Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಳೆ ಬರುವ ಸಮಯವನ್ನು 90ರಷ್ಟು ಸರಿಯಾಗಿ ಊಹಿಸುವ ಏಕೈಕ ಪ್ರಾಣಿ ಇದು!
ಪ್ರಾಣಿ ಪ್ರಪಂಚ ಮಾನವರಿಗಿಂತ ಎಷ್ಟು ವಿಭಿನ್ನ ಎಂಬುದನ್ನು ನೀವೆಲ್ಲಾ ತಿಳಿದಿರಬಹುದು. ಇನ್ನು ಹತ್ತಾರು ಕೌತುಕಗಳು ಪ್ರಾಣಿ ಪ್ರಪಂಚದಲ್ಲಿ ಅಡಗಿರುವುದು ನೋಡಬಹುದು. ಪ್ರಾಣಿಗಳ ವರ್ತನೆ ಹಾಗೆ ಪ್ರಾಣಿಗಳ ಪ್ರಪಂಚವು ನೀವು ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಅಚ್ಚರಿಗಳನ್ನು ತನ್ನಲ್ಲಿಟ್ಟುಕೊಂಡಿರುವ ರಹಸ್ಯ ಪ್ರಪಂಚ ಎನ್ನಬಹುದು.
ಇನ್ನು ಪ್ರಾಣಿಗಳಲ್ಲಿಯೂ ಕೂಡ ಮಾನವರಂತೆ ಬುದ್ದಿವಂತಿಕೆಯಿಂದ ನಿರ್ಧಾರ, ಆಲೋಚನೆ ಮಾಡುವಂತಹ ಪ್ರಾಣಿಗಳು ಸಹ ಇವೆ. ಹಾಗೆ ಪ್ರಾಣಿಗಳು ಮಾನವರಿಗಿಂತ ವಿಭಿನ್ನವಾಗಿ ಆಲೋಚಿಸಲಿವೆ ಎಂಬುದು ಕೂಡ ತಿಳಿದುಬರಲಿದೆ. ಇನ್ನು ಪ್ರಾಣಿಗಳಿಗೆ ಭೂಕಂಪನ, ನೈಸರ್ಗಿಕ ವಿಕೋಪಗಳು ಉಂಟಾಗುವ ಮುನ್ನವೇ ತಿಳಿದುಬರಲಿದೆ ಎಂಬುದು ಸಹ ನಿರೂಪಿತಗೊಂಡಿದೆ.

ಹಾಗೆ ಪ್ರಾಣಿಗಳಲ್ಲಿ ಕೆಲವೊಂದು ವಿಶೇಷ ಗುಣಗಳಿವೆ. ಮಾನವರಿಗೆ ಅರಿಯದಂತಹ ಕೆಲವು ವಿಚಾರಗಳು ಮೊದಲೇ ತಿಳಿದುಬರುತ್ತದೆ. ನೈಸರ್ಗಿಕ ವಿಕೋಪಗಳು ಮೊದಲೇ ತಿಳಿಯುವಂತೆ, ಕೆಲವೊಂದು ವಿಚಾರದಲ್ಲಿ ಪ್ರಾಣಿಗಳು ನಮಗಿಂತ ಬುದ್ದಿವಂತಿಕೆ ತೋರಿಸುತ್ತವೆ. ಅದ್ರಲ್ಲೂ ನೈಸರ್ಗಿಕ ಕ್ರಿಯೆಗಳಲ್ಲಿ ಪ್ರಾಣಿಗಳ ಸ್ಮರಣ ಶಕ್ತಿ ಅಚ್ಚರಿ ಹುಟ್ಟಿಸುತ್ತವೆ.
ಇನ್ನು ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹಲವು ವಿದ್ಯಮಾನಗಳ ಪರಿಗಣಿಸಿ ಊಹಿಸಲಾಗುತ್ತದೆ. ಆದ್ರೆ ಪ್ರಾಣಿಗಳು ತಮ್ಮ ಸ್ಮರಣ ಶಕ್ತಿಯಿಂದ ಹವಾಮಾನಗಳ ಕುರಿತು ಅರಿಯಲಿವೆ. ಇಂತಹ ವಿದ್ಯಮಾನದಲ್ಲಿ ಮಳೆ ಬರುವುದಕ್ಕೂ ಮುನ್ನವೇ ಶೇ.90 ರಷ್ಟು ನಿಖರವಾಗಿ ಈ ಪ್ರಾಣಿಯೊಂದು ಊಹಿಸಲಿದೆ.
ಅದ್ರಲ್ಲೂ ಆನೆಗಳು ಮಳೆಯಾಗುವ ಮೊದಲೇ ಸರಿಯಾಗಿ ಊಹಿಸಲಿವೆ. ಹೌದು ಸಮುದಾಯದಲ್ಲಿ ಬದುಕು ನಡೆಸುವ ಆನೆಗಳು ಬಹಳ ಬುದ್ದಿವಂತ ಜೀವಿಗಳು ಎಂಬುದನ್ನು ತಿಳಿದಿದ್ದೇವೆ. ಮಾನವರೊಂದಿಗೆ ಅತ್ಯಾಪ್ತ ಪ್ರಾಣಿಗಳು. ಅವು ತಮ್ಮ ಸ್ಮರಣ ಶಕ್ತಿಯಿಂದಾಗಿ ಕಿಲೋ ಮೀಟರ್ ದೂರ ನಡೆದು ಸಾಗುತ್ತವೆ. ಅವು ಒಮ್ಮೆ ಯಾವುದಾದರು ಆಹಾರ ಹುಡುಕಿ ಸವಿದಿದ್ದರೆ ಅದೇ ಜಾಗಕ್ಕೆ ಮತ್ತೆ ವರ್ಷಗಳ ಬಳಿಕ ಆಗಮಿಸುವಷ್ಟು ಬುದ್ದಿವಂತಿಕೆ ಹೊಂದಿರುತ್ತವೆ.
ಆದ್ರೆ ಈ ಆನೆಗಳು ಮಳೆ ಬರುವ ಮುನ್ನವೇ ಸರಿಯಾಗಿ ಸೂಚನೆ ತಿಳಿಸುತ್ತವೆ. ತಮ್ಮ ಇಂದ್ರೀಯ ಶಕ್ತಿಯನ್ನು ಬಳಸಿಕೊಂಡು ಅವು ಮಳೆಯ ಮುನ್ಸೂಚನೆಯನ್ನು ಸರಿಯಾಗಿ ಅವಲೋಕಿಸುತ್ತವೆ. ಅವು ನೀರಿನ ಮೂಲ ಹುಡುಕಲು ದಿನವೊಂದಕ್ಕೆ 20 ಕಿ.ಮೀ ವರೆಗೂ ಚಲಿಸುತ್ತವೆ. ಆದ್ರೆ ಮಳೆ ಬರುವ ಮುನ್ನವೇ ಅವು ಅರಿತುಕೊಳ್ಳುತ್ತವೆ.
ಅವುಗಳ ಸಂವೇದನಾ ಸಾಮರ್ಥ್ಯವು 300 ಕಿ.ಮೀ ದೂರದ ನೀರಿನ ಮೂಲಗಳನ್ನು ಸಹ ಅವು ಹುಡುಕುತ್ತವೆ. ಅದೇ ರೀತಿ ಮಳೆಯಾಗುವ ಪ್ರದೇಶಗಳನ್ನು ಸಹ ಅವು ಮೊದಲೇ ಅವಲೋಕಿಸುತ್ತವೆ. ಇದರಿಂದ ಯಾವ ಭಾಗದಲ್ಲಿ ಮಳೆಯಾಗುತ್ತದೆಯೋ ಆ ಕಡೆ ಪ್ರಯಾಣ ಬೆಳೆಸುತ್ತವೆ. ಬಹುತೇಕ ಅವು ಮಳೆಬೀಳುವವ ಸಮಯದಲ್ಲಿ ಪ್ರಯಾಣ ಬೆಳೆಸುವುದು ನೋಡಬಹುದು.
ಆನೆಗಳು ಬೇರೆ ಯಾವುದೇ ಪ್ರಾಣಿಗಳಿಗಿಂತ ದೊಡ್ಡ ಮೆದುಳನ್ನು ಹೊಂದಿವೆ - ಸುಮಾರು 4.8 ಕೆಜಿ. ಅವುಗಳ ಚರ್ಮವು ಸುಮಾರು 2.5 ಸೆಂ.ಮೀ ದಪ್ಪವಾಗಿದ್ದು, ನೈಸರ್ಗಿಕ ಸೂರ್ಯನ ರಕ್ಷಣೆಯಂತೆ ಕಾರ್ಯನಿರ್ವಹಿಸುತ್ತದೆ. ಆನೆಗಳು ಕನ್ನಡಿಯಲ್ಲಿ ತಮ್ಮದೇ ಆದ ಪ್ರತಿಬಿಂಬವನ್ನು ಸಹ ಗುರುತಿಸಬಲ್ಲವು. ಹಾಗೆ ಅವು ನೆಲದ ಮಣ್ಣು ತೆಗೆದು ನೀರು ಕುಡಿಯುವಷ್ಟು ಬುದ್ದಿವಂತಿಕೆ ಹೊಂದಿವೆ. ಹಾಗೆ ಆನೆಗಳು ಸಮುದಾಯದಲ್ಲಿ ಬದುಕುವುದರಿಂದ ಅವುಗಳ ಮಕ್ಕಳನ್ನು ಸಾಕು ಹೊಣೆಗಾರಿಕೆ ಹೊಂದಿರಲಿವೆ. ಇನ್ನು ತಮಗಿಂತ ಚಿಕ್ಕ ಪ್ರಾಣಿಗಳ ಕಂಡಾಗಲು ಅವು ಹೆದರಿಕೊಳ್ಳುತ್ತವೆ, ಆದ್ರೆ ಭೂಮಿ ಮೇಲಿನ ಬಲಶಾಲಿ ಪ್ರಾಣಿಗಳಲ್ಲಿ ಅವು ಮೊದಲ ಸ್ಥಾನದಲ್ಲಿವೆ.
ಭಾರತದಲ್ಲಿ ಸರಿಸುಮಾರು 22,446 ಆನೆಗಳು ವಾಸವಿದೆ ಎಂದು ತಿಳಿದುಬಂದಿದೆ. ಕರ್ನಾಟಕ, ಅಸ್ಸಾಂ, ತಮಿಳುನಾಡು ಪ್ರದೇಶವು ಶೇ.60ರಷ್ಟು ಆನೆ ಜನಸಂಖ್ಯೆ ಹೊಂದಿವೆ.



Click it and Unblock the Notifications
