Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ವೈದ್ಯರು ಚೀಟಿಯಲ್ಲಿ ಇಷ್ಟಬಂದಂತೆ ಗೀಚುವಂತಿಲ್ಲ: ಹೈಕೋರ್ಟ್ ತೀರ್ಪು..ಯಾಕೆ ಗೊತ್ತಾ?
ನಿಮಗೆ ಓದಲು ಅತ್ಯಂತ ಕಷ್ಟಕರವಾದ ಅಕ್ಷರಗಳು ಯಾವುದು ಅಂದ್ರೆ ಥಟ್ ಅಂತ ನಾವು ಡಾಕ್ಟರ್ ಬರೆದುಕೊಡುವ ಚೀಟಿ ಅಂದುಬಿಡುತ್ತೇವೆ. ಯಾಕಂದ್ರೆ ಅವರು ಬರೆದಿರುವುದು ಮೆಡಿಕಲ್ ಸ್ಟೋರ್ ಸಿಬ್ಬಂದಿ ಬಿಟ್ಟು ಮತ್ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಗಡಿಬಿಡಿಯಲ್ಲಿ ಹಾಗೆ ಬರೆಯುತ್ತಾರೆ ಅಂದುಕೊಳ್ಳಬೇಡಿ, ಅವರ ಹ್ಯಾಂಡ್ ರೈಟಿಂಗ್ ಅದೇ ರೀತಿ ಇರುತ್ತದೆ.
ಡಾಕ್ಟರ್ ಬರೆದು ಕೊಡುವ ಚೀಟಿಯಲ್ಲಿರುವ ಔಷಧಿಗಳ ಹೆಸರು ನಮಗಂತೂ ತಿಳಿಯಲೂ ಸಾಧ್ಯವೇ ಇಲ್ಲ. ಆದ್ರೆ ನಿಮಗೆ ಗೊತ್ತಾ ಈ ರೀತಿ ವೈದ್ಯರು ಬರೆದಿದ್ದ ಚೀಟಿಯೇ ಒಬ್ಬ ಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು. ಆದ್ರೆ ಅದೇ ಕೋರ್ಟ್ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡು ವೈದ್ಯರು ಇನ್ನುಮುಂದೆ ದೊಡ್ಡ ಅಕ್ಷರದಲ್ಲೇ ಚೀಟಿಗಳ ಬರೆಯಬೇಕು ಎಂಬ ತೀರ್ಪು ನೀಡಿದೆ.

ಹೌದು ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದೆ. ವೈದ್ಯರ ಕೈಬರಹವೇ ಕೋರ್ಟ್‌ಗೆ ತಲೆನೋವಾಗಿ ಪರಿಣಮಿಸಿದ್ದಲ್ಲದೆ, ಅವರಿನ್ನು ದಪ್ಪ ಅಕ್ಷರದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಓದಲು ಸಾಧ್ಯವಾಗುವ ರೀತಿ ಬರೆಯಬೇಕು ಎಂದು ತೀರ್ಪು ನೀಡಲಾಗಿದೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ?, ಘಟನೆಗೆ ಕಾರಣವೇನು? ಅಸಲಿಗೆ ಇಲ್ಲಿ ನಡೆದಿದ್ದೇನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಹಾವು ಕಡಿದು ಮೃತಪಟ್ಟಿದ್ದ ಪ್ರಕರಣವೊಂದರಲ್ಲಿ ಒಡಿಶಾ ಹೈಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ವ್ಯಕ್ತಿಯೊಬ್ಬ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿತ ಮೃತಪಟ್ಟಿದ್ದ. ಬಳಿಕ ಆತನ ಪೋಸ್ಟ್ ಮಾಟರ್ಮ್ ಮುಗಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಮೃತನ ತಂದೆ ಪರಿಹಾರಕ್ಕಾಗಿ ತಹಶೀಲ್ದಾರ್ ಅವರ ಕಚೇರಿಗೆ ಅಲೆದಾಡಿದ್ದ. ಆದರೆ ತಹಶೀಲ್ದಾರ್ ಈ ಪರಿಹಾರ ಅರ್ಜಿಯನ್ನು ಕೆಲವು ಷರತ್ತು ಮತ್ತು ನಿಯಮಗಳಿಗೆ ಅನುಸಾರವಾಗಿ ತಿರಸ್ಕಾರ ಮಾಡಿದ್ದರು.
ಈ ಹಿನ್ನೆಲೆ ಮೃತನ ತಂದೆ ಹೈಕೋರ್ಟ್‌ನಲ್ಲಿ ತಹಶೀಲ್ದಾರ್ ವಿರುದ್ಧವೇ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಮೃತನ ಪೋಸ್ಟ್‌ಮಾಟರ್ಮ್ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದರೆ ವೈದ್ಯರು ಬರೆದಿದ್ದ ಪೋಸ್ಟ್‌ಮಾಟರ್ಮ್ ವರದಿ ಓದಲಾಗದೆ ಕೋರ್ಟ್ ಸಿಬ್ಬಂದಿ ತಬ್ಬಿಬ್ಬಾಗಿದ್ದರು. ಖುದ್ದು ಜಡ್ಜ್ ಸಹ ವೈದ್ಯರ ಕೈಬರಹದಲ್ಲಿ ಏನಿದೆ ಎಂಬುದನ್ನು ಸ್ಪಷ್ಟವಾಗಿ ಓದಲಾಗದೆ ತಡಬಡಾಯಿಸಿದ್ದಾರೆ. ಹೀಗಾಗಿ ವೈದ್ಯರು ಇನ್ನುಮುಂದೆ ಪೋಸ್ಟ್ ಮಾಟರ್ಮ್ ವರದಿಯನ್ನು ದಪ್ಪ ಅಕ್ಷರದಲ್ಲಿ ಎಲ್ಲಿರಿಗೂ ತಿಳಿಯುವಂತೆ ಬರೆಯುವುದು ಕಡ್ಡಾಯ ಎಂದು ತೀರ್ಪು ನೀಡಿದ್ದಾರೆ.
ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್ ಕೆ ಪಾಣಿಗ್ರಾಹಿ, ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬರೆಯುವಲ್ಲಿ ವೈದ್ಯರ ಸಾಂದರ್ಭಿಕ ವಿಧಾನವನ್ನು ಎತ್ತಿ ತೋರಿಸಿದರು, ಇದು ವೈದ್ಯಕೀಯ-ಕಾನೂನು ದಾಖಲೆಗಳ ಗ್ರಹಿಕೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದರು.
"ಅನೇಕ ಪ್ರಕರಣಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಬರೆಯುವಾಗ ಹೆಚ್ಚಿನ ವೈದ್ಯರು ತೋರುತ್ತಿರುವ ಸಾಂದರ್ಭಿಕ ವಿಧಾನವು ವೈದ್ಯಕೀಯ-ಕಾನೂನು ದಾಖಲೆಗಳ ಗ್ರಹಿಕೆಗೆ ಪರಿಣಾಮ ಬೀರುತ್ತಿದೆ. ನ್ಯಾಯಾಂಗ ವ್ಯವಸ್ಥೆಯು ಆ ಪತ್ರಗಳನ್ನು ಓದಲು ತುಂಬಾ ಕಷ್ಟಕರವಾಗಿದೆ ಮತ್ತು ಒಂದು ಖಚಿತ ತೀರ್ಮಾನಕ್ಕೆ ಬನ್ನಿ, ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯಕೀಯ ಕೇಂದ್ರಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ, ಸರಿಯಾದ ಕೈಬರಹದಲ್ಲಿ ಅಥವಾ ಟೈಪ್‌ನಲ್ಲಿ ಬರೆಯುವಂತೆ ನಿರ್ದೇಶಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಆದರೆ ಈ ಪ್ರಕರಣ ಇಲ್ಲಿಗೆ ಮುಗಿಯಲಿಲ್ಲ. ಪೋಸ್ಟ್ ಮಾಟರ್ಮ್ ವರದಿಯಲ್ಲಿ ಏನಿದೆ ಎಂದು ಓದಲು ಖುದ್ದು ಆ ವರದಿ ಬರೆದಿದ್ದ ವೈದ್ಯರೇ ಕೋರ್ಟ್‌ಗೆ ಹಾಜರಾಗಬೇಕಾಯಿತು. ಬಳಿಕ ಅರ್ಜಿದಾರರಿಗೆ ಇನ್ನೊಂದು ತಿಂಗಳ ಒಳಗೆ ಹೊಸ ವರದಿಯನ್ನು ತಹಶೀಲ್ದಾರ್ ಕಚೇರಿಗೆ ನೀಡಿ ಪರಿಹಾರ ಪಡೆದುಕೊಳ್ಳಲು ಸೂಚಿಸಲಾಯಿತು.
7,000 ಮಂದಿಯ ಸಾಯಿಸಿದೆ ವೈದ್ಯರ ಬರಹ..!
ವೈದ್ಯರ ಬರಹ 7 ಸಾವಿರ ಮಂದಿಯ ಸಾವಿಗೆ ಕಾರಣವಾಗಿದೆ ಎಂದರೆ ನಂಬುತ್ತೀರಾ? ಹೌದು ಅಮೆರಿಕದಲ್ಲಿ ವೈದ್ಯರ ಕೆಟ್ಟ ಕೈಬರಹದಿಂದಾಗಿಯೇ ಪ್ರತಿ ವರ್ಷ 7 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳ ಹೆಚ್ಚಳ ಹಾಗೂ ಬಿಡುವಿಲ್ಲದ ಕೆಲಸದಿಂದಾಗಿ ವೈದ್ಯರ ಕೈಬರಹ ಇಷ್ಟೊಂದು ಕ್ಲಿಷ್ಟವಾಗಿದೆಯಂತೆ. ಇತ್ತೀಚಿಗೆ ಅಮೆರಿಕ ಸೇರಿ ಹಲವು ಕಡೆ ಎಲೆಕ್ಟ್ರಾನಿಕ್ ಪ್ರಿಸ್ಕ್ರಿಪ್ಷನ್‌ಗಳ ನೀಡಲು ಮುಂದಾಗಲಾಗಿದೆ.



Click it and Unblock the Notifications