Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
1971ರ ಬಳಿಕ ನಾಳೆ ಮಾಕ್ ಡ್ರಿಲ್: ರಾಜ್ಯದ ಯಾವ ಜಿಲ್ಲೆಯಲ್ಲಿ ನಡೆಯಲಿದೆ? ಏನೆಲ್ಲಾ ಆಗಲಿದೆ?
ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದಲ್ಲಿ ಮತ್ತೆ ಹುಳಿ ಹಿಂಡಿದೆ. ಸದ್ಯ ಈಗ ಎರಡೂ ದೇಶದಲ್ಲಿ ಯುದ್ಧ ಭೀತಿ ಆರಂಭಗೊಂಡಿದೆ. ಭಾರತದ ಪ್ರತಿಯೊಂದು ಸೇನೆಯು ಈಗ ಯುದ್ಧಭ್ಯಾಸದಲ್ಲಿ ತೊಡಗಿರುವುದು ನೋಡಬಹುದು. ಸದ್ಯ ಈಗ 54 ವರ್ಷದ ಬಳಿಕ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್ ನಡೆಯುತ್ತಿದೆ.
1971ರಲ್ಲಿ ಮೊದಲ ಬಾರಿಗೆ ಮಾಕ್ ಡ್ರಿಲ್ ನಡೆಸಲಾಗಿತ್ತು. ಈಗ ಮತ್ತೆ ಯುದ್ಧ ಭೀತಿ ಹಿನ್ನೆಲೆ ದೇಶದಾದ್ಯಂತ ಈ ಮಾಕ್ ಡ್ರಿಲ್ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು 244 ಜಿಲ್ಲೆಗಳಲ್ಲಿ ಈ ಮಾಕ್ ಡ್ರಿಲ್ ನಡೆಯಲಿದೆ. ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ.

ಹಾಗಾದ್ರೆ ನಾಳೆ ಏನೆಲ್ಲಾ ನಡೆಯಲಿದೆ? ಮಾಕ್ ಡ್ರಿಲ್ ಅಂದ್ರೇನು? 1971ರಲ್ಲಿ ಮಾಕ್ ಡ್ರಿಲ್ ನಡೆಸಿದ್ಯಾಕೆ? ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳೋಣ.
ಮಾಕ್ ಡ್ರಿಲ್ ಅಥವಾ ಅಣುಕು ಪ್ರದರ್ಶನವು ಯುದ್ದದ ಸಮಯವು ಯಾವ ರೀತಿಯಲ್ಲಿರುತ್ತೆ. ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ಜನರಲ್ಲಿ ಅರಿವು ಮೂಡಿಸುವುದಾಗಿದೆ. ಇದಕ್ಕಾಗಿ ಆಯ್ದ ಪ್ರದೇಶ, ಆಯ್ದ ಜನಸಂಖ್ಯೆ ಹಾಗೆ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಅಣುಕು ಪ್ರದರ್ಶನವು ಗ್ರಾಮೀಣ ಮಟ್ಟದಲ್ಲೂ ನಡೆಸಲಾಗುತ್ತಿದೆ.
ಒಂದು ವೇಳೆ ಶತ್ರು ದೇಶದಿಂದ ದಾಳಿ ಆದಾಗ ಏನು ಮಾಡಬೇಕು? ಯಾವ ರೀತಿ ತಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದನ್ನು ನೋಡಬಹುದು. ಹಾಗೆ ಈ ಸಮಯದಲ್ಲಿ ರಾಜ್ಯಗಳ ವಿಪತ್ತು ನಿರ್ವಹಣಾ ಅಧಿಕಾರಿಗಳು ಕಾಲಕಾಲಕ್ಕೆ ಅಣಕು ಪ್ರದರ್ಶನ ನಡೆಸಲಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಶತ್ರು ರಾಷ್ಟ್ರಕ್ಕೆ ಮುಖ್ಯ ಕಟ್ಟಡಗಳು, ಪ್ರವಾಸಿ ಸ್ಥಳಗಳು ಕಾಣಿಸದಂತೆ ಮಾಡಲು ಈ ಕ್ರಮಕ್ಕೆ ಮುಂದಾಗಲಾಗುತ್ತದೆ. ಇದರಲ್ಲಿ ಜಿಲ್ಲಾ ನಿಯಂತ್ರಕರು, ಜಿಲ್ಲೆಯ ವಿವಿಧ ಅಧಿಕಾರಿಗಳು, ಗೃಹರಕ್ಷಕ ದಳ, ಎನ್‌ಸಿಸಿ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಣಕು ಪ್ರದರ್ಶನದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಬಾಂಗ್ಲಾದೇಶದ ವಿಭಜನೆಯ ಸಮಯದಲ್ಲಿ ಮೊದಲ ಬಾರಿಗೆ ಈ ಮಾಕ್ ಡ್ರಿಲ್ ನಡೆದಿತ್ತು. ಈ ಸಮಯದಲ್ಲೂ ಕೂಡ ರಕ್ಷಣಾ ಪಡೆಗಳು ಮಾಕ್ ಡ್ರಿಲ್ ಮಾಡಿದ್ದವು. ಈಗ ಮತ್ತೆ ಇದೇ ರೀತಿಯ ಅಣುಕು ಪ್ರದರ್ಶನ ನಡೆಯುತ್ತಿದೆ. ಆದ್ರೆ ಈ ವೇಳೆ ಪಂಜಾಬ್‌ನಲ್ಲಿ ಮಾತ್ರ ಈ ಡ್ರಿಲ್ ನಡೆದಿತ್ತು. ನಾಳೆ ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಲಾಗಿದೆ. ರಾತ್ರಿ 9 ಗಂಟೆಯಿಂದ 9:30ರ ವರೆಗೆ ವಿದ್ಯುತ್ ನಿಲುಗಡೆ ಹಾಗೆ ಈ ಅಣುಕು ಪ್ರದರ್ಶನವು ಜಮ್ಮು-ಕಾಶ್ಮೀರ, ಪಂಜಾಬ್, ಹರಿಯಾಣ ಸೇರಿ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಸೇರಿ ವಿವಿಧ ರಾಜ್ಯಗಳಲ್ಲಿಯೂ ನಡೆಯಲಿದೆ.
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಾಕ್ ಡ್ರಿಲ್ ನಡೆಯಲಿದೆ?
ರಾಜ್ಯದ ಎರಡು ರಾಜ್ಯದಲ್ಲಿ ಮಾಕ್ ಡ್ರಿಲ್ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಎಲ್ಲಾ ಜಿಲ್ಲೆಯಲ್ಲಿ ಮಾಕ್ ಡ್ರಿಲ್ ಒಂದೇ ಸಮಯದಲ್ಲಿ ನಡೆಯುವುದು ಸಾಧ್ಯವಿಲ್ಲ. ಹೀಗಾಗಿ ಎರಡು ಜಿಲ್ಲೆಯಲ್ಲಿ ನಡೆಯಲು ಉದ್ದೇಶಿಸಲಾಗಿದೆ. ರಾಜ್ಯದ ಎರಡು ಜಿಲ್ಲೆಗಳಾದ ರಾಯಚೂರು ಹಾಗೂ ಬೆಂಗಳೂರಿನಲ್ಲಿ ಈ ಮಾಕ್ ಡ್ರಿಲ್ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ನಾಳೆಯ ಮಾಕ್ ಡ್ರಿಲ್ ಕುರಿತಾಗಿ ಬಹಳ ಕುತೂಹಲಗಳು ಮೂಡಿವೆ. ರಾಜತಾಂತ್ರಿಕ ಮಾತುಕತೆಗೆ ಮುಂದಾಗಬಹುದೇ ಎಂಬುದು ಕೂಡ ನಿಗೂಢವಾಗಿದೆ.



Click it and Unblock the Notifications











