Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ರಾಮಮಂದಿರ ನಿರ್ಮಾಣಕ್ಕೆ ಒಂದು ಹಿಡಿ ಸಿಮೆಂಟ್, ಕಬ್ಬಿಣ ಬಳಸಿಲ್ಲವಂತೆ..! ಯಾಕೆ ಗೊತ್ತಾ..?
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮ ಮಂದಿರ ಇನ್ನೇನು ಉದ್ಘಾಟನೆಯಾಗಲೂ ಸಿದ್ಧವಾಗಿದೆ. ಜನವರಿ 22ರಂದು ಭವ್ಯ ಮಂದಿರ ಲೋಕಾರ್ಪಣೆಯಾಗಲಿದ್ದು, ಇಡೀ ಹಿಂದೂ ಸಮಾಜ ಈ ದಿನಕ್ಕಾಗಿ ಎದುರು ನೋಡುತ್ತಿದೆ. ಜೊತೆಗೆ ಮಂದಿರ ತನ್ನ ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಂದಿರ ವಿನ್ಯಾಸವು ಈಗಾಗಲೇ ಜಗತ್ತಿನ ಗಮನಸೆಳೆದಿದ್ದು, ಮಂದಿರ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳ ಆಯ್ಕೆಯೂ ಸಹ ಅಷ್ಟೇ ಪ್ರಮುಖವಾಗಿದೆ.
ರಾಮ್ ಲಲ್ಲಾ ಎಂದು ಕರೆಯಲ್ಪಡುವ ಭಗವಾನ್ ರಾಮನ ಬಾಲ್ಯದ ವಿಗ್ರಹವನ್ನು ದಶಕಗಳಿಂದ ಅಯೋಧ್ಯೆಯಲ್ಲಿ ಸಣ್ಣ ಗುಡಿಯಲ್ಲಿ ಇರಿಸಲಾಗಿತ್ತು. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಐತಿಹಾಸಿಕ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಈ ವಿಗ್ರಹ ಅಲ್ಲಿಯೇ ಇತ್ತು. ಆದರೆ ಜನವರಿ 22ರಂದು ರಾಮಮಂದಿರದಲ್ಲಿ ವಿಗ್ರಹ ನೆಲೆಗೊಳ್ಳಲಿದೆ. ವಿಶೇಷವೆಂದರೆ ಈ ಮಂದಿರ ನಿರ್ಮಾಣದಲ್ಲಿ ಕಬ್ಬಿಣ, ಸಿಮೆಂಟ್ ಬಳಕೆಯೇ ಆಗಿಲ್ಲವಂತೆ.
ನೀವು ರಾಮಮಂದಿರವನ್ನು ಗಮನವಿಟ್ಟು ನೋಡಿದಾಗ ನಿಮಗೂ ಈ ವಿಚಾರ ತಿಳಿಯುತ್ತದೆ. ಅಲ್ಲಿ ಎಲ್ಲಿಯೂ ಕಬ್ಬಿಣದ ರಾಡ್ ಆಗಲಿ, ಸಿಮೆಂಟ್ ಆಗಲಿ ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ದೇವಾಲಯವನ್ನು ಭೂಕಂಪ ನಿರೋಧಕವಾಗಿಸಲು, ದೇವಾಲಯವನ್ನು ನಿರ್ಮಿಸಲು ಕಬ್ಬಿಣದ ಬದಲಿಗೆ ಕಲ್ಲನ್ನು ಬಳಸಲಾಗಿದೆ.

ರೂರ್ಕಿಯ ಸಿಎಸ್‌ಐಆರ್-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ನಿರ್ದೇಶಕ ಪ್ರೊಫೆಸರ್ ರಾಮಂಚರಾಳ ಪ್ರದೀಪ್ ಕುಮಾರ್, ರಾಮ ಮಂದಿರದ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿ, "ನಾವು ಕಲ್ಲುಗಳನ್ನು ಬಳಸಿದ್ದೇವೆ ಏಕೆಂದರೆ ಅದರ ಜೀವಿತಾವಧಿ ಇತರ ನಿರ್ಮಾಣ ಸಾಮಗ್ರಿಗಳಿಗಿಂತ ಹೆಚ್ಚು. ರಾಮಮಂದಿರವನ್ನು ಅತ್ಯಂತ ವಿಶಿಷ್ಟ ಕಲ್ಲು ಬಳಸಿ ನಿರ್ಮಿಸಲಾಗಿದೆ. ಕಬ್ಬಿಣವನ್ನು ಸಹ ತಪ್ಪಿಸಲಾಗಿದೆ ಏಕೆಂದರೆ ಅದು ತುಕ್ಕು ಹಿಡಿಯುತ್ತದೆ. ಹೆಚ್ಚುವರಿಯಾಗಿ, ದೇವಾಲಯದ ರಚನೆಯು ಭೂಕಂಪಗಳಿಗೆ ನಿರೋಧಕವಾಗಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ.
ರಾಮಮಂದಿರವನ್ನು ವಿಶಿಷ್ಟ ರೀತಿಯ ಕಲ್ಲು ಬಳಸಿ ನಿರ್ಮಿಸಲಾಗಿದೆ. ರಾಮಮಂದಿರದಲ್ಲಿ ಬಳಸಲಾಗುವ ಪ್ರತಿಯೊಂದು ಕಲ್ಲಿನಲ್ಲಿ ನಿರ್ದಿಷ್ಟ ಪ್ರಮಾಣದ ತೂತು ಮಾಡಲಾಗುತ್ತದೆ. ಬಳಿಕ ಮತ್ತೊಂದು ಕಲ್ಲು ಅದಕ್ಕೆ ಸರಿಹೊಂದುವಂತೆ ಅದರ ಒಳಗೆ ಸೇರಿಸಲಾಗುತ್ತದೆ. ಹೀಗಾಗಿ ನೀವು ಎರಡು ಕಲ್ಲುಗಳ ನಡುವೆ ಯಾವುದೇ ಸಿಮೆಂಟ್ ನೋಡಲು ಸಾಧ್ಯವಿಲ್ಲ. ರಾಮ ಮಂದಿರದ ಪ್ರಾಥಮಿಕ ನಿರ್ಮಾಣದಲ್ಲಿ ಬಳಸಲಾದ ಎಲ್ಲಾ ಗುಲಾಬಿ ಕಲ್ಲು ರಾಜಸ್ಥಾನದ ಭರತ್‌ಪುರದ ಬನ್ಸಿ ಪಹಾರ್‌ಪುರದಿಂದ ಬಂದಿದೆ. ಗುಲಾಬಿ ಕಲ್ಲು ಬಲಿಷ್ಠವಾಗಿರುವುದರ ಜೊತೆಗೆ ದೀರ್ಘಾವಧಿ ಬಾಳಿಕೆ ಬರಲಿವೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಅಡಿಪಾಯಕ್ಕಾಗಿ ಮಣ್ಣು ಪರೀಕ್ಷೆಯನ್ನು ಪ್ರಾರಂಭಿಸಿದಾಗ, ದೇವಾಲಯದ ಕೆಳಗೆ ಮಣ್ಣಿನ ಬದಲಿಗೆ ಸಂಪೂರ್ಣವಾಗಿ ಸಡಿಲವಾದ ಮರಳು ಇರುವುದು ಪತ್ತೆಯಾಗಿದೆ, ಅದು ಅಡಿಪಾಯಕ್ಕೆ ಸಂಪೂರ್ಣವಾಗಿ ಸೂಕ್ತವಲ್ಲ. ಇದರ ನಂತರ, ಈ ಸಮಸ್ಯೆಯನ್ನು ಪರಿಹರಿಸಲು, CBRI, ನ್ಯಾಷನಲ್ ಜಿಯೋಫಿಸಿಕಲ್ ಸರ್ವೆ, IIT ದೆಹಲಿ, ಗುವಾಹಟಿ, ಚೆನ್ನೈ, ರೂರ್ಕಿ, ಮತ್ತು ಬಾಂಬೆ, ಹಾಗೆಯೇ ಲಾರ್ಸೆನ್ & ಟೌಬ್ರೊ (L&T) ನ ತಜ್ಞರು ಕಟ್ಟಡದ ಉಸ್ತುವಾರಿ ವಹಿಸಿದ್ದರು.
ಆರು ಎಕರೆ ಅಯೋಧ್ಯೆ ದೇವಸ್ಥಾನದ ಭೂಮಿಯಿಂದ 14 ಮೀಟರ್ ಮರಳನ್ನು ತೆಗೆಯಲಾಗಿತ್ತು. ಅದರ ನಂತರ, ಅಡಿಪಾಯಕ್ಕಾಗಿ ಬಂಡೆಗಳನ್ನು ತಯಾರಿಸಲು ರೋಲ್ಡ್ ಕಾಂಪ್ಯಾಕ್ಟ್ ಕಾಂಕ್ರೀಟ್ ಎಂದು ಕರೆಯಲ್ಪಡುವ ವಿಶಿಷ್ಟ ರೀತಿಯ ಕಾಂಕ್ರೀಟ್ ಮಿಶ್ರಣದ 56 ಪದರಗಳನ್ನು ಖಾಲಿ ಜಾಗದಲ್ಲಿ ಇರಿಸಲಾಯಿತು. ಇದು ಒಂದು ರೀತಿಯ ಕಾಂಕ್ರೀಟ್ ಆಗಿದ್ದು ಅದು ಅಂತಿಮವಾಗಿ ಬಂಡೆಯಾಗಿ ಬದಲಾಗುತ್ತದೆ. ಈ ಅಡಿಪಾಯವನ್ನು ದೇವಾಲಯವನ್ನು ಮಾಡಲು ಬಳಸಲಾಯಿತು.
ನಾಗರ ಶೈಲಿಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಈ ಶೈಲಿಯು ಕಬ್ಬಿಣವನ್ನು ಬಳಸುವುದಿಲ್ಲ. ಉತ್ತರ ಭಾರತದಲ್ಲಿ ಹಿಂದೂ ಧರ್ಮದ ಮೂರು ವಾಸ್ತುಶಿಲ್ಪ ಶೈಲಿಗಳಲ್ಲಿ ನಾಗರ ಶೈಲಿಯೂ ಒಂದು. ಉತ್ತರ ಭಾರತದಲ್ಲಿ ಹೆಚ್ಚಾಗಿ ಹುಟ್ಟಿಕೊಂಡ ಈ ನಾಗರ ಶೈಲಿಯು ವಿಂಧ್ಯ ಮತ್ತು ಹಿಮಾಲಯದ ನಡುವಿನ ಪ್ರದೇಶಕ್ಕೆ ಸಂಬಂಧ ಹೊಂದಿದೆ. ನಗರ ಶೈಲಿಯಲ್ಲಿ ನಿರ್ಮಿಸಲಾದ ಇತರ ದೇವಾಲಯಗಳೆಂದರೆ ಖಜುರಾಹೊ ದೇವಾಲಯ, ಸೋಮನಾಥ ದೇವಾಲಯ ಮತ್ತು ಕೋನಾರ್ಕ್‌ನ ಸೂರ್ಯ ದೇವಾಲಯ.
ಈ ರೀತಿ ಸಿಮೆಂಟ್ ಇಲ್ಲದೆ ನಾಗರ ಶೈಲಿಯಲ್ಲಿ ನಿರ್ಮಾಣವಾಗಿರು ದೇವಾಲಯ ಸಾವಿರ ವರ್ಷವಾದರೂ ಒಂದೇ ಒಂದು ಕಡೆ ರಿಪೇರಿ ಮಾಡುವ ಅವಶ್ಯಕತೆ ಸಹ ಬರುವುದಿಲ್ಲ ಎಂಬುದು ದೃಢವಾಗಿದೆ.



Click it and Unblock the Notifications
