Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮನೆಯಲ್ಲೇ ಕುಳಿತು ನಿತ್ಯ ರಾಮನ ಆರತಿ ನೇರಪ್ರಸಾರ ವೀಕ್ಷಿಸಿ..! ಎಲ್ಲಿ? ಹೇಗೆ ಗೊತ್ತಾ?
ಅಯೋಧ್ಯೆ ರಾಮ ಮಂದಿರ ದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಡುತ್ತಿದೆ. ನಿತ್ಯ ಸಾವಿರಾರು ಮಂದಿ ರಾಮ ಲಲ್ಲಾನ ದರ್ಶನ ಪಡೆಯಲೆಂದು ದೇಶದ ಮೂಲೆ ಮೂಲೆಯಿಂದಲೂ ಆಗಮಿಸುತ್ತಿದ್ದಾರೆ. ಇದು ಅಯೋಧ್ಯೆಗೆ ಮತ್ತೊಂದು ಮೆರುಗು ತಂದಿದೆ. ಅಯೋಧ್ಯೆಯಲ್ಲಿ ವೇಗದ ಅಭಿವೃದ್ಧಿಯ ಜೊತೆಗೆ ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಡುತ್ತಿದೆ.
ಶ್ರೀರಾಮನ ದರ್ಶನ ಪಡೆಯಲು ಬಹುತೇಕ ಭಾಗಗಳಿಂದ ವಿಶೇಷ ರೈಲು ವ್ಯವಸ್ಥೆ ಸಹ ಇದ. ಇದರ ಜೊತೆ ಅಯೋಧ್ಯೆಯಲ್ಲಿ ಸಕಲ ಮೂಲಭೂತ ಸೌಕರ್ಯ ಒದಗಿಸಲು ಅಲ್ಲಿನ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇನ್ನು ಅಯೋಧ್ಯೆಯಲ್ಲಿ ನಿತ್ಯವು ರಾಮಲಲ್ಲಾನಿಗೆ ವಿಶೇಷ ಪೂಜೆಗಳು ನೆರವೇರುತ್ತಿದೆ. ಜೊತೆಗೆ ರಾಮ ಆರತಿ ಸಹ ನೆರವೇರುತ್ತಿದೆ.

ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ರಾಮ ಆರತಿ ನಡೆಯುತ್ತದೆ, ಈ ಆರತಿ ಕಣ್ತುಂಬಿಕೊಳ್ಳಲೆಂದೇ ಭಕ್ತರು ಅಯೋಧ್ಯೆಗೆ ಆಗಮಿಸುತ್ತಾರೆ. ಈ ಆರತಿಯನ್ನು ನೋಡಬೇಕಾದರೆ ಆನ್‌ಲೈನ್‌ನಲ್ಲಿ ಪಾಸ್‌ಗಳ ಕಾಯ್ದಿರಿಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಟಿವಿಯಲ್ಲೂ ಈ ಆರತಿಯನ್ನು ಕಣ್ತುಂಬಿಕೊಳ್ಳಬಹುದು. ಹಾಗಾದರೆ ರಾಮ ಆರತಿಯನ್ನು ಟಿವಿಯಲ್ಲಿ ನೇರ ಪ್ರಸಾರ ನೋಡುವುದು ಹೇಗೆ? ಯಾವ ಸಮಯದಲ್ಲಿ ಪ್ರಸಾರವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ರಾಮಲಲ್ಲಾ ಭಕ್ತರು ಪ್ರತಿದಿನ ಅಯೋಧ್ಯೆಯಿಂದ ನೇರವಾಗಿ ಆರತಿಯ ನೇರ ಪ್ರಸಾರವನ್ನು ವೀಕ್ಷಿಸಬಹುದು. ದೂರದರ್ಶನ ನ್ಯಾಷನಲ್ ಚಾನಲ್‌ನಲ್ಲಿ ಪ್ರತಿದಿನ ಬೆಳಗ್ಗೆ 6:30ಕ್ಕೆ ಅಯೋಧ್ಯೆಯ ರಾಮಮಂದಿರದಿಂದ ದೈನಂದಿನ ಆರತಿಯನ್ನು ಪ್ರಸಾರ ಮಾಡಲಾಗುತ್ತದೆ.
ಮೂರು ಅಂತಸ್ತಿನ ದೇವಾಲಯದ ಕಟ್ಟಡದ ಉಳಿದ ಎರಡು ಮಹಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಕಾಮಗಾರಿ ವೇಗವಾಗಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 3,500 ಕಾರ್ಮಿಕರನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಈ ಕಾಮಗಾರಿ ಅಂತ್ಯವಾಗಲು ಇನ್ನು 2 ತಿಂಗಳ ಕಾಲಾವಕಾಶ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ನಿತ್ಯ ಒಂದು ಗಂಟೆ ಗರ್ಭ ಗುಡಿ ಬಂದ್
ಇನ್ನು ಮಧ್ಯಾಹ್ನ ಒಂದು ಗಂಟೆಗಳ ಕಾಲ ಮುಖ್ಯ ಗರ್ಭಗುಡಿಯನ್ನು ಬಂದ್ ಮಾಡಲಾಗುತ್ತದೆ. ರಾಮಲಲ್ಲಾ ಇನ್ನೂ ಬಾಲಕನಾಗಿದ್ದು, ಹೀಗಾಗಿ ವಿಶ್ರಾಂತಿಗಾಗಿ ಬಾಗಿಲು ಹಾಕಲಾಗುವುದು ಎಂದು ದೇವಾಲಯ ಟ್ರಸ್ಟ್ ತಿಳಿಸಿದೆ. ಇದಲ್ಲದೆ ಇತ್ತೀಚಿಗೆ ದೇವಸ್ಥಾನದ ಟ್ರಸ್ಟ್ ಬೆಳಗ್ಗೆ 6 ರಿಂದ ರಾತ್ರಿ 10 ರ ವರೆಗೆ ದರ್ಶನದ ಸಮಯವನ್ನು ಹೆಚ್ಚಿಸಿದೆ.
ಜನವರಿ 22 ರಂದು ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇಲ್ಲಿಯವರೆಗೆ ಸುಮಾರು 75 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಾರಾಂತ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರತಿಯ ವೇಳಾಪಟ್ಟಿ ಇಲ್ಲಿದೆ ನೋಡಿ
ಶೃಂಗಾರ ಆರತಿ - 06:30 AM
ಭೋಗ ಆರತಿ - 12:00 PM
ಸಂಧ್ಯಾ ಆರತಿ - 07:30 PM
ಗಮನಿಸಬೇಕಾದ ಅಂಶವೆಂದರೆ ಪಾಸ್ ಹೊಂದಿರುವವರು ಮಾತ್ರ ರಾಮಮಂದಿರದಲ್ಲಿ ಆರತಿಗೆ ಹಾಜರಾಗಲು ಸಾಧ್ಯವಾಗುತ್ತದೆ. ನಿರ್ವಾಹಕ ಧ್ರುವೇಶ್ ಮಿಶ್ರಾ ಅವರ ಪ್ರಕಾರ, ಭದ್ರತೆಯ ಕಾರಣದಿಂದ ಪ್ರತಿ ಆರತಿಗೆ ಕೇವಲ ಮೂವತ್ತು ಜನರಿಗೆ ಮಾತ್ರ ಹಾಜರಾಗಲು ಅನುಮತಿ ನೀಡಲಾಗಿದೆ.
ಅಧಿಕೃತ ವೆಬ್‌ಸೈಟ್‌ನಿಂದ ಭಕ್ತರು ಆರತಿ ಪಾಸ್‌ಗಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಭಕ್ತರು ಸರ್ಕಾರದಿಂದ ನೀಡಲಾದ ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಪ್ರತಿ ಆರತಿಗೆ ಮೂವತ್ತು ಪಾಸ್‌ಗಳನ್ನು ಮಾತ್ರ ನಿಗದಿಪಡಿಸಲಾಗುತ್ತದೆ. ಈ ಸೇವೆಯು ಉಚಿತವಾಗಿರುತ್ತದೆ .
ನಿಮ್ಮ ಆರತಿ ಪಾಸ್‌ಗಳಿಗಾಗಿ ಬುಕ್ ಮಾಡುವುದು ಹೇಗೆ?
1. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ srjbtkshetra.org.
2. ನೀವು ನಿಮ್ಮ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು ಮತ್ತು ನೀವು OTP ಬಳಸಿಕೊಂಡು ಲಾಗ್ ಇನ್ ಮಾಡಬಹುದು.
3. ಮುಖಪುಟದಲ್ಲಿ, ಆರತಿ ವಿಭಾಗದ ಮೇಲೆ ಕ್ಲಿಕ್ ಮಾಡಿ.
4. ಈಗ ನೀವು ಹಾಜರಾಗಲು ಬಯಸುವ ದಿನಾಂಕ ಮತ್ತು ಆರತಿಯ ಪ್ರಕಾರವನ್ನು ಆಯ್ಕೆಮಾಡಿ.
5. ಭಕ್ತರ ಹೆಸರು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
6. ದೇವಸ್ಥಾನಕ್ಕೆ ನಿಮ್ಮ ಭೇಟಿಯ ಸಂದರ್ಭದಲ್ಲಿ, ಕೌಂಟರ್‌ನಿಂದ ಪಾಸ್‌ಗಳನ್ನು ಸಂಗ್ರಹಿಸಿ ಮತ್ತು 'ಆರತಿ'ಗೆ ಮುಂದುವರಿಯಿರಿ
ಆರತಿ ಪಾಸ್‌ಗಳಿಗೆ ಕೇವಲ ನಾಲ್ಕು ದಾಖಲೆಗಳು ಸ್ವೀಕಾರಾರ್ಹವಾಗಿರುತ್ತವೆ - ಡ್ರೈವರ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಆದರೆ ಭಕ್ತರು ಈ ದಾಖಲೆಗಳಲ್ಲಿ ಒಂದನ್ನು ತೆಗೆದುಕೊಂಡು ಹೋಗಬಹುದು, ಅದನ್ನು ಅವರು ಅಧಿಕಾರಿಗಳಿಗೆ ತೋರಿಸಿ ಅವರಿಂದ ಅನುಮತಿ ಪಡೆಯಬೇಕು.



Click it and Unblock the Notifications
