗ ಹರ್ಷಣ ಯೋಗ ಉಂಟಾಗುವುದು. ಇದು ತುಂಬಾ ಶುಭ ಯೋಗವಾಗಿದೆ. ಹರ್ಷಣ ಯೋಗದಲ್ಲಿ ಜನಿಸಿದರೆ ತುಂಬಾ ಶುಭ ಎಂದು ಪರಿಗಣಿಸಲಾಗುವುದು.
ಪರಮ ಏಕಾದಶಿಯಂದು ಈ ಕಾರ್ಯಗಳನ್ನು ಮಾಡುವುದರಿಂದ ಪೂಜ್ಯ ಫಲ ಹೆಚ್ಚಾಗುವುದು
ಉಪವಾಸವಿದ್ದು ಪರಮ ಏಕಾದಶಿಯನ್ನು ಆಚರಿಸಬೇಕು
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಕೀರ್ತಿ ಹೆಚ್ಚಾಗಲಿದೆ. ಈ ದಿನ ಭಕ್ತಿಯಿಂದ ಶ್ರೀ ವಿಷ್ಣುವಿನ ಪೂಜೆ ಮಾಡಿ. ಪೂಜೆಯಲ್ಲಿ ಹಳದಿ ಹೂಗಳು, ಹಣ್ಣುಗಳನ್ನು ಸೇರಿಸಿ. ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿ ಬಳಸಿ, ಶ್ರೀ ವಿಷ್ಣುವಿಗೆ ಪಂಚಾಮೃತ ಅರ್ಪಿಸಿ.
ಶನಿವಾರದಂದು ಬಂದಿದೆ ಏಕಾದಶಿ
ಶನಿವಾರ ಶನಿದೇವನ ಆರಾಧನೆಗೆ ಮೀಸಲಾಗಿರುವ ದಿನ. ಈ ದಿನ ಏಕಾದಶಿ ಬಂದಿದೆ, ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಮಾಡಿ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶನಿಕೃಪೆಗೆ ಪಾತ್ರರಾಗುವಿರಿ.
ಹರಿಹರನ ಅನುಗ್ರಹಕ್ಕೆ
ಶ್ರಾವಣ ಮಾಸ, ಈ ದಿನ ಹರಿಹರನ ಆಶೀರ್ವಾದ ಪಡೆಯಲು ಶ್ರೀ ವಿಷ್ಣು ಹಾಗೂ ಶಿವನನ್ನು ಆರಾಧಿಸಿ. ಶಿವನಿಗೆ ಹಾಲಿನೊಂದಿಗೆ ಕುಂಕುಮವನ್ನು ಅರ್ಪಿಸಿ. ಹರಿಹರನ ಪೂಜೆ ಮಾಡುವುದರಿಂದ ವೈವಾಹಿಕ ಜೀವನ ಚೆನ್ನಾಗಿರಲಿದೆ, ಅಲ್ಲದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರಾಗುವುದು.
ಹನುಮಂತನ ಪೂಜೆ ಮಾಡಿ
ಶನಿವಾರದ ಪರಮ ಏಕಾದಶಿಯಂದು ಹನುಮಂತನ ದೇಗುಲಕ್ಕೂ ಭೇಟಿ ನೀಡಿ, ದೇವರಿಗೆ ಸಿಂಧೂರ ಅರ್ಪಿಸಿ, ಹನುಮಾನ್ ಚಾಲೀಸ ಪಠಿಸಿ.
ಸಂಜೆ ಹೊತ್ತು ತುಳಸಿಗೆ ಪೂಜೆ ಮಾಡಿ
ಈ ದಿನ ಸಂಜೆ ತುಳಸಿ ಗಿಡದ ಕೆಳಗಡೆ ತುಪ್ಪದ ದೀಪ ಹಚ್ಚಿ ತುಳಸಿಯನ್ನು ಪೂಜಿಸಿ.
ದಾನಧರ್ಮದ ಮಹತ್ವ
ಈ ದಿನ ಮಾಡುವ ಧಾನಧರ್ಮದಿಂದ ಪೂಜೆಯ ಫಲ ಹೆಚ್ಚಾಗಲಿದೆ. ನಿಮಗೆ ಕೈಯಲ್ಲಾದಂತೆ ಬಡ ಬಗ್ಗರಿಗೆ ಸಹಾಯ ಮಾಡಿ, ನಿರ್ಗತಿಕರಿಗೆ ಆಹಾರವನ್ನು ನೀಡಿ.



Click it and Unblock the Notifications
