Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪದ್ಮಿಣಿ ಏಕಾದಶಿ 2023 : ದಿನಾಂಕ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಹೇಗಿರಬೇಕು?
ಆಷಾಢ ಮಾಸ ಜುಲೈ 18 ರಂದು ಪ್ರಾರಂಭವಾಗಿದೆ. ಆಷಾಢ ಮಾಸ ಹಿಂದೂಗಳಿಗೆ ಪವಿತ್ರ ಮಾಸ. ಈ ತಿಂಗಳಿನಲ್ಲಿ ಪೂಜೆ-ಪುನಸ್ಕಾರಗಳನ್ನು ಭಕ್ತಿಯಿಂದ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಆಷಾಢ ಮಾಸದಲ್ಲಿ ಶುಕ್ಲ ಪಕ್ಷದ ಏಕಾದಶಿಯನ್ನು ಪದ್ಮಿನಿ ಏಕಾದಶಿ, ಪುರುಷೋತ್ತಮಿ ಏಕಾದಶಿ ಅಥವಾ ಸುಮಾದ್ರಾ ಏಕಾದಶಿ ಎಂದೂ ಕರೆಯಲಾಗುತ್ತದೆ.
ಕಳೆದ 3 ವರ್ಷಗಳಲ್ಲಿ ಈ ಏಕಾದಶಿ ಬಹಳ ವಿಶೇಷವಾಗಿದೆ. ಏಕೆಂದರೆ ಆಷಾಢ ಮಾಸ ಮತ್ತು ಏಕಾದಶಿ ಎರಡೂ ಕೂಡ ಭಗವಾನ್ ವಿಷ್ಣುವಿಗೆ ಪ್ರಿಯವಾಗಿವೆ. ಈ ವ್ರತವನ್ನು ಆಚರಿಸುವುದರಿಂದ ವರ್ಷವಿಡೀ ಇದರ ಪುಣ್ಯದ ಫಲ ಇರುತ್ತೆ ಎಂದು ನಂಬಲಾಗಿದೆ. ಅಷ್ಟಕ್ಕು ಪದ್ಮಿಣಿ ಏಕಾದಶಿ ಯಾವಾಗ? ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ ಬಗ್ಗೆ ತಿಳಿದುಕೊಳ್ಳೋಣ.

ಪದ್ಮಿನಿ ಏಕಾದಶಿ 2023 : ದಿನಾಂಕ ಮತ್ತು ಶುಭ ಮುಹೂರ್ತ
ಪಂಚಾಂಗದ ಪ್ರಕಾರ ಪದ್ಮಿನಿ ಏಕಾದಶಿಯ ಉಪವಾಸವನ್ನು ಜುಲೈ 29 ರಂದು ಮಾಡಲಾಗುತ್ತದೆ. ಈ ದಿನ ಉಪವಾಸವನ್ನು ಮಾಡುವುದರಿಂದ ನಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತದೆ. ಈ ಉಪವಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಇತರ ತಿಂಗಳುಗಳಿಗೆ ಹೋಲಿಸಿದರೆ ಆಷಾಢ ಮಾಸದಲ್ಲಿ ವಿಷ್ಣುವನ್ನು ಪೂಜಿಸುವುದರಿಂದ 10 ಪಟ್ಟು ಫಲ ಸಿಗುತ್ತಂತೆ.
ಪದ್ಮಿನಿ ಏಕಾದಶಿ 2023 ಮುಹೂರ್ತ :
ಪಂಚಾಂಗದ ಪ್ರಕಾರ ಆಷಾಢಮಾಸದ ಶುಕ್ಲ ಪಕ್ಷದ ಪದ್ಮಿನಿ ಏಕಾದಶಿಯು ಜುಲೈ 28ರಂದು 02.51 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಮರುದಿನ ಜುಲೈ 29 ರಂದು 01.05ಕ್ಕೆ ಕೊನೆಗೊಳ್ಳುತ್ತದೆ.
ಪೂಜೆ ಸಮಯ - ಬೆಳಗ್ಗೆ 07.22 - ಬೆಳಗ್ಗೆ 09.04ರವರೆಗೆ
ಪದ್ಮಿನಿ ಏಕಾದಶಿ ವ್ರತ ಪಾರಣ ಸಮಯ - ಬೆಳಗ್ಗೆ 05.41 - ಬೆಳಗ್ಗೆ 08.24 ರವರೆಗೆ (30 ಜುಲೈ 2023)
ಪದ್ಮಿನಿ ಏಕಾದಶಿ ಮಹತ್ವ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಢ ಮಾಸದ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಯು ಎಲ್ಲಾ ರೀತಿಯ ಭೋಗಗಳನ್ನು ಅನುಭವಿಸುವ ಮೂಲಕ ಭಗವಾನ್ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರನಾಗುತ್ತಾನಂತೆ. ಈ ವ್ರತಕ್ಕಿಂತ ಶ್ರೇಷ್ಠವಾದ ಯಜ್ಞ, ತಪಸ್ಸು ಅಥವಾ ದಾನವಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವಾಗ ಯಾವುದೇ ರೀತಿ ತಪ್ಪಾಗದಂತೆ ಜಾಗೃತೆ ವಹಿಸಿ. ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ಪದ್ಮಿಣಿ ಏಕಾದಶಿಯ ವ್ರತ ಮಾಡಿದರೆ ವಿಷ್ಣುವು ಸಂತುಷ್ಟಗೊಳ್ಳುತ್ತಾನಂತೆ.
ಪದ್ಮಿನಿ ಏಕಾದಶಿ ಪೂಜಾ ವಿಧಿ ಹೇಗಿರಬೇಕು?
- ಏಕಾದಶಿಯ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ತೀರ್ಥ ಸ್ನಾನ ಮಾಡಬೇಕು
- ನೀರಿನಲ್ಲಿ ಸ್ವಲ್ಪ ಎಳ್ಳು ಸೇರಿಸಿ ಸ್ನಾನ ಮಾಡಿ
- ವಿಷ್ಣುವಿಗೆ ಕೇಸರಿ ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿ
- ಭಜನೆ ಅಥವಾ ದೇವರ ಮಂತ್ರಗಳನ್ನು ಪಠಿಸಬೇಕು ಮತ್ತು ಕಥೆಯನ್ನು ಕೇಳಬೇಕು
- ವಿಷ್ಣು ಸಹಸ್ತ್ರನಾಮವನ್ನು ಪಠಿಸಿ ಮತ್ತು ಬ್ರಾಹ್ಮಣರಿಗೆ ದಾನ ಮಾಡಿ
ಪದ್ಮಿನಿ ಏಕಾದಶಿಯ ದಿನ ಈ ಪದ್ಧತಿಗಳನ್ನು ತಪ್ಪದೇ ಅನುಸರಿಸಿ. ಇದರಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ.



Click it and Unblock the Notifications

