Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜೂನ್ 18ಕ್ಕೆ ನಿರ್ಜಲ ಏಕಾದಶಿ ಉಪವಾಸ: ಎಲ್ಲಾ ಏಕಾದಶಿಗಿಂತ ಅತ್ಯಂತ ಕಠಿಣ ಏಕಾದಶಿಯಿದು, ಏಕೆ?
ವರ್ಷದಲ್ಲಿ 24 ಏಕಾದಶಿ ಆಚರಿಸುತ್ತೇವೆ, ಆ 24 ಏಕಾದಶಿಯಲ್ಲಿ ನಿರ್ಜಲ ಏಕಾದಶಿ ಅತ್ಯಂತ ಪ್ರಮುಖ ಏಕಾದಶಿಯಾಗಿದೆ. ನಿರ್ಜಲ ಏಕಾದಶಿ ಆಚರಣೆ ಮಾಡುವುದರಿಂದ ನಮಗೆ ಎಲ್ಲಾ ಏಕಾದಶಿ ಆಚರಣೆ ಮಾಡಿದಷ್ಟು ಪುಣ್ಯದ ಫಲ ಸಿಗುವುದು. ಈ ಏಕಾದಶಿಯ ವಿಶೇಷವೆಂದರೆ ಒಂದು ಹನಿ ನೀರು ಕೂಡ ಬಾಯಿಗೆ ಹಾಕಿಕೊಳ್ಳದೆ ಕಠಿಣ ಉಪವಾಸ ವ್ರತ ಮಾಡಬೇಕು.

ನಿರ್ಜಲ ಏಕಾದಶಿ ಉಪವಾಸ ನಿಯಮ ಜೂನ್ 18ಕ್ಕೆ ಆಚರಿಸಲಾಗುವುದು
ಈ ಸಾಲಿನಲ್ಲಿ ಏಕಾದಶಿ ತಿಥಿ ಜೂನ್ 17 ಬೆಳಗ್ಗೆ 04:43ರಿಂದ ಪ್ರಾರಂಭವಾಗಿ ಜೂನ್ 18 ಬೆಳಗ್ಗೆ 06:24ಕ್ಕೆ ಮುಕ್ತಾಯವಾಗುವುದು. ಏಕಾದಶಿ ಉಪವಾಸ ಜೂನ್ 18ಕ್ಕೆ ಮಾಡಲಾಗುವುದು.
ಏಕಾದಶಿ ತಿಥಿ ಮುಕ್ತಾಯ: ಜೂನ್ 19, ಬೆಳಗ್ಗೆ7:28ಕ್ಕೆ
ನಿರ್ಜಲ ಏಕಾದಶಿ ತಿಥಿಯ ಮಹತ್ವ
ನಿರ್ಜಲ ಏಕಾದಶಿಯನ್ನು ಯಾರು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೋ ಅವರು ಸಕಲ ಪಾಪಗಳಿಂದ ಮುಕ್ತರಾಗುತ್ತಾರೆ. ಈ ದಿ ಶ್ರೀವಿಷ್ಣುವಿನ ಪೂಜಿಸುವುದರಿಂದ ನಮ್ಮ ಜೀವನದಲ್ಲಿನ ಸಲಕ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ವೃತ್ತಿ ಬದುಕು, ಕೌಟುಂಬಿಕ ಬದುಕು, ವ್ಯವಹಾರದಲ್ಲಿರುವ ಸಮಸ್ಯೆಗಳು ದೂರಾಗುವುದು .
ಇದನ್ನು ಆಚರಣೆ ಮಾಡುವುದರಿಂದ 24 ಏಕಾದಶಿಯ ಫಲ ಇದೊಂದು ವ್ರತದಿಂದ ಸಿಗಲಿದೆ
ಎಲ್ಲರಿಗೆ ಈ ಉಪವಾಸ ಮಾಡಲು ಸಾಧ್ಯವಿಲ್ಲ
ಏಕೆಂದರೆ ಈ ಏಕಾದಶಿಯಂದು ಒಂದು ತೊಟ್ಟು ನೀರು ಕೂಡ 24 ಗಂಟೆ ಅವಧಿಯಲ್ಲಿ ಸೇವಿಸುವಂತಿಲ್ಲ, ಆದ್ದರಿಂದ ಎಲ್ಲರಿಗೆ ಈ ಏಕಾದಶಿ ಮಾಡಲು ಸಾಧ್ಯವಾಗಲ್ಲ, ಆರೋಗ್ಯ ಚೆನ್ನಾಗಿರಬೇಕು, ಮನೋಬಲವಿರಬೇಕು ಅಂಥವರು ಈ ಏಕಾದಶಿ ವ್ರತ ಕೈಗೊಳ್ಳಬಹುದು.
ನಿರ್ಜಲ ಏಕಾದಶಿಯಂದ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು. ಶ್ರೀವಿಷ್ಣುವಿಗೆ ಹೂ, ಹಣ್ಣುಗಳು, ಧೂಪದ್ರವ್ಯ, ನೈವೇದ್ಯ, ತುಳಸಿ, ವೀಳ್ಯೆದೆಲೆ ಅರ್ಪಿಸಿ ಪೂಜೆ ಅಲ್ಲಿಸಲಾಗುವುದು.
ನಿರ್ಜಲ ಏಕಾದಶಿ ಪೂಜಾ ನಿಯಮವೇನು?
ಬೆಳಗ್ಗೆ ಎದ್ದು ಸ್ನಾನ ಮಾಡಿ (ನದಿ ಸಮೀಪವಿದ್ದರೆ ನದಿಯಲ್ಲಿ ಸ್ನಾನ ಮಾಡಿ, ಇಲ್ಲಾಂದ್ರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ)
ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣುವಿನ ಫೋಟೋ ಮುಂದೆ ಇಟ್ಟು ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಪೂಜಿಸಬೇಕು.
ದೇವರಿಗೆ ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆ, ಅಡಿಕೆ, ತೆಂಗಿನಕಾಯಿ ಸಹಿತ ವೀಳ್ಯದೆಲೆ ಮತ್ತು ಬಾಳೆಹಣ್ಣುಗಳು ಅಥವಾ ಇತರ ಹಣ್ಣುಗಳು ಮತ್ತು ದಕ್ಷಿಣೆ ಇಟ್ಟು ತಾಂಬೂಲವನ್ನು ಅರ್ಪಿಸಿ.
ನೈವೇದ್ಯದಲ್ಲಿ ತುಳಸಿ ಹಾಕಿ ಅರ್ಪಿಸಿ.
ಈ ದಿನದಂದು ಬಡವರಿಗೆ ದಾನ ಮಾಡಿದರೆ ಹೆಚ್ಚಿನ ಪುಣ್ಯ ಫಲ ಸಿಗಲಿದೆ.
ನಿರ್ಜಲ ಏಕಾದಶಿ ಉಪವಾಸದ ಕಥೆ!
ನಿರ್ಜಲ ಏಕಾದಶಿಯನ್ನು ಪಾಂಡವ ಭೀಮ ಏಕಾದಶಿ ಅಥವಾ ಪಾಂಡವ ನಿರ್ಜಲ ಏಕಾದಶಿ ಎಂದೂ ಕರೆಯಲಾಗುತ್ತದೆ. ಭೋಜನಪ್ರಿಯನಾದ ಭೀಮನು ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಬಯಸಿದನು, ಆದರೆ ಅವನಿಗೆ ತನ್ನ ಹಸಿವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಭೀಮನು ಪರಿಹಾರಕ್ಕಾಗಿ ಪಾಂಡವರ ಅಜ್ಜ ಋಷಿ ವ್ಯಾಸರನ್ನು ಸಂಪರ್ಕಿಸುತ್ತಾನೆ, ಅವರು ಭೀಮನಿಗೆ ಈ ವ್ರತದ ಬಗ್ಗೆ ಹೇಳುತ್ತಾರೆ. ಈ ನಿರ್ಜಲ ಏಕಾದಶಿ ಒಂದು ಮಾಡಿದರೆ ಉಳಿದ 23 ಏಕಾದಶಿಯ ಪುಣ್ಯ ಸಿಗಲಿದೆ ಎಂದು ತಿಳಿಸುತ್ತಾನೆ, ಅದರಂತೆ ಭೀಮನು ಈ ಏಕಾದಶಿ ಆಚರಿಸಿದ ಎಂದು ಪೌರಾಣಿಕ ಉಲ್ಲೇಖವಿದೆ.
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications
