Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೆಹಲಿಯಲ್ಲಿ ಹೊಸ ರೀತಿ ಲಾಕ್‌ಡೌನ್..! ಇಂದಿನಿಂದ ಈ ಕೆಲಸಗಳು ಬಂದ್..!
ದೆಹಲಿಯಲ್ಲಿ ಮಾಲಿನ್ಯ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ನಿಮಗೆ ತಿಳಿದರಬಹುದು. ದೀಪಾವಳಿಯ ಬಳಿಕ ಅಲ್ಲಿ ಗ್ಯಾಸ್ ಚೇಂಬರ್‌ನಂತೆ ಗಾಳಿ ಬದಲಾಗಿದೆ. ಉಸಿರಾಡುವುದು ಜೀವಕ್ಕೆ ಅಪಾಯ ತರುವಷ್ಟು ಮಟ್ಟಕ್ಕೆ ವಿಷಕಾರಿಯಾಗಿ ಬದಲಾಗಿದೆ. ಹಾಗೆ ಈಗ ಮನೆಯಿಂದ ಹೊರಬರುವ ಮೊದಲು ಮಾಸ್ಕ್ ಧರಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ದೆಹಲಿಯ ಮಾಲಿನ್ಯ ಕಡಿಮೆ ಮಾಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಹೀಗಾಗಿ ಕಮಿಟಿಗಳು, ಸಭೆಗಳು ಹೀಗೆ ಹತ್ತಾರು ಕ್ರಿಯಾ ಸಮಿತಿಯ ಸಭೆಯ ಬಳಿಕ ಒಂದಿಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಹೀಗಾಗಿ ಇಂದಿನಿಂದಲೇ ಕೆಲವೊಂದು ನಿಯಮಗಳ ಜಾರಿ ಮಾಡಲಾಗುತ್ತಿದೆ. ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)ನ 3ನೇ ಹಂತವನ್ನು ಜಾರಿ ಮಾಡಲು ಮುಂದಾಗಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ದೆಹಲಿ ಈ GRAP ಹಂತ-3 ಅನ್ನು ಅನುಸರಿಬೇಕಾಗುತ್ತದೆ. ಹಾಗಾದ್ರೆ ಏನಿದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ 3ನೇ ಹಂತ? ಯಾವೆಲ್ಲಾ ನಿಯಮ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ನಿಯಮಗಳು ಒಂದು ರೀತಿ ನಮಗೆ ಕೋವಿಡ್ ಸಮಯದ ಲಾಕ್‌ಡೌನ್ ಅನ್ನು ನೆನಪಿಸುವಂತಿದೆ. ಕೆಲವೊಂದು ನಿಯಮಗಳು ಕೋವಿಡ್ ಲಾಕ್‌ಡೌನ್ ಸಮಯದಲ್ಲೂ ಕೂಡ ಜಾರಿಯಲ್ಲಿದ್ದವು ಎಂಬುದು ಕೂಡ ನೆನಪಿಗೆ ಬರುತ್ತದೆ. ಹಾಗಾದ್ರೆ ಏನಿದು ನಿಯಮಗಳು ಲಾಕ್‌ಡೌನ್ ನೆನಪಿಸುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಯಾವೆಲ್ಲಾ ಕೆಲಸಗಳಿಗೆ ನಿಷೇಧ
- ದೆಹಲಿಯಲ್ಲಿ ಈಗಾಗಲೇ ದಟ್ಟ ಮಂಜು ಬೀಳಲು ಆರಂಭಿಸಿರುವುದರಿಂದ ಧೂಳು ಹೆಚ್ಚಳಕ್ಕೆ ಕಾರಣವಾಗುವಂತಹ ಕೆಲಸಗಳಿಗೆ ಬ್ರೇಕ್ ಹಾಕಲು ಮುಂದಾಗಲಾಗಿದೆ. ಹೀಗಾಗಿ ನೆಲವನ್ನು ಕೊರೆಯುವಂತಹ, ಶಂಕುಸ್ಥಾಪನೆ, ಕಟ್ಟಡ ಕೆಡುಗುವುದು ಸೇರಿ ಕಟ್ಟಡ ರಿಪೇರಿ ಕೆಲಸ ಮಾಡುವಂತಿಲ್ಲ.
- ತೆರೆದ ಚರಂಡಿ ಕಾಮಗಾರಿ, ನೀರಿನ ಮಾರ್ಗ, ಒಳಚರಂಡಿ, ವಿದ್ಯುತ್ ಕೇಬಲ್ ಅಳವಡಿಕೆ, ಇಟ್ಟಿಗೆ ಕೆಲಸ, ಕಲ್ಲಿನ ಕೆಲಸಗಳು, ಡ್ರಿಲ್ಲಿಂಗ್ ಕೆಲಸ ನಿಷೇಧ.
- ಆರ್‌ಎಂಸಿ ಬ್ಯಾಚಿಂಗ್ ಪ್ಲಾಂಟ್‌ನ ಕಾರ್ಯಾಚರಣೆ
- ವೆಲ್ಡಿಂಗ್ ಮತ್ತು ಗ್ಯಾಸ್-ಕಟಿಂಗ್, ಗ್ಲಾಸ್ ವರ್ಕಿಂಗ್, ಸಿಮೆಂಟ್ ಆಧಾರಿತ ಕೆಲಸಗಳ ಮಾಡುವಂತಿಲ್ಲ.
- ಗೋಡೆಗಳ ಪ್ಲಾಸ್ಟರ್ / ಲೇಪನಗಳು, ದುರಸ್ತಿ, ಬಣ್ಣ, ವಾರ್ನಿಷಿಂಗ್, ವಾಷಿಂಗ್, ಧೂಳು ಹೊಡೆಯುವುದು ಇತ್ಯಾದಿ ಕೆಲಸಕ್ಕೆ ತಡೆ.
- ವಾಟರ್ ಪ್ರೂಫಿಂಗ್, ರಸ್ತೆ ನಿರ್ಮಾಣ, ಕಲ್ಲು ಪುಡಿ ಮಾಡುವುದು, ದೊಡ್ಡ ಕಾರ್ಖಾನೆಗಳಲ್ಲಿ ಹಾರು ಬೂದಿ ಉಗುಳುವ ಕೆಲಸ ನಡೆಸುವಂತಿಲ್ಲ.
- ತ್ಯಾಜ್ಯ ಸುಡುವುದು, ಕಲ್ಲು ಕ್ರಷರ್‌ಗಳು, ಗಣಿಗಾರಿಕೆ,
- ಬೃಹತ್ ವಾಹನಗಳ ಓಟಾಟ ಆಯಾ ಸ್ಥಳೀಯ ಆಡಳಿತದ ತೀರ್ಮಾನಕ್ಕೆ ಬಿಡಲಾಗಿದೆ.
- ರಾಜ್ಯ ಸರ್ಕಾರಗಳು ಎನ್‌ಸಿಆರ್‌ನಲ್ಲಿ ಮತ್ತು ಜಿಎನ್‌ಸಿಟಿಡಿ ಐದನೇ ತರಗತಿಯವರೆಗಿನ ಮಕ್ಕಳಿಗೆ ದೈಹಿಕ ತರಗತಿಗಳನ್ನು ನಿಲ್ಲಿಸುವ ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಯಾವೆಲ್ಲಾ ಕೆಲಸಕ್ಕೆ ಅನುಮತಿ
- ರೈಲ್ವೆ ಸೇವೆಗಳು ಮತ್ತು ನಿಲ್ದಾಣಗಳ ಅಭಿವೃದ್ಧಿ ಕಾರ್ಯ
- ಮೆಟ್ರೂ ರೈಲು
- ನಗರ ಸಾರಿಗೆ ಬಸ್‌ಗಳು
- ಆಸ್ಪತ್ರೆಗಳ ಕಾರ್ಯಾಚರಣೆ
- ಅಗತ್ಯ ವೈದ್ಯಕೀಯ ಸೇವಾ ಬೃಹತ್ ವಾಹನಗಳ ಓಡಾಟಗಳು
- ಸರಕು ಸಾಗಣೆ



Click it and Unblock the Notifications
