Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅಕ್ಟೋಬರ್ ಮಾಸದಲ್ಲಿರುವ ಬ್ಯಾಂಕ್ ರಜಾ ದಿನಗಳು ಹಾಗೂ ಹಬ್ಬ, ಹರಿದಿನಗಳ ಲಿಸ್ಟ್
ಅಕ್ಟೋಬರ್ ಮಾಸ ಪೂರ್ತಿ ಮಾಸ ಹಬ್ಬ, ವ್ರತ ಅಂತ ಸಡಗರದ ಮಾಸ. ಈ ತಿಂಗಳಿನಲ್ಲಿ ಒಂದಲ್ಲಾ ಒಂದು ಹಬ್ಬಗಳು, ವ್ರತಗಳು ಅಂತ ಅಕ್ಟೋಬರ್ 31ರವರೆಗೆ ತುಂಬಾನೇ ವಿಶೇಷವಾಗಿದೆ. ಮಕ್ಕಳಿಗೆ ದಸರಾ ರಜೆಯ ಸಮಯ ಕೂಡ ಹೌದು.
ಅಕ್ಟೋಬರ್ ಮಾಸದಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ರಜೆಯಿದೆ, ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಅಕ್ಟೋಬರ್ ಮಾಸದಲ್ಲಿ ಬ್ಯಾಂಕ್ ರಜಾ ದಿನಗಳಿವು
ಅಕ್ಟೋಬರ್ 2,ಬುಧವಾರ: ಗಾಂಧಿ ಜಯಂತಿ
ಅಕ್ಟೋಬರ್ 12, ಶನಿವಾರ: ಎರಡನೇ ಶನಿವಾರ
ಅಕ್ಟೋಬರ್ 10, ಗುರುವಾರ: ಮಹಾಸಪ್ತಮಿ
ಅಕ್ಟೋಬರ್ 12: ಮಹ ನವಮಿ, ವಿಜಯ ದಶಮಿ
ಅಕ್ಟೋಬರ್ 26: ನಾಲ್ಕನೇ ಶನಿವಾರ
ಅಕ್ಟೋಬರ್ ಮಾಸದಲ್ಲಿ ಬರುವ ಹಬ್ಬಗಳು
ಅಕ್ಟೋಬರ್ 2: ಅಮವಾಸ್ಯೆ, ಸರ್ವ ಪಿತೃ ಅಮವಾಸ್ಯೆ, ಸೂರ್ಯಗ್ರಹಣ
ಅಕ್ಟೋಬರ್ 3 : ನವರಾತ್ರಿ ಶುರು
ಅಕ್ಟೋಬರ್ 9" ಸರಸ್ವತಿ ವಾಹನ, ಷಷ್ಠಿ
ಅಕ್ಟೋಬರ್ 10: ದುರ್ಗಾಪೂಜೆ, ಸರಸ್ವತಿ ಪೂಜೆ
ಅಕ್ಟೊಬರ್ 11: ದುರ್ಗಾಷ್ಟಮಿ
ಅಕ್ಟೋಬರ್ 12: ವಿಜಯ ದಶಮಿ, ಅಯುಧ ಪೂಜೆ
ಅಕ್ಟೋಬರ್ 13: ಪಾಪಾಂಕುಶ ಏಕಾದಶಿ
ಅಕ್ಟೋಬರ್ 17: ಪೂರ್ಣಿಮೆ, ವಾಲ್ಮೀಕಿ ಜಯಂತಿ
ಅಕ್ಟೋಬರ್ 20: ಸಂಕಷ್ಟಿ ಗಣೇಶ ಚತುರ್ಥಿ
ಅಕ್ಟೋಬರ್ 28: ರಾಮ ಏಕಾದಶಿ
ಅಕ್ಟೋಬರ್ 29: ಯಮ ದೀಪಂ
ಅಕ್ಟೋಬರ್ 31: ಲಕ್ಷ್ಮಿ ಪೂಜೆ
ಅಕ್ಟೋಬರ್ 31: ನರಕ ಚತುರ್ದಶಿ, ದೀಪಾವಳಿ
ನವರಾತ್ರಿ: ಅಕ್ಟೋಬರ್ 3ರಿಂದ ನವರಾತ್ರಿ ಶುರು, ಒಂಭತ್ತು ದಿನ ನವದುರ್ಗೆಯರನ್ನು ಆರಾಧನೆ ಮಾಡಲಾಗುವುದು
ದಸರಾ: ನವರಾತ್ರಿ 10ನೇ ದಿನ ಕರ್ನಾಟಕದಲ್ಲಿ ವಿಶ್ವಪ್ರಸಿದ್ಧ ದಸರಾ ಅಚರಣೆ, ನಾಡಹಬ್ಬ ದಸರಾವನ್ನು ನೋಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ನಮ್ಮ ಆಚರಣೆ, ನಂಬಿಕೆ, ಸಂಸ್ಕತಿ, ವೈಭೋಗ, ಪರಂಪರೆಯನ್ನು ಬಿಂಬಿಸುವ ಹಬ್ಬವಾಗಿ ದಸರಾ.
ಅಯುಧ ಪೂಜೆ : ಅಕ್ಟೋಬರ್ 12ಕ್ಕೆ ಆಯುಧ ಪೂಜೆಯನ್ನು ಆಚರಿಸಲಾಗುವುದು, ಈ ದಿನ ಅಯುಧಗಳಿಗೆ, ವಾಹನಗಳಿಗೆ ಪೂಜೆಯನ್ನು ಸಲ್ಲಿಸಿ ಬಹಳ ಸಡಗರ-ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುವುದು.
ಪಾಪಾಂಕುಶ ಏಕಾದಶಿ: ಶ್ರೀ ವಿಷ್ಣು ಭಕ್ತರು ಪಾಪಾಂಕುಶ ಏಕಾದಶಿಯನ್ನು ಉಪವಾಸವಿದ್ದು ಆಚರಿಸುತ್ತಾರೆ, ಪಾಪಾಂಕುಶ ಏಕಾದಶಿ ಆಚರಣೆಯಿಂದ ಎಲ್ಲಾ ಪಾಪಗಳಿಂದ ಮುಕ್ತರಾಗಿ ಮೋಕ್ಷವನ್ನು ಪಡೆಯಬಹುದು, ಅಲ್ಲದೆ ಕಷ್ಟಗಳು ದೂರಾಗಲಿದೆ.
ಯಮ ದೀಪ:ಧನತ್ರಯೊದಶಿಯಂದು ಈ ವಿಶ್ವದಲ್ಲಿ ತಮ ಆವರ್ತನಾ ಶಕ್ತಿ ಅಧಿಕವಿರುತ್ತದೆ, ಇದರಿಂದ ಅಕಾಲಿಕ ಮೃತ್ಯು ಸಂಭವಿಸಬಹುದು, ಯಮ ದೀಪಕ್ಕೆ ಆ ಕೆಟ್ಟ ಶಕ್ತಿಯನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ, ಹೀಗಾಗಿ ಯಮನಿಗೆ ಗೋಧಿ ಹಿಟ್ಟಿನಿಂದ ಮಾಡಿದ ದೀಪದಲ್ಲಿ ಎಣ್ಣೆ ಹಾಕಿ ಹಚ್ಚಿಡಲಾಗುವುದು. ಇಂದು ಸಂಧ್ಯಾ ಹೊತ್ತಿನಲ್ಲಿ ಹಚ್ಚಿಡಿ.
ಲಕ್ಷ್ಮಿ ಪೂಜೆ: ಲಕ್ಷ್ಮಿ ಪೂಜೆಯಂದು ಸಂಜೆ ತುಪ್ಪದ ದೀಪ ಹಚ್ಚಿ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಈ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ದಿಸುವುದು ಎಂಬ ನಂಬಿಕೆ. ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು.
ದೀಪಾವಳಿ: ನವರಾತ್ರಿಯಂತೆಯೇ ಮತ್ತೊಂದು ಸಡಗರದ ಹಬ್ಬ ದೀಪಾವಳಿ. ಕತ್ತಲಿನಿಂದ ಬೆಳಕಿನಡಿಗೆ ಸಂದೇಶ ಸಾರುವ ಹಬ್ಬ, ದೀಪಗಳನ್ನು ಹಚ್ಚಿಟ್ಟಾಗ ಕತ್ತಲು ಕರಗುವಂತೆ ಬದುಕಿನಲ್ಲಿನ ಎಲ್ಲಾ ಕತ್ತಲು ದೂರಾಗಿ ಜೀವನದಲ್ಲಿ ಪ್ರಕಾಶ ಬರಲಿ ಎಂಬ ಆಶಯದಿಂದ ಈ ಹಬ್ಬವನ್ನು ಆಚರಿಸಲಾಗುವುದು.
ಹೀಗೆ ಈ ಅಕ್ಟೋಬರ್ ಮಾಸ ಸಡಗರದಿಂದ ಕೂಡಿದ ಮಾಸವಾಗಿದೆ. ಈ ಮಾಸದ ಒಂದೊಂದು ದಿನಕ್ಕೆ ಒಂದೊಂದು ವಿಶೇಷವಿದೆ, ಹಾಗಾಗಿ ಹೆಚ್ಚಿನ ಸಂಭ್ರಮದಿಂದ ಅಕ್ಟೋಬರ್ ಸ್ವಾಗತಿಸೋಣ.



Click it and Unblock the Notifications
