Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ನವರಾತ್ರಿಯಲ್ಲಿ ಸರಸ್ವತಿ ಪೂಜೆ ಯಾವಾಗ? ಸರಸ್ವತಿ ಪೂಜೆಯ ಮಹತ್ವವೇನು?
ಮಕ್ಕಳಿಗೆ ವಿದ್ಯಾರಂಭ ಮಾಡುವಾಗ ಅತ್ಯಂತ ಶುಭ ಮುಹೂರ್ತ ನೋಡಿ ಪ್ರಾರಂಭಿಸುತ್ತೇವೆ. ಅಂಥ ಶುಭ ದಿನದಲ್ಲೊಂದು ನವರಾತ್ರಿಯ ಸರಸ್ವತಿ ಪೂಜೆ. ಈ ದಿನ ಇನ್ನೂ ವಿದ್ಯಾಭ್ಯಾಸ ಪ್ರಾರಂಭಿಸದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಗುವುದು, ಅಲ್ಲದೆ ಮನೆಯಲ್ಲಿ ಓದುವ ಮಕ್ಕಳಿದ್ದರೆ ಸರಸ್ವತಿ ಪೂಜೆ ಮಾಡುವುದರಿಂದ ಸರಸ್ವತಿ ಕೃಪೆಯಿಂದ ಅವರ ಕಲಿಕೆಗೆ ಒಳಿತಾಗಲಿದೆ.
ಮನೆಯಲ್ಲಿ ಶಾರದ ದೇವಿಯ ಪೂಜೆ ಮಾಡುವುದರಿಂದ ಜ್ಞಾನರ್ಜಾನೆ ಹೆಚ್ಚಾಗುವುದು. ಗೊಂದಲುಗಳು ದೂರಾಗಿ ವಿವೇಚನೆಯುತ ತೀರ್ಮಾನ ತೆಗೆದುಕೊಳ್ಳಲು ಸಹಾಯವಾಗುವುದು ಎಂದು ಹೇಳಲಾಗುವುದು.

ಈ ವರ್ಷ ಸರಸ್ವತಿ ಪೂಜೆಯನ್ನು ಅಕ್ಟೋಬರ್ 10ಕ್ಕೆ ಆಚರಿಸಲಾಗುವುದು
ಸರಸ್ವತಿ ಪೂಜೆ ಅಕ್ಟೋಬರ್ 10
ಪೂಜೆಯ ಮುಹೂರ್ತ
ಪೂರ್ವ ಆಷಾಢ ನಕ್ಷತ್ರ ಪ್ರಾರಂಭ : ಅಕ್ಟೋಬರ್ 10 ಬೆಳಗ್ಗೆ 05:15ರಿಂದ ಪ್ರಾರಂಭ
ಪೂರ್ವ ಆಷಾಢ ನಕ್ಷತ್ರ ಮುಕ್ತಾಯ: ಅಕ್ಟೋಬರ್ 11 ಬೆಳಗ್ಗೆ 05:41ಕ್ಕೆ ಮುಕ್ತಾಯ
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ!
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ!!
ಈ ಮಂತ್ರ ಪಠಣೆ ಮಾಡುತ್ತಾ ಸರಸ್ವತಿ ಪೂಜೆಯನ್ನು ಮಾಡಲಾಗುವುದು. ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಶಾರದೆಯನ್ನು ಪೂಜಿಸಲಾಗುವುದು. ಸರಸ್ವತೆ ದೇವಿ ಅನಕ್ಷರತೆ, ಅಜ್ಞಾನವನ್ನು ಹೋಗಲಾಡಿಸುವ ದೇವರು ಸರಸ್ವತಿ. ಕರ್ನಾಟಕದಲ್ಲಿ ಸರಸ್ವತಿ ಪೂಜೆಯನ್ನು ತುಂಬಾನೇ ವಿಕೃಂಭಣೆಯಿಂದ ಆಚರಿಸುತ್ತಾರೆ.
ಸರಸ್ವತಿಯನ್ನು ಪ್ರತಿಷ್ಥಾಪಿಸಿ ಪೂಜಿಸಲಾಗುವುದು
ಮನೆಯನ್ನು ಸ್ವಚ್ಛಗೊಳಿಸಿ ಬಳಿಕ ಸರಸ್ವತಿ ಫೋಟೊವನ್ನು ಇಟ್ಟು ಹೂಗಳಿಂದ ಸಿಂಗರಿಸಲಾಗುವುದು. ಧರ್ಮಗ್ರಂಥಗಳು ಸೇರಿದಂತೆ ಓದುವ ಪುಸ್ತಕಗಳನ್ನು ಇಡಲಾಗುವುದು. ನಂತರ ಮೊದಲಿಗೆ ಗಣೇಶನಿಗೆ ಪೂಜೆ ಮಾಡಿ, ಬಳಿಕ ದೇವಿ ಸರಸ್ವತಿಯನ್ನು ಪೂಜಿಸಿ.
ಸರಸ್ವತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸುವುದಾದರೆ
ಸರಸ್ವತಿ ಪೂಜೆಗೆ ಮೊದಲು ಸರಸ್ವತಿಯನ್ನು ಆವಾಹನೆ ಮಾಡಬೇಕು: ಸರಸ್ವತಿಯನ್ನು ಆವಾಹನೆ ಮಾಡಬೇಕು
ಸರಸ್ವತಿ ಪೂಜೆ: ಸರಸ್ವತಿಗೆ ಹೂವು, ಹಣ್ಣುಗಳು, ಸಿಹಿತಿಂಡಿಯನ್ನು ಅರ್ಪಿಸಬೇಕು, ದೇವಿಯ ಮಂತ್ರಗಳನ್ನು ಹೇಳುತ್ತಾ ಪೂಜಿಸಬೇಕು.
ಸರಸ್ವತಿ ಬಲಿದಾನ: ಜ್ಞಾನಾರ್ಜನೆಗೆ ದೇವಿಯಲ್ಲಿ ಪ್ರಾರ್ಥಿಸಿ
ನಂತರ ಸರಸ್ವತಿ ವಿಸರ್ಜನೆ: ಸರಸ್ವತಿಯ ಮಣ್ಣಿನ ಮೂರ್ತಿಯನ್ನು ಪೂಜಾ ವಿಧಾನಗಳ ಮೂಲಕ ವಿಸರ್ಜನೆ ಮಾಡಬೇಕು.
ಸರಸ್ವತಿ ಪೂಜೆಯನ್ನು ಮಾಡುವುದರಿಂದ ಈ ಪ್ರಯೋಜನಗಳಿವೆ:
ಜ್ಞಾನವನ್ನು ಹೆಚ್ಚಿಸುತ್ತದೆ: ಸರಸ್ವತಿ ಪೂಜೆ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದು. ಜ್ಞಾನಾರ್ಜನೆ ಹೆಚ್ಚಾಗುವುದು, ಕಲಿಯಲು ಹೆಚ್ಚಿನ ಅವಕಾಶಗಳು ದೊರೆಯುವುದು.
ಕಲಿಕೆಯಲ್ಲಿ ಸಾಧನೆ ಮಾಡ್ತಾರೆ: ಮನೆಯಲ್ಲಿ ಓದುವ ಮಕ್ಕಳಿದ್ದರೆ ಸರಸ್ವತಿ ಪೂಜೆ ಮಾಡುವುದರಿಂದ ಕಲಿಕೆಯಲ್ಲಿ ಸಾಧನೆ ಮಾಡುತ್ತಾರೆ. ಅವರು ಓದಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ, ಮಕ್ಕಳಲ್ಲಿ ಶಿಸ್ತು ಬೆಳೆಯುವುದು.
ವೃತ್ತಿ ಕೌಶಲ್ಯ ಹೆಚ್ಚಾಗುವುದು: ನಮ್ಮಲ್ಲಿ ವೃತ್ತಿ ಕೌಶಲ್ಯ ಹೆಚ್ಚಾಗಲು ಸರಸ್ವತಿಯ ಕೃಪೆ ಬೇಕು. ಇನ್ನು ಸಂಗಿತ ಕ್ಷೇತ್ರ ಮತ್ತಿತರ ಕಲಾ ಕ್ಷೇತ್ರದಲ್ಲಿ ನಮ್ಮ ಕೌಶಲ್ಯ ಹೆಚ್ಚಾಗಲು ಸರಸ್ವತಿ ಶಕ್ತಿಯನ್ನು ನೀಡುತ್ತಾಳೆ ಎಂದು ನಂಬಲಾಗಿದೆ.
ಧಾರ್ಮಿಕ ಒಲವು ಹೆಚ್ಚಾಗುವುದು: ಧರ್ಮವು ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಧರ್ಮದ ಒಲವು ನಮ್ಮನ್ನು ಪಾಪ- ಪುನ್ಯಗಳ ಪರಿಕಲ್ಪನೆ ಮೂಡಿಸುತ್ತದೆ, ಪಾಪದ ಕಾರ್ಯ ಮಾಡಲು ಭಯ ಬಂದರೆ ಕೆಟ್ಟ ಕಾರ್ಯಗಳನ್ನು ಮಾಡಲು ಹೋಗುವುದಿಲ್ಲ.
ಆತ್ಮವಿಶ್ವಾಸ ಹೆಚ್ಚಾಗುವುದು:
ಸರಸ್ವತಿ ಪೂಜೆಯಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಸಂವಹನ ಕೌಶಲ್ಯ ಬೆಳೆಯುತ್ತದೆ. ತಾವು ಕಲಿಕೆಯಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸರಸ್ವತಿಯ ಕೃಪೆ ಇರುತ್ತದೆ.



Click it and Unblock the Notifications