Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಸುಪ್ರೀಂಕೋರ್ಟ್‌ನಲ್ಲಿ ಅಂಚೆ ಚೀಟಿ ಬಿಡುಗಡೆ ವೇಳೆ ಮೋದಿ ನಡೆದುಕೊಂಡ ರೀತಿಗೆ ಭಾರೀ ಮೆಚ್ಚುಗೆ
ಸಮಾಜದ ಪರಿವರ್ತನೆಗೆ ಮುಂದಾಗುವ ಮುನ್ನ ಮೊದಲು ತಾನು ಬದಲಾಗಬೇಕು, ಆವಾಗ ಮಾತ್ರ ನಮ್ಮ ಯೋಚನೆಗಳು ಪರಿಣಾಮಕಾರಿಯಾಗಲು ಸಾಧ್ಯ, ಅದರಲ್ಲಿ ನಮ್ಮ ನಾಯಕರುಗಳು ಹೇಗೆ ಇರಬೇಕೆಂದರೆ ನಮಗೆ ಮಾದರಿಯಾಗಿರಬೇಕು, ಆವಾಗ ಅವರ ಮೇಲಿನ ನಂಬಿಕೆ, ಗೌರವ ಮತ್ತಷ್ಟು ಹೆಚ್ಚಾಗುವುದು, ಇಂದು ಮೋದಿ ನಡೆದುಕೊಂಡ ರೀತಿಯೂ ಅಷ್ಟೇ ಪಕ್ಷ ಬೇಧವಿಲ್ಲದೆ ಮೆಚ್ಚಿಕೊಳ್ಳಬೇಕಾಗಿದ್ದೇ...

ದೇಶಕ್ಕಾಗಿ ಮಾಡುವ ಒಳ್ಳೆಯ ಕಾರ್ಯಕ್ಕೆ ಅಲ್ಲಿ ಪಕ್ಷ ನೋಡಬಾರದು, ಅವರ ಕಾರ್ಯಗಳನ್ನಷ್ಟೇ ನೋಡಬೇಕು. ಸ್ವಚ್ಛಭಾರತ ಅಭಿಯಾನಕ್ಕೆ ಕರೆಕೊಟ್ಟವರು ಮೋದಿ, ಆದರೆ ಭಾರತ ಸ್ವಚ್ಛವಾಗಿ ಇದ್ದರೆ ಅದು ನಮ್ಮ ಸ್ವಾಸ್ಥ್ಯಕ್ಕೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು, ಅದರೆ ಇದಕ್ಕಾಗಿ ಒಬ್ಬರು ಮನಸ್ಸು ಮಾಡಿದರೆ ಸಾಲದು ಪ್ರತಿಯೊಬ್ಬ ಪ್ರಜೆಯೂ ಕರ್ತವ್ಯದಿಂದ ವರ್ತಿಸಬೇಕು, ಅಲ್ಲದೆ ಸಾಮಾನ್ಯ ಜನರು ನಮ್ಮ ಜನ ನಾಯಕರನ್ನು , ಸೆಲೆಬ್ರಿಟಿಗಳನ್ನು ನೋಡಿ ಅವರಂತೆ ಅನುಸರಿಸುತ್ತಾರೆ. ಮೋದಿಯವರು ಎಲ್ಲೇ ಹೋಗಲಿ ಸ್ವಚ್ಛಭಾರತದ ಕಡೆಗೆ ಗಮನಹರಿಸುತ್ತಾರೆ, ಇದೀಗ ಅವರೆಷ್ಟು ಮುತುವರ್ಜಿ ವಹಿಸುತ್ತಾರೆ ಎಂಬ ವೀಡಿಯೋ ವೈರಲ್ ಅಗುತ್ತಿದೆ, ಅಲ್ಲದೆ ಅವರ ನಡೆ ಪ್ರತಿಯೊಬ್ಬರಿಗೂ ಒಳ್ಳೆಯ ಪಾಠ ಎಂಬುವುದರಲ್ಲಿ ನೋ ಡೌಟ್.
Notice how PM Modi didn't throw the Ribbon.
— Ankur Singh (@iAnkurSingh) August 31, 2024
He put it in his Pocket.
He leads by example on how to make India a Swachh Bharat. pic.twitter.com/zqO73brfn7
ಸುಪ್ರೀಕೋರ್ಟ್‌ನಲ್ಲಿ ಅಂಜೆ ಚೀಟಿ ಬಿಡುಗಡೆಯ ಕಾರ್ಯಕ್ರಮವಿತ್ತು, ಅದರಲ್ಲಿ ಭಾಗವಹಿಸಿದ ಪ್ರಧಾನಿ ಹೊಸ ಅಂಚೆ ಚೀಟಿ ಬಿಡುಗಡೆ ಮಾಡಿದರು, ಆ ವೇಳೆ ಅವರಿಗೆ ರಿಬ್ಬನ್ ಸುತ್ತಿದ ಅಂಚೆ ಚೀಟಿ ಇರುವ ಪುಸ್ತಕಾನೀಡಲಾಯ್ತು, ಸಾಮಾನ್ಯವಾಗಿ ಈ ರೀತಿಯ ಬಿಡುಗಡೆಯ ಕಾರ್ಯದಲ್ಲಿ ರಿಬ್ಬನ್ ಕಟ್ಟಿರುತ್ತಾರೆ ಅಲ್ವಾ ಅದೇ ರೀತಿ, ಇಲ್ಲಿಯೂ ಕಟ್ಟಲಾಗಿತ್ತು, ಮೋದಿಯವರು ಆ ರಿಬ್ಬನ್ ಬಿಚ್ಚಿ ಮಡಚಲಾಂಭಿಸುತ್ತಾರೆ, ಅಲ್ಲಿದ್ದವರು ಅದನ್ನು ಗಮನಿಸುತ್ತಾ ಇರುತ್ತಾರೆ. ಮೋದಿ ಅದನ್ನು ಮಡಚಿ ಜೇನಿನಲ್ಲಿಟ್ಟು ನಂತರ ಅಂಚೆ ಚೀಟಿ ಬುಡುಗಡೆ ಮಾಡುತ್ತಾರೆ. ಅವರು ಆ ರಿಬ್ಬನ್ ಕೆಳಗಡೆ ಹಾಕಲಿಲ್ಲ, ಯಾರ ಕೈಗೂ ನೀಡಲಿಲ್ಲ, ಬದಲಿಗೆ ಮಡಚಿ ಜೇನಿನಲ್ಲಿಟ್ಟ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ. ನಾವು ಹೇಳುವುದು ಮಾತ್ರವಲ್ಲ ಅದರಂತೆ ನಡೆಯಬೇಕು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ
ಮೋದಿ ಕಸ ಗುಡಿಸಿದಾಗ ಟೀಕೆ ಹೇಳಿದ್ದರು
ಸ್ವಚ್ಛ ಭಾರತ ಅಭಿಯಾನದಲ್ಲಿ ಮೋದಿ ಕಸ ಗುಡಿಸಿದಾಗ ಅದನ್ನು ಪ್ರಚಾರ ಮಾಡಲು ಮಾಡಿರುವ ಗಿಮಿಕ್ಕು ಎಂದು ಟೀಕೆ ಮಾಡಿದ್ದರು, ಆದರೆ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಮನಸ್ಸಿನಿಂದ ಮಾಡುತ್ತಿದ್ದಾರೆ ಎಂಬುವುದು ಅವರ ಈ ವರ್ತನೆಗಳು ಸಾಬೀತು ಪಡಿಸುತ್ತದೆ. ದೆಶದ ಪ್ರಧಾನಿಯೇ ಕಸ ಅಂತ ಬಿಸಾಡದೆ ಜೇಬನಿನಲ್ಲಿ ಇಡುವಾಗ ಇದನ್ನು ನೋಡಿ ಅನುಸರಿಸುವವರು ಲಕ್ಷಾಂತರ ಮಂದಿ ಇರುತ್ತಾರೆ, ಹಾಗಾಗಿ ನಾಯಕಗಳು ತಾವು ನುಡಿದಂತೆ ನಡೆದರೆ
ಅದನ್ನು ಜನ ಸಾಮಾನ್ಯರು ಅನುಸರಿಸುತ್ತಾರೆ.
ನಾವು ಕಸ ಎಸೆದ ಮಾತ್ರಕ್ಕೆ ಕಸದ ರಾಶಿಯಾಗುತ್ತಾ ಎಂದು ಯೋಚಿಸಬೇಡಿ
ಹನಿ ಹನಿ ಕೂಡಿದರೆ ಹಳ್ಳ ಎಂದು ಹೇಳುವಂತೆ ನೀವು ಒಂದು ಕಸ ಎಸೆದರೆ ಅದೇ ರೀತಿ ಸಾವಿರ ಜನ ಎಸೆದರೆ ಕಸದ ರಾಶಿಯೇ ಆಗುತ್ತದೆ ಅಲ್ವಾ? ನಾವು ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸಿಕ್ಕಿ ಸಿಕ್ಕಿದ್ದಲ್ಲಿ ಕಸವನ್ನು ಎಸೆಯಬೇಡಿ, ಸ್ವಚ್ಛಭಾರತ ಅಭಿಯಾನಕ್ಕೆ ಕೈ ಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.



Click it and Unblock the Notifications