Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಧಾನಿ ಮೋದಿ ಖಾಸಗಿ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ..! ಯಾರು ಈಕೆ ಗೊತ್ತಾ?
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶ ಸೇವೆ ಮಾಡಬೇಕೆಂಬ ಆಸೆಯಲ್ಲಿ ದೇಶದ ಲಕ್ಷಾಂತರ ಯುವಕ ಯುವತಿಯರು ಹಗಲು ರಾತ್ರಿ ಎನ್ನದೆ ಪರಿಶ್ರಮ ಪಡುವುದು ನೋಡಬಹುದು. ಆದ್ರೆ ಅದು ಅಷ್ಟು ಸುಲಭದ ಮಾತಲ್ಲ. ಲಕ್ಷಾಂತರ ಮಂದಿಯ ಕನಸು ಕನಸಾಗಿಯೇ ಉಳಿಯುವುದು ನೋಡಬಹುದು. ಹಾಗೆ ಐಎಎಸ್, ಐಎಫ್‌ಎಸ್ ಅಧಿಕಾರಿಗಳಾಗುವುದು ಅಂದರೆ ಅದೊಂದು ತಪಸ್ಸು. ಹಾಗೆ ಯುವ ಸಮುದಾಯದ ಸಾಧನೆಯೇ ಸರಿ.
ಇನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವುದು ಉನ್ನತ ದರ್ಜೆಯ ಅಧಿಕಾರಿಗಳು ಮಾತ್ರ. ಅದರಲ್ಲೂ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವವರೆಲ್ಲರು ಯುಪಿಎಸ್‌ಸಿಯಲ್ಲಿ ಉತ್ತಮ ಅಂಕಗಳ ಪಡೆದಿರುತ್ತಾರೆ. ಹಾಗೆ ಪ್ರಧಾನಿ ಅವರ ಖಾಸಗಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುವವರು ಯುಪಿಎಸ್‌ಸಿ ಪಾಸ್ ಮಾಡಿರುತ್ತಾರೆ.

ಈಗ ಪ್ರಧಾನಿ ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಈಗ ಮಹಿಳಾ ಐಎಫ್‌ಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಈ ಹಾಗೆ ಹುದ್ದೆಯಲ್ಲಿ ಮತ್ತಿಬ್ಬರು ಪುರುಷ ಕಾರ್ಯದರ್ಶಿಗಳು ಸಹ ಇದ್ದಾರೆ. ವಿವೇಕ್ ಕುಮಾರ್ ಮತ್ತು ಹಾರ್ದಿಕ್ ಸತೀಶ್ಚಂದ್ರ ಶಾ ಪ್ರಧಾನಿ ಮೋದಿ ಅವರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ನಿಧಿ ತಿವಾರಿ ಎಂಬ ಮಹಿಳಾ ಅಧಿಕಾರಿಯು ಪ್ರಧಾನಿ ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಾರ್ಚ್ 29 ರಂದು ಹೊರಡಿಸಿದ ಜ್ಞಾಪಕ ಪತ್ರದ ಪ್ರಕಾರ ಸಂಪುಟದ ನೇಮಕಾತಿ ಸಮಿತಿಯು ಅವರ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ.
ಯಾರು ಈ ನಿಧಿ ತಿವಾರಿ?
ನಿಧಿ ತಿವಾರಿ 2014 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿಯಾಗಿದ್ದು, ಪ್ರಧಾನ ಮಂತ್ರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಧಿ ತಿವಾರಿ ಪಿಎಂಒನಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ವಿದೇಶಾಂಗ ಸಚಿವಾಲಯದ (ಎಂಇಎ) ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿಯೂ ಸೇವೆ ಅಲ್ಲಿಸಿದ್ದಾರೆ.
2013 ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಿಧಿ ತಿವಾರಿ 96 ನೇ ರ‍್ಯಾಂಕ್ ಗಳಿಸಿದ್ದರು. ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಮೆಹಮುರ್ಗಂಜ್ ಪ್ರದೇಶದವರಾಗಿದ್ದಾರೆ. 2016 ರಲ್ಲಿ ಅವರಿಗೆ ಅತ್ಯುತ್ತಮ ಅಧಿಕಾರಿ ತರಬೇತಿಗಾಗಿ ರಾಯಭಾರಿ ಬಿಮಲ್ ಸನ್ಯಾಲ್ ಸ್ಮಾರಕ ಪದಕ ಮತ್ತು ಅತ್ಯುತ್ತಮ ಪ್ರಬಂಧಕ್ಕಾಗಿ ಪ್ರಶಸ್ತಿ ಹಾಗೂ ಪದಕ ಪಡೆದಿದ್ದಾರೆ.
ನಿಧಿ ತಿವಾರಿ ಜನವರಿ 2023 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಈಗ ಅವರು ಮೋದಿ ಅವರ ಖಾಸಇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ವ್ಯವಹಾರಗಳು, ವಿದೇಶಾಂಗ ಮತ್ತು ಭದ್ರತೆಯಲ್ಲಿ ಅವತು ತೊಡಗಿದ್ದ ಕಾರಣಕ್ಕೆ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ ಎಂದು ವರದಿಯಾಗಿದೆ.
ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ಅವರ ಪರಿಣತಿಯು ಪ್ರಮುಖ ಪಾತ್ರ ವಹಿಸಲು ಸಹಾಯ ಮಾಡಿತು ಮತ್ತು ಅವರು ನೇರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ವರದಿ ಮಾಡಿದರು. ಭಾರತವು G20 ಅಧ್ಯಕ್ಷತೆಯಲ್ಲಿದ್ದಾಗ ಆಳವಾದ ಜ್ಞಾನವು ಹಲವು ವಿಚಾರಗಳ ಮೇಲಿನ ಅವರ ಹಿಡಿತ ಗುರುತಿಸುವಂತೆ ಮಾಡಿತ್ತು.
ಅವರು ಕೆಲಸ ಮಾಡುತ್ತಲೇ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು. ನಾಗರಿಕ ಸೇವೆಗಳಿಗೆ ಪ್ರವೇಶಿಸುವ ಮೊದಲು ವಾರಣಾಸಿಯಲ್ಲಿ ಸಹಾಯಕ ಆಯುಕ್ತರಾಗಿ (ವಾಣಿಜ್ಯ ತೆರಿಗೆ) ಕೆಲಸ ಮಾಡಿದರು ಮತ್ತು ಉದ್ಯೋಗದಲ್ಲಿರುವಾಗ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು.



Click it and Unblock the Notifications