Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಏ.14ಕ್ಕೆ ಮೇಷ ಸಂಕ್ರಾಂತಿ: ಈ ದಿನದ ಮಹತ್ವವೇನು? ಒಳಿತಾಗಲು ಈ ದಿನ ಮಾಡಬೇಕಾದ ಪರಿಹಾರಗಳೇನು?
ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಪ್ರತಿತಿಣಗಳು ತನ್ನ ಪಠ ಬದಲಾಯಿಸುತ್ತಾನೆ. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುವುದು. ಈ ಏಪ್ರಿಲ್ 14ಕ್ಕೆ ಸೂರ್ಯನು ಹಿಂದೂ ಮಾಸದ ಮೊದಲ ತಿಂಗಳಾದ ಮೇಷ ರಾಶಿಯನ್ನು ಪ್ರವೇಶಿಸಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಹಿಂದೂ ಹೊಸ ವರ್ಷ ಪ್ರಾರಂಭವಾಗುವುದೇ ಮೇಷ ಸಂಕ್ರಾಂತಿಯಿಂದ. ಈ ವರ್ಷ ಮೇಷ ಸಂಕ್ರಾಂತಿಯನ್ನು ವೈಶಾಖ ಮಾಸದಲ್ಲಿ ಆಚರಿಸಲಾಗುವುದು, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 14ಕ್ಕೆ ಮೇಷ ಸಂಕ್ರಾಂತಿ.

ಮೇಷ ಸಂಕ್ರಾಂತಿ ದಿನಾಂಕ ಮತ್ತು ಸಮಯ
ಮೇಷ ಸಂಕ್ರಾಂತಿ ಪುಣ್ಯ ಕಾಲ: ಏಪ್ರಿಲ್ 14, 2023 ಬೆಳಗ್ಗೆ 10:55ರಿಂದ ಸಂಜೆ 06:46ರವರೆಗೆ
ಮೇಷ ಸಂಕ್ರಾಂತಿ ಮಹಾ ಪುಣ್ಯ ಕಾಲ: ಏಪ್ರಿಲ್14, 2023 ಮಧ್ಯಾಹ್ನ 01:04ರಿಂದ 05:20ರವರೆಗೆ
ಮೇಷ ಸಂಕ್ರಾಂತಿ ಮಹತ್ವ
ಮೇಷ ಸಂಕ್ರಾಂತಿಯನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಹರಿದ್ವಾರ, ಕಾಶಿ, ರಿಷಿಕೇಶ್, ಮಥುರಾ ಮತ್ತಿತರ ಪುಣ್ಯ ಸ್ಥಳಗಳಿಗೆ ಹೋಗಿ ಪುಣ್ಯ ನದಿಗಳಲ್ಲಿ ಈ ದಿನ ಜನರು ಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ. ಈ ದಿನ ಭಕ್ತರು ಶಿವ ಹಾಗೂ ಶ್ರೀ ವಿಷ್ಣುವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
ದೇಶದ ವಿವಿಧ ಕಡೆ ವಿವಿಧ ಹೆಸರಿನಿಂದ ಆಚರಿಸಲಾಗುವುದು
* ಕರ್ನಾಟಕದಲ್ಲಿ ಮೇಷ ಸಂಕ್ರಾಂತಿಯೆಂದು ಆಚರಿಸಲಾಗುವುದು
* ತಮಿಳುನಾಡಿನಲ್ಲಿ ಪುತ್ತಾಂಡ್ ಅಂದರೆ ಹೊಸ ವರ್ಷವೆಂದು ಆಚರಿಸಲಾಗುವುದು.
* ಕೇರಳದಲ್ಲಿ ಈ ದಿನ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು.
* ಒಡಿಸ್ಸಾದಲ್ಲಿ ಪನ ಸಂಕ್ರಾಂತಿ ಎಂದು ಆಚರಿಸಲಾಗುವುದು.
* ಪಶ್ಚಿಮ ಬಂಗಾಳದಲ್ಲಿ ನಬ ಬರ್ಷ ಎಂದರೆ ಹೊಸ ವರ್ಷ ಎಂದು ಆಚರಿಸಲಾಗುವುದು.
* ಅಸ್ಸಾಂ ಹಾಗೂ ಪಂಜಾಬ್‌ನಲ್ಲಿ ಬಿಹು ಎಂದು ಆಚರಿಸಲಾಗುವುದು.
ಈ ದಿನ ಏನು ಮಾಡಬೇಕು?
* ಬೆಳಗ್ಗೆ ಬೇಗನೆ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಬೇಕು.
* ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದವರು ತಮ್ಮ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿ.
* ನಂತರ ದೇವರಿಗೆ ದೀಪ ಹಚ್ಚಿ ಶಿವ, ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಲಾಗುವುದು.
ಈ ದಿನ ಕಷ್ಟಗಳ ನಿವಾರಣೆಗೆ ಈ ಪರಿಹಾರ ಮಾಡಿ
* ಸೂರ್ಯನಿಗೆ ಆರ್ಘ್ಯ ಸಲ್ಲಿಸಿ, ಸೂರ್ಯನ ಮಂತ್ರಗಳನ್ನು ಪಠಿಸಿ
* ಬ್ರಾಹ್ಮಣರಿಗೆ ವಸ್ತ್ರಗಳನ್ನು ನೀಡಿ
* ಅಗ್ಯತವಿರುವವರಿಗೆ ಆಹಾರ, ವಸ್ತ್ರಗಳನ್ನು ದಾನ ಮಾಡಿ.
* ವೃದ್ಧಾಶ್ರಮಕ್ಕೆ ಹೋಗಿ ಆಹಾರ ದಾನ ಮಾಡಿ.
* ಪಿತೃದೋಷವಿರುವವರು ಪಿತೃಪೂಜೆ ಮಾಡಿಸಿ.
ಆದಿತ್ಯ ಹೃದಯಂ ಮಂತ್ರ:
।। ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್
ಜಯಾವಹಂ ಜಪಂ ನಿತ್ಯಮಕ್ಷಯಂ ಪರಮಂ ಶಿವಮ್ ।।



Click it and Unblock the Notifications

