Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
22 ವರ್ಷ ಬೆಟ್ಟ ಕೊರೆದು ಊರಿಗಾಗಿ ದಾರಿ ಮಾಡಿದ.! ದಶರತ್ ಮಾಂಝಿ ಎಂಬ ಸಾಹಸಿಗನ ಕಥೆ.!
ಭಗೀರಥ ಋಷಿಯ ದಣಿವರಿಯದ ಶ್ರಮದಿಂದಾಗಿ ಗಂಗಾ ಮಾತೆಯನ್ನೇ ಭೂಮಿಗೆ ಇಳಿಸಿದ ಕಥೆ ನಿಮಗೆಲ್ಲಾ ಗೊತ್ತಿದೆ. ಗಂಗೆಯನ್ನು ಭೂಮಿಗೆ ಇಳಿಸಿದ ಎಂದರೆ ಅದರ ಶ್ರಮವ ಎಂತದ್ದು ಎಂಬುದಾಗಿ ಬಣ್ಣಿಸಲಾಗಿದೆ. ಯಾರಾದರೂ ಕಷ್ಟಪಟ್ಟು ಇಲ್ಲವೆ ನಿರಂತರ ಕೆಲಸ ಮಾಡಿದಾಗ ಗಂಗೆಯನ್ನು ಭೂಮಿಗೆ ಇಳಿಸುವ ಕೆಲಸ ಅದು ಎಂಬ ಮಾತಿನಿಂದ ಹೊಗಳುತ್ತಾರೆ.
ಇದೇ ರೀತಿ ಇಲ್ಲೊಬ್ಬ ಭಗೀರಥನಂತೆ ನಿರಂತರ ಶ್ರಮ ಹಾಕಿ ತನ್ನ ಊರಿಗೆ ರಸ್ತೆಯನ್ನೇ ಮಾಡಿದ್ದಾನೆ. ಅದು ಅಂತಿತಾ ರಸ್ತೆಯಲ್ಲಾ ಇಡೀ ಪರ್ವತಗಳನ್ನೇ ಕಡಿದು ತನ್ನೂರಿಗೆ ದಾರಿ ಮಾಡಿದ್ದಾನೆ. ಈ ಕೆಲಸವೂ ಸಹ ಭಗೀರಥನಿಂದ ಸ್ಫೂರ್ತಿ ಪಡೆದಂತೆ ಕಾಣುತ್ತದೆ. ಏಕೆಂದರೆ ಇಡೀ ತನ್ನ ಜೀವನವನ್ನೇ ಆತ ಬೆಟ್ಟ ಕೊರೆಯಲು ಮೀಸಲಿಟ್ಟಿದ್ದ. ಹಾಗಾದರೆ ಯಾರು ಈ ಆಧುನಿಕ ಭಗೀರಥ? ಏನಿದರ ಕಥೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆತ ಭಾರತದ ಮೌಂಟೇನ್ ಮ್ಯಾನ್, ಇಡೀ ಬೆಟ್ಟವನ್ನು ಏಕಾಂಗಿಯಾಗಿ ಕೊರೆದ ಧೀರ. ಬರೋಬ್ಬರಿ 22 ವರ್ಷಗಳ ಕಾಲ ಆತ ಕಲ್ಲಿನ ಪರ್ವತವನ್ನು ಏಕಾಂಗಿಯಾಗಿ ಕೊರೆದು ದಾರಿ ಮಾಡಿದ್ದ. ಇದು ದಶರತ್ ಮಾಂಝಿ ಎಂಬಾತನ ಸಾಹಸಗಾಥೆ. ಹೌದು ಬಿಹಾರದ ಸಣ್ಣ ಹಳ್ಳಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ದಶರತ್ ಎಂಬಾತ ಪರ್ವತ ಕೊರೆಯಲು ನಿಂತು ಬಿಟ್ಟಿದ್ದ. ಇವನ ನಿರ್ಧಾರ ಕಂಡು ಇಡೀ ಊರಿಗೆ ಊರೇ ಗಹಗಹಿಸಿ ನಕ್ಕಿತ್ತು. ಇವನೊಬ್ಬ ಹುಚ್ಚ ಎಂದು ಆಡಿಕೊಂಡಿತ್ತು.
ಯಾರು ಈ ದಶರತ್ ಮಾಂಝಿ
1934ರಲ್ಲಿ ಜನಿಸಿದ ಮಾಂಝಿ ಬಿಹಾರದ ಗೆಹ್ಲೋರ್ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಬೆಳೆದರು. ಧನ್‌ಬಾದ್‌ನ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡಲು ಅವರು ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿಹೋದರು. ವರ್ಷಗಳ ನಂತರ ಅವರು ತಮ್ಮ ಹಳ್ಳಿಗೆ ಹಿಂದಿರುಗಿ ಅಲ್ಲಿಯೆ ವಿವಾಹವಾದರು.ಫಲ್ಗುಣಿ ದೇವಿ ಎಂಬಾಕೆಯ ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದರು.
ಮಾಂಝಿಯ ಜೀವನವನ್ನು ಬದಲಿಸಿದ ದುರಂತ
1959ರಲ್ಲಿ ಪತ್ನಿ ಫಲ್ಗುಣಿ ಕೆಲಸಕ್ಕೆ ಹೋಗಿದಾಗ ಬೆಟ್ಟದ ಮೇಲಿಂದ ಆಯತಪ್ಪಿ ಬಿದ್ದಳು. ಆದರೆ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಆಗದೆ ಆಕೆ ಸಾವನಪ್ಪಿದಳು. ಇಡೀ ಗ್ರಾಮಕ್ಕೆ ಶಾಪವಾಗಿದ್ದು ಪರ್ವತಗಳು, ಇಡೀ ಗ್ರಾಮದ ಸುತ್ತಲೂ ಕಲ್ಲಿನ ಬೆಟ್ಟಗಳಿದ್ದವು ರಸ್ತೆ ಈ ಪರ್ವತಗಳ ಸುತ್ತಿಕೊಂಡು ಸಾಗಬೇಕಿತ್ತು. ಇದು ಗಂಟೆಗಳ ಕಾಲದ ಪ್ರಯಾಣದ ದಾರಿಯಾಗಿತ್ತು. ಹೀಗಾಗಿ ಆಕೆಗೆ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದೆ ಮೃತಪಟ್ಟಳು.
ಪತ್ನಿ ಸಾವಿನಿಂದ ಬೆಟ್ಟ ಕೊರೆಯಲು ನಿಂತ ದಶರತ್
ಒಂದು ಬೆಟ್ಟ ಕೊರೆದು ತೆಗೆದರೆ ನೂರಾರು ಕಿ.ಮೀ ದೂರದ ಮಾರ್ಗ ಹತ್ತಿರವಾಗಲಿದೆ ಎಂದು ದಶರತ್ ಎಂದುಕೊಂಡಿದ್ದ. ಅಂದು ಕೈಯಲ್ಲಿ ಸುತ್ತಿಗೆ, ಸಣ್ಣ ಆಯುಧಗಳ ಹಿಡಿದು ಪರ್ವತಗಳ ಸಾಲಿನತ್ತ ಹೊರಟಿದ್ದ. ಒಂದೆರಡು ದಿನ ಒಂದು ಬುಟ್ಟಿಯಷ್ಟು ಮಣ್ಣು ತೆಗೆಯುವಾಗ ಆತ ಕುಸಿದು ಬಿದ್ದಿದ್ದ, ಆದರೆ ಛಲ ಬಿಟ್ಟಿರಲಿಲ್ಲ. ಗ್ರಾಮಸ್ಥರೆಲ್ಲಾ ಪತ್ನಿ ತೀರಿಕೊಂಡ ಬಳಿಕ ದಶರತ್ ಮಾನಸಿಕ ರೋಗಿಯಾಗಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ಇಷ್ಟು ದೊಡ್ಡದ ಬೆಟ್ಟ ಕೊರೆಯಲು ಮನುಷ್ಯರಿಂದ ಸಾಧ್ಯವೇ ಇಲ್ಲ ಎಂಬ ಅನಿಸಿಕೆ ಅವರದ್ದಾಗಿತ್ತು.
22 ವರ್ಷ ನಿರಂತರ ಹೋರಾಟ
ದಶರತ್ ನಿರಂತರ 22 ವರ್ಷಗಳ ಕಾಲ ಅದೇ ಬೆಟ್ಟವನ್ನು ಕೊರೆಯುತ್ತಲೇ ಇದ್ದ, ಅದು ಸಹ ಏಕಾಂಗಿಯಾಗಿದೆ. ಕೊನೆಗೊಂದು ದಿನ ಹಳ್ಳಿಯಿಂದ ನಗರಕ್ಕೆ ಮಾರ್ಗ ಹುಡುಕಿಯೇ ಬಿಟ್ಟ. ಮಾಂಝಿ 360 ಅಡಿ ಉದ್ದ, 30 ಅಡಿ ಅಗಲ ಮತ್ತು 25 ಅಡಿ ಎತ್ತರದ ಬೆಟ್ಟದ ಮೂಲಕ ವಜೀರ್‌ಗಂಗ್ ಮತ್ತು ಅತ್ರಿ ನಡುವೆ ಮಾರ್ಗವನ್ನು ಕೊರೆದಿದ್ದ. ಮಾಂಝಿ ಅವರ ಪ್ರಯತ್ನದಿಂದ ಅತ್ರಿಯಿಂದ ವಜಿರ್‌ಗಂಗ್ ದೂರವನ್ನು 55 ಕಿಮೀ ನಿಂದ ಕೇವಲ 15 ಕಿ.ಮೀಗೆ ಇಳಿಸಿತು.
ಕಲ್ಲು ಕೊರೆದವನಿಗೆ ಕ್ಯಾನ್ಸರ್
ನಿರಂತರ 22 ವರ್ಷ ಕಲ್ಲು ಕೊರೆದು ದಾರಿ ಮಾಡಿದ್ದ ಮಹಾತ್ಮನಿಗೆ ಕ್ಯಾನ್ಸರ್ ಆವರಿಸಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ 2007ರಲ್ಲಿ ದೆಹಲಿಯ AIIMS ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಆದರೆ ಅವರ ನೆನಪಿಗಾಗಿ ಅವರ ಹೆಸರಿನಲ್ಲೇ ಬಿಹಾರ ಸರ್ಕಾರ ಆಸ್ಪತ್ರೆ ಕಟ್ಟಿತು. ಜೊತೆಗೆ ಬಿಹಾರ ಸರ್ಕಾರವು 2006 ರಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಅವರ ಹೆಸರನ್ನು ಪ್ರಸ್ತಾಪಿಸಿತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೆಹ್ಲೋರ್‌ನಿಂದ ಮೂರು ಕಿಲೋಮೀಟರ್ ಉದ್ದದ ರಸ್ತೆಯನ್ನು ಮಾಂಝಿ ಹೆಸರಿನಲ್ಲಿ ನಿರ್ಮಿಸಲು ಪ್ರಸ್ತಾಪಿಸಿದ್ದರು. ಅವರ ಜೀವನದ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ಚಲನಚಿತ್ರ ನಿರ್ದೇಶಕ ಕೇತನ್ ಮೆಹ್ತಾ ಅವರನ್ನು ಬಡವರ ಷಹಜಹಾನ್ ಎಂದೂ ಕರೆಯುತ್ತಾರೆ.



Click it and Unblock the Notifications