Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜೈ ಶ್ರೀರಾಮ್ ಘೋಷಣೆಯಲ್ಲಿ ಮುಳುಗಿದ ಅಂಬಾನಿ ನಿವಾಸ..! ವಿಡಿಯೋ..!
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಂಡು ಬಾಲ ರಾಮ ದರ್ಶನ ನೀಡಿಯಾಗಿದೆ. ಈ ಸಮಯಕ್ಕಾಗಿ ಇಡೀ ಹಿಂದೂ ಸಮಾಜ ದಶಕಗಳಿಂದ ಕಾದು ಕುಳಿತಿತ್ತು. ಇದೀಗ ಈ ಶುಭಗಳಿಕೆ ಬಂದೊದಗಿದೆ. ಈ ಹಿನ್ನೆಲೆ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಯೊಬ್ಬರಲ್ಲೂ ಹುಮ್ಮಸ್ಸು ಇಮ್ಮಡಿಯಾಗಿತ್ತು.
ಈ ನಡುವೆ ದೇಶದ ಶ್ರೀಮಂತ ವ್ಯಕ್ತಿ ಹಾಗೂ ವಿಶ್ವದ ಅತ್ಯಂತ ಎತ್ತರದ ಮನೆ ಹೊಂದಿರುವ ಮುಖೇಶ್ ಅಂಬಾನಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಂದಿರ ಉದ್ಘಾಟನೆಗೂ ಮುನ್ನ ಅಂಬಾನಿ ಮನೆಯಲ್ಲಿ ವಿಶೇಷ ಹಬ್ಬದಂತೆ ಈ ದಿನವನ್ನು ಆಚರಿಸಲಾಗಿದೆ. ಅವರ ಮನೆಗೆ ಹಾಕಿದ್ದ ದೀಪಾಲಂಕಾರದ ವಿಡಿಯೋ ಈಗ ಎಲ್ಲೆಲ್ಲು ವೈರಲ್ ಆಗಿದೆ.
ಮುಂಬೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ನಿವಾಸ 'ಆಂಟಿಲಿಯಾ' 'ಜೈ ಶ್ರೀ ರಾಮ್' ಘೋಷಣೆಯೊಂದಿಗೆ ತುಂಬಿತ್ತು. ಸುಂದರವಾದ ದೀಪಗಳು ಮತ್ತು ಅಯೋಧ್ಯೆಯ ರಾಮ ಮಂದಿರದ 'ಪ್ರಾಣ ಪ್ರತಿಷ್ಠಾ' ಅಥವಾ ಪ್ರತಿಷ್ಠಾಪನಾ ಸಮಾರಂಭವನ್ನು ಗುರುತಿಸಲು ವರ್ಣರಂಜಿತ ಅಲಂಕಾರಗಳಿಂದ ಬೆಳಗಿತ್ತು.
ಇಡೀ ಮನೆಯ ಮೇಲೆ ಜೈ ಶ್ರೀರಾಮ್, ಜೈ ಭಾರತ್ ಘೋಷ ವಾಖ್ಯಗಳು ರಾರಾಜಿಸಿದ್ದವು. ಇಡೀ ಕಟ್ಟಡ ಕೇಸರಿ ಬಣ್ಣದಿಂದ ಅಲಂಕೃತವಾಗಿತ್ತು. 27 ಅಂತಸ್ತಿನ ಗಗನಚುಂಬಿ ಕಟ್ಟಡವು ಹೊಲೊಗ್ರಾಮ್‌ಗಳು, ಧಾರ್ಮಿಕ ಘೋಷಣೆಗಳು ಮತ್ತು ಅದರ ಮೇಲೆ ಲೈಟ್‌ಗಳು ಭವ್ಯವಾಗಿ ಕಾಣುತ್ತಿತ್ತು.
ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು. 'ಪ್ರಾಣ ಪ್ರತಿಷ್ಠಾ' ವಿಧಿವಿಧಾನಗಳಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಭಾಗವಹಿಸಿದ್ದರು. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.
ದೇವಸ್ಥಾನದ ಆವರಣದಲ್ಲಿ ಚಲನಚಿತ್ರ ತಾರೆಯರು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು, ಕಲಾವಿದರು, ಸಚಿವರು, ಧಾರ್ಮಿಕ ಮುಖಂಡರು ಸೇರಿದಂತೆ ನೂರಾರು ವಿವಿಐಪಿಗಳು ಆಗಮಿಸಿ ಭಕ್ತಿಭಾವ ಮೆರೆದರು. ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟರಾದ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖ ಅತಿಥಿಗಳಾಗಿದ್ದಾರೆ.
51 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ರಚಿಸಿದ್ದಾರೆ. ಈ ವಿಗ್ರಹವು ಭಗವಾನ್ ವಿಷ್ಣುವಿನ ಎಲ್ಲಾ ಹತ್ತು ಅವತಾರಗಳ ಕೆತ್ತನೆಗಳನ್ನು ಒಳಗೊಂಡಿದೆ, ಭಗವಾನ್ ಹನುಮಾನ್ ಮತ್ತು ಇತರ ಪ್ರಮುಖ ಹಿಂದೂ ಧಾರ್ಮಿಕ ಚಿಹ್ನೆಗಳು ಅಡಗಿವೆ.

ಬಾಲರಾಮನ ವಿಗ್ರಹದ ವಿಶೇಷತೆಗಳು
51 ಇಂಚು ಎತ್ತರವಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಈ ಬಿಲ್ಲು-ಬಾಣ ಮತ್ತು ತಿಲಕವು ಚಿನ್ನದಿಂದ ಮಾಡಲ್ಪಟ್ಟಿದೆ.
ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಓಂ, ಆದಿಶೇಷ, ಬ್ರಹ್ಮ, ಚಕ್ರ ಹಾಗೂ ಈಶ್ವರಮ ಕೆತ್ತನೆಯೂ ಇದೆ. ಇನ್ನು ಬಾಲರಾಮನ ಎಡಗಡೆ ಶಂಕ, ಗಧೆ, ಸ್ವಸ್ತಿಕ್, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯ ದೇವನ ಚಿತ್ರವಿದೆ.



Click it and Unblock the Notifications

