Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ಗ್ರಾಮದಲ್ಲಿ ನಾಯಿ, ಬೆಕ್ಕು ಸಾಕಲ್ಲ ಬದಲಿಗೆ ವಿಷ ಸರ್ಪಗಳೇ ಸಾಕು ಪ್ರಾಣಿಗಳು!
ನಾಯಿ, ಬೆಕ್ಕು, ಕುದುರೆ ಅಂತ ಸಾಕು ಪ್ರಾಣಿಗಳನ್ನು ನೋಡಿದ್ದೇವೆ, ಆದರೆ ಹಾವುಗಳನ್ನು ಸಾಕು ಪ್ರಾಣಿಯಂತೆ ಸಾಕುವವರನ್ನು ನೋಡಿದ್ದೀರಾ? ಕೆಲವರು ತಮ್ಮ ಮನೆಯಲ್ಲಿ ನೂರಾರು ಹಾವುಗಳನ್ನು ಸಾಕಿರುವುದು ಇದೆ, ಅದರೆ ಸಾಕು ಪ್ರಾಣಿಗಳಂತೆ ಊರಿಗೇ ಊರೇ ಹಾವುಗಳನ್ನು ಮನೆಯಲ್ಲಿ ಸಾಕುತ್ತಿರುವ ಗ್ರಾಮ ಮಹಾರಾಷ್ಟ್ರದಲ್ಲಿದೆ.

ಶೆತ್ಪಾಲ್ ಗ್ರಾಮದಲ್ಲಿ ವಿಷ ಶರ್ಪಗಳೇ ಪ್ರಮುಖ ಅತಿಥಿಗಳು
ಇಲ್ಲಿ ಹಾವುಗಳಿಗೆ ವಿಸೇಷ ಗೌರವ ನೀಡಲಾಗುವುದು, ನಾಗರ ಹಾವು ಮನೆಗೆ ಬಂದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ, ಹಾವುಗಳಿಗೆ ಇರಲೆಂದೇ ವ್ಯವಸ್ಥೆ ಮಾಡಲಾಗುವುದು. ಈ ಪದ್ಧತಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ, ಈಗಲೂ ಪಾಲಿಸಲಾಗುತ್ತಿದೆ.
ಈ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿ ನಾಯಿ- ಬೆಕ್ಕುಗಳು ಕಾಣ ಸಿಗಲ್ಲ
ನೀವು ಯಾರಾದರೂ ಮನೆಗೆ ಹೋದರೆ ಅಲ್ಲಿ ನಾಯಿ ಬೊಗಳಿಕೊಂಡು ಬರಲ್ಲ, ಬೆಕ್ಕಿನ ಮ್ಯಾಂವ್.. ಮ್ಯಾವ್ ಕೇಳಿಸಲ್ಲ, ಬದಲಿಗೆ ಹಾವು ಮನೆಯೊಳಗಡೆ ಹಾಯಾಗಿ ಮಲಗಿರುತ್ತದೆ. ಹಾವು ಒಂದು ಕಡೆ ಮಲಗಿದ್ದರೆ ಮಕ್ಕಳು ಕೂಡ ಅಲ್ಲಿಯೇ ಆಡವಾಡುತ್ತಿರುತ್ತವೆ, ಅ ಹಾವುಗಳು ಮಕ್ಕಳಿಗೆ ಏನೂ ಮಾಡುವುದಿಲ್ಲ, ಮನೆಯಲ್ಲಿ ಒಬ್ಬ ಸದಸ್ಯನಂತೆ ಇರುತ್ತದೆ. ಈ ಗ್ರಾಮದಲ್ಲಿ ಇದುವರೆಗೆ ಯಾರು ಹಾವು ಕಚ್ಚಿ ಸತ್ತಿರುವ ಉದಾಹರಣೆಯೇ ಇಲ್ಲ, ಇಲ್ಲಿ ಹಾವು ಹಾಗೂ ಮನುಷ್ಯರ ನಡುವೆ ಒಳ್ಳೆಯ ಸಂಬಂಧವಿರುತ್ತದೆ. ಏಕೆ ಹಾವುಗಳು ಈ ಗ್ರಾಮದಲ್ಲಿ ಯಾರಿಗೂ ಹಾನಿ ಮಾಡಲ್ಲ ಎಂಬ ಕಾರನ ಮಾತ್ರ ನಿಗೂಢ.
ಹಾವನ್ನು ಶಿವನೆಂದೇ ಆರಾಧನೆ ಮಾಡುತ್ತಿರುವ ಗ್ರಾಮವದು
ನಮ್ಮ ಕಲ್ಪನೆಯಲ್ಲಿರುವ ಶಿವನಲ್ಲಿ ಕುತ್ತಿಗೆ ಸುತ್ತ ಹಾವು ಸುತ್ತಿರುತ್ತದೆ, ಹಾಗಾಗಿ ಈ ಗ್ರಾಮದಲ್ಲಿ ಹಾವಿನಲ್ಲಿಯೆ ಶಿವನನ್ನು ಕಾಣಲಾಗುವುದು. ಹಾಗಾಗಿ ಹಾವು ಕಂಡರೆ ಯಾವುದೇ ಭಯವಿರಲ್ಲ, ಅಲ್ಲದೆ ಇಲ್ಲಿ ಹಾವು ಪೂಜಿಸಲಾಗುವುದು.
ಆದರೆ ಹೊರಗಿನವರು ಜಾಗ್ರತೆ ಮಾಡಬೇಕು
ಹಾವುಗಳು ಈ ಊರಿನವರಿಗೆ ಏನೂ ಮಾಡುವುದಿಲ್ಲ, ಆದರೆ ಹೊರಗಿನವರಿಗೆ ಹಾವು ಬಳಿ ಹೋಗದಂತೆ ಸೂಚಿಸಲಾಗುವುದು. ಏಕೆಂದರೆ ಹಾವುಗಳು ಮನೆಯವರ ಜೊತೆ ಫ್ರೀ ಆಗಿ ಇದ್ದಂತೆ ಅಪರಿಚಿತರ ಜೊತೆ ಇರುವುದಿಲ್ಲ.
ಹಾವುಗಳನ್ನು ತುಂಬಾನೆ ಚೆನ್ನಾಗಿ ಆರೈಕೆ ಮಾಡುತ್ತಾರೆ
ಅವರು ತಮ್ಮ ಮನೆಯಲ್ಲಿ ಸಾಕಿರುವ ಹಾವಿಗೆ ಅದು ತಿನ್ನುವ ಆಹಾರ ನೀಡುತ್ತಾರೆ, ಅಲ್ಲದೆ ಕಾಯಿಲೆ ಬರದಂತೆ ಆರೈಕೆ ಮಾಡಲಾಗುವುದು.
ಹಾವುಗಳು ಇವರ ಜೊತೆ ತುಂಬಾ ಆರಾಮವಾಗಿ ಇರುತ್ತವೆ. ಅಲ್ಲಿಯೇ ಓಡಾಡಿಕೊಂಡು ಮನೆಯವರು ಕೈಯಲ್ಲಿ ಹಿಡಿದರೂ ಏನೂ ಮಾಡದೆ ಸುಮ್ಮನೆ ಅವರನ್ನು ಸುತ್ತಿಕೊಂಡು ಇರುತ್ತದೆ, ಅಲ್ಲದೆ ಇಲ್ಲಿ ಹಾವಿನ ವಿಷ ತೆಗೆದು ಸಾಕುವುದಿಲ್ಲ , ಬದಲಿಗೆ ವಿಷ ಸರ್ಪವನ್ನೇ ಸಾಕುತ್ತಾರೆ. ಇವುಗಳನ್ನು ಕೇಳಿದಾಗ ಎಷ್ಟೊಂದು ವಿಚಿತ್ರ ಅಲ್ವಾ? ಅನಿಸುವುದು, ಹೌದು ಈ ದೇಶದಲ್ಲಿ ಎಷ್ಟೋ ನಿಗೂಢಗಳಿವೆ, ವಿಸ್ಮಯಗಳಿವೆ, ವೈಜ್ಞಾನಿಕ ತರ್ಕಗಳಿಗೆ ನಿಲ್ಲದ ವಿಷಯಗಳಿವು, ಇಲ್ಲಿ ನಂಬಿಕೆಯೇ ಪ್ರಧಾನ.



Click it and Unblock the Notifications
