Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪದ್ಮ ಪ್ರಶಸ್ತಿ ಪಡೆದ ಬಸ್ ಕಂಡಕ್ಟರ್ ಅಂಕೆಗೌಡರು: ಯಾರು ಈ ಸಾಹಿತ್ಯ ಪ್ರೇಮಿ ಗೊತ್ತಾ?
ನಿನ್ನೆ 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದ್ರಲ್ಲಿ ಕರ್ನಾಟಕದ 8 ಮಂದಿ ಸಾಧಕರಿಗೆ ಈ ಪ್ರಶಸ್ತಿ ಒಲಿದು ಬಂದಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 8 ಮಂದಿಯನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
13 ಮಂದಿ ಪದ್ಮ ಭೂಷಣ ಪ್ರಶಸ್ತಿ ಪಡೆದವರಲ್ಲಿ ಕರ್ನಾಟಕದ ಶತವಾಧಾನಿ ಆರ್.ಗಣೇಶ್ ಹೆಸರು ಕೂಡ ಇದೆ. ಅಕ್ಷರ ಬ್ರಹ್ಮ ಎಂದು ಕರೆಯಲಾಗುವ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಡಾ.ರಾಮಚಂದ್ರ ಗಣೇಶ್ ಅವರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಲೋಕದ ಅದ್ಭುತ ಪ್ರತಿಭೆ ಅವರಾಗಿದ್ದಾರೆ.

ಏಕಕಾಲದಲ್ಲಿ ನೂರು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕವಿತೆಗಳನ್ನು ರಚಿಸುತ್ತಾ ಸಾಗುವ 'ಶತಾವಧಾನ' ಕಲೆಯ ಪ್ರವೀಣರಾಗಿದ್ದಾರೆ. ಕನ್ನಡ, ಸಂಸ್ಕೃತ, ತೆಲುಗು, ಪ್ರಾಕೃತ, ಪಾಲಿ ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಭಾಷೆಗಳಲ್ಲಿ ಇವರಿಗೆ ಪಾಂಡಿತ್ಯವಿದೆ. ಹಾಗೆ ಇವರನ್ನು ಹೊರತುಪಡಿಸಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ ಮತ್ತೊಂದು ಹೆಸರು ಬಹಳ ಗಮನ ಸೆಳೆದಿದೆ.
ಅತೀ ದೊಡ್ಡ ಖಾಸಗಿ ಗ್ರಂಥಾಲಯ ಕಟ್ಟಿದ ಸಾಹಿತ್ಯ ಪ್ರೇಮಿ
ಕರ್ನಾಟಕದಿಂದ ಆಯ್ಕೆಯಾದ ಮತ್ತೊಬ್ಬರಾದ ಅಂಕೆಗೌಡ ಅವರ ಕುರಿತು ನೀವು ತಿಳಿಯಲೇಬೇಕಿದೆ. ಸಾಹಿತ್ಯ ಶಿಕ್ಷಣ ಕ್ಷೇತ್ರದಲ್ಲಿ 2026ರ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಮಂಡ್ಯದ ಚಿಕ್ಕ ಹಳ್ಳಿಯ ಅಂಕೆಗೌಡರು ಈಗ ದೇಶವ್ಯಾಪಿ ಗಮನ ಸೆಳೆದಿದ್ದಾರೆ. ಹಾಗಾದ್ರೆ ಯಾರು ಈ ಅಂಕೆಗೌಡ ಅವರಿಗೆ ಪದ್ಮ ಪ್ರಶಸ್ತಿ ನೀಡಿದ್ಯಾಕೆ ಅನ್ನೋದು ನಿಮಗೆ ಗೊತ್ತಾ?
ಮಂಡ್ಯದ ಪಾಂಡವಪುರ ತಾಲೂಕಿನ ಸಣ್ಣ ಹಳ್ಳಿಯಾದ ಹರಳಹಳ್ಳಿಯ ಚಿನಕುರುಳಿಯವರು. ಆದ್ರೆ ಅವರು ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇವೆಗೆ ಸೇರಿದ್ದರು. ಹಾಗೆ ಸಂಜೆ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ಅವರಿಗೆ ಸಾಹಿತ್ಯದಲ್ಲಿ ಬಹಳ ಆಸಕ್ತಿ ಇತ್ತು. ಹಾಗೆ ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ದುಡಿಯುತ್ತಿದ್ದರು. ಆದ್ರೆ ಅವರಿಗಿದ್ದ ಸಾಹಿತ್ಯ ಕುರಿತ ಆಸಕ್ತಿಯು ಅವರನ್ನು ಪುಸ್ತಕ ಖರೀದಿಗೆ ಪ್ರೋತ್ಸಾಹಿಸಿತ್ತು, ಹೀಗಾಗಿ ಅವರು ತಮ್ಮ ಎಲ್ಲಾ ಸಂಬಳದ ಹಣವನ್ನು ಕೂಡ ಪುಸ್ತಕ ಖರೀದಿಗೆ ಬಳಸುತ್ತಿದ್ದರು.
ಆದ್ರೆ ಬರು ಬರುತ್ತಾ ಅವರ ಪುಸ್ತಕ ಸಂಗ್ರಹ ಎಷ್ಟು ದೊಡ್ಡದಾಗಿತ್ತು ಅಂದರೆ ಅದನ್ನು ಇಡಲು ಇಡೀ ಮನೆಯನ್ನೇ ಅವರು ಮೀಸಲಿಟ್ಟರು. ಹಾಗೆ ಅವರ ಬಳಿ ದೊಡ್ಡ ಪುಸ್ತಕ ಬಂಡಾರವೇ ಸಂಗ್ರಹವಾಗಿತ್ತು. ನಂತರ ಅವರು ಈ ಪುಸ್ತಕಗಳನ್ನು ಸಾರ್ವಜನಿಕರ ಬಳಕಗೆ ಇಟ್ಟು ಅದು ಅತೀ ದೊಡ್ಡ ಗ್ರಂಥಾಲಯವಾಗಿ ಬೆಳೆಯಿತು. ಇಂದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಒಂದಾಗಿದೆ. ಅವರ ಮನೆಯಲ್ಲಿ ಲಕ್ಷಾಂತರ ಪುಸ್ತಕಗಳಿವೆ. ಯಾರು ಬೇಕಾದರು ಈ ಗ್ರಂಥಾಲಯಕ್ಕೆ ಬರಬಹುದು, ಪುಸ್ತಕ ಓದಬಹುದು.
ಇಷ್ಟೇ ಅಲ್ಲ ಈ ಲಕ್ಷಾಂತರ ಪುಸ್ತಕ, ನಾಣ್ಯ, ಅಂಚೆ ಚೀಟಿ ಸಂಗ್ರಹಿಸಿರುವ ಇವರ 'ಪುಸ್ತಕದ ಮನೆ' ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೂ ಆಯ್ಕೆಯಾಗಿದೆ. ಅವರ ಈ ಖಾಸಗಿ ಸಂಗ್ರಹವು ವಿಶ್ವದ ಬೇರೆಲ್ಲೂ ನೋಡಸಿಗದ ವಸ್ತುಗಳಿಂದ ತುಂಬಿದೆ. ಇದಕ್ಕಾಗಿ ಅವರು ತಮ್ಮ ನಿವೇಶನವನ್ನೇ ಮುಡಿಪಿಟ್ಟಿದ್ದಾರೆ. ಅವರ ಸಾಹಿತ್ಯ ಸೇವೆ ಗ್ರಾಮೀಣ ಭಾಗದಿಂದ ರಾಜ್ಯದೆಲ್ಲೆಡೆ ಹರಿಡಿದ್ದನ್ನು ಗಮನಿಸಿದ ಕೇಂದ್ರ ಸರ್ಕಾರ ಈ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕರ್ನಾಟಕದ ಯಾರಿಗೆಲ್ಲಾ ಪದ್ಮ ಪ್ರಶಸ್ತಿ ಒಲಿದಿದೆ?
- ಶತಾವಧಾನಿ ಆರ್. ಗಣೇಶ್ -ಪದ್ಮ ಭೂಷಣ (ಕಲಾ ಕ್ಷೇತ್ರ)
- ಅಂಕೇ ಗೌಡ ಎಂ- ಪದ್ಮಶ್ರೀ (ಸಾಮಾಜಿಕ ಸೇವೆ)
- ಡಾ.ಪ್ರಭಾಕರ್ ಬಸವಪ್ರಭು ಕೋರೆ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
- ಎಸ್.ಜಿ.ಸುಶೀಲಮ್ಮ- ಪದ್ಮಶ್ರೀ (ಸಮಾಜ ಸೇವೆ)
- ಶಶಿ ಶೇಖರ್ ವೆಂಪತಿ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
- ಶುಭಾ ವೆಂಕಟೇಶ್ ಅಯ್ಯಂಗರ್ -ಪದ್ಮಶ್ರೀ (ಸೈನ್ಸ್ ಅಂಡ್ ಇಂಜಿನಿಯರಿಂಗ್)
- ಡಾ.ಸುರೇಶ್ ಹನಗವಾಡಿ-ಪದ್ಮಶ್ರೀ (ವೈದ್ಯಕೀಯ)
- ಟಿಟಿ ಜಗನ್ನಾಥನ್ (ಮರಣೋತ್ತರ) -ಪದ್ಮಶ್ರೀ (ಟ್ರೇಡ್ ಅಂಡ್ ಇಂಡಸ್ಟ್ರಿ)



Click it and Unblock the Notifications