Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಲ ಮುರುಗನ್ ದೇವರಿಗೆ ಮಂಚ್ ನೈವೇದ್ಯ..! ಇಲ್ಲಿ ಚಾಕೊಲೇಟ್ ಪ್ರಿಯ ಪ್ರಸಾದ..ಏಕೆ ಗೊತ್ತಾ?
ನಾವು ಭಾರತದಲ್ಲಿ ವಿಶೇಷವಾದ ದೇವಾಲಯಗಳ ನೋಡಿರುತ್ತೀರಿ. ಕೆಲವೊಂದು ಎಷ್ಟೊಂದು ವಿಶೇಷ ಆಚರಣೆಗಳ ನಡೆಸಿಕೊಂಡು ಬರುತ್ತಿವೆ ಎಂದು ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ. ಈಗ ಇಲ್ಲೊಂದು ದೇವಾಲಯದಲ್ಲಿ ವರ್ಷಗಳಿಂದಲೂ ದೇವರಿಗೆ ಮಂಚ್ ಚಾಕಲೇಟ್‌ನಿಂದ ನೈವೇದ್ಯ ಮಾಡುತ್ತಾರೆ.
ಕೇರಳದ ಅಲಪ್ಪುಳದಲ್ಲಿ ಮಂಚ್ ಮುರುಗನ್ ದೇವಸ್ಥಾನದಲ್ಲಿ ಮಂಚ್ ಚಾಕೊಲೇಟ್ ಅನ್ನು ಹಾರವನ್ನಾಗಿ ಮಾಡಿ ಹಾಕಲಾಗುತ್ತದೆ. ಈ ರೀತಿಯ ಅಚ್ಚರಿಯ ಸಂಪ್ರದಾಯ ವರ್ಷಗಳಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ಮಂಚ್ ಚಾಕೊಲೇಟ್ ತೆಗೆದುಕೊಂಡು ಬರುತ್ತಾರೆ.

ಬಾಲ ಮುರುಗನ್ ಅನ್ನು ಇಲ್ಲಿನ ಭಕ್ತರು ಇನ್ನೂ ಬಾಲಕ ಎಂದು ಪರಿಗಣಿಸಿದ್ದಾರೆ. ಹೀಗಾಗಿ ಆತನ ಆರ್ಶೀವಾದ ಪಡೆಯಲು ಚಾಕೊಲೇಟ್ ಅನ್ನು ಅರ್ಪಿಸುತ್ತಾರೆ. ದೇವಾಲಯದ ಅಧಿಕಾರಿಗಳ ಪ್ರಕಾರ, ಆರು ವರ್ಷಗಳ ಹಿಂದೆ ಮಂಚ್ ಚಾಕೋಲೆಟ್ ಅರ್ಪಿಸುವ ಸಂಪ್ರದಾಯ ಆರಂಭಗೊಂಡಿತ್ತಂತೆ. 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಧರ್ಮ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್‌ಗಳ ಪೆಟ್ಟಿಗೆಗಳೊಂದಿಗೆ ದೇಗುಲಕ್ಕೆ ಬರುತ್ತಾರೆ.
ಅನೂಪ್ ಎ ಚೆಮ್ಮೋತ್, ಎಂಬಾತರ ಕುಟುಂಬವು ಈ ದೇವಾಲಯವನ್ನು ನಿರ್ವಹಿಸುತ್ತಿದೆ, ಪ್ರಸ್ತುತ ಭಕ್ತರು ಚಾಕೊಲೇಟ್‌ಗಳನ್ನು ಅರ್ಪಿಸುವ ಅಭ್ಯಾಸವು ಸುಮಾರು ಆರು ವರ್ಷಗಳ ಹಿಂದೆ ಪ್ರಾರಂಭವಾಯಿತು, ದೇವಾಲಯದ ಬಳಿ ವಾಸಿಸುವ ಪುಟ್ಟ ಮುಸ್ಲಿಂ ಹುಡುಗನೊಬ್ಬ ದೇವರಿಗೆ ಮಂಚ್ ಚಾಕೊಲೇಟ್ ಅನ್ನು ಅರ್ಪಿಸಿದ್ದನು. ಆತ ಈ ಚಾಕೊಲೇಟ್ ಬಿಟ್ಟು ಬೇರೆ ಏನನ್ನೂ ನೀಡಲು ನಿರಾಕರಿಸುತ್ತಿದ್ದ, ಈತನ ನೋಡುತ್ತಿದ್ದ ಮಂದಿ ಬಳಿಕ ಅವರೂ ಸಹ ಈ ಚಾಕೊಲೇಟ್ ತರಲು ಮುಂದಾದರು ಈಗ ಇಲ್ಲಿಗೆ ಬರುವ ಪ್ರತಿಯೊಬ್ಬರು ಚಾಕೊಲೇಟ್ ಹಿಡಿದೇ ಬರುತ್ತಾರೆ ಎಂದು ಅನೂಪ್ ಹೇಳಿದ್ದಾರೆ.
ಒಮ್ಮೆ ಹುಡುಗ ಆಟವಾಡುವಾಗ ತಪ್ಪಾಗಿ ದೇವಾಲಯದ ಗಂಟೆ ಬಾರಿಸಿದ್ದ. ಇದರಿಂದ ಆತನ ಪೋಷಕರು ಆತನಿಗೆ ಹೆದರಿಸಿ ಈ ರೀತಿ ಮಾಡಬಾರದು ಎಂದಿದ್ದರು. ಈ ವೇಳೆ ಆತ ತುಂಬಾ ಭಯ ಪಟ್ಟಿದ್ದ. ಅಲ್ಲದೆ ಮುರುಗನ್ ದೇವರ ಹೆಸರು ಹೇಳತೊಡಗಿದ. ಹೀಗಾಗಿ ಮಾರನೆ ದಿನ ಆತನ ಪೋಷಕರು ದೇವಾಲಯಕ್ಕೆ ಬಂದು ಹಣ್ಣು, ಎಣ್ಣೆ ಅರ್ಪಿಸಿದ್ದರು. ಆದರೆ ಆ ಹುಡುಗ ಚಾಕೊಲೇಟ್ ಅರ್ಪಿಸಿದ್ದ. ಬಾಲಕ ಅರ್ಪಿಸಿದ್ದನ್ನು ಬೇಡವೆನ್ನದೆ ಅಲ್ಲಿದ್ದ ಅರ್ಚಕರು ಸ್ವೀಕರಿಸಿದ್ದರು. ಮುಂದೆ ಇದೊಂದು ದೊಡ್ಡ ವಿಚಾರವಾಗಿ ಹರಡಿತು ಎಂದು ಮಂಚ್ ಚಾಕೊಲೇಟ್ ವಿಚಾರದ ಕುರಿತು ಅನೂಪ್ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಈ ಸಂಪ್ರದಾಯ ದೊಡ್ಡ ಮಟ್ಟಕ್ಕೆ ಮುಟ್ಟಿದೆ. ಕೆಲವರು ಒಂದು ಬುಟ್ಟಿ ತುಂಬಾ ಚಾಕೊಲೇಟ್ ತಂದು ಅರ್ಪಿಸುತ್ತಾರಂತೆ, ಅಲ್ಲದೆ ತಲಾಭಾರಕ್ಕೂ ಚಾಕೊಲೇಟ್ ಇಟ್ಟು ಕೆ.ಜಿ ಗೂ ಅಧಿಕ ಚಾಕೊಲೇಟ್ ನೀಡುತ್ತಾರೆ. ಹಲವು ಸಮಯದಲ್ಲಿ ದೇವಾಲಯದ ತುಂಬಾ ಚಾಕೊಲೇಟ್ ತುಂಬಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ಪ್ರಸಾದವಾಗಿಯೂ ಚಾಕೊಲೇಟ್ ನೀಡಲಾಗುತ್ತದೆ.
ಈಗ ಈ ದೇವಾಲಯವನ್ನು ಮಂಚ್ ಮುರುಗನ್ ಎಂದೇ ಕರೆಯಲಾಗುತ್ತದೆ. ಅದ್ರಲ್ಲೂ ಮನೆಯಲ್ಲಿರುವ ಮಕ್ಕಳು ಯಾವುದಾದರು ಸಮಸ್ಯೆಗೆ ಒಳಗಾದರೆ ಈ ಬಾಲ ಮುರುಗನ ದೇವಾಲಯಕ್ಕೆ ಭೇಟಿ ನೀಡಬೇಕು. ಭೇಟಿ ವೇಳೆ ಆತನಿಗೆ ಚಾಕೊಲೇಟ್ ಅರ್ಪಿಸಬೇಕು ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳಿಗೆ ಸಮರ್ಪಿತವಾದ ಆಹಾರಗಳಿವೆ. ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ , ಗಣೇಶನಿಗೆ ಲಡ್ಡು ಹೀಗೆ ಒಂದೊಂದು ದೇವರಿಗೆ ಒಂದೊಂದು ಪ್ರಿಯ ಆಹಾರ ಸಮರ್ಪಿತವಾಗಿದೆ. ಇದೇ ರೀತಿ ಈ ಮುರುಗನ್ ದೇವಾಲಯದಲ್ಲಿ ಚಾಕೊಲೇಟ್ ಪ್ರಿಯವಾದ ವಸ್ತು ಎಂದು ಪರಿಗಣಿಸಲಾಗಿದೆ.



Click it and Unblock the Notifications
