Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಸತ್ಯೇಂದ್ರ ದಾಸ್ ದೇಹ ಸರಯೂ ನದಿಯಲ್ಲಿ ಜಲಸಮಾಧಿ..! ಯಾಕಾಗಿ ಈ ಸಂಪ್ರದಾಯ ಗೊತ್ತಾ?
ಅಯೋಧ್ಯೆ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು ನಿಧನರಾಗಿರುವುದು ನಿಮಗೆಲ್ಲಾ ತಿಳಿದಿರಬಹುದು. ಬುಧವಾರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 30 ವರ್ಷಕ್ಕೂ ಹೆಚ್ಚು ಕಾಲ ರಾಮನಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು.
ಅಯೋಧ್ಯೆಯ ಈ ಜಾಗ ಸಮಸ್ಯೆ ಹುಟ್ಟಿಕೊಳ್ಳುವ ಮೊದಲೇ ಅವರು ರಾಮನಿಗೆ ಪೂಜೆ ಮಾಡುತ್ತಿದ್ದರು. ಅವರ ನಿಧನಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಂತಾಪ ಸೂಚಿಸಿದ್ದರು. ನಿನ್ನೆ ಅವರ ಅಂತಿಮ ವಿಧಾನ ನಡೆಸಲಾಗಿದೆ. ಆದರೆ ಅವರ ಅಂತ್ಯಸಂಸ್ಕಾರ ಹಲವರಿಗೆ ಅಚ್ಚರಿ ತಂದಿದೆ. ಏಕೆಂದರೆ ಸಾಮಾನ್ಯವಾಗಿ ಅಗ್ನಿ ಸ್ಪರ್ಶ ಮಾಡದೆ ಅವರ ದೇಹವನ್ನು ಜಲ ಸಮಾಧಿ ಮಾಡಲಾಗಿದೆ.

ಸರಯು ನದಿಯಲ್ಲಿ ಅವರ ದೇಹವನ್ನು ಜಲ ಸಮಾಧಿ ಮಾಡಲಾಗಿದೆ. ಕೆಲವರಿಗೆ ಈ ಸಂಪ್ರದಾಯ ನೆರವೇರಿಸಿದ್ಯಾಕೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ನದಿಗೆ ದೇಹ ಎಸೆಯುವ ಪದ್ಧತೆ ಏಕಿದೆ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಹಲವರು ಇದನ್ನು ಪಶ್ನೆ ಮಾಡುತ್ತಿರುವುದು ಕೂಡ ನೋಡಿದ್ದೇವೆ. ಅದ್ರೆ ಈ ರೀತಿ ಜಲಸಮಾಧಿ ಹಿಂದಿನ ಸಂಪ್ರದಾಯ ಕುರಿತು ನಾವಿಂದು ತಿಳಿಸುತ್ತೇವೆ ನೋಡಿ.
ಹಿಂದೂ ಧರ್ಮದಲ್ಲಿ ಸಾಮಾನ್ಯ ಅಗ್ನಿ ಸ್ಪರ್ಶವೇ ಶ್ರೇಷ್ಠ ಎಂದು ನಂಬಲಾಗಿದೆ. ಆದರೆ ಸತ್ಯೇಂದ್ರ ದಾಸ್ ಅವರ ದೇಹವನ್ನು ಸರಾಯು ನದಿಯಲ್ಲಿ ಜಲ ಸಮಾಧಿ ಮಾಡಲಾಗಿದೆ. ನಿನ್ನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರ ದೇಹವನ್ನು ಸಣ್ಣ ಬೋಟ್‌ನಲ್ಲಿ ತೆಗೆದುಕೊಂಡು ಹೋಗಿ ಜಲ ಸಮಾಧಿ ಮಾಡಿರುವ ವಿಡಿಯೋಗಳು ಹರಿದಾಡಿವೆ. ಸನಾತನ ಧರ್ಮದ ಆಚರಣೆಯಲ್ಲಿ ಈ ರೀತಿ ಜಲ ಸಮಾಧಿ ಅಪರೂಪದ ಪದ್ಧತಿಯಲ್ಲಿ ಒಂದಾಗಿದೆ.
ಪ್ರಾಚೀನ ಕಾಲದಲ್ಲಿ ಈ ಜಲಸಮಾಧಿ ಎಂಬ ಪದ್ಧತಿಯೇ ಉತ್ತುಂಗದಲ್ಲಿತ್ತು. ಮೃತರನ್ನು ನೀರಿನಲ್ಲಿ ತೇಲಿಬಿಡುವ ಪದ್ಧತಿ ವರ್ಷಗಳ ಮೊದಲೇ ನಡೆದುಬಂದಿತ್ತು. ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಆತನಿಗೆ ಮೋಕ್ಷ ಸಿಗಬೇಕಾದರ ಪಂಚಭೂತಗಳಲ್ಲಿ ಲೀನ ಮಾಡಬೇಕು ಎಂಬ ಮಾತಿದೆ. ಅದರಂತೆ ಅಗ್ನಿಯಲ್ಲಿ ಅಥವಾ ನೀರಿನ ಮೂಲದಲ್ಲಿ ದೇಹವನ್ನು ಸಮಾಧಿ ಮಾಡಲಾಗುತ್ತದೆ.
ಇನ್ನು ಜಲಸಮಾಧಿ ಮಾಡುವುದು ಬಹುಬೇಗ ಮೋಕ್ಷದ ದಾರಿಯಂತೆ. ಹೀಗಾಗಿ ಜಲಸಮಾಧಿ ಅಪರೂಪದ ವಿಧಾನವಾಗಿದೆ. ಸಾಧು ಸಂತರು, ತಪಸ್ವಿಗಳನ್ನು ಉಳಿದ ಸಾಮಾನ್ಯರಿಗಿಂತ ಭಿನ್ನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಅವರ ದೇಹವನ್ನು ಸಲಸಮಾಧಿ ಮಾಡಲಾಗಿದೆ. ಮತ್ತೊಂದು ಕಡೆ ಸಾಧುಗಳ ದೇಹವು ದೈವಿಕ ಶಕ್ತಿ, ಧ್ಯಾನ, ತಪ್ಪಸ್ಸು ವಿಶೇಷ ಶಕ್ತಿಯಿಂದ ತುಂಬಿರುತ್ತದೆ ಹೀಗಾಗಿ ಅಗ್ನಿ ಸ್ಪರ್ಶದ ಬದಲಾಗಿ ಜಲಸಮಾಧಿ ಮಾಡಲಾಗುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ಗಂಗಾ, ನರ್ಮದಾ, ಸರಸ್ವತಿ, ಗೋದಾವರಿ, ಸರಾಯು ನದಿಯಲ್ಲಿ ಮೃತರ ದೇಹ ಬಿಡುವುದು ಮೋಕ್ಷಕ್ಕೆ ದಾರಿ ಎಂದು ನಂಬಲಾಗಿದೆ. ಆದರೆ ಈಗ ಯಾವುದೇ ನದಿಯಲ್ಲಿ ದೇಹ ಸಮರ್ಪಣೆ ಮಾಡುವಂತಿಲ್ಲ. ಹಾಗೆ ಪರಿಸರಕ್ಕೆ ಹಾನಿ ಇಲ್ಲದಂತೆ ದೇಹವನ್ನು ಮರಳಿ ಪಂಚಭೂತಗಳಿಗೆ ನೀಡಬೇಕು ಎಂಬ ನಿಯಮವೂ ಇದೆ. ಹೀಗಾಗಿ ಜಲಸಮಾಧಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಜಲಸಮಾಧಿಗೂ ಮುನ್ನ ನದಿ ತಟದಲ್ಲಿ ಅನೇಕ ಧಾರ್ಮಿಕ ಸಂಪ್ರದಾಯಗಳ ನೆರವೇರಿಸಿ ಬಳಿಕ ನದಿಯಲ್ಲಿ ಜಲಸಮಾಧಿ ಮಾಡಲಾಗುತ್ತದೆ.
ಜಲಸಮಾಧಿ ರಾಮಾಯಣಕ್ಕೂ ಇದೆ ನಂಟು
ಶ್ರೀರಾಮ ಇದೇ ಸರಯೂ ನದಿಯಲ್ಲಿ ತನ್ನ ದೇಹ ತ್ಯಾಗ ಮಾಡಿದ್ದಾನೆ ಎಂಬುದನ್ನು ರಾಮಾಯಣದಲ್ಲಿ ನಾವು ನೋಡಬಹುದು. ವಿಷ್ಣುವಿನ ಅವತಾರವಾಗಿದ್ದ ರಾಮ ಅಯೋಧ್ಯೆಯಲ್ಲಿ ಹರಿಯುವ ಸರಯು ನದಿಯಲ್ಲಿ ಮುಳುಗಿದ ಎಂಬುದನನ್ನು ವಿವರಿಸಲಾಗಿದೆ. ಭೂಮಿ ಮೇಲೆ ಬಂದ ಕಾರ್ಯ ಮುಗಿದಿದೆ ಎಂದು ಅರಿತ ರಾಮ ಕೊನೆಯದಾಗಿ ಅರಮನೆಯಿಂದ ಹೊರಡುತ್ತಾನೆ. ವೈಕುಂಠದ ದಾರಿಗಾಗಿ ಆತ ಹೊರಡುತ್ತಾನೆ.
ರಾಮನು ಹೊರಡಲು ಸಿದ್ಧವಾಗುತ್ತಿದ್ದಂತೆ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಅವನೊಂದಿಗೆ ಸೇರುತ್ತಾರೆ. ಸೀತೆ ಕೂಡ ರಾಮನ ಜೊತೆಗೆ ಹೊರಡುತ್ತಾಳೆ. ಆದರೆ ರಾಮನು ಸರಯೂ ನದಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ. ಅಲ್ಲಿಂದ ಆತ ನೇರ ವೈಕೂಂಠ ತಲುಪಿದ ಎಂಬ ನಂಬಿಕೆ ಇದೆ. ಹೀಗಾಗಿ ಜಲಸಮಾಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಈಗ ರಾಮನನ್ನು ದಶಕಗಳಿಂದ ಪೂಜೆ ಮಾಡಿಕೊಂಡು ಬಂದಿದ್ದ ಸತ್ಯೇಂದ್ರ ದಾಸ್ ಅವರ ದೇಹವನ್ನು ಕೂಡ ಇದೆ ಸರಯೂ ನದಿಯಲ್ಲಿ ಜಲಸಮಾಧಿ ಮಾಡಲಾಗಿದೆ.



Click it and Unblock the Notifications