Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪದ್ಮಿನಿ ಏಕಾದಶಿ 2023: ನಿಮ್ಮ ರಾಶಿಗೆ ಅನುಸಾರವಾಗಿ ಈ ಪೂಜೆ ಸಲ್ಲಿಸಿದರೆ ಶುಭ ಫಲ!
ಜುಲೈ 29 ರಂದು ಪದ್ಮಿಣಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಪದ್ಮಿನಿ ಏಕಾದಶಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತಿದ್ದು, ಈ ದಿನವು ಶ್ರೀ ಹರಿವಿಷ್ಣುವಿನ ಆರಾಧನೆಯ ವಿಶೇಷ ಸಂದರ್ಭವಾಗಿದೆ. ಈ ಸಂದರ್ಭದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅದ್ರಲ್ಲೂ ನಮ್ಮ ರಾಶಿಗೆ ಅನುಸಾರವಾಗಿ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆಯಿದೆ. ಅಷ್ಟಕ್ಕು ನಮ್ಮ ರಾಶಿಗೆ ಅನುಸಾರವಾಗಿ ವಿಷ್ಣುವಿಗೆ ಯಾವ ರೀತಿ ಪೂಜೆಯನ್ನು ಸಲ್ಲಿಸಬೇಕೆಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಆರ್ಥಿಕ ಮತ್ತು ಮಾನಸಿಕ ಒತ್ತಡದಿಂದ ತೊಂದರೆಗೊಳಗಾಗಿದ್ದರೆ ಈ ಪದ್ಮಿನಿ ಏಕಾದಶಿಯಂದು ನಾರಾಯಣ ಕವಚವನ್ನು ಪಠಿಸಿ. ಇದು ಸಂಪತ್ತಿನ ಮೊತ್ತವನ್ನು ಹೆಚ್ಚು ಮಾಡಲು ಸಹಕರಿಸುತ್ತದೆ. ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ವೃಷಭ ರಾಶಿ
ವೃಷಭ ರಾಶಿಯವರ ದಾಂಪತ್ಯ ಜೀವನ ಸುಖಕರವಾಗಿಲ್ಲದಿದ್ದರೆ ಪದ್ಮಿನಿ ಏಕಾದಶಿಯಂದು ಪತಿ-ಪತ್ನಿಯರು ಒಟ್ಟಾಗಿ ಬಾಳೆಗಿಡಕ್ಕೆ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು. ಅಲ್ಲದೆ ಅರಿಶಿನವನ್ನು ನೀರಿನಲ್ಲಿ ಬೆರೆಸಿ ಮರಕ್ಕೆ ಅರ್ಪಿಸಿ. ಇದು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ಹೆಚ್ಚು ಮಾಡುತ್ತದೆ.
ಮಿಥುನ ರಾಶಿ
ಪದ್ಮಿನಿ ಏಕಾದಶಿಯಂದು ಮಿಥುನ ರಾಶಿಯವರು ವಿಶೇಷ ಪೂಜೆ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಮಿಥುನ ರಾಶಿಯ ಜನರು ಈ ದಿನದಂದು ವಿಷ್ಣುವಿನ ಪೂಜೆಯ ಸಂದರ್ಭದಲ್ಲಿ ಅಮಲವನ್ನು ಖಂಡಿತವಾಗಿ ಅರ್ಪಿಸಬೇಕು. ಇದರಿಂದ ನಿಮ್ಮ ಮೇಲೆ ಮಾತೆ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತಂತೆ.
ಕರ್ಕಾಟಕ ರಾಶಿ
ಪದ್ಮಿನಿ ಏಕಾದಶಿಯ ದಿನದಂದು ಕರ್ಕಾಟಕ ರಾಶಿಯವರು ಮನೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಸ್ಥಾಪಿಸಬೇಕು. ನಂಬಿಕೆಯ ಪ್ರಕಾರ ಅದನ್ನು ಪೂಜಿಸಿದರೆ, ಯಾವತ್ತೂ ಹಣದ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತಂತೆ.
ಸಿಂಹ ರಾಶಿ
ಪದ್ಮಿನಿ ಏಕಾದಶಿಯ ದಿನದಂದು ಸಿಂಹ ರಾಶಿಯವರು ದಾನ ಮಾಡಿದರೆ ಆ ದಾನದ ಫಲವಾಗಿ ನೀವು ಜೀವಂತವಾಗಿರೋವಾಗ ಎಲ್ಲಾ ರೀತಿಯ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತಂತೆ. ಮತ್ತು ಮರಣದ ನಂತರ ನೀವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತೀರಂತೆ. ಸಿಂಹ ರಾಶಿಯವರು ಪದ್ಮಿನಿ ಏಕಾದಶಿ ದಿನ ಹಸುವನ್ನು ದಾನ ಮಾಡಿದರೆ ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಬೇಕಾದರೆ ಪದ್ಮಿನಿ ಏಕಾದಶಿಯಂದು ಅನಾಥಾಶ್ರಮದಲ್ಲಿರುವ ಬಡ ಮಕ್ಕಳಿಗೆ ಅನ್ನ ಹಾಗೂ ವಸ್ತ್ರದಾನವನ್ನು ಮಾಡಿ. ಇದರಿಂದ ಪ್ರಗತಿಯ ಹಾದಿ ಸುಲಭವಾಗುತ್ತದೆ. ಹಾಗೂ ನಿಮ್ಮ ದಾನವು ನಿಸ್ವಾರ್ಥವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ತುಲಾ ರಾಶಿ
ತುಲಾ ರಾಶಿಯವರು ಪದ್ಮಿನಿ ಏಕಾದಶಿಯಂದು ಗಜೇಂದ್ರ ಮೋಕ್ಷವನ್ನು ಪಠಿಸಬೇಕು. ಇದು ಪಿತೃದೋಷವನ್ನು ತೊಡೆದು ಹಾಕುತ್ತದೆ. ಮತ್ತು ನಿಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಪದ್ಮಿನಿ ಏಕಾದಶಿಯಂದು ಮಕ್ಕಳ ಪ್ರಗತಿಗಾಗಿ ವಿಷ್ಣುವಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಮತ್ತು ಓಂ ಅಚ್ಯುತಾಯ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.
ಧನು ರಾಶಿ
ಧನು ರಾಶಿಯವರಿಗೆ ಕಾನೂನು ವಿಷಯಗಳಿಗೆ ಅಡ್ಡಿಯುಂಟಾಗುತ್ತಿದ್ದರೆ, ಹಾಗೂ ನಿಮ್ಮ ಶತ್ರುಗಳಿಂದ ನಿಮಗೆ ಪದೇ ಪದೇ ತೊಂದರೆ ಉಂಟಾಗುತ್ತಿದ್ದರೆ ನೀವು ಪದ್ಮಿನಿ ಏಕಾದಶಿಯ ದಿನ ಈ ರೀತ ಪರಿಹಾರ ಮಾಡಬಹುದು. ಪದ್ಮಿನಿ ಏಕಾದಶಿಯಂದು ಶ್ರೀ ಹರಿಗೆ 11 ಅರಿಶಿನ ಮತ್ತು ಪೀತಾಂಬರವನ್ನು ಅರ್ಪಿಸಿ. ಶುಭ ಕಾರ್ಯಗಳಿಗೆ ಹೋಗುವ ಮೊದಲು ಪೂಜೆಯಲ್ಲಿ ನಿಮ್ಮೊಂದಿಗೆ ಅರಿಶಿನದ ಉಂಡೆಯನ್ನು ತೆಗೆದುಕೊಳ್ಳಿ. ಯಾವುದೇ ಅಡೆತಡೆಯಿಲ್ಲದೆ ನೀವು ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ.
ಮಕರ ರಾಶಿ
ಮಕರ ರಾಶಿಯವರು ಆರೋಗ್ಯ ಮತ್ತು ಸಂಪತ್ತನ್ನು ಪಡೆಯಲು ಪದ್ಮಿನಿ ಏಕಾದಶಿಯಂದು ವಿಷ್ಣು ಚಾಲೀಸವನ್ನು ಪಠಿಸಬೇಕು.
ಕುಂಭ ರಾಶಿ
ಉದ್ಯೋಗದ ಹುಡುಕಾಟದಲ್ಲಿ ನೀವು ಪದೇ ಪದೇ ವಿಫಲರಾಗುತ್ತಿದ್ದರೆ ಪದ್ಮಿನಿ ಏಕಾದಶಿಯಂದು ಪರಿಹಾರ ಕಂಡುಕೊಳ್ಳಬಹುದು. ಕುಂಭ ರಾಶಿಯವರು ಪದ್ಮಿನಿ ಏಕಾದಶಿಯಂದು ಹವನ ಮಾಡಬೇಕು ಮತ್ತು ಅದರಲ್ಲಿ ವಿಷ್ಣು ಸಹಸ್ತ್ರನಾಮಗಳನ್ನು ಪಠಿಸಬೇಕು. ಬ್ರಾಹ್ಮಣರಿಗೆ ದಾನ ಮಾಡೋದ್ರಿಂದ ಯಶಸ್ಸು ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆಯಿದೆ.
ಮೀನ ರಾಶಿ
ಮೀನ ರಾಶಿಯವರು ಪದ್ಮಿನಿ ಏಕಾದಶಿಯ ದಿನದಂದು ವೈಜಯಂತಿ ಹೂವನ್ನು ಅರ್ಪಿಸಬೇಕು.ಇದು ಅಖಂಡ ಸೌಭಾಗ್ಯದ ವರವನ್ನು ನೀಡುತ್ತದೆ. ಮತ್ತು ನಿಮ್ಮ ಮಕ್ಕಳ ಬಾಳಿನಲ್ಲಿ ಸಂತೋಷ ಹೆಚ್ಚಾಗುತ್ತದೆ.



Click it and Unblock the Notifications


