Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಭಾರತದಿಂದ ಮಳೆ ನಿರ್ಗಮನ..! ಯಾವಾಗ ಮಾನ್ಸೂನ್ ಅಂತ್ಯ ಗೊತ್ತಾ?
ಭಾರತದಲ್ಲಿ ಈ ಬಾರಿ ಮಾನ್ಸೂನ್ ನಿಗದಿತ ಪ್ರಮಾಣಕ್ಕಿಂತ ತುಸು ಹೆಚ್ಚೇ ಸುರಿದಿದೆ. ಶೇ.8ರಷ್ಟು ಅಧಿಕ ಮಳೆಯಾಗಿದೆ. ಹಲವು ಭಾಗದಲ್ಲಿ ಪ್ರವಾಹ, ಸೇರಿ ದುರಂತಗಳನ್ನೇ ಸೃಷ್ಟಿಸಿದೆ. ರಾಜ್ಯದಲ್ಲೂ ಈ ಬಾರಿ ಉತ್ತಮ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿ ರೈತರಲ್ಲಿ ಸಂತಸ ಮೂಡಿದೆ. ಈಗಾಗಲೇ ಬಹುತೇಖ ಕಡೆ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಆದರೆ ಹಿಂಗಾರು ಮಳೆ ಸಹ ರಾಜ್ಯದಲ್ಲಿ ಉತ್ತಮವಾಗಿ ಸುರಿದಿದೆ. ಆದರೆ ಮಲೆನಾಡು, ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಅಲ್ಲದೆ ಮಲೆನಾಡಲ್ಲಿ ಮಳೆ ಕೊಂಚ ಬಿಡಿವು ಕೊಟ್ಟಿದ್ದು, ತೀವ್ರ ಮಳೆಯಿಂದಾಗಿ ಭತ್ತ, ಅಡಿಕೆಗೆ ಹಾನಿಯಾಗುವ ಭೀತಿ ಅಲ್ಲಿನ ರೈತರಲ್ಲಿ ಮೂಡಿದೆ. ಸದ್ಯ ಈಗ ಮಳೆ ಕಡಿಮೆಯಾಗಿರುವುದು ನೆಮ್ಮದಿ ತರಿಸಿದೆ.

ಸದ್ಯ ಮುಂಗಾರು ಮಾರುತಗಳು ಭಾರತದಿಂದ ನಿರ್ಗಮಿಸುತ್ತಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಭಾರತದಲ್ಲಿ ದೀರ್ಘವದಿಯ ಮಳೆ ತರಿಸುವ ನೈರುತ್ಯ ಮುಂಗಾರು ಭಾರತದಿಂದ ನಿರ್ಗಮಿಸಲಿದೆ. ಇದೇ ಸೆಪ್ಟೆಂಬರ್ 23ರಿಂದ ಮಾನ್ಸೂನ್ ಮಾರುತಗಳು ಭಾರತದಿಂದ ಮರೆಯಾಗಲಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ಆರಂಭಿಕ ಹಂತವಾಗಿ ಗುಜರಾತ್, ರಾಜಸ್ಥಾನದ ಭಾಗದಿಂದ ಮಾನ್ಸೂನ್ ಮಾರುತಗಳು ಹಿಂದೆ ಸರಿದಿವೆ.
ಅಸ್ಸಾಂ ಮತ್ತು ಮೇಘಾಲಯದಲ್ಲಿ ಏಕಕಾಲದಲ್ಲಿ ಭಾರಿ ಮಳೆಯ ಪರಿಣಾಮ ಕಳೆದ ವಾರಾಂತ್ಯದಿಂದ ಮಳೆ ಕಡಿಮೆಯಾಗಿದ್ದು ಅಲ್ಲಿಯೂ ಮಾನ್ಸೂನ್ ಮಾರುತಗಳು ಮರೆಯಾಗುತ್ತಿವೆ, ಈ ಮೊದಲು ಮೇಘಾಲಯ ಅಸ್ಸಾಂನಲ್ಲಿ ಭಾರೀ ಪ್ರವಾಹ ಉಂಟಾಗಿ ಪ್ರಾಣ ಹಾನಿಯೂ ಸಹ ಸಂಭವಿಸಿತ್ತು. ಇನ್ನು ದಕ್ಷಿಣದ ರಾಜ್ಯಗಳಿಂದಲೂ ಈ ತಿಂಗಳ ಕೊನೆಯಲ್ಲಿ ಮಾನ್ಸೂನ್ ಮಾರುತಗಳು ಹಿಂದೆ ಸರಿಯಲಿದ್ದು, ಪಾಕಿಸ್ತಾನದ ವಾಯುವ್ಯ ಭಾಗದಿಂದ ಒಣ ಗಾಳಿ ಬೀಸಲು ಆರಂಭಿಸಿದೆ.
ಇತ್ತ ಮುಂಗಾರು ನಿರ್ಗಮನದ ಸಮಯದಲ್ಲಿ ಭಾರೀ ಮಳೆಯ ನರೀಕ್ಷೆ ಸಹ ಇದೆ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಹಲವು ಕಡೆ ಉತ್ತಮ ಮಳೆ ಬೀಳಬಹುದು. ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮತ್ತು ಇತರೆಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಈ ಮಾನ್ಸೂನ್ ನಿರ್ಗಮನ ಪ್ರಕ್ರಿಯೆಯು ಮುಂದಿನ ಅಕ್ಟೋಬರ್ 15ರ ಒಳಗೆ ಸಂಪೂರ್ಣವಾಗಲಿದೆ.
ಹೀಗಾಗಿ ವಾತಾವರಣದಲ್ಲಿ ಒಣ ಹವೆ ಮುಂದುವರೆಯಲಿದ್ದು, ಸಂಜೆ ವೇಳೆ ಶೀತ ಗಾಲಿ ಕಂಡುಬರಲಿದೆ. ಅಂದರೆ ದೇಶದಲ್ಲಿ ಚಳಿಗಾಲ ಆರಂಭಿಕ ಹಂತ ಎನ್ನಬಹುದು. ಹೀಗಾಗಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗಲಿದ್ದು, ವಾತಾವರಣ ಸಂಪೂರ್ಣ ಬದಲಾಗಲಿದೆ. ಮಧ್ಯಾಹ್ನದ ವೇಳೆ ಬಿಸಿಲು ಏರಿಕೆಯಾಗಲಿದೆ. ಸಂಜೆ ದಿಢೀರ್ ತಾಪಮಾನ ಕುಸಿತಕ್ಕೆ ಕಾರಣವಾಗಲಿದೆ.
ಒಂದು ವೇಳೆ ಹವಾಮಾನ ವೈಪರಿತ್ಯದಿಂದಾಗಿಯೋ ಅಥವಾ ಇತರ ಕಾರಣದಿಂದ ನೈರುತ್ಯ ಮುಂಗಾರು ನಿರ್ಗಮನದಲ್ಲಿ ಏರುಪೇರಾದರೆ ಹಲವು ಸಮಸ್ಯೆ ಎದುರಾಗಬಹುದು. ಹಲವು ಧಾನ್ಯಗಳ ಕೊಯ್ಲು ಮಳೆಗೆ ಸಿಲುಕಬಹುದು. ಇದರಿಂದ ರೈತರಿಗೆ ನಷ್ಟವಾಗಬಹುದು.
ಮಳೆ ನಕ್ಷತ್ರಗಳು ಏನು ಹೇಳುತ್ತವೆ?
ತಜ್ಞರ ಪ್ರಕಾರ ಅಕ್ಟೋಬರ್ 15ರ ಒಳಗೆ ಮಾನ್ಸೂನ್ ಮಾರುತಗಳು ಭಾರತದಿಂದ ನಿರ್ಗಮಿಸಲಿದೆ. ಆದರೆ ಇದಾದ ಬಳಿಕ ಮಳೆಯಾಗುವುದಿಲ್ಲ ಎಂದು ಹೇಳಲಾಗದು. ಆದರೆ ಈ ಮಳೆ ಕೆಲ ಗಂಟೆಗಳ ಹೊತ್ತು ಬರಬಹುದು ಅಷ್ಟೇ. ಇನ್ನು ಮಳೆ ನಕ್ಷತ್ರಗಳ ನೋಡುವುದಾದರೆ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೂ ಮಳೆಯಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಉತ್ತರ, ಹಸ್ತ ಮಳೆಯಾದರೆ ಅಕ್ಟೋಬರ್‌ನಲ್ಲಿ ಚಿತ್ತ, ಸ್ವಾತಿ ಮಳೆಯಾಗಲಿದೆ. ಹಾಗೆ ಕೊನೆಯಾದಾಗಿ ನವೆಂಬರ್‌ನಲ್ಲಿ ವಿಶಾಖ ಮಳೆಯಾಗಲಿದೆ ಎಂಬುದು ನಕ್ಷತ್ರಗಳ ಲೆಕ್ಕಾಚಾರವಾಗಿದೆ. ಆದರೆ ಈ ಮಳೆಗಳು ಪ್ರತಿ ಬಾರಿಯಂತೆ ಸಣ್ಣ ಮಳೆಯಾಗಿವೆ. ಎಂದಿಗೂ ಪ್ರವಾಹ ಉಂಟು ಮಾಡುವ ರೀತಿಯಲ್ಲಿ ದುರಿದಿಲ್ಲ ಎಂಬುದು ಸಮಾಧಾನಕರ ವಿಚಾರವಾಗಿದೆ.



Click it and Unblock the Notifications