Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಭಾರತೀಯರ ಕಣ್ಣು ಕೆಂಪಾಗಿಸಿದ ನೇಪಾಳದ ಹೊಸ ನೋಟು..! ಯಾಕೆ.?
ನಾವು ಭಾರತದ ರೂಪಾಯಿಯಲ್ಲಿ ಗಾಂಧೀಜಿಯ ಫೋಟೋ ನೋಡುತ್ತೇವೆ. ಜೊತೆಗೆ ಎಲ್ಲಾ ನೋಟಿನಲ್ಲೂ ಕೆಲವೊಂದು ವಿಶೇಷ ಚಿತ್ರಗಳ ಮುದ್ರಣ ನೋಡಬಹುದು. ಹಂಪಿಯ ಕಲ್ಲಿನ ರಥ ಸೇರಿದಂತೆ ಹಲವು ವಿಶೇಷ ಮುದ್ರಣಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
ಆದರೆ ಪಕ್ಕದ ನೇಪಾಳ ಮುದ್ರಿಸಿರುವ ಆ ದೇಶದ ಹೊಸ 100 ರೂಪಾಯಿ ನೋಟು ಈಗ ಹೊಸ ಚರ್ಚೆ ಹುಟ್ಟುಹಾಕಿದೆ. ಹೌದು ಇತ್ತಿಚಿಗೆ ಹೊಸ ಮ್ಯಾಪ್ ಮುದ್ರಿಸಿ ವಿವಾದ ಹುಟ್ಟುಹಾಕಿದ್ದ ನೇಪಾಳ ಈಗ ತನ್ನ ಹೊಸ ನೋಟಿನಲ್ಲಿ ತನ್ನ ಹೊಸ ಮ್ಯಾಪ್ ಮುದ್ರಿಸಿದೆ. ಆದರೆ ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳ ತನ್ನ ಹೊಸ 100 ರೂಪಾಯಿ ನೋಟು ಮುದ್ರಿಸಿದ್ದು ಈ ನೋಟು ಕಂಡ ಭಾರತೀಯರು ಈಗ ಕೆಂಡಕಾರುತ್ತಿದ್ದಾರೆ. ರಾಜತಾಂತ್ರಿಕವಾಗಿ ಭಾರತದೊಂದಿಗೆ ವಿವಾದಗಳ ಮಾಡಿಕೊಳ್ಳುತ್ತಲೇ ಬಂದಿದೆ. ಈಗ ಮುದ್ರಿಸಿರುವ ಹೊಸ ನೋಟಿನಲ್ಲಿ ಭಾರತದ ಕೆಲವು ಪ್ರದೇಶವನ್ನು ತನ್ನದೆಂದು ಘೊಷಿಸಿಕೊಂಡಿದೆ.
ಭಾರತ ಮತ್ತು ನೇಪಾಳದ ನಡುವೆ ವಿವಾದ ಎದ್ದಿರುವ ಲಿಪುಲೇಖ್, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶವನ್ನು ಸಹ ಸೇರಿಸಿಕೊಂಡು ಹೊಸ ನೋಟು ಮುದ್ರಿಸಿಕೊಂಡಿದೆ. ಈ ಪ್ರದೇಶಗಳು ತನ್ನದೆಂದು ಘೋಷಿಸಿಕೊಳ್ಳುವ ಮೊದಲ ಹೆಜ್ಜೆ ಇಟ್ಟಿದೆ. ಅಸಲಿಗೆ ಈ ಪ್ರದೇಶಗಳು ಮೊದಲು ಭಾರತದ ಒಳಗೆ ಇದ್ದವು ಆದರೆ ಇತ್ತೀಚಿಗೆ ಈ ಪ್ರದೇಶಗಳು ವಿವಾದ ಹುಟ್ಟಿಸಿವೆ.
ಭಾರತ ಹಾಗೂ ನೇಪಾಳ ಗಡಿರೇಖೆಯಲ್ಲಿ ಈ ಪ್ರದೇಶಗಳಿವೆ, ಅವುಗಳು ಮೊದಲ ಭಾರತದ ರೇಖೆಯೊಳಗಿದ್ದವು. ಆದರೆ ನೇಪಾಳ ಈ ಪ್ರದೇಶಗಳನ್ನು ತನ್ನದೆಂದು ಹೇಳುತ್ತಿದ್ದು, ಈಗ ಹೊಸ ನೋಟಿನಲ್ಲಿಯೂ ಸಹ ಈ ಪ್ರದೇಶಗಳ ಮುದ್ರಿಸಿಕೊಂಡಿದೆ.
ನೇಪಾಳದ ನಿರ್ಧಾರಕ್ಕೆ ಭಾರತವು ಈ ಸಂಬಂಧ ಪ್ರತಿಕ್ರಿಯೆ ಸಹ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾರತದ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನೇಪಾಳದ ಏಕಪಕ್ಷೀಯ ಕ್ರಮಗಳು ನೆಲದ ಮೇಲಿನ ಅಸ್ತಿತ್ವದಲ್ಲಿರುವ ವಾಸ್ತವಗಳನ್ನು ಬದಲಾಯಿಸುವುದಿಲ್ಲ ಅಥವಾ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಗಡಿ ಚರ್ಚೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಐದು ಭಾರತೀಯ ರಾಜ್ಯಗಳಲ್ಲಿ 1,850 ಕಿ.ಮೀ.ಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಆದರೆ ಈ ಪ್ರದೇಶದಲ್ಲಿ ಕೆಲವು ವಿವಾದಾತ್ಮಕ ವಿಚಾರಗಳು ಸಹ ಇನ್ನೂ ಜೀವಂತವಾಗಿದೆ.
ನೇಪಾಳದಲ್ಲಿ ಇತ್ತೀಚಿಗೆ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಅಲ್ಲಿನ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗೋದು ಇದೇ ಗಡಿ ರೇಖೆ ವಿಚಾರಗಳು, ಭಾರತದೊಂದಿಗಿನ ಈ ವಿವಾದಾತ್ಮಕ ಸ್ಥಳಗಳನ್ನು ನೇಪಾಳಕ್ಕೆ ಅಧಿಕೃತವಾಗಿ ಸೇರಿಸಲಾಗುವುದು ಅಂತಲೇ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುತ್ತವೆ.
ಅದರಲ್ಲೂ ಇತ್ತೀಚಿಗೆ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೌಡೆಲ್ ಈಗ ಗಡಿ ಸಂಬಂಧಿಸಿದಂತೆ ಹೊಸ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಕಳೆದ 2022ರಲ್ಲಿ ಪ್ರಧಾನಿ ಮೋದಿ ನೇಪಾಳದ ಲುಂಬಿನಿಗೆ ಭೇಟಿ ನೀಡಿದ್ದರು, ಈ ಭೇಟಿ ವೇಳೆ ಹಲವು ರೀತಿಯ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿತ್ತು ಆದರೆ ಗಡಿ ಸಮಸ್ಯೆಗಳ ಕುರಿತಂತೆ ಯಾವ ವಿಚಾರವು ಚರ್ಚೆಯಾಗಿರಲಿಲ್ಲ. ಆದರೆ ಇತ್ತೀಚಿಗೆ ನೇಪಾಳ ಯತಿ ಹೆಸರನ್ನು ರಾಷ್ಟ್ರೀಯ ಚಿಹ್ನೆಯನ್ನಾಗಿ ನಾಮ ನಿರ್ದೇಶನ ಮಾಡಿತ್ತು. ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಯೆತಿಯನ್ನು ರಾಷ್ಟ್ರೀಯ ಚಿಹ್ನೆಯಾಗಿ ನೇಪಾಳ ಬಳಸುವುದಾಗಿ ಘೋಷಿಸಿತ್ತು, ಈಗ ಭಾರತದ ಭೂ ಪ್ರದೇಶ ಸೇರಿಸಿಕೊಂಡು ಹೊಸ ನಕ್ಷೆ ತಯಾರಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.



Click it and Unblock the Notifications

