Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಆಧುನಿಕ ರಾಮಾಯಣ: ವೇದಿಕೆಯಲ್ಲಿ ರಾಮನನ್ನೇ ಥಳಿಸಿದ ರಾವಣ!
ರಾಮಾಯಣ ನಾಟಕ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿ ನಡೆಯುತ್ತೆ, ರಾಮಾಯಣವು ಹಲವಾರು ಕವಿಗಳು ಹಲವಾರು ರೀತಿಯಲ್ಲಿ ಬರೆದಿದ್ದಾರೆ. ಆದರೆ ನಾವು ಒಪ್ಪಿಕೊಂಡಿರುವುದು ವಾಲ್ಮಿಕಿ ಮಹರ್ಷಿ ಬರೆದಿರುವ ರಾಮಾಯಣವನ್ನು. ಇಲ್ಲಿ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುವುದು ಒಂದು ತಿರುವು. ಇದೇ ರಾವಣನ ಹತ್ಯೆಗೂ ಕಾರಣವಾಗುವ ಅಂಶವಾಗುತ್ತದೆ.
ಈ ನಡುವೆ ರಾಮ ಲಕ್ಷ್ಮಣರು ಸೀತೆಯ ಹುಡುಕುವಾಗ ಏನೆಲ್ಲಾ ನಡೆಯಿತು ಎಂಬುದೇ ಸ್ವಾರಸ್ಯಕರ ವಿಚಾರಗಳು. ರಾಮಾಯಣ ಮಹಾಕಾವ್ಯದಲ್ಲಿ ರಾಮ ರಾವಣರ ಯುದ್ಧ ಅತ್ಯಂತ ರೋಚಕ ಘಟ್ಟ. ಹಾಗೆ ಈ ಯುದ್ಧವನ್ನು ಒಬ್ಬೊಬ್ಬರು ಒಂದೊಂದು ರೀತಿ ಬಣ್ಣಿಸುವುದು ಉಂಟು. ಆದರೆ ಕೊನೆಯಲ್ಲಿ ಗೆಲ್ಲುವು ರಾಮನೆ ಹೊರತು ರಾವಣನಲ್ಲ.

ಆದ್ರೆ ಇಲ್ಲೊಂದು ನಾಟಕದಲ್ಲಿ ರಾವಣನ ಬದಲಾಗಿ ರಾಮ ನೆಲಕ್ಕೆ ಬೀಳಬೇಕಾದ ಸ್ಥಿತಿ ಬಂದೊದಗಿದೆ. ಹೌದು ರಾಮಾಯಣ ನಾಟಕದ ನಡುವೆ ರಾವಣ ರಾಮನನ್ನೇ ಹೊಡೆದು ನೆಲಕ್ಕೆ ಉರುಳಿಸಿರುವುದು ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ. ನಾಟಕದ ನಡುವೆ ರಾಮ ಪಾತ್ರದಾರಿಗೂ ರಾವಣ ಪಾತ್ರದಾರಿಗೂ ಗಲಾಟೆ ನಡೆದು ರಾವಣ ರಾಮನ ಮೇಲೆ ಸಿಟ್ಟಿಗೆದ್ದು ನೆಲಕ್ಕೆ ಉರುಳಿಸಿದ್ದಾರೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹದಲ್ಲಿ, ಇಲ್ಲಿ ದಸರಾ ಹಿನ್ನೆಲೆ ರಾಮ್‌ಲೀಲಾ ನಾಟಕ ಪ್ರದರ್ಶನವಾಗುತ್ತಿತ್ತು. ಈ ನಾಟಕ ನೋಡಲು ನೂರಾರು ಮಂದಿ ನೆರೆದಿದ್ದರು. ನಾಟಕ ಎಂದಿನಂತೆಯೆ ನಡೆಯುತ್ತಿತ್ತು. ನಾಟಕ ನೋಡ ನೋಡುತ್ತಾ ಕೊನೆಯ ಘಟ್ಟ ತಲುಪಿತ್ತು, ರಾಮ ರಾವಣರ ನಡುವಿನ ಯುದ್ಧದ ಬಳಿಕ ನೆರೆದ ಪ್ರೇಕ್ಷಕರು ಮನೆ ಕಡೆ ತರಳುವ ಅವಸರದಲ್ಲಿದ್ದರು.
ಆದ್ರೆ ಅಚಾನಕ್ ಆಗಿ ವೇದಿಕೆ ಮೇಲೆ ಗಲಾಟೆ ಎದ್ದಿದೆ. ಅಲ್ಲಿ ರಾಮ-ರಾವಣ ಹಾಗೂ ಲಕ್ಷ್ಮಣರು ವೇದಿಕೆ ಮೇಲಿದ್ದು ರಾಮ ಹಾಗೂ ರಾವಣನ ನಡುವೆ ಯುದ್ಧದ ಸನ್ನಿವೇಶ ನಡೆಯುತ್ತಿದೆ. ಆದರೆ ರಾವಣ ಯಾವುದೋ ವಿಚಾರಕ್ಕೆ ರೊಚ್ಚಿಗೆದ್ದು ರಾಮನ ಮೇಲೆ ಎರಗಿದ್ದಾನೆ. ಎಲ್ಲರು ಏನಾಗುತ್ತಿದೆ ಎಂದು ನೋಡುವಾಗಲೇ ರಾಮನಿಗೆ ಥಳಿಸಿ ಕೆಳಗೆ ಬೀಳಿಸಿದ್ದಾನೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಸಚಿನ್ ಗುಪ್ತಾ ಎಂಬುವರು ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಬಿಲ್ಲು ಬಾಣ ಹಿಡಿದು ಹೋರಾಡುತ್ತಿದ್ದ ಭಗವಾನ್ ರಾಮ ಹಾಗೂ ರಾವಣನ ನಡುವೆ ನಿಜವಾಗಿಯೂ ಕಾಳಗ ನಡೆದಿದೆ ಎಂದು ವಿಡಿಯೋ ವಿವರಿಸುತ್ತಿದೆ. ಮೊದಲಿಗೆ ಎಲ್ಲರು ಇದೊಂದು ನೈಜ ರೀತಿ ನಟಿಸುತ್ತಿದ್ದಾರೆ ಎಂದುಕೊಂಡಿದ್ದಾರೆ, ಆದರೆ ರಾವಣ ಕೈ ಕೈ ಮಿಲಾಯಿಸಿ ರಾಮನನ್ನು ಕೆಳಗೆ ಬೀಳಿಸಿದಾಗ ಎಲ್ಲರಿಗೂ ಅಲ್ಲೇನೋ ನಡೆಯುತ್ತಿದೆ ಎಂಬುದು ಅರಿವಿಗೆ ಬಂದಿದೆ.
ಈ ವಿಡಿಯೋವನ್ನು ಬರೋಬ್ಬರಿ 12 ಸಾವಿರ ಮಂದಿ ವೀಕ್ಷಿಸಿದ್ದಾರೆ. ಹಾಗೆ ಸಾವಿರಾರು ಕಮೆಂಟ್‌ಗಳು ಬಂದಿವೆ. ಜನರು ತಾಳ್ಮೆ ಕಳೆದುಕೊಂಡಾಗ ರಾವಣರಾಗಿ ಬದಲಾಗುತ್ತಾರೆ. ಇಲ್ಲಿಯೂ ಆಗಿರುವುದು ಇದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದು ನಿಜವಾದ ರಾಮಲೀಲಾ, ರಾಮ ಮೊದಲು ಸೋತರು ಆಮೇಲೆ ಗೆದ್ದಿದ್ದು ಆತನೇ ಎಂದು ಬರೆದುಕೊಂಡಿದ್ದಾರೆ.
ಈ ನಾಟಕ ಈ ಕಾಳಗದ ನಂತರ ಅರ್ಧಕ್ಕೆ ಕೊನೆಯಾಗಿದೆ ಎಂದು ತಿಳಿದುಬಂದಿದೆ. ಈ ಜಗಳದ ಬಳಿಕ ಪ್ರೇಕ್ಷಕರಲ್ಲಿ ಆಯೋಜಕರು ಕ್ಷಮೆಯಾಚಿಸಿದ್ದಾರೆ ಎಂದು ಸಹ ವರದಿಯಾಗಿದೆ.
ಹಾಗೆ ಪೌರಾಣಿಕ ನಾಟಕದ ವೇಳೆ ಪಾತ್ರದಾರಿಗಳು ಈ ರೀತಿ ನಡೆದುಕೊಳ್ಳಬಾರದಿತ್ತು, ಪಾತ್ರ ಮಾಡುವಾಗ ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕು. ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನು ವೇದಿಕೆಗೆ ತರಬಾರದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications