Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ಅಕ್ಷರದಿಂದ ಶುರುವಾಗುವ ಹೆಸರಿನವರ ಮೇಲೆ ಕುಬೇರನ ಕೃಪೆ ಸದಾ ಇರುತ್ತಂತೆ!
ಹಿಂದೂ ಧರ್ಮದಲ್ಲಿ ಮಕ್ಕಳಿಗೆ ಹೆಸರಿಡುವಾಗ ಅವರ ಜಾತಕದ ಅಕ್ಷರದ ಆಧಾರದ ಮೇಲೆಯೇ ಇಡಲಾಗುತ್ತದೆ. ಯಾಕಂದ್ರೆ ವೈದಿಕ ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ವೃತ್ತಿ, ಪ್ರೇಮ ಜೀವನ ಮತ್ತು ಭವಿಷ್ಯವನ್ನು ಅವನ ಹೆಸರಿನಿಂದ ಶುರುವಾಗುವ ಅಕ್ಷರದಿಂದ ತಿಳಿಯಬಹುದು. ಸಾಮಾನ್ಯವಾಗಿ ಮಕ್ಕಳು ಜನಿಸಿದಾಗ ಗ್ರಹಗಳು ಮತ್ತು ನಕ್ಷತ್ರಪುಂಜಗಳನ್ನು ನೋಡಿ ಮಗುವಿನ ರಾಶಿಯನ್ನು ನಿರ್ಧರಿಸಲಾಗುತ್ತದೆ. ಅದರ ಆಧಾರದ ಮೇಲೆ ಮಕ್ಕಳಿಗೆ ಹೆಸರಿಡಲಾಗುತ್ತದೆ.
ಅದರಲ್ಲಿ ಕೆಲವು ಅಕ್ಷರಗಳೆಂದರೆ ಕುಬೇರ ದೇವನಿಗೆ ತುಂಬಾನೇ ಇಷ್ಟವಂತೆ. ಅವರ ಮೇಲೆ ಕುಬೇರ ದೇವನ ಆಶೀರ್ವಾದ ಸದಾ ಇರುತ್ತಂತೆ. ಯಾರ ಮೇಲೆ ಕುಬೇರ ದೇವನ ಆಶೀರ್ವಾದ ಇರುತ್ತದೆಯೋ ಅವರು ಉತ್ತಮ ರೀತಿಯಲ್ಲಿ ಜೀವನ ಸಾಗಿಸೋದಕ್ಕೆ ಸಾಧ್ಯವಾಗುತ್ತದೆ. ಅಷ್ಟಕ್ಕು ಕುಬೇರ ದೇವನ ಆಶೀರ್ವಾದ ಇರುವ ಆ ಅಕ್ಷರಗಳು ಯಾವುದು ಅನ್ನೋದನ್ನು ತಿಳಿಯೋಣ.

'ಎ' ಅಕ್ಷರ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಹೆಸರು 'ಎ' ಅಕ್ಷರದಿಂದ ಆರಂಭ ಆಗುತ್ತದೆಯೋ ಅವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. 'ಎ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಹಾಗೂ ಇವರು ಕಷ್ಟಪಟ್ಟು ದುಡಿಯುತ್ತಾರೆ. ಪ್ರತಿಯೊಂದು ಕೆಲಸ ಮಾಡಬೇಕಾದರೂ ಸಂಪೂರ್ಣ ಪ್ರಯತ್ನ ಹಾಕಿ, ಪರಿಪೂರ್ಣವಾಗಿ ಕೆಲಸ ಮಾಡುತ್ತಾರೆ.
'ಎ' ಅಕ್ಷರದಿಂದ ಯಾರ ಹೆಸರು ಶುರುವಾಗುತ್ತದೆಯೋ ಆ ವ್ಯಕ್ತಿಗಳಿಗೆ ಹಣದ ಕೊರತೆ ಎಂದಿಗೂ ಎದುರಾಗೋದಿಲ್ಲ. ಅವರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಯಾವ ಸಂದರ್ಭದಲ್ಲೂ ಕುಬೇರ ದೇವನು ಅವರ ಕೈ ಬಿಡೋದಿಲ್ಲ. ಹೀಗಾಗಿ ಇವರು ಯಾವಾಗಲೂ ಜೀವನದಲ್ಲಿ ಸುಖವನ್ನೇ ಕಾಣುತ್ತಾರೆ.
'ಕೆ ' ಅಕ್ಷರ
ವೈದಿಕ ಜ್ಯೋತಿಷ್ಯದ ಪ್ರಕಾರ 'ಕೆ' ಅಕ್ಷರದಿಂದ ಶುರುವಾಗುವ ಹೆಸರಿನವರು ತುಂಬಾ ಭಾವೋದ್ರಿಕ್ತರು ಮತ್ತು ಮೊಂಡುತನವನ್ನು ಹೊಂದಿರುತ್ತಾರೆ. ಇವರ ಸ್ವಭಾವ ಹೇಗೆಂದರೆ ಇವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಅದೃಷ್ಟ ಯಾವಾಗಲೂ ಇವರ ಹಿಂದೆಯೇ ಇರುತ್ತದೆ. ಕುಬೇರ ದೇವನ ಕೃಪೆ ಸದಾ ಇವರ ಮೇಲೆ ಇರೋದ್ರಿಂದ ಇವರು ಎಲ್ಲಾ ಭೌತಿಕ ಸೌಕರ್ಯಗಳನ್ನು ಪಡೆಯುತ್ತಾರೆ. ಇವರ ಜೀವನದಲ್ಲಿ ಯಾವುದೇ ವಿಚಾರಕ್ಕೂ ಕೊರತೆ ಅನ್ನೋದು ಇರೋದಿಲ್ಲ.
'ಎಸ್' ಅಕ್ಷರ
ವೈದಿಕ ಜ್ಯೋತಿಷ್ಯದ ಪ್ರಕಾರ 'ಎಸ್' ಅಕ್ಷರದಿಂದ ಶುರುವಾಗುವ ಹೆಸರಿನವರು ಬುದ್ಧಿವಂತರು ಮತ್ತು ಜ್ಞಾನಿಗಳಾಗಿರುತ್ತಾರೆ. ಪ್ರತಿಯೊಂದು ವಿಚಾರವನ್ನೂ ತಿಳಿದುಕೊಳ್ಳಬೇಕೆಂದು ಇವರು ಹಂಬಲಿಸುತ್ತಾರೆ. ಮುಖ್ಯವಾಗಿ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಇವರಲ್ಲಿ ಹೆಚ್ಚಾಗಿದೆ. ಇವರಲ್ಲಿರುವ ಬುದ್ಧಿವಂತಿಕೆಯಿಂದಲೇ ಇವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಕುಬೇರ್ ದೇವನ ಆಶೀರ್ವಾದ ಯಾವಾಗಲೂ ಇವರ ಮೇಲೆ ಇರುತ್ತದೆ. ಹಾಗೂ ಯಾವ ಕಾರಣಕ್ಕೂ ಕುಬೇರ ದೇವ ಇವರ ಕೈ ಬಿಡೋದಿಲ್ಲ.
ದುಡ್ಡು ಗಳಿಸೋದಕ್ಕೆ ನೂರಾರು ಮಾರ್ಗಗಳು ಇದ್ದರೂ ಕೂಡ ಇವರು ನ್ಯಾಯ ಮಾರ್ಗದಲ್ಲೇ ಸಾಗಿ ಹಣ ಸಂಪಾದನೆ ಮಾಡುತ್ತಾರೆ. ಇವರು ಅಂದುಕೊಂಡ ಕೆಲಸಗಳನ್ನು ಮಾಡದೇ ಬಿಡುವವರಲ್ಲ. ಒಂದು ಸಾರಿ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವವರಲ್ಲ. ಹಾಗೂ ಜೀವನದಲ್ಲಿ ಖಂಡಿತ ಯಶಸ್ಸನ್ನು ಕಂಡುಕೊಳ್ಳುತ್ತಾರೆ.
'ಬಿ' ಅಕ್ಷರ
ವೈದಿಕ ಜ್ಯೋತಿಷ್ಯದ ಪ್ರಕಾರ 'ಬಿ' ಅಕ್ಷರದಿಂದ ಶುರುವಾಗುವ ಹೆಸರಿನವರು ಬುದ್ಧಿವಂತರಾಗಿರುತ್ತಾರೆ. ಹಾಗೂ ಇವರು ತುಂಬಾನೇ ಶ್ರಮ ಜೀವಿಗಳು. ಗುರಿಯನ್ನು ಸಾಧಿಸುವ ಉದ್ದೇಶದಿಂದ ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರು ತಮ್ಮ ಶ್ರಮದ ಆಧಾರದ ಮೇಲೆ ಸಂಪತ್ತನ್ನು ಗಳಿಸುತ್ತಾರೆ. ಮತ್ತು ಸಮಾಜದಲ್ಲಿ ಗೌರವದ ಸ್ಥಾನಕ್ಕೇರುತ್ತಾರೆ. ಇವರ ಮನಸ್ಸು ತುಂಬಾನೇ ಒಳ್ಳೆಯದು. ಇತರರಿಗೆ ಯಾವಾಗಲೂ ಸಹಾಯ ಮಾಡಲು ಮುಂದಿರುತ್ತಾರೆ. ಇದರಿಂದ ಕುಬೇರ ದೇವನ ಕೃಪೆ ಸದಾ ಇವರ ಮೇಲಿರುತ್ತದೆ.
ಹಣ ಸಂಪಾದನೆಗಾಗಿ ಇವರು ತುಂಬಾ ಕಷ್ಟ ಪಡಬೇಕಾಗಿಲ್ಲ. ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಲಕ್ಷ್ಮೀ ತಾನಾಗಿಯೇ ಇವರ ಬಳಿಗೆ ಬರುತ್ತಾಳೆ. ಸಾಮಾನ್ಯವಾಗಿ ಇವರ ಸ್ವಭಾವ ಎಲ್ಲರಿಗೂ ಇಷ್ಟ ಆಗುವ ರೀತಿಯಲ್ಲೇ ಇರುತ್ತದೆ. ಒಬ್ಬರ ಮನಸ್ಸಿಗೆ ನೋವು ಮಾಡುವವರಲ್ಲ ಇವರು.
ಒಟ್ಟಿನಲ್ಲಿ ಈ ನಾಲ್ಕು ಅಕ್ಷರದವರ ಮೇಲೆ ಕುಬೇರ ದೇವನ ಕೃಪೆ ಸದಾ ಇರುತ್ತಂತೆ. ಇವರಿಗೆ ಯಾವುದೇ ಕಷ್ಟ ಬಾರದಂತೆ ಕುಬೇರ ದೇವ ಕಾಯುತ್ತಾನಂತೆ.



Click it and Unblock the Notifications
