Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಆನ್‌ಲೈನ್‌ನಲ್ಲಿ ಅವಮಾನ, ತೇಜೋವಧೆ; ಈ ಫೋಟೋ ಹಿಂದಿದೆ ಕಣ್ಣೀರ ಕಥೆ!!
ಸಾಮಾಜಿಕ ಜಾಲತಾಣವನ್ನು ವ್ಯಕ್ತಿಯೊಬ್ಬ ಅದನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದರ ಮೇಲೆ ಅದು ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ನಿರ್ಧಾರವಾಗಲಿದೆ. ಆದ್ರೆ ಇತ್ತೀಚಿಗೆ ತೇಜೋವಧೆ, ಅವಮಾನ, ನೋವು, ಹೀಯಾಳಿಸುವುದು, ಬೆದರಿಸುವುದು ಇಂತಹ ಕೆಲಸಗಳಿಗೆಂದೇ ಇಂಟರ್‌ನೆಟ್ ಬಳಕೆಯಾಗುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ.
ಅದ್ರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ತೇಜೋವಧೆಗಳ ನೋಡಬಹುದು. ಅದ್ರಲ್ಲೂ ಭಾರತೀಯರ ಪಾಲಿಗೆ ಈಗ ವಿದೇಶಿ ನೆಲಗಳು ಜನಾಂಗೀಯ ನಿಂದನೆಯಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಮೊದಲು ಕರಿಯರು-ಬಿಳಿಯರ ನಡುವೆ ಇದ್ದ ಜನಾಂಗೀಯ ನಿಂದನೆಗಳು ಈಗ ಎಲ್ಲಾ ದೇಶದ ಪ್ರಜೆಗಳ ಕಾಲಿನ ಬುಡಕ್ಕೆ ಬಂದಿದೆ.

ಅದ್ರಲ್ಲೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡ ಅವಮಾನ, ನಿಂದನೆಗೆ ಒಳಗಾಗುತ್ತಿರುವ ಹಲವು ಪ್ರಕರಣಗಳ ನಾವು ನಿತ್ಯವೂ ನೋಡುವಂತಆಗಿದೆ. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರತದ ವ್ಯಕ್ತಿಯೊಬ್ಬರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅವರ ಮುಖಭಾವ ಅಥವಾ ಮುಖದ ರಚನೆ ಕುರಿತಾಗಿ ಕುಹಕ ಹಾಗೆ ತೇಜೋವಧೆ ಮಾಡುವ ಹಲವು ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪುಣೆಯ ವ್ಯಕ್ತಿಯ ಈ ಫೋಟೋವನ್ನು ಭಾರತೀಯರ ತೇಜೋವಧೆಗೆ ಬಳಸಲಾಗುತ್ತಿದೆ, ಅವರ ಮುಖದ ಭಾವವನ್ನು ಹಿಯಾಳಿಸುತ್ತಿರುವುದು ನೋಡಬಹುದು. ಆದ್ರೆ ಈ ವ್ಯಕ್ತಿಯ ಫೋಟೋ ಹಿಂದೆ ಕಣ್ಣೀರ ಕಥೆಯೊಂದಿದೆ. ಹಾಗಾದ್ರೆ ಈ ಫೋಟೋದಲ್ಲಿರುವ ವ್ಯಕ್ತಿ ಯಾರು? ಆತನ ಹಿಂದಿರುವ ಕಥೆ ಏನು ಎಂಬುದನ್ನು ತಿಳಿದುಕೊಳ್ಳಿ.
ಈ ಫೋಟೋವನ್ನು ಸುಮಾರು ಎಂಟು ವರ್ಷಗಳ ಹಿಂದೆ ಅಪರೂಪದ ದವಡೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ತೆಗೆಯಲಾಗಿದ್ದು, ಇದು ಮತ್ತೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ, ಆದರೆ ಈ ಬಾರಿ ಅದನ್ನು ಜನಾಂಗೀಯ ಹೇಳಿಕೆಗಳೊಂದಿಗೆ ಭಾರತೀಯರನ್ನು ಗುರಿಯಾಗಿಸಲು ಬಳಸಲಾಗುತ್ತಿದೆ. ಭಾರತೀಯರನ್ನು ಹಾಸ್ಯ ಮಾಡಲು ಟೀಕೆ, ತೇಜೋವಧೆ ಮಾಡುವ ಉದ್ದೇಶದಿಂದ ಈ ಫೋಟೋ ಹಂಚಿಕೊಳ್ಳಲಾಗುತ್ತಿದೆ.
ಬಡತನದ ನಡುವೆ ಚಿಕಿತ್ಸೆ ಪಡೆಯಲಾಗಲಿಲ್ಲ
ಬಾಲ್ಯದಲ್ಲಿ ಅಪಘಾತಕ್ಕೀಡಾದ ಅವರ ಡವಡೆ ಪುಡಿಯಾಗಿತ್ತು, ಆದ್ರೆ ಬಡತನವಿದ್ದ ಕಾರಣ ಸೂಕ್ತ ಚಿಕಿತ್ಸೆ ಪಡೆಯಲು ಆಗಿರಲಿಲ್ಲ. ಅಲ್ಲಿಂದ ದಶಕಗಳ ಕಾಲ ಅವರು ಆಹಾರ ಕೂಡ ಸರಿಯಾಗಿ ಸೇವಿಸಲಿಲ್ಲ ಹಾಗೆ ಮಾತುಗಳು ಅಸ್ಪಷ್ಟವಾಗಿದ್ದವು. ಮನೆಯಲ್ಲಿದ್ದ ಬಡತನ ಅವರ ಚಿಕಿತ್ಸೆಯನ್ನು ಮುಂದೂಡುತ್ತಾ ಬಂದಿತ್ತು. ಕೇವಲ ಲಿಕ್ವಿಡ್ ಫುಡ್ ಸೇವಿಸಿ ಬದುಕುಳಿದರು. ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ (TMJ) ಆಂಕೈಲೋಸಿಸ್ ಎಂಬ ಸ್ಥಿತಿಯೊಂದಿಗೆ ವಾಸಿಸುತ್ತಿದ್ದರು, ಈ ಸ್ಥಿತಿಯಲ್ಲಿ ದವಡೆಯ ಕೀಲು ತಲೆಬುರುಡೆಯೊಂದಿಗೆ ಬೆಸೆಯುತ್ತದೆ. ಅವರು ಆಹಾರವನ್ನು ಅಗಿಯಲು ಸಾಧ್ಯವಾಗದ ಕಾರಣ, ಅವರು ಮುಖ್ಯವಾಗಿ ದ್ರವ ಮತ್ತು ಅರೆ-ಘನ ಆಹಾರದಿಂದ ಬದುಕುಳಿದರು.
ಅಂದರೆ ಮಗುವಾಗಿದ್ದಾಗ ಉಂಟಾದ ಈ ಸಮಸ್ಯೆಯಿಂದ ಅವರು ಬರೋಬ್ಬರಿ 38 ವರ್ಷಗಳ ಕಾಲ ದ್ರವ ರೂಪದ ಆಹಾರ ಸೇವಿಸಿದರು. ಇದು ಅವರಲ್ಲಿ ಅಪೌಷ್ಟಿಕತೆಗೆ ಕಾರಣವಾಯಿತು. ಆದರೆ ಇತ್ತೀಚಿಗೆ ಅವರಿಗೆ ಪುಣೆಯ ಎಂಎ ರಂಗೂನ್‌ವಾಲಾ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ತಜ್ಞರು ಸಂಕೀರ್ಣ ಚಿಕಿತ್ಸೆಯನ್ನು ನಡೆಸಿದರು. ಇದರಿಂದ ಅವರ ದವಡೆ ರಚನೆ ಸರಿಯಾಯಿತು.
ಆದ್ರೆ ಈಗ ಅವರ ಫೋಟೋಗಳನ್ನು ಭಾರತೀಯರ ತೇಜೋವಧೆಗೆ ಬಳಸಲಾಗುತ್ತಿದೆ. ಜೀವನವನ್ನೇ ಬದಲಾಯಿಸುವ ವಿರೂಪವನ್ನು ಅನುಭವಿಸಿದ ವ್ಯಕ್ತಿಯ ಚಿತ್ರವನ್ನು ಬಳಸಿಕೊಂಡು ಇಡೀ ದೇಶ ಅಥವಾ ಸಮುದಾಯವನ್ನು ಅಪಹಾಸ್ಯ ಮಾಡುವುದು ಹಾಸ್ಯವಲ್ಲ, ಇದು ಪೂರ್ವಾಗ್ರಹದ ಮೇಲೆ ನಿರ್ಮಿಸಲಾದ ಕ್ರೌರ್ಯ. ಇದು ಉಗ್ರ ದ್ವೇಷವನ್ನು ಉತ್ತೇಜಿಸುವ ಅದೇ ಅಮಾನವೀಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಮಾನವ ನೋವು ಅಪಹಾಸ್ಯಕ್ಕೆ ಆಧಾರವಾಗುತ್ತದೆ ಎಂದು ಅವರ ಫೋಟೋ ಕುರಿತಾದ ಅಪಹಾಸ್ಯಕ್ಕೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗುತ್ತಿದೆ.
ವ್ಯಕ್ತಿಯೊಬ್ಬರ ನೋವಿನ ಕಥೆ ಮತ್ತೊಬ್ಬರ ತೇಜೋವಧೆಗೆ, ಹಾಸ್ಯಕ್ಕೆ ಬಳಸಿಕೊಳ್ಳುವುದು ಆಧುನಿಕ ಜಗತ್ತಿನ ಅತ್ಯಂತ ಕಳವಳಕಾರಿ ಹಾಗೂ ಅಮಾನವೀಯ ಕೃತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.



Click it and Unblock the Notifications
