Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
Friendship Day: ಕಾವಲು ಕಾದ ಸುಧಾಮ ಒಂದು ಕಡೆ..ಬೆನ್ನಿಗೆ ಚೂರಿ ಹಾಕಿದ್ದ ಬ್ರೂಟ್ ಇನ್ನೊಂದು ಕಡೆ!
ಗೆಳೆತನ ಅಂದ್ರೆ ಅದು ಎಲ್ಲಾ ಸಂಬಂಧಗಳಿಗಿಂತ ಭಿನ್ನ ಹಾಗೆ ಬಹಳ ಶ್ರೇಷ್ಠ ಎಂಬ ಮಾತಿಗೆ. ಉತ್ತಮ ಸ್ನೇಹಿತರು ಸಿಗುವುದು ಅಪರೂಪ ಹಾಗೆ ಒಬ್ಬ ಸ್ನೇಹಿತ ಒಬ್ಬರ ಜೀವನವನ್ನೇ ಬದಲಾಯಿಸುವಂತಹ ಶಕ್ತಿ ಹೊಂದಿರುವ ವ್ಯಕ್ತಿ. ಯಾರು ಉತ್ತಮ ಸ್ನೇಹಿತರ ಹೊಂದಿರುತ್ತಾರೋ ಅವರು ಜೀವನದ ಕಷ್ಟಗಳ ಸುಲಭವಾಗಿ ಹಾಗೆ ಸವಾಲುಗಳು ಸುಲಭವಾಗಿ ಎದುರಿಸುವವರು ಎಂದು ಹೇಳಲಾಗಿದೆ.
ಸುಖ ದುಖಃದಲ್ಲಿ ಸ್ನೇಹಿತರು ಕೂಡ ಪಾಲುದಾರರು ಎಂಬ ನುಡಿ ಇದೆ. ಇನ್ನು ಸ್ನೇಹ ಎಂದ ಕೂಡಲೆ ನಿಮಗೆ ನಿಮ್ಮ ಸ್ನೇಹಿತರು ನೆನಪಾಗಬಹುದು. ಆದ್ರೆ ಉತ್ತಮ ಸ್ನೇಹಕ್ಕೆ ಉದಾಹರಣೆ ನೀಡುವಾಗ ಕೃಷ್ಣ ಹಾಗೂ ಸುಧಾಮನ ಹೆಸರು ತೆಗೆದುಕೊಳ್ಳುವುದು ನಾವು ನೋಡಬಹುದು. ಕೃಷ್ಣ ಮತ್ತು ಸುದಾಮ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದರು. ಒಂದೇ ಗುರುಗಳ ಬಳಿ ಕಲಿತವರು ಅಲ್ಲಿಂದ ಇಬ್ಬರು ಚೇಷ್ಠೆಗಳು, ಬಾಲ್ಯದ ದಿನಗಳ ಒಟ್ಟಿಗೆ ಕಳೆದು ಕೊನೆಗೆ ಯುದ್ಧ ಭೂಮಿಯಲ್ಲೂ ಒಟ್ಟಿಗೆ ನಿಂತವರು.

ಹಾಗೆ ಸ್ನೇಹ ಎಂದ ಮಾತ್ರಕ್ಕೆ ಸ್ನೇಹಿತರು ಯಾವಾಗಲು ಒಳ್ಳೆಯದನ್ನೇ ಬಯಸುತ್ತಾರೆ ಎಂಬುದಿಲ್ಲ. ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿಗೆ ಹಾಗೆ ದುರ್ಜನರ ಸಂಗ ಬಚ್ಚಲ ರೊಜ್ಜಿನಂತಿಹುದು ಎಂಬ ಮಾತು ಕೂಡ ಕೇಳಿರಬಹುದು. ಒಬ್ಬ ಕೆಟ್ಟ ಸ್ನೇಹಿತ ನಿಮ್ಮ ಇಡೀ ಜೀವನ ಹಾಳು ಮಾಡಬಹುದು. ಅವನಿಂದ ನೀವು ಇನ್ನಿಲ್ಲದ ಸಮಸ್ಯೆ ಎದುರಿಸಬೇಕಾಗಬಹುದು.
ಈ ಸ್ನೇಹಿತರ ದಿನದ ಸಮಯದಲ್ಲಿ ನಾವಿಂದು ಇಬ್ಬರು ಸ್ನೇಹಿತ ಕುರಿತು ತಿಳಿಯೋಣ ಒಂದು ಕೃಷ್ಣನ ಸ್ನೇಹಿತ ಸುಧಾಮ. ಹಾಗೆ ಇನ್ನೋರ್ವ ಹೆಸರಾಂತ ಬರಹಗಾರ ಶೇಕ್ಸ್‌ಪಿಯರ್ ರಚಿಸಿರುವ ಜೂಲಿಯಸ್ ಸೀಸರ್ ಕಥೆಯಲ್ಲಿ ಬರುವ ಬ್ರೂಟಸ್. ಸುಧಾಮ ಯುದ್ಧಭೂಮಿಯಲ್ಲೂ ಕೃಷ್ಣನ ಬೆನ್ನಿಗೆ ನಿಂತವನು ಇನ್ನೊಂದು ಕಡೆ ಬ್ರೂಟಸ್ ಬೆನ್ನಿಗೆ ಚೂರಿ ಹಾಕಿದವನು.

ನಾವು ಶ್ರೀಕೃಷ್ಣನ ಸ್ಮೇಹಿತನ ಕುರಿತು ಹೆಚ್ಚು ತಿಳಿದಿದ್ದೇವೆ. ಸುಧಾಮ ಬಹಳ ಬಡ ವ್ಯಕ್ತಿ. ಹಾಗೆ ಆತನ ಹೆಂಡತಿಗೆ ಇನ್ನಿಲ್ಲದ ಅನಾರೋಗ್ಯ. ಕೊನೆಯ ಬಾರಿಗೆ ಆತ ಶ್ರೀಕೃಷ್ಣನನ್ನು ನೋಡದಲು ದ್ವಾರಕಕ್ಕೆ ಬಂದಾಗ ಆತನ ಕಾಲ್ಲಿನಲ್ಲಿ ಚಪ್ಪಲಿಯೂ ಇರಲಿಲ್ಲವಂತೆ. ಹಾಗೆ ಹರಿದ ಬಟ್ಟೆ ನೋಡಿ ಅರಮನೆಯ ಬಾಗಿಲಿನಲ್ಲೇ ಆತನ ತಡೆ ಹಿಡಿಯಲಾಗಿತ್ತು. ಆದ್ರೆ ಶ್ರೀಕೃಷ್ಣ ಆತನ ನೋಡಿ ಅವನು ತಂದಿದ್ದ ಒಂದು ಮುಷ್ಟಿ ಅವಲಕ್ಕಿಯನ್ನು ನೆಲದ ಮೇಲೆ ಕುಳಿತು ಸವಿದು ಬಡವನ ಮನೆ ನೋಡಲು ಹೋಗಿದ್ದನಂತೆ ಆದ್ರೆ ಬರುವಾಗ ಆತನ ಗುಡಿಸಲು ಅರಮನೆಯಾಗಿ ಬದಲಾಗಿದ್ದಲ್ಲದೆ ಪತ್ನಿಯ ಅನಾರೋಗ್ಯ ಕೂಡ ವಾಸಿಯಾಗಿತ್ತಂತೆ.

ಆದ್ರೆ ನಾವಿಂದು ಕೃಷ್ಣ-ಸುಧಾಮರಂತಹ ಸ್ನೇಹಿತರ ನೋಡಲು ಸಾಧ್ಯವಿಲ್ಲ. ಹಾಗೆ ಇಂತಹ ಸ್ನೇಹಗಳು ಬಲು ಅಪರೂಪ ಎನ್ನಬಹುದು. ಆದ್ರೆ ನಾವು ಇಂದಿಗೆ ಅತೀ ಹೆಚ್ಚು ನೋಡಲು ಸಿಗೋದು ಬ್ರೂಟಸ್‌ನಂತಹ ಸ್ನೇಹಿತರನ್ನು. ಹಾಗಾದ್ರೆ ಯಾರು ಈ ಬ್ರೂಟಸ್? ಆತ ಮಾಡಿದ ತಪ್ಪೇನು? ಸ್ನೇಹಿತರ ದಿನದಂದು ಆತನ ನೆನಪಾಗೋದು ಏಕೆ?
ಬ್ರೂಟಸ್ ಯಾರು?
ನೀವು ಹೆಸರಾಂತ ಇಂಗ್ಲೀಷ್ ಕವಿ ವಿಲಿಯಮ್ ಶೇಕ್ಸ್‌ಪಿಯರ್ ಬರೆದಿರುವ 'ದಿ ಟ್ರಾಜಿಡಿ ಆಫ್ ಜೂಲಿಯಸ್ ಸೀಸರ್'ನಲ್ಲಿ ಬರುವ ಒಂದು ಪಾತ್ರವಾಗಿದೆ. ಇದನ್ನು ದುರಂತ ನಾಟಕ ಅಂತಲೇ ಕರೆಯಲಾಗುತ್ತದೆ. ಈ ನಾಟಕದ ಪ್ರಮುಖ ಪಾತ್ರದಾರಿಯಾಗಿರುವ ಜೂಲಿಯಸ್ ಸೀಸರ್‌ನ ಸ್ನೇಹಿತನೇ ಈ ಬ್ರೂಟಸ್.
ಬ್ರೂಟಸ್ ಎಸಗಿದ ಕೃತ್ಯವೇನು ಗೊತ್ತಾ?
ಶೇಕ್ಸ್‌ಪಿಯರ್‌ನ ನಾಟಕವಾಗಿರುವ 'ದಿ ಟ್ರಾಜಿಡಿ ಆಫ್ ಜೂಲಿಯಸ್ ಸೀಸರ್'ನಲ್ಲಿ ಸೀಸರ್ ಅನ್ನು ಕೊಲ್ಲಲು ಸಂಚು ರೂಪಿಸಿದವರಲ್ಲಿ ಬ್ರೂಟಸ್ ಕೂಡ ಒಬ್ಬ. ಬ್ರೂಟಸ್ ಈ ಮೊದಲು ಜೂಲಿಯಸ್ ಸೀಸರ್‌ನ ಆಪ್ತ ಸ್ನೇಹಿತನಾಗಿರುತ್ತಾನೆ. ಆದ್ರೆ ಕೊನೆಯಲ್ಲೇ ಆತನೆ ಕೊಲೆ ಮಾಡುತ್ತಾನೆ. ಹೀಗಾಗಿ ಬ್ರೂಟಸ್ ಅಂದರೆ ಮಿತ್ರ ದ್ರೋಹಿ ಎಂಬ ಮಾತಿದೆ. ಬ್ರೂಟಸ್‌ನ ದ್ರೋಹವನ್ನು ಈಗಲೂ ಮಿತ್ರ ದ್ರೋಹಕ್ಕೆ ಉದಾಹರಣೆ ನೀಡಲು ಬಳಸಲಾಗುತ್ತದೆ.

ಇವನ ಹೆಸರಿಂದಲೇ ಬಂದಿದೆ ಬ್ರೂಟ್ ಎಂಬ ಬೈಗುಳ!
ಜೂಲಿಯಸ್ ಸೀಸರ್ ಅನ್ನು ಸಾಯಿಸಬೇಕು ಎಲ್ಲರು ಒಟ್ಟಾಗಿರುವಾಗ ಆವರ ಗುಂಪಿನಲ್ಲಿ ಸ್ನೇಹಿತ ಬ್ರೂಟಸ್ ಕೂಡ ಸೇರಿಕೊಂಡಿರುತ್ತಾನೆ. ಹಾಗೆ ಕೊನೆ ಗಳಿಗೆಯಲ್ಲಿ ಜೂಲಿಯಸ್ ಸೀಸರ್ ಎಲ್ಲರ ವಿರುದ್ಧ ಹೋರಾಡುವಾಗ ಹಿಂದಿನಿಂದ ಬಂದ ಬ್ರೂಟಸ್ ಚೂರಿ ಹಾಕುತ್ತಾನೆ. ಜೂಲಿಯಸ್ ಸೀಸರ್ ಹಿಂತಿರುಗಿ ನೋಡಿದಾಗ ಹಿಂದೆ ಆಪ್ತ ಸ್ನೇಹಿತ ಬ್ರೂಟಸ್ ಕೈಯಲ್ಲಿ ಚೂರು ಹಿಡಿದು ನಿಂತಿರುತ್ತಾನೆ.

ಬ್ರೂಟಸ್‌ನ ಮುಖ ನೋಡುತ್ತಿದ್ದಂತೆ ಸೀಸರ್‌ಗೆ ಆಘಾತವಾಗುತ್ತೆ. ಆತನ ಬಾಯಿಯಿಂದ ಪದಗಳು ಹೊರಡುವುದಿಲ್ಲ. ಆದ್ರೆ ಕೊನೆಯಲ್ಲಿ 'ಯೂ ಟೂ ಬ್ರೂಟ್' ಎಂದಷ್ಟೇ ಹೇಳುತ್ತಾನೆ. ಅಂದ್ರೆ 'ಬ್ರೂಟಸ್ ನೀನೂ ಕೂಡ' ಎಂಬ ಪದಗಳೂ ಆತನ ಬಾಯಿಂದ ಬರುತ್ತದೆ. ಇದು ಮುಂದೆ ಯೂ ಬ್ರೂಟ್ ಎಂಬ ಇಂಗ್ಲೀಷ್‌ನ ಬೈಗುಳವಾಗಿ ಬಳಕೆಯಾಗುತ್ತಿದೆ. ಅಂದ್ರೆ ಬ್ರೂಟ್ ಅನ್ನು ನಯವಂಚಕ, ಮಿತ್ರ ದ್ರೋಹಿ ಅಂತಲೂ ನಾವು ಪರಿಗಣಿಸಬಹುದು.



Click it and Unblock the Notifications