Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Doctors Day: ದೇಶದ ಗಮನ ಸೆಳೆದಿರುವ 5 ರೂಪಾಯಿಗೆ ಚಿಕಿತ್ಸೆ ನೀಡುವ ಶಂಕರೇಗೌಡರು!
ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯೋ ನಾರಯಣೋ ಹರಿ ಎಂಬ ಮಾತಿನಂತೆ ಜೀವ ಉಳಿಸುವವರನ್ನು ದೇವರಿಗೆ ಹೋಲಿಸಲಾಗುತ್ತದೆ. ಭೂಮಿಯಲ್ಲಿ ಜೀವ ಉಳಿಸುವಂತಹ ಪುಣ್ಯ ಕಾರ್ಯ ಮಾಡುವ ವೈದ್ಯರನ್ನು ದೇವರೆಂದೇ ಕರೆಯಲಾಗಿದೆ. ಹಾಗೆ ವೈದ್ಯರ ಸೇವೆಯನ್ನು ನೆನೆಯಲು ಅವರಿಗೆ ಗೌರವ ಸೂಚಿಸುವ ಉದ್ದೇಶವಾಗಿ ನಾವು ಜುಲೈ 1ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರತಿಯೊಂದು ಹಳ್ಳಿ, ಗ್ರಾಮ, ಪಟ್ಟಣ ವೈದ್ಯರಿಂದ ಸುಭಿಕ್ಷವಾಗಿರಲಿದೆ ಎಂದು ನಂಬಲಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದ ಹಿಡಿದು ಅತೀ ದೊಡ್ಡ ಶಸ್ತ್ರ ಚಿಕಿತ್ಸೆಗೂ ನೀವು ವೈದ್ಯರ ಬಳಿ ತೆರಳುತ್ತೀರಿ. ವೈದ್ಯರ ಸಲಹೆ ಸೂಚನೆಗಳ ಅನುಸರಿಸುತ್ತೀರಿ. ವರ್ಷದ 365 ದಿನಗಳ ಕಾಲ ಕೆಲಸ ಮಾಡುವ ಅವರನ್ನು ಗೌರವಿಸಲು ಹಾಗೆ ನೆನೆಯಲು ಈ ದಿನವನ್ನು ಮೀಸಲಿಡಲಾಗಿದೆ.

ಹಾಗೆ ಈ ದಿನ ನಾವು ಸಮಾಜಕ್ಕೆ, ಜನರಿಗೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ನೆನೆಯುವುದು ಅಗತ್ಯವಾಗಿದೆ. ಹೀಗಾಗಿ ನಾವಿಂದು ಇಡೀ ರಾಜ್ಯದಲ್ಲಿ ವಿಶಿಷ್ಟ ಸೇವೆಯಿಂದ ಹೆಸರಾಗಿದ್ದ 5 ರೂಪಾಯಿ ವೈದ್ಯ ಎಂದೇ ಪ್ರಸಿದ್ಧರಾಗಿದ್ದ ಮಂಡ್ಯದ ಶಂಕರೇಗೌಡರ ಕುರಿತಾಗಿ ತಿಳಿದುಕೊಳ್ಳೋಣ.
ತಮ್ಮ ಜೀವಮಾನದ ಉದ್ದಕ್ಕೂ ಕೇವಲ 5 ರೂಪಾಯಿಗೆ ಜನರಿಗೆ ಆರೋಗ್ಯ ಸೇವೆ ನೀಡಲು ಉದ್ದೇಶಿಸಿದ್ದ ಅಪರೂಪದ ಹಾಗೆ ಅತ್ಯಂತ ಸಮಾಜಮುಖಿ ವೈದ್ಯರಲ್ಲಿ ಇವರು ಕೂಡ ಒಬ್ಬರು. ಮಂಡ್ಯದ 5 ರೂಪಾಯಿ ವೈದ್ಯರು ಎಂದೇ ಪ್ರಸಿದ್ಧರಾದ ಶಂಕರೇಗೌಡರು ರೋಗಿಗಳಿಂದ ಕೇವಲ 5 ರೂಪಾಯಿ ಪಡೆದು ಚಿಕಿತ್ಸೆ ನೀಡುವ ಮೂಲಕ ಮನೆ ಮಾತಾಗಿದ್ದಾರೆ.
ಬರೋಬ್ಬರಿ 45 ವರ್ಷಗಳ ಕಾಲ ಕೇವಲ 5 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಏಕೈಕ ಹಾಗೂ ವಿಶಿಷ್ಟ ವೈದ್ಯರು. ಅಲ್ಲಿನ ಜನರು ಕೂಡ ಅವರ ಬಳಿಕ ಚಿಕಿತ್ಸೆ ಪಡೆಯಲು ನಿತ್ಯ ನೂರಾರು ಮಂದಿ ಬರುತ್ತಿದ್ದರು. ಆದ್ರೆ ಅವರು ಯಾರ ಬಳಿಯೂ 5 ರೂಪಾಯಿಗಿಂತ ಹೆಚ್ಚು ಪಡೆದಿಲ್ಲ. ಇದು ಅವರ ಕೆಲಸ ಹಾಗೂ ಸಮಾಜದ ಕುರಿತಾಗಿ ಇದ್ದ ಸೇವಾ ಮನೋಭಾವ ತೋರಿಸುತ್ತದೆ.
ಮಂಡ್ಯ ಜಿಲ್ಲೆಯ ಶಿವಳ್ಳಿ ಬಳಿ ತಾರಾ ಎಂಬ ಕ್ಲೀನಿಕ್ ಹೊಂದಿರುವ ಅವರು ಕೇವಲ 5 ರೂಪಾಯಿಗೆ ಚಿಕಿತ್ಸೆ ನೀಡುತ್ತಾರೆ. ಅವರ ತಂದೆಯ ಮಾತಿನಂತೆ ಅವರು ಕೇವಲ 5 ರೂಪಾಯಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದರಂತೆ. ಮುಂದೆ ಬರೋಬ್ಬರಿ 45 ವರ್ಷಗಳ ಕಾಲ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ. ಅವರ ಸಮಾಜಮುಖಿ ಕಾರ್ಯ ಗುರುತಿಸಿ ಅವರಿಗೆ 'ಇಂಡಿಯನ್ ಆಫ್ ದಿ ಇಯರ್-2022' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ಶಂಕರೇಗೌಡರು
ಶಂಕರೇಗೌಡರು ಸಮಾಜಸೇವೆ ಹಾದಿ ಆಯ್ಕೆ ಮಾಡಿಕೊಂಡ ಬಳಿಕ ಅವರು ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದರು, ಸುತ್ತ ಮುತ್ತ ಅವರು ಹೆಸರಾಗಿದ್ದರಿಂದ ಚುನಾವಣೆ ಜಯಿಸಿ ಮತ್ತಷ್ಟು ಸಮಾಜಸೇವೆಗೆ ಪ್ರಯತ್ನಿಸಿದ್ದರು. ಇದರ ಫಲವಾಗಿ ಅವರು ಮಂಡ್ಯ ಜಿಲ್ಲಾ ಪಂಚಾಯಿತಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೆ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಸೋಲು ಅನುಭವಿಸಿದರು.
ಇನ್ನು ಮೇ 2022ರಲ್ಲಿ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಗುಣಮುಖರಾಗಿದ್ದರು. ಅವರಿಗೆ ಹೃದಯಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೇವರಲ್ಲಿ ಹರಕೆ ಹೊತ್ತಿದ್ದರು. ಶೀಘ್ರ ಗುಣಮುಖರಾಗಿ ಬರಲಿ ಎಂದು ಪೂಜೆ ಸಲ್ಲಿಸಿದ್ದರು.



Click it and Unblock the Notifications
