Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಕನ್ನಡಿಗರಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಮುಂಬೈ ವ್ಯಕ್ತಿ: ಈ ಪುಕಲನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೆಂಗಳೂರು ಸಿಟಿ ಪೊಲೀಸ್
ಇತ್ತೀಚೆಗಷ್ಟೇ ಇನ್‌ಫ್ಲೂನ್ಸರ್ ಎಂದು ಹೇಳಿಕೊಂಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದವಳು ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಕನ್ನಡಿಗರು ಸರಿಯಾಗಿಯೇ ಪಾಠ ಕಲಿಸಿದ್ದಾರೆ, ಇದೀಗ ಇವನ ಸರದಿ. ಬಾಯಿಗೆ ಬಂದಂತೆ ಕನ್ನಡಿಗರ ಬಗ್ಗೆ ಮಾತನಾಡಿದ್ದಾನೆ. ಬಹುಶಃ ತಾನು ಹೀಗಲ್ಲಾ ಹೇಳಿದರೆ ನಾನು ವೈರಲ್ ಆಗಬಹುದು, ನನ್ನ ರೀಚ್ ಜಾಸ್ತಿಯಾಗಬಹುದು ಎಂಬ ದುರಾಲೋಚನೆಯಿಂದಾಗಿ ಈತ ಇಂಥ ಕೃತ್ಯ ಮಾಡಿದ್ದಾನೆ, ಏನೇ ಆಗಲಿ ಪೊಲೀಸರು ಈತನ ವಿರುದ್ಧ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸಿದ್ದಾರೆ.

ಹೊರಗಿನವರಿಗೆ ಬದುಕಲು ಕನ್ನಡ ನೆಲ ಬೇಕು ಆದರೆ ಕನ್ನಡ ಭಾಷೆ ಬೇಡ, ಅಲ್ಲಾ ಯಾರೂ ಇವರನ್ನು ಬನ್ನಿ ನಮ್ಮ ಕರ್ನಾಟಕಕ್ಕೆ ಎಂದು ಕರೆಯುತ್ತಿಲ್ಲ, ಇಲ್ಲ ನೀವು ಕನ್ನಡ ಸ್ಪಷ್ಟವಾಗಿ ಮಾತನಾಡಲೇಬೇಕು ಎಂದು ಹೇಳುತ್ತಿಲ್ಲ, ನಾನು ಕನ್ನಡ ಮಾತನಾಡಲ್ಲ ಎಂಬ ಧಿಮಾಕು ತೋರಬೇಡಿ ಎಂದಷ್ಟೇ ಹೇಳುತ್ತಿರುವುದು. ಉತ್ತರ ಭಾರತದವರು ಬೆಂಗಳೂರಿನಲ್ಲಿ ಸಾಕಷ್ಟು ಜನರಿದ್ದಾರೆ, ಅವರಲ್ಲಿ ಬಂದು ಬಹುತೇಕ ವರ್ಷಗಳೇ ಕಳೆದಿದ್ದರೂ ಕನ್ನಡ ಬರುತ್ತಿಲ್ಲ ಹಾಗಂತ ಏಕೆ ಕನ್ನಡ ಮಾತನಾಡುತ್ತಿಲ್ಲ ಎಂದು ಯಾರೂ ಅವರನ್ನ ಪ್ರಶ್ನೆ ಮಾಡುತ್ತಿಲ್ಲ, ನಮ್ಮವರು ಅವರ ಜೊತೆ ಕನ್ನಡದಲ್ಲಿ ಮಾತನಾಡಿದರೆ ನಾವೇ ಏನೋ ತಪ್ಪು ಮಾಡಿದವರಂತೆ ವರ್ತಿಸುವುದು ಮಾತ್ರವಲ್ಲ ನಾವ್ಯಾಕೆ ಕನ್ನಡ ಕಲಿಯಬೇಕು ಎಂದು ಅಹಂಕಾರದಿಂದ ವರ್ತಿಸುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಕರ್ನಾಟಕದಲ್ಲಿ ನಮಗೆ ಕನ್ನಡ ಕಲಿಯುವಂತೆ ಟಾರ್ಚರ್ ಮಾಡ್ತಾರೆ ಎಂಬ ಡ್ರಾಮಾ ಬೇರೆ.
ಈತ ಮುಂಬೈಯ ಇನ್‌ಸ್ಟಾಗ್ರಾಮ್ ಬಳಕೆದಾರ, ಆತನೇ ಮಾತುಗಳೇ ಹೇಳುತ್ತೆ ಅವನ್ನೆಷ್ಟು ಪುಕಲ ಅಂತ
ಅವನು ಕನ್ನಡ, ಕರ್ನಾಟಕದ ಬಗ್ಗೆ ಹೇಳುತ್ತಾ ಕನ್ನಡಿಗರನ್ನು ತುಂಬಾನೇ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ, ಅದನ್ನು ಕೂಡ ಅಲ್ಲೇ ಯಾರಾದರೂ ಕನ್ನಡಿಗರು ಇದ್ದು ಕೇಳಿಸಿಕೊಂಡರೆ ನನ್ನ ಗತಿಯೇನಪ್ಪಾ ಎಂಬಂತೆ ಅತ್ತಿತ್ತ ನೋಡುತ್ತಾ ಹೇಳುತ್ತಿದ್ದಾನೆ, ಅವನ ಮಾತುಗಳಲ್ಲಿಯೇ ಆತನೆಷ್ಟು ಪುಕಲ ಎಂಬುವುದು ತಿಳಿಯುತ್ತೆ.
ನಿಜವಾಗಲೂ ಆತನಿಗೆ ಧೈರ್ಯವಿದ್ದಿದ್ದರೆ ಕರ್ನಾಟಕದಲ್ಲಿ ನೆಲಕ್ಕೆ ಬಂದು ಆ ರೀತಿ ಜೋರಾಗಿ ಹೇಳಬೇಕಾಗಿತ್ತು, ಆವಾಗ ತಿಳಿಯುತ್ತಿತ್ತು, ಕನ್ನಡಿಗರೇನು ಎಂಬುವುದು. ಯಾರೋ ಬಾಗಿಲು ಹಾಕಿ ಕುಣಿದರಂತೆ ಆಗಿದೆ ಈತನ ವರ್ತನೆ, ದೂರದ ಮುಂಬೈನಲ್ಲಿಯೋ ಅಥವಾ ಹೊರ ದೇಶದಲ್ಲಿಯೋ ಹೋಗಿ ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ಬೈದ್ದಾಗ ಈತನ ಸ್ಟೋರಿ ವೈರಲ್ ಆಗುತ್ತೆ, ಅದೇ ಉದ್ದೇಶವಷ್ಟೇ ಇವನದ್ದು. ಇಂಥವನ ಅಕೌಂಟ್ ಬ್ಲಾಕ್ ಆಗಬೇಕು...ಬಾಯಿಗೆ ಬಂದಂತೆ ಹೇಳುವುದು ನಂತರ ಕ್ಷಮೆ ಕೇಳುವುದು ಇದು ಇತ್ತೀಚೆಗೆ ಒಂದು ರೀತಿಯ ಫ್ಯಾಷನ್ ಆಗಿ ಬಿಟ್ಟಿದೆ.
ಈತನ ವೀಡಿಯೋ ಹೊರ ಬರುತ್ತಿದ್ದಂತೆ ಬೆಂಗಳೂರಿನ ಸಿಟಿ ಪೊಲೀಸ್ ಮುಂಬೈ ಸಿಟಿ ಪೊಲೀಸ್‌ಗೆ ಹೇಳಿ ಈತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ, ನಾನು ಮುಂಬೈನಲ್ಲಿ ಇದ್ದೀನಿ ನನ್ನನ್ನು ಯಾರೂ ಏನೂ ಮಾಡಲ್ಲ ಅಂದುಕೊಂಡಿದ್ದ ಇವನಿಗೆ ಪೊಲೀಸ್ ತನ್ನ ವಿರುದ್ಧ ಕ್ರಮ ಕೈಗೊಂಡಿದ್ದು ತಿಳಿಯುತ್ತಿದ್ದಂತೆ ನನ್ನೆಲ್ಲಾ ಕನ್ನಡ ಸಹೋದರರು ಹಾಗೂ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಡ್ರಾಮಾ ಮಾಡುತ್ತಿದ್ದಾನೆ.
ಮುಂಬೈ ಪೊಲೀಸ್ ಈತನ ಮನೆಗೆ ಹೋಗಿದ್ದಾಗ ಬಿಸಿ ಮುಟ್ಟಿದೆ
ಮುಂಬೈ ಪೊಲೀಸ್ ಈತನ ಮನೆಗೆ ಹೋಗಿ ಕನ್ನಡಿಗರ ಬಗ್ಗೆ ನೀನು ಮಾಡಿರುವ ವೀಡಿಯೋ ಡಿಲೀಟ್ ಮಾಡು ಇಲ್ಲದಿದ್ದರೆ ಪರಿಣಾಮ ಸರಿಯಿರಲ್ಲ ಎಂದು ಎಚ್ಚರಿಕೆ ನೀಡಿದ ಮೇಲೆ ವೀಡಿಯೋ ಡಿಲೀಟ್ ಮಾಡಿ ಒಂದು ನಾಟಕೀಯ ಕ್ಷಮೆ ವೀಡಿಯೋ ಮಾಡಿದ್ದಾನೆ.
ನೀವು ನಾನು ಕರ್ನಾಟಕದ ಮೇಲೆ ಏನೂ ಹೇಳುವಂತೆ ಇಲ್ಲ ಅಥವಾ ನನ್ನನ್ನು ಕೊ* ಮಾಡ್ತೀನಿ ಅಂತ ಬೆದರಿಕೆ ಹಾಕಿದರೆ......(ಕೆಟ್ಟ ಬೈಗುಳ ಹೇಳಿ) ನಾನು ತುಂಬಾ ವೀಡಿಯೋ ಮಾಡ್ತೀನಿ, ನನಗೆ ಯಾವುದೇ ಭಯವಿಲ್ಲ, ನಿಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದವ ಈಗ ತೆಪ್ಪಗೆ ಕ್ಷಮೆ ಕೇಳಿದ್ದಾನೆ.
Finally an apology has been issued, thanks to the pressure of all Kannadigas and others who stood in support. Thanks to @BlrCityPolice for finally acting on the issue and informing the Mumbai police.pic.twitter.com/pluhVzoIbL https://t.co/40QgueL53X
— Darshan🇮🇳 (@darshan221b) October 29, 2024
ಕನ್ನಡವನ್ನು ದ್ವೇಷಿಸುವವರು ಕರ್ನಾಟಕಕ್ಕೇ ಬರಲೇಬೇಡಿ, ಕನ್ನಡಿಗರು ನಾವು ಎಚ್ಚೆತ್ತುಕೊಳ್ಳದಿದ್ದರೆ ಬೆಂಗಳೂರಿನಲ್ಲಿ ಕನ್ನಡ ಭಾಷೆ ಕಿವಿಗೆ ಬೀಳುವುದು ಅಪರೂಪವಾಗಬಹುದು. 'ಭಾರಿಸು ಕನ್ನಡ ಡಿಂಡಿಮವ' ಬೆಂಗಳೂರಿನಲ್ಲಿ ಈಗ ಕನ್ನಡದ ದೊಡ್ಡ ದೊಡ್ಡ ಫಲಕ ನೋಡುವಾಗ ಎಷ್ಟು ಖುಷಿಯಾಗುತ್ತೋ ಅದೇ ರೀತಿ ಮಾಲ್, ರೆಸ್ಟೋರೆಂಟ್ ಎಲ್ಲಿಯೇ ಹೋದರೂ ನಾವು ಕನ್ನಡದಲ್ಲಿಯೇ ಮಾತನಾಡೋಣ, ನಾವು ಅವರ ಬಳಿ ಅವರ ಭಾಷೆ ಮಾತನಾಡುತ್ತಿರುವುದರಿಂದಲೇ ಕನ್ನಡದ ಬಗ್ಗೆ ಈ ಬಗ್ಗೆಯ ನಿರ್ಲಕ್ಷ್ಯ. ಬೇರೆ ಯಾವುದೇ ರಾಜ್ಯಕ್ಕೆ ಹೋದರೆ ಹೋದ 2-3 ತಿಂಗಳಿನಲ್ಲಿಯೇ ಆ ಭಾಷೆ ಕಲಿತು ಬಿಡುತ್ತೇವೆ, ಏಕೆಂದರೆ ಅಲ್ಲಿಯವರ ಜೊತೆ ಮಾತನಾಡಬೇಕೆಂದರೆ ಕಲಿಯಲೇಬೇಕಾದ ಅನಿವಾರ್ಯತೆ ಇದೆ, ಅದೇ ಅನಿವಾರ್ಯತೆ ನಾವು ಕನ್ನಡಿಗರು ಸೃಷ್ಟಿಸಬೇಕು, ಹೇಗೆ? ನಾವು ಅವರ ಜೊತೆ ಕನ್ನಡ ಬಿಟ್ಟರೆ ಕನ್ನಡದಲ್ಲಿಯೇ ಮಾತನಾಡಬೇಕು....



Click it and Unblock the Notifications