Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಾಗರ ಪಂಚಮಿ 2024: ಆಗಸ್ಟ್ 9ಕ್ಕೆ ನಾಗನಿಗೆ ಪೂಜೆ ಸಲ್ಲಿಸಲು ಶುಭ ಮುಹೂರ್ತ ಯಾವಾಗ?
ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ನಾಗರಪಂಚಮಿ ಹಬ್ಬ ಬರುತ್ತಿದೆ, ನಾಗರ ಪಂಚಮಿಯಿಂದ ಸಾಲು-ಸಾಲು ಹಬ್ಬಗಳು ಶುರುವಾಗುವುದು. ರಕ್ಷಾ ಬಂಧನ, ಗೌರಿ- ಗಣೇಶ ಹಬ್ಬ, ದಸರಾ, ದೀಪಾವಳಿ ಅಂತ ಸಾಲು ಸಾಲು ಹಬ್ಬಗಳಿವೆ, ಪ್ರತಿಮಾಸವೂ ಹಬ್ಬದ ಸಡಗರವೇ. ನಾಗರ ಪಂಚಮಿ ಹಬ್ಬ ಹೆಣ್ಮಕ್ಕಳಿಗೆ ತುಂಬಾನೇ ವಿಶೇಷವಾಗಿದೆ, ಈ ದಿನ ಹಾವಿನ ಮೂರ್ತಿ ಅಥವಾ ಹಾವಿನ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ.
ನಾಗರ ಪಂಚಮಿ ಹಬ್ಬ ಯಾವಾಗ, ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ:

ಹಿಂದೂ ಪಂಚಾಂಗ ಪ್ರಕಾರ ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುವುದು.
ನಾಗರ ಪಂಚಮಿ ಪೂಜಾ ಮುಹೂರ್ತ: ಆಗಸ್ಟ್ 9 ಬೆಳಗ್ಗೆ 06:07ರಿಂದ 8:38ರವರೆಗೆ.
ಪಂಚಮಿ ತಿಥಿ ಮುಕ್ತಾಯ: ಅಗಸ್ಟ್ 10 ಮುಂಜಾನೆ 03:14ಕ್ಕೆ
ನಾಗರ ಪಂಚಮಿಯಂದು ನಾಗನಿಗೆ ಪೂಜೆ
ಈ ಸಮಯದಲ್ಲಿ ಕೃಷಿ ಚಟುವಟಿಕೆ ನಡೆಯುವ ಸಮಯ, ಈ ಸಮಯದಲ್ಲಿ ಹಾವುಗಳು ಏನೂ ತೊಂದರೆ ಮಾಡದಿರಲಿ ಎಂದು ಪ್ರಾರ್ಥಿಸಿ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುವುದು.
ನಾಗರ ಪಂಚಮಿ ಹಬ್ಬವನ್ನು ಹೇಗೆ ಆಚರಿಸಲಾಗುವುದು?
ಈ ಸಮಯದಲ್ಲಿ ಮದುವೆ ಮಾಡಿಕೊಟ್ಟ ಹೆಣ್ಮಕ್ಕಳು ತವರಿಗೆ ಬಂದು ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಈ ದಿನ ಹಿಟ್ಟಿನಿಂದ ಹಾವಿನ ಮೂರ್ತಿ ಮಾಡಿ ಅಥವಾ ಹುತ್ತಕ್ಕೆ ಹಾಲೆರೆದು ಬರ್ತಾರೆ. ಜೊತೆಗೆ ನೈವೇದ್ಯ ಕೂಡ ಅರ್ಪಿಸುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲಡೆ ಆಚರಿಸುತ್ತಾರೆ.
ಅಣ್ಣ- ತಂಗಿಯ ಬಾಂಧವ್ಯ ಸಾರುವ ಹಬ್ಬ:
ಅಣ್ಣ ಹೋಗಿ ತಂಗಿಯನ್ನು ತವರಿಗೆ ಕರೆದುಕೊಂಡು ಬರುತ್ತಾನೆ, ಅವಳು ಖುಷಿಯಿಂದ ತವರಿಗೆ ಬಂದು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ನಂತರ ತವರಿಗೆ ಹರಿಸಿ, ಅರಿಶಿಣ ಕುಂಕುಮ ಪಡೆದು ತನ್ನ ಗಂಡನ ಮನೆಗೆ ಹಿಂತಿರುಗುತ್ತಾಳೆ.
ಕೆಲವರು ಹಿಟ್ಟಿನಿಂದ ನಾಗರಹಾವಿನ ಆಕಾರ ಮಾಡಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಬಂದು ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಪೂಜಿಸುವುದರಿಂದ ನಾಗದೋಷವಿದ್ದರೆ ನಿವಾರಣೆಯಾಗುವುದು ಎಂದು ಹೇಳಲಾಗುವುದು.
ಅವಾಹಿತ ಹೆಣ್ಮಕ್ಕಳು ಕಂಕಣ ಭಾಗ್ಯ ಕೋರಿ ನಾಗನನ್ನು ಆರಾಧಿಸುತ್ತಾರೆ
ಕಂಕಣ ಭಾಗ್ಯ ಕೂಡಿ ಬರದಿದ್ದರೆ ಈ ದಿನ ಹಾಲೆರೆದರೆ ಜಾತಕದಲ್ಲಿನ ದೋಷ ದೂರಾಗುವುದು, ಕಂಕಣ ಭಾಗ್ಯ ಕೂಡಿ ಬರುವುದು ಎಂದು ಹೇಳಲಾಗುವುದು.
ತಿಳಿಯದೆ ಹಾವಿಗೆ ನೋವು ಮಾಡಿದ್ದರೆ ಈ ದಿನ ಪರಿಹಾರ ಮಾಡುತ್ತಾರೆ
ಹಾವಿನ ದೋಷ ಒಳ್ಳೆಯದಲ್ಲ ಎಂದು ಹೇಳಲಾಗುವುದು, ಕೆಲವೊಮ್ಮೆ ತೋಟದಲ್ಲಿ ಕೆಲಸ ಕಾರ್ಯವನ್ನು ಮಾಡುವಾಗ ಗುದ್ದಲಿಯಿಂದ ಅಗೆಯುವಾಗ ಗೊತ್ತಿಲ್ಲದೆ ಹಾವಿಗೆ ನೋವಾಗಿದ್ದರೆ ಹಾವಿನ ಸಾಪ ತಗುಲುವುದು, ಆ ಶಾಪ ಪರಿಹಾರವಾಗುವುದು ಎಂದು ಹೇಳಲಾಗುವುದು.
ಈ ದಿನ ಭೂಮಿಯನ್ನು ಅಗೆಯಬಾರದು ಹೇಳಲಾಗುವುದು
ನಾಗರಪಂಚಮಿಯಂದು ಭೂಮಿಯನ್ನು ಅಗೆಯಬಾರದು ಎಂದು ಹೇಳಲಾಗುವುದು.



Click it and Unblock the Notifications
