Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ವಸ್ತುಗಳನ್ನು ಅರ್ಪಿಸಿದ್ರೆ ಶಿವನ ಕೆಂಗಣ್ಣಿಗೆ ಗುರಿಯಾಗುತ್ತೀರಿ ಜೋಕೆ!
ಹಿಂದೂ ಧರ್ಮದಲ್ಲಿ ಮಹಾದೇವನಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಮಹಾದೇವನ್ನು ದೇವರುಗಳ ದೇವ ಎಂದು ಕರೆಯಲಾಗುತ್ತದೆ. ಭಗವಾನ್ ಶಿವನನ್ನು ಸಹಾನುಭೂತಿ ಮತ್ತು ಕರುಣಾಮಯಿ ಹೃದಯವುಳ್ಳ ದೇವರು ಅಂತಲೂ ಕರೆಯಲಾಗುತ್ತದೆ. ನಾವು ನಿಷ್ಕಲ್ಮಶ ಮನಸ್ಸಿನಿಂದ ಆ ಶಿವನನ್ನು ಪೂಜಿಸಿದ್ರೆ ಖಂಡಿತ ಆತನ ನಮ್ಮ ಭಕ್ತಿಗೆ ಒಲಿಯುತ್ತಾನಂತೆ. ಅದ್ರಲ್ಲೂ ಸೋಮವಾರ ಶಿವನಿಗೆ ಪ್ರಿಯವಾದ ದಿನವಾದ್ದರಿಂದ ಆ ದಿನ ಆತನ ಸೇವೆಯನ್ನು ಮಾಡಿದ್ರೆ ತುಂಬಾನೇ ಶ್ರೇಷ್ಠ ಅಂತಾನೂ ಹೇಳಲಾಗುತ್ತದೆ.

ಶಿವನನ್ನು ಒಲಿಸಿಕೊಳ್ಳಬೇಕಾದರೆ ಆತನಿಗೆ ಪ್ರಿಯವಾದ ವಸ್ತುಗಳನ್ನೇ ಅರ್ಪಣೆ ಮಾಡಬೇಕು. ಹಾಲು, ಮಂದಾರ ಪುಷ್ಟ, ಗೋರಂಟಿ ಹೂವು, ಬಿಲ್ವ ಪತ್ರೆ, ಶಮಿ ಎಲೆ ಇತ್ಯಾದಿ. ಆದರೆ ಕೆಲವೊಂದು ಸಲ ನಾವು ಗೊತ್ತಿಲ್ಲದೇ ಯಾವುದೇ ವಸ್ತುಗಳನ್ನು ಅರ್ಪಿಸಿದ್ರೆ ಶಿವ ಖಂಡಿತ ಕೋಪಗೊಳ್ಳುತ್ತಾನೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಆ ಮಹಾದೇವನಿಗೆ ಅರ್ಪಿಸಿದ್ರೆ ಆತನಿಗೆ ಇಷ್ಟವಾಗೋದಿಲ್ಲ ಅನ್ನೋದನ್ನು ತಿಳಿಯೋಣ.
ಕುಂಕುಮ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಂಕುಮವನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಕುಂಕುಮವನ್ನು ಧಾರ್ಮಿಕ ಕಾರ್ಯಕ್ರಮ ಅಥವಾ ಪೂಜೆಯಲ್ಲಿ ಬಳಸಲಾಗುತ್ತದೆ. ಆದರೆ ಭಗವಾನ್ ಶಿವನ ಆರಾಧನೆಯ ಸಮಯದಲ್ಲಿ ಶಿವಲಿಂಗದ ಮೇಲೆ ಕುಂಕುಮವನ್ನು ಹಚ್ಚುವುದು ಶುಭವಲ್ಲ. ಏಕೆಂದರೆ ಭೋಲೆನಾಥನನ್ನು ಏಕಾಂತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಶಿವನಿಗೆ ಕುಂಕುಮವನ್ನು ಅರ್ಪಿಸುವುದರಿಂದ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.
ತುಳಸಿ
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜ್ಯನೀಯವೆಂದು ಪರಿಗಣಿಸಲಾಗಿದೆ. ದೇವತೆಗಳ ಪೂಜೆ ಸೇರಿದಂತೆ ಶುಭ ಕಾರ್ಯಕ್ರಮಗಳಲ್ಲಿ ತುಳಸಿಯನ್ನು ಬಳಸಲಾಗುತ್ತದೆ. ಆದರೆ ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸುವುದು ಅಶುಭ ಎಂದು ಹೇಳಲಾಗುತ್ತದೆ. ತುಳಸಿಯನ್ನು ವಿಷ್ಣುಪ್ರಿಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಶಿವನಿಗೆ ಅರ್ಪಿಸುವುದು ವಿಷ್ಣುವಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ.
ಅರಿಶಿನ
ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕಾರ್ಯದಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಆದರೆ ಶಿವನ ಆರಾಧನೆಯಲ್ಲಿ ಅರಿಶಿನ ಬಳಕೆಯನ್ನು ನಿಷೇಧಿಸಲಾಗಿದೆ. ಅರಿಶಿನವು ಸ್ತ್ರೀಲಿಂಗವಾಗಿದೆ ಮತ್ತು ಶಿವಲಿಂಗವು ಪುರುಷ ಅಂಶದ ಸಂಕೇತವಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವಲಿಂಗಕ್ಕೆ ಅರಿಶಿನ ಹಚ್ಚುವುದು ಶುಭವಲ್ಲ ಅಂತ ಹೇಳಲಾಗುತ್ತದೆ.
ಕೇತಕಿ ಹೂವುಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವನಿಗೆ ಕೇತಕಿ ಹೂಗಳನ್ನು ಅರ್ಪಿಸಬಾರದು. ಕೇತಕಿಯು ಶಿವನಿಂದ ಶಾಪ ಪಡೆದಳು ಎಂದು ನಂಬಲಾಗಿದೆ. ಇದರಿಂದಾಗಿ ಶಿವನ ಆರಾಧನೆಯ ಸಂದರ್ಭದಲ್ಲಿ ಈ ಹೂವನ್ನು ಬಳಸಬಾರದು ಅಂತ ಹೇಳಲಾಗುತ್ತದೆ.
ತುಳಸಿ
ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸಬಾರದು. ಪೌರಾಣಿಕ ನಂಬಿಕೆಗಳ ಪ್ರಕಾರ ಜಲಂಧರ ಎಂಬ ಅಸುರನು ವಿಷ್ಣುವಿನ ರಕ್ಷಾಕವಚದಿಂದಾಗಿ ಅಮರತ್ವದ ವರವನ್ನು ಪಡೆದನು. ಅಮರನಾಗಿದ್ದ ಆತ ಜಗತ್ತಿನಾದ್ಯಂತ ಅಶಾಂತಿಯನ್ನು ಸೃಷ್ಟಿಸುತ್ತಿದ್ದ. ಆ ಸಂದರ್ಭದಲ್ಲಿ ವಿಷ್ಣು ಮತ್ತು ಶಿವನು ಅವನನ್ನು ಕೊಲ್ಲಲು ಯೋಚಿಸುತ್ತಾರೆ. ವೃಂದಾ ತನ್ನ ಪತಿ ಜಲಂಧರನ ಸಾವಿನ ಸುದ್ದಿ ತಿಳಿದಾಗ ಅವಳು ತುಂಬಾ ದುಃಖಿತಳಾಗಿದ್ದಳು ಮತ್ತು ಕೋಪಗೊಂಡಳು. ಈ ಕೋಪದಲ್ಲಿ ಅವನು ಶಿವನಿಗೆ ತನ್ನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಯಾವಾಗಲೂ ನಿಷೇಧಿಸಬೇಕೆಂದು ಶಪಿಸಿದನು.
ತೆಂಗಿನ ನೀರು
ತೆಂಗಿನ ನೀರನ್ನು ಶಿವಲಿಂಗಕ್ಕೆ ಅರ್ಪಿಸಬಾರದು. ಆದರೆ ಶಿವನನ್ನು ತೆಂಗಿನಕಾಯಿಯಿಂದ ಪೂಜಿಸುತ್ತಾರೆ. ಆದರೆ ತೆಂಗಿನಕಾಯಿಯ ನೀರನ್ನು ಶಿವನಿಗೆ ಅರ್ಪಣೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಶಿವಲಿಂಗದ ಮೇಲೆ ಅರ್ಪಿಸುವ ಎಲ್ಲಾ ವಸ್ತುಗಳು ಶುದ್ಧವಾಗಿರಬೇಕು. ಆದರೆ ತೆಂಗಿನ ನೀರನ್ನು ದೇವತೆಗಳಿಗೆ ಅರ್ಪಿಸಿದ ನಂತರ ಸ್ವೀಕರಿಸಲಾಗುತ್ತದೆ. ಅದಕ್ಕಾಗಿಯೇ ಶಿವಲಿಂಗದ ಮೇಲೆ ತೆಂಗಿನ ನೀರನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಆದರೆ ಶಿವನ ಮೂರ್ತಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು.
ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಶಿವಲಿಂಗದ ಮೇಲೆ ಅರ್ಪಣೆ ಮಾಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆಯಿದೆ.



Click it and Unblock the Notifications
