Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅಕ್ಟೋಬರ್ ಮಾಸ ಕನ್ಯಾ ರಾಶಿಯವರಿಗೆ ಶುಭವೇ? ಮಿಶ್ರಫಲವೇ?
ಅಕ್ಟೋಬರ್ ತಿಂಗಳು ಕನ್ಯಾ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ಗುರುವಿನ ಸ್ಥಾನ ನಿಮ್ಮ 8ನೇ ಮನೆಯಲ್ಲಿ ಇರುವುದರಿಂದ ವೃತ್ತಿಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ 12ನೇ ಮನೆಯಲ್ಲಿ ಶುಕ್ರವಿರುವುದರಿಂದ ಸ್ವಲ್ಪ ಪರಿಹಾರ ಸಿಗಲಿದೆ. ಶನಿಯು 6ನೇ ಮನೆಯಲ್ಲಿದೆ, ಶನಿಯ ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ. ಈ ತಿಂಗಳು ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನೀವು ಸವಾಲುಗಳನ್ನು ಎದುರಿಸಬೇಕಾಗಬಹುದು.

ಕೆಲಸದ ಒತ್ತಡ ಅಧಿಕವಿರಲಿದೆ. ರಾಹುವು ಎಂಟನೇ ಮನೆಯಲ್ಲಿ ಮತ್ತು ಕೇತು ಎರಡನೇ ಮನೆಯಲ್ಲಿ ಸ್ಥಿತರಿರುವುದರಿಂದ ಮೇಲಾಧಿಕಾರಿಗಳ ಜೊತೆ ಭಿನ್ನಾಬಿಪ್ರಾಯ ಉಂಟಾಗಬಹುದು. ಮಂಗಳ ಸ್ಥಾನವು ನಿಮಗೆ ಅನುಕೂಲಕರವಲ್ಲ. ಒಟ್ಟಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ಈ ತಿಂಗಳು ವೃತ್ತಿ ಜೀವನದಲ್ಲಿ ಮಿಶ್ರಫಲ.
ಆರ್ಥಿಕ ಜೀವನ
ಆರ್ಥಿಕವಾಗಿ, ಎಂಟನೇ ಮನೆಯಲ್ಲಿ ಗುರು-ರಾಹು ಇರುವುದರಿಂದ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. 12ನೇ ಮನೆಯಲ್ಲಿ ಶುಕ್ರನ ಸ್ಥಾನದಿಂದ ಆರ್ಥಿಕ ನಷ್ಟ ಉಂಟಾಗುವುದು. ಇದರಿಂದಾಗಿ ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಈ ತಿಂಗಳು ಹಣ ಉಳಿತಾಯ ಮಾಡಲು ಕಷ್ಟ, ಈ ತಿಂಗಳಿನಲ್ಲಿ ಹಣದ ಹೂಡಿಕೆ ಮಾಡಬೇಡಿ.
ಗುರುಗ್ರಹ ನಿಮಗೆ ಅನುಕೂಲಕರವಾಗಿಲ್ಲ, ಆದರೆ ಶನಿಯು ನಿಮ್ಮ 6ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಈ ಅವಧಿಯಲ್ಲಿ ಆದಷ್ಟೂ ಸಾಲ ತೆಗೆದುಕೊಳ್ಳದಿರುವುದು ಒಳ್ಳೆಯದು. ಕೇತು ಎರಡನೇ ಮನೆಯಲ್ಲಿರುವುದರಿಂದ ಈ ತಿಂಗಳು ಆದಾಯದಲ್ಲಿ ಅಡೆತಡೆಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಹಣವನ್ನು ಸಂಪಾದಿಸುವುದು ಮತ್ತು ಹಣವನ್ನು ಉಳಿಸುವುದು ಎರಡೂ ನಿಮಗೆ ಸ್ವಲ್ಪ ಕಷ್ಟಕರ. ಒಟ್ಟಿನಲ್ಲಿ ಈ ತಿಂಗಳಿನಲ್ಲಿ ಆರ್ಥಿಕ ವಿಷಯದಲ್ಲಿ ನಿಮಗೆ ಮಿಶ್ರಫಲ.
ಆರೋಗ್ಯ ಜೀವನ
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಆರೋಗ್ಯ ಸಮಸ್ಯೆಗಳಿರಬಹುದು. ಎಂಟನೇ ಮನೆಯಲ್ಲಿ ರಾಹು ಮತ್ತು ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ದಿನನಿತ್ಯ ವ್ಯಾಯಾಮ ಮಾಡಿ, ಆರೋಗ್ಯಕರ ಆಹಾರಕ್ರಮದತ್ತ ಗಮನ ನೀಡಿ.
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಈ ತಿಂಗಳು ನಿಮಗೆ ಮಧ್ಯಮ ಫಲಪ್ರದವಾಗಿರುತ್ತದೆ. ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ವೈವಾಹಿಕ ಜೀವನದಲ್ಲಿಯೂ ಹೊಂದಾಣಿಕೆಯ ಕೊರತೆ ಉಂಟಾಗಲಿದೆ. ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಪರಿಹಾರ
ಪ್ರತಿದಿನ ದುರ್ಗಾ ಚಾಲೀಸಾ ಪಠಿಸಿ.



Click it and Unblock the Notifications