Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
ನೀವು ಇನ್ಫೋಸಿಸ್ ಕಂಪನಿ ಬಗ್ಗೆ ಕೇಳುತ್ತೀರಿ. ಸಾಫ್ಟ್‌ವೇರ್ ಲೋಕದ ದಿಗ್ಗದ ಸಂಸ್ಥೆ, ಭಾರತದ ಅದರಲ್ಲೂ ಕರ್ನಾಟದಕ ಹೆಮ್ಮೆಯ ಸಂಸ್ಥೆ ಅದು. ಇನ್ನು ಇನ್ಫೋಸಿಸ್ ಅಂದ ತಕ್ಷಣ ನಮಗೆ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾ ಮೂರ್ತಿ ಅವರು ನೆನೆಪಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ದಂಪತಿ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ.
ಕಳೆದ 15 ದಿನಗಳ ಹಿಂದೆ ಸುಧಾ ಮೂರ್ತಿಗೆ ರಾಜ್ಯಸಭಾ ಸದಸ್ಯತ್ವ ನೀಡಲಾಗಿತ್ತು, ಮಹಿಳಾ ದಿನಾಚರಣೆಯಂದು ಅವರಿಗೆ ಈ ಗೌರವ ಒಲಿದು ಬಂದಿತ್ತು. ಇದಕ್ಕೂ ಮೊದಲು ಅವರು ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಅವರ ಕುಟುಂಬದ ಮೊಮ್ಮಗ ಸುದ್ದಿಯಾಗಿದ್ದಾರೆ. ಹೌದು ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಮಗ ಏಕಾಗ್ರಹ್ ಈಗ ಕೋಟಿ ಕೋಟಿ ಆಸ್ತಿಯ ಮಾಲಿಕನಾಗಿದ್ದಾನೆ.

ನಿಮಗಿದು ಅಚ್ಚರಿ ಎನಿಸಬಹುದು, ನಾರಾಯಣ ಮೂರ್ತಿ ಮೊಮ್ಮಗನಿಗೆ ಇನ್ನು ಕೇವಲ 4 ತಿಂಗಳು ಅಷ್ಟೇ ಈಗಲೇ ಆತನಿಗೆ ಬರೋಬ್ಬರಿ 240 ಕೋಟಿ ಆಸ್ತಿ ಇದೆ. ಇದು ಹೇಗೆ ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಹುಟ್ಟಬಹುದು. ನಾರಾಯಣ ಮೂರ್ತಿ ಅವರು ತಮ್ಮ 4 ತಿಂಗಳ ಮೊಮ್ಮಗ ಏಕಾಗ್ರಹ್‌ಗೆ 240 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಷೇರುಗಳನ್ನು ಸ್ವಾಧೀನಪಡಿಸಿಕೊಂಡ ನಂತರ, ಏಕಾಗ್ರಹ್ ಭಾರತದ ಮಿಲಿಯನೇರ್‌ಗಳ ಪಟ್ಟಿಯಲ್ಲಿ ತನ್ನ ಹೆಸರು ನೋಂದಾಯಿಸಿದ್ದಾನೆ.
ಎಕಾಗ್ರಹ್ ಈಗ ಇನ್ಫೋಸಿಸ್‌ನ 15,00,000 ಷೇರುಗಳನ್ನು ಹೊಂದಿದ್ದಾನೆ ಎಂದು ಎಕ್ಸ್‌ಚೇಂಜ್ ಫೈಲಿಂಗ್ ಬಹಿರಂಗಪಡಿಸಿದೆ, ಇದು ಕಂಪನಿಯಲ್ಲಿ 0.04 ಶೇಕಡಾ ಪಾಲನ್ನು ಹೊಂದಿದಂತಾಗಿದೆ. 1.51 ಕೋಟಿ ಷೇರುಗಳನ್ನು ಹೊಂದಿರುವ ಟೆಕ್ ಕಂಪನಿಯಲ್ಲಿ ನಾರಾಯಣ ಮೂರ್ತಿ ಅವರ ಷೇರುಗಳು ಶೇ. 0.40 ರಿಂದ ಶೇ. 0.36ಕ್ಕೆ ಇಳಿದಿದೆ.
ಏಕಾಗ್ರಹ್ ಹೆಸರಿನ ಅರ್ಥವೇನು?
ನಾರಾಯಣ ಮೂರ್ತಿ ಅವರ ಮೂರನೇ ಮೊಮ್ಮಗನಿಗೆ ಏಕಾಗ್ರಹ್ ಎಂದು ಹೆಸರಿಸಲಾಗಿದೆ. ಇದು ಮಹಾಭಾರತದಲ್ಲಿನ ಅರ್ಜುನ ಪಾತ್ರದ ಒಂದು ಹೆಸರಂತೆ. ಸಂಸ್ಕ್ರತದಲ್ಲಿ ಇದಕ್ಕೆ ಅಚಲವಾದ, ದೃಢ ಎಂಬ ಅರ್ಥ ಬರುತ್ತದೆ. ಕನ್ನಡದಲ್ಲಿ ನಾವು ಏಕಾಗ್ರತೆ ಎನ್ನಬಹುದು.
ಇನ್ಫೋಸಿಸ್ ಬಗ್ಗೆ
1981 ರಲ್ಲಿ 10,000 ರೂ. ಹೂಡಿಕೆ ಮಾಡುವ ಮೂಲಕ ಇನ್ಫೋಸಿಸ್ ಕಂಪನಿ ಹುಟ್ಟಿಕೊಂಡಿತ್ತು. ಆದ್ರೆ ಈಗ ಭಾರತದ ಎರಡನೇ ಅತೀ ದೊಡ್ಡ ಟೆಕ್ ಕಂಪನಿಯಾಗಿ ಬದಲಾಗಿದೆ. ನಾರಾಯಣ ಮೂರ್ತಿಯವರ ದೂರದೃಷ್ಟಿಯ ನಾಯಕತ್ವ, ಸುಧಾ ಮೂರ್ತಿಯವರ ಅಚಲ ಬೆಂಬಲದೊಂದಿಗೆ ಇನ್ಫೋಸಿಸ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದೆ, ಕಂಪನಿ ತಾನು ಬೆಳೆದ ಹಾದಿಯಲ್ಲಿ ಅಸಂಖ್ಯಾತ ವ್ಯಕ್ತಿಗಳಿಗೆ ಸಂಪತ್ತು ಮತ್ತು ಅವಕಾಶವನ್ನು ಸೃಷ್ಟಿಸಿದೆ.
ಸುಧಾ ಮೂರ್ತಿ ಅವರು ಸಾಮಾನ್ಯ ಲೇಖಕಿ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ಫೋಸಿಸ್‌ನ ಆರಂಭಿಕ ದಿನಗಳಲ್ಲಿ ತಮ್ಮ ಎಲ್ಲಾ ಉಳಿತಾಯವನ್ನು ಕಂಪನಿಗಾಗಿ ಅವರು ನೀಡಿದ್ದರಂತೆ. ಇನ್ಫೋಸಿಸ್ ಫೌಂಡೇಶನ್ ಅನ್ನು ಮುನ್ನಡೆಸಲು 25 ವರ್ಷಗಳನ್ನು ಮೀಸಲಿಟ್ಟ ನಂತರ, ಅವರು ಡಿಸೆಂಬರ್ 2021ರಲ್ಲಿ ಅವರು ಸ್ವಯಂ ನಿವೃತ್ತರಾದರು.
ಹೊರಬಂದಿದೆ ನಾರಾಯಣ ಮೂರ್ತಿ ಅವರ ಜೀವನ ಚರಿತ್ರೆ
ಅಮೇರಿಕಾ ಮೂಲದ ಭಾರತೀಯ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ನಾರಾಯಣ ಮೂರ್ತಿ ಅವರ ಜೀವನ ಚರಿತ್ರೆ ಬರೆದಿದ್ದಾರೆ. 'An Uncommon Love: The Early Life of Sudha and Narayana Murthy' ಎಂಬ ಪುಸ್ತಕ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಈ ಪುಸ್ತಕವನ್ನು ಸುಧಾಮೂರ್ತಿ ಅವರು ಇದೇ ವರ್ಷ ಲೋಕಾರ್ಪಣೆ ಮಾಡಿದ್ದರು.
ನಾರಾಯಣ ಮೂರ್ತಿ ಅವರ ಈ ಜೀವನಚರಿತ್ರೆ ಪುಸ್ತಕದಲ್ಲಿ ಅವರ ಬಾಲ್ಯದಿಂದ ಹಿಡಿದು ಇಂದಿನವರೆಗೆ ಅವರ ಜೀವನ ಪ್ರಯಾಣವನ್ನು ಬರೆಯಲಾಗಿದೆ. ಅವರ ಜೀವನದ ಟರ್ನಿಂಗ್ ಪಾಯಿಂಟ್ ಆಗಿದ್ದ ಇನ್ಫೋಸಿಸ್ ಭಾಗವನ್ನು ನಾರಾಯಣಮೂರ್ತಿ ಅವರು ಲೇಕಕರ ಬಳಿ ಚರ್ಚಿಸಿದ್ದರಂತೆ.



Click it and Unblock the Notifications











