Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಈ ಹಪ್ಪಳ ತಯಾರಿಸೋದನ್ನ ನೋಡಿದ್ರೆ ತಿನ್ನೋದನ್ನೇ ಬಿಡ್ತೀರ..!
ನಾವು ಊಟದ ವೇಳೆ ಊಟ ಚೆನ್ನಾಗಿರಲಿ ರುಚಿ ಹೆಚ್ಚಾಗಲಿ ಎಂದು ಪಲ್ಯ, ಉಪ್ಪಿನಕಾಯಿ, ಹಪ್ಪಳವನ್ನು ಹಾಕಿಕೊಳ್ಳುತ್ತೇವೆ. ಏಕಂದ್ರ ಊಟದ ಜೊತೆ ಇನ್ನೇನಾದರು ಇದ್ದರೆ ಊಟದ ರುಚಿ ಹೆಚ್ಚಾಗುತ್ತದೆ. ಅದರಲ್ಲೂ ತರಕಾರಿ ಊಟವಿದ್ದರಂತು ಹಪ್ಪಳ ಇರಲೇಬೇಕು.
ಹಪ್ಪಳದಲ್ಲಿ ಹತ್ತಾರು ವಿಧಗಳಿವೆ ಎಲ್ಲಾ ಹಪ್ಪಳಗಳು ರುಚಿ ರುಚಿಯಾಗಿ ಮಾಡಬಹುದು. ಕೆಲವೊಮ್ಮೆ ಹಪ್ಪಳವನ್ನು ಮನೆಯಲ್ಲಿ ಮಾಡಿ ಸವಿಯುತ್ತೇವೆ. ಇನ್ನೂ ಕೆಲ ಸಮಯ ಅಂಗಡಿಗಳಿಂದ ಖರೀದಿಸಿ ತಂದು ಎಣ್ಣೆಯಲ್ಲಿ ಕರಿದು ತಿನ್ನುತ್ತೇವೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿಧ ವಿಧದ ಹಪ್ಪಳಗಳು ಲಭ್ಯವಿದೆ.

ಆದ್ರೆ ಈ ಹಪ್ಪಳಗಳು ಹೇಗೆ ತಯಾರಾಗಿ ಹೇಗೆ ಮಾರುಕಟ್ಟೆ ತಲುಪುತ್ತವೆ ಎಂದು ತಿಳಿದರೆ ನೀವು ಇಂದೇ ಹಪ್ಪಳ ತಿನ್ನೋದನ್ನೇ ಬಿಟ್ಟುಬಿಡುತ್ತೀರಿ. ಹೌದು ಹಪ್ಪಳವನ್ನು ತಯಾರಿಸುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಮಂದಿಗೆ ಹಪ್ಪಳ ತಿನ್ನುವ ನಿರ್ಧಾರದ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದೆ.
ಹಾಗಾದರೆ ಆ ವಿಡಿಯೋದಲ್ಲಿ ಏನಿದೆ ಅಂತ ನೋಡೋದಾದ್ರೆ, ಹಪ್ಪಳ ಮಾಡುವಾಗ ಅದನ್ನು ಅರಿಯಾದ ಶುಚಿಯಾದ ಅಂಶಗಳ ಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಅಂದರೆ ಹಪ್ಪಳ ಮಾಡುವಾಗ ಮಹಿಳೆ ಕಾಲಿನ ಸಹಾಯ ಪಡೆದು ಪಾತ್ರೆಯೊಂದರ ಮೇಲೆ ಹತ್ತಿ ಹಪ್ಪಳವನ್ನು ಕತ್ತರಿಸುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಶುಚಿತ್ವದ ಕಡೆ ಪ್ರಶ್ನೆ ಎದ್ದಿದೆ.
ಈ ವಿಡಿಯೋದಲ್ಲಿ ಏನಿದೆ?
ಆರಂಭದಲ್ಲಿ ಇದೊಂದು ಹಪ್ಪಳ ತಯಾರಿಕೆಗೆ ಸಂಬಂಧಿಸಿದ ವಿಡಿಯೋ ಎಂದು ತಿಳಿಯುತ್ತದೆ. ಹಪ್ಪಳ ಹೇಗೆ ತಯಾರಾಗುತ್ತದೆ ಎಂಬ ಕುರಿತಾದ ಸಣ್ಣ ವಿಡಿಯೋ ಇದಾಗಿದೆ. ಹಪ್ಪಳ ಮಾಡುವಾಗ ಅನುಸರಿಸುವ ಎಲ್ಲಾ ವಿಧಾನವನ್ನು ಈ ವಿಡಿಯೋದಲ್ಲಿ ನೋಡಬಹುದು.
ಆದರೆ ಕೊನೆಯಲ್ಲಿ ದೊಡ್ಡ ವೃತ್ತಾಕಾರದ ಹಪ್ಪಳದಿಂದ ಸಣ್ಣದಾಗಿ ಅದರನ್ನು ಕತ್ತರಿಸಬೇಕಿದೆ. ಈ ಹಂತದಲ್ಲಿ ಮಹಿಳೆಯೊಬ್ಬರು ಬರಿಗಾಲಿನಲ್ಲಿ ಪಾತ್ರೆಯ ಮೇಲೆ ಕಾಲಿಟ್ಟು ಆ ಹಪ್ಪಳವನ್ನು ಕತ್ತರಿಸುತ್ತಿದ್ದಾರೆ. ಇದು ನೋಡಲು ಎಷ್ಟು ಅಸಹ್ಯವಾಗಿದೆ ಅಂದ್ರೆ ಕಾಲಿನ ಧೂಳು, ಮಣ್ಣು ಆ ಹಪ್ಪಳದೊಳಗೆ ಸೇರುವುದರಲ್ಲಿ ಯಾವ ಅನುಮಾನವೂ ಇಲ್ಲ.
ಈ ಹಂತ ಮುಗಿದ ಬಳಿಕ ವ್ಯಕ್ತಿಯೊಬ್ಬ ಆ ಹಪ್ಪಳಗಳನ್ನು ದೊಡ್ಡ ಟಾರ್ಪಲಿನ್‌ನಲ್ಲಿ ಒಣಗಿಸುತ್ತಿರುವುದನ್ನು ನೋಡಬಹುದು. ಇಲ್ಲೂ ಸಹ ಆತ ಬರಿಗಾಲಿನಲ್ಲಿ ಅದೇ ಟಾರ್ಪಲಿನ್‌ನಲ್ಲಿ ಕುಳಿತು ಧೂಳಿನಲ್ಲಿ ಹಪ್ಪಳವನ್ನು ಒಣಗಿಸುತ್ತಿದ್ದಾನೆ. ಆ ಟಾರ್ಪಲಿನ್ ಸಹ ಕ್ಲೀನ್ ಆಗಿದ್ದಂತೆ ಕಾಣುತ್ತಿಲ್ಲ. ಹೀಗಾಗಿ ಹಪ್ಪಳ ತಯಾರಿಕೆ ಎಷ್ಟು ಅಸಹ್ಯಕರವಾಗಿದೆ ಎಂದು ವಿಡಿಯೋ ವಿವರಿಸುತ್ತಿದೆ.
ಈ ಮೊದಲು ಈ ರೀತಿ ಆಹಾರ ಸಿದ್ಧಪಡಿಸುವ ಹಲವಾರು ವಿಡಿಯೋಗಳು ಹರಿದಾಡಿದ್ದನ್ನು ನಾವು ನೆನಪು ಮಾಡಿಕೊಳ್ಳಬಹುದು. ಅದು ಬೇಕರಿ ವಸ್ತುಗಳಾದ, ಬ್ರೆಡ್, ಬನ್, ಕೇಕ್, ಪಾನಿಪೂರಿ ಹಾಗೂ ಕರಿದ ತಿಂಡಿಗಳ ತಯಾರು ಮಾಡುವ ಹಲವು ವಿಡಿಯೋಗಳು ಹರಿದಾಡಿದ್ದವು. ಅದೆಲ್ಲಾ ನೋಡುಗರಲ್ಲಿ ಫುಡ್ ಬಗ್ಗೆ ಅಸಹ್ಯ ಹುಟ್ಟಿಸುವಂತಿದ್ದವು. ಈಗ ಈ ಸಾಲಿಗೆ ಹಪ್ಪಳವೂ ಸೇರಿಕೊಡಿದೆ.
ಆದರೆ ಮಾರುಕಟ್ಟೆಯಲ್ಲಿ ಅತ್ಯಂತ ರುಚಿಕರ ಹಾಗೂ ಪರಿಶುದ್ಧವಾಗಿ ತಯಾರಾಗುವ ಹಪ್ಪಳಗಳೂ ಸಿಗುತ್ತವೆ. ಆದರೆ ಈ ರೀತಿ ತಯಾರಿಸಲಾದ ಹಪ್ಪಳ ಸೇವಿಸಿದರೆ ಅನಾರೋಗ್ಯಕ್ಕೆ ಒಳಗಾಗುವುದು ಖಚಿತ. ಭಾರತದ ಬೀದಿಗಳಲ್ಲಿ ಸಿಗುವ ಫಾಸ್ಟ್ ಫುಡ್‌ಗಳು ಬಹುತೇಕ ಇದೇ ನೈರ್ಮಲ್ಯದಲ್ಲಿ ತಯಾರಾಗುತ್ತವೆ. ಎಲ್ಲಾ ಕಡೆ ಶುಚಿತ್ವ ಮರೆತು ಕೇವಲ ಹಣ ಮಾಡಲು ಇಳಿದಿರುವ ಮಾರಾಟಗಾರರು ಎಲ್ಲೆಂದರಲ್ಲಿ, ಹೇಗೆ ಬೇಕಾದರು ಆಹಾರ ತಯಾರಿಸಲು ಮುಂದಾಗುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಪಾನೀಪೂರಿ ಸೇವಿಸಿ 14ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವುದೇ ಇದಕ್ಕೆ ಉದಾಹರಣೆ ಎನ್ನಬಹುದು.



Click it and Unblock the Notifications