Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
Nagara Panchami: ಪ್ರಕೃತಿಯೊಂದಿಗೆ ನಾಗಾರಾಧನೆ..! ವೈವಿಧ್ಯತೆಯ ಪ್ರತೀಕ ಈ ನಾಗರಪಂಚಮಿ!
ಹಿಂದೂಗಳ ಪಾಲಿನ ಹಲವು ಪವಿತ್ರ ಹಬ್ಬಗಳ ಪೈಕಿ ನಾವು ನಾಗರ ಪಂಚಮಿಯನ್ನು ಕೂಡ ಅದ್ದೂರಿಯಾಗಿಯೇ ಆಚರಿಸುತ್ತೇವೆ. ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಆರಂಭವಾಗುವ ಮೊದಲ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ನಾಗರ ಪಂಚಮಿ ಹಬ್ಬ ಮುಗಿದ ಬಳಿಕ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಹೀಗಾಗಿ ಹಬ್ಬಗಳ ಆರಂಭಕ್ಕೆ ನಾಗರ ಪಂಚಮಿಯು ದಾರಿ ಮಾಡಿ ಕೊಡುವುದು ನಾವು ಗಮನಿಸಬಹುದು.
ಪ್ರತಿಯೊಬ್ಬ ಹಿಂದೂಗಳು ಕೂಡ ಈ ನಾಗರ ಪಂಚಮಿಯನ್ನು ಆಚರಿಸುತ್ತಾರೆ. ಅಂದು ನಾಗರ ದೇವಾಲಗಳಿಗೆ ಭಕ್ತರ ದಂಡು ಹರಿದುಬರುವುದು ನೋಡಬಹುದು. ಈ ವರ್ಷ ಇದೇ ಜುಲೈ 29ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವರಿಗೆ ವಿಶೇಷ ಪೂಜೆ ಮಾಡುವುದು ನೋಡಬಹುದು. ಆ ದಿನ ನಾಗರ ದೇವಾಲಯಗಳಲ್ಲಿ ವಿಶೇಷ ಪೂಜೆ, ಹಾಲೆರೆಯುವುದು ನೋಡಬಹುದು.

ಆದ್ರೆ ದೇಶದ ಎಲ್ಲಾ ಭಾಗದಲ್ಲು ಈ ಹಬ್ಬವನ್ನು ಆಚರಿಸಲಾದರು ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಾಗಿ ಈ ಹಬ್ಬವನ್ನು ಆಚರಿಸುವುದುಂಟು. ಭಾರತ ವೈವಿಧ್ಯತೆಯ ರಾಷ್ಟ್ರವಾಗಿದ್ದು, ಈ ಹಬ್ಬವನ್ನು ಕೂಡ ವಿಶೇಷ ಹಾಗೆ ವಿಭಿನ್ನ ರೀತಿಯಲ್ಲಿ ಆಚರಿಸುವುದು ನೋಡಬಹುದು.
ಇನ್ನು ಉತ್ತರ ಭಾರತ ಹಾಗೆ ದಕ್ಷಿಣ ಭಾರತ ಎಂದು ಪರಿಗಣಿಸಿದರೆ ಉತ್ತರ ಭಾರತದಲ್ಲಿ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇದು ದಕ್ಷಿಣ ಭಾರತದಲ್ಲೂ ಆಚರಿಸುವ ಶೈಲಿಗಿಂತಲೂ ವಿಭಿನ್ನವಾಗಿದೆ. ಹಾಗಾದ್ರ ನಾವಿಂದು ಉತ್ತರ ಭಾರತದಲ್ಲಿ ಆಚರಿಸುವ ಈ ಹಬ್ಬವು ದಕ್ಷಿಣ ಭಾರತಕ್ಕಿಂತಲೂ ಹೇಗೆ ಭಿನ್ನವಾಗಿದೆ ಎಂದು ತಿಳಿದುಕೊಳ್ಳೋಣ.
ಉತ್ತರ ಭಾರತದಲ್ಲಿ ಹೇಗೆ ಆಚರಿಸುತ್ತಾರೆ?
ನಾಗ ಪಂಚಮಿ ಪ್ರಾಚೀನ ಪುರಾಣಗಳಲ್ಲಿ ಬೇರೂರಿದೆ ಮತ್ತು ವಿವಿಧ ದಂತಕಥೆಗಳು ಮತ್ತು ಜಾನಪದ ಕಥೆಗಳೊಂದಿಗೆ ಸಂಬಂಧ ಹೊಂದಿರುವುದು ನೋಡಬಹುದು. ನಾಗರ ಹಾವನ್ನು ಪೂಜಿಸುವುದರಿಂದ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ.
ಮಹಾರಾಷ್ಟ್ರದಲ್ಲಿದೆ ವಿಶೇಷ ತಿಂಡಿಯ ಹಬ್ಬ
ನಾಗರ ಪಂಚಮಿಯನ್ನು ಮಹಾರಾಷ್ಟ್ರದ ಪಾಥೋಲಿ ಎಂಬ ಅಕ್ಕಿ ಹಿಟ್ಟು, ತೆಂಗಿನಕಾಯಿ ಮತ್ತು ಬೆಲ್ಲದಿಂದ ತಯಾರಿಸಿದ ಸಾಂಪ್ರದಾಯಿಕ ಸಿಹಿ ಖಾದ್ಯ ಮಾಡಲಾಗುತ್ತದೆ. ಅದ್ರಲ್ಲೂ ಅರಶಿಣದ ಎಲೆಯಲ್ಲಿ ಈ ತಿಂಡಿ ಮಾಡಿ ಹಬ್ಬದಲ್ಲಿ ಸವಿಯಲಾಗುತ್ತದೆ. ಕರ್ನಾಟಕದ ಕರಾವಳಿ ಭಾಗದಲ್ಲೂ ಈ ರೀತಿಯ ಸಂಪ್ರದಾಯವಿದೆ.
ಜೇಡಿ ಮಣ್ಣಿನ ಹಾವಿಗೆ ಇಲ್ಲಿ ಪೂಜೆ
ಉತ್ತರ ಪ್ರದೇಶ ಹಾಗೂ ಬಿಹಾರದ ಕೆಲವು ಭಾಗದಲ್ಲಿ ಜೇಡಿ ಮಣ್ಣನಿಂದ ನಾಗರ ಹಾವಿನ ಮೂರ್ತಿಯನ್ನು ಮಾಡಲಾಗುತ್ತದೆ. ಬಳಿಕ ಈ ಮೂರ್ತಿಗೆ ಪೂಜೆ ಮಾಡುವ ವಿಶೇಷ ಸಂಪ್ರದಾಯವಿದೆ. ಈ ಮೂರ್ತಿಗೆ ಹಾಲು, ಖೀರು, ಹಣ್ಣು ಸೇರಿ ವಿಶೇಷ ಖಾದ್ಯಗಳ ಅರ್ಪಿಸಲಾಗುತ್ತದೆ.
ಮರದ ಸರ್ಪಕ್ಕಿದೆ ವಿಶೇಷ ಪೂಜೆ
ಗುಜರಾತ್ ಹಾಗೂ ಮಹಾರಾಷ್ಟ್ರದ ಉತ್ತರ ಭಾಗದಲ್ಲಿ ನಾಗರ ವಿಗ್ರಹವನ್ನು ಮರದಿಂದ, ಬೆಳ್ಳಿ, ಕಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ಜೀವಂತ ಹಾವುಗಳನ್ನು ಪೂಜಿಸುವ ಜನರು ಒಂದು ವಾರದ ಮೊದಲು ಅವುಗಳನ್ನು ಸೆರೆಹಿಡಿದು, ಅವುಗಳಿಗೆ ಕೇಸರಿ ಭರಿತ ಹಾಲು ಹಾಗೂ ಜೇನುತುಪ್ಪ ಬೆರೆಸಿ ಕುಡಿಸುತ್ತಾರೆ. ಈ ದಿನ ಮನೆ ಮನೆಗೆ ತಾವು ಹಿಡಿದ ಹಾವನ್ನು ಹಿಡಿದುಕೊಂಡು ಹೋಗಿ ಭಿಕ್ಷೆ ಬೇಡುತ್ತಾರೆ. ಹಾಗೆ ಕುತ್ತಿಗೆಗೆ ಸುತ್ತಿಕೊಳ್ಳುವುದು ಬುಟ್ಟಿಯಲ್ಲಿ ಹಿಡಿದುಕೊಂಡು ಮನೆಯ ಮುಂದೆ ಅವುಗಳನ್ನು ಪ್ರದರ್ಶಿಸುತ್ತಾರೆ.
ಇನ್ನು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್, ಅಸ್ಸಾಂನಂತಹ ರಾಜ್ಯಗಳಲ್ಲಿ ಸರ್ಪ ಪೂಜೆ ವಿಶೇಷ ಎನಿಸಿದೆ. ಇಲ್ಲಿ ಮಹಿಳೆಯೊಬ್ಬರು ಕುಳಿತಿರುವಂತೆ ಮೇಲೆ 7 ಹೆಡೆಯ ಹಾವು ಆಕೆಯ ರಕ್ಷಣೆ ಮಾಡಿರುವಂತಹ ಮೂರ್ತಿ ನೋಡಬಹುದು. ಈ ನಾಗರ ಪಂಚಮಿಯಂದು ಇಲ್ಲಿ ಮಹಿಳೆಯನ್ನು ಕೂಡ ಪೂಜಿಲಾಗುತ್ತದೆ. ಮನೆಯಲ್ಲಿ ಪೂಜಿಸಲು ಮರದಿಂದ ಮಾಡಿದ ಗೊಂಬೆ, ಚಿಕ್ಕದಾದ ಕಲ್ಲನ್ನೂ ಮಹಿಳೆ ಎಂದು ಪರಿಗಣಿಸಲಾಗುತ್ತದೆ.
ಭಯ ಹುಟ್ಟಿಸುವ ಸಿಂಘಿತಾ ಘಾಟ್ ಆಚರಣೆ
ಬಿಹಾರದ ಸಮಸ್ತಿಪುರದಲ್ಲಿ ನಾಗರ ಪಂಚಮಿ ಅಂಗವಾಗಿ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಜೀವಂತ ಹಾವುಗಳನ್ನೇ ಜನರು ಕೈಯಲ್ಲಿ ಹಿಡಿದುಕೊಂಡು ಬೆಟ್ಟ ಹತ್ತಿ ಬರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಉತ್ಸಾಹದಿಂದ ಭಾಗಿಯಾಗುತ್ತಾರೆ. ಇದು ಸುಮಾರು 300 ವರ್ಷ ಹಳೆಯ ಆಚರಣೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಹಾವುಗಳು ಹಾನಿ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗೆ ಈ ಹಾವುಗಳನ್ನು ಅವರು ಮನೆಯಲ್ಲಿ ಸಾಕಿರುತ್ತಾರೆ ಎಂದು ಕೂಡ ಹೇಳಲಾಗಿದೆ. ಬೆಟ್ಟದ ಮೇಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಾಸು ತೆರಳುತ್ತಾರೆ.
ದಕ್ಷಿಣ ಭಾರತದಲ್ಲೂ ವಿಶೇಷ ಆಚರಣೆ
ದಕ್ಷಿಣ ಭಾರತದಲ್ಲಿಯೂ ನಾಗರ ಪಂಚಮಿ ವಿಶೇಷ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕಲ್ಲಿನ ನಾಗರ ಹಾಗೆ ಮರದ ನಾಗರಗಳಿಗೆ ವಿಶೇಷ ಪೂಜೆ ಇರಲಿದೆ, ಆದ್ರೆ ಕೆಲವು ಕಡೆ ಜೀವಂತ ಹಾವುಗಳಿಗೂ ಪೂಜೆ ಮಾಡುವುದು ನೋಡಬಹುದು. ಈ ದಿನ ಹಾವುಗಳು ವಾಸವಿರು ಹುತ್ತಗಳಿಗೆ ಪೂಜೆ ಮಾಡುತ್ತಾರೆ. ಹಾಗೆ ಆ ಹುತ್ತದ ಮಣ್ಣನ್ನು ಪ್ರಸಾದವಾಗಿ ಹಚ್ಚಿಕೊಳ್ಳುವುದು ವಿಶೇಷ. ಹುತ್ತವನ್ನು ಹೂವಿನಿಂದ ಅಲಂಕರಿಸಿ ಅರಶಿಣ ಕುಂಕುಮ ಹಚ್ಚಿ, ಸಕ್ಕರೆ ಹಾಲು ಎರೆಯುವುದು ನೋಡಬಹುದು.
ಈ ರೀತಿ ನಾಗರ ಪಂಚಮಿ ದಿನ ಹುತ್ತಕ್ಕೆ ಹಾಲು ಎರೆಯುವುದರಿಂದ ಮಕ್ಕಳಿಲ್ಲದಿದ್ದರೆ ಮಕ್ಕಳಾಗುತ್ತದೆ. ಚರ್ಮ ರೋಗ ನಿವಾರಣೆ ಆಗಲಿದೆ ಎಂದು ನಂಬಲಾಗಿದೆ. ಹಾಗೆ ದಕ್ಷಿಣ ಭಾರತದಲ್ಲಿ ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಹಬ್ಬವು ಅಣ್ಣ ತಂಗಿ ಇಬ್ಬರೂ ಸೇರಿ ಪೂಜಿಸುವ ಹಬ್ಬವೆಂಬ ಪ್ರತೀತಿಯೂ ಇದೆ.
ಜಾನಪದ ಕಥೆ ಏನು ಹೇಳುತ್ತೆ?
ಜಾನಪದ ಕಥೆಯೊಂದರ ಪ್ರಕಾರ ಈ ನಾಗರ ಪಂಚಮಿ ಹಬ್ಬ ಹಾಗೂ ಪ್ರಕೃತಿಗೂ ನೇರ ಸಂಬಂಧವಿದೆ. ಈ ಅವಧಿಯಲ್ಲಿ ರೈತನ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುತ್ತವೆ. ರೈತನ ಬೆಳೆಗಳಿಗೆ ಕೀಟಗಳ ಕಾಟ, ಹುಳುಗಳ ಕಾಟವಿರುತ್ತದೆ. ಹಾಗೆ ಇಲಿಗಳು ಕೂಡ ಬೆಳೆ ಹಾನಿಗೆ ಮುಂದಾಗುತ್ತವೆ. ಈ ಸಮಯದಲ್ಲಿ ಬೆಳೆಯನ್ನು ಕಾಪಾಡಲೆಂದು ರೈತರು ಹಾವುಗಳ ಪೂಜಿಸಲು ಮುಂದಾದರು ಎಂದು ಹೇಳಲಾಗಿದೆ.



Click it and Unblock the Notifications



