Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಾಡಾನೆಗೆ ಚಪ್ಪಲಿ ಎಸೆದು ಮನುಷ್ಯರ ಕುಚೇಷ್ಠೆ: ಅರಣ್ಯಾಧಿಕಾರಿ ಹಂಚಿಕೊಂಡ ವೀಡಿಯೋ ವೈರಲ್
ವನ್ಯಪ್ರಾಣಿಗಳ ಜೊತೆ ಮನುಷ್ಯನ ಕುಚೇಷ್ಠಯ ವೀಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಕೆಲ ಮನುಷ್ಯರು ತಮ್ಮ ಕುಚೇಷ್ಠಯಿಂದಲೇ ಪ್ರಾಣಿಗಳಿಗೆ ಬಲಿಯಾಗುತ್ತಾರೆ, ಅಂಥದ್ದೊಂದು ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇಂಡಿಯನ್ ಫಾರಸ್ಟ್ ಸರ್ವೀಸ್ ಆಫೀಸರ್ ಪ್ರವೀಣ್ ಕೇಶ್ವನ್ ಹಂಚಿಕೊಂಡಿದ್ದು ವೀಡಿಯೋ ಇದೀಗ ವೈರಲ್ ಆಗಿದೆ. ಜನರ ವರ್ತನೆ ಬಗ್ಗೆ ನೆಟ್ಟಗರು ಕಮೆಂಟ್ ಮೂಲಕ ಟೀಕಿಸುತ್ತಿದ್ದಾರೆ.
ಇದು ಅಸ್ಸಾಂನಲ್ಲಿ ನಡೆದಂಥ ಘಟನೆ. ಅದರಲ್ಲಿ ಕಾಡಾನೆಯನ್ನು ಚುಡಾಯಿಸುವ ಕೆಲಸವನ್ನು ಜನರ ಗುಂಪೊಂದು ಮಾಡುತ್ತಿದೆ. ಅದರತ್ತ ಚಪ್ಪಲಿ ಎಸೆಯುವ ಮೂಲಕ ಅದರ ಆಕ್ರೋಶ ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹೋಗುತ್ತಿದ್ದ ಆನೆ ಇವರುಗಳ ಪುಂಡಾಟದಿಂದಾಗಿ ಮತ್ತೆ ಹಿಂದಿರುಗಿ ಬಂದಿದೆ. ಜನರ ಹಾಗೂ ಮನುಷ್ಯರ ನಡುವೆ ಕಡಂಗ( ಆನೆ ದಾಟದಂತೆ ತೋಡುವ ಗುಂಡಿ) ಇದೆ.

ಜನರಿಗೆ ಭಂಡ ಧೈರ್ಯ, ಆನೆ ಅದನ್ನು ದಾಟಿ ಬರಲ್ಲ ಎಂದು ಅದನ್ನು ಕೆಣಕುತ್ತಿದ್ದರೆ, ಆದರೆ ಕೆಲವೊಮ್ಮೆ ಅಂಥ ಗುಂಡಿಗೆ ಆನೆ ಜಾರಿಕೊಂಡು ಬರುತ್ತದೆ, ಮೇಲಕ್ಕೆ ಹತ್ತಲು ಕಷ್ಟವಾಗಬಹುದು, ಆದರೆ ಜಾರಿಕೊಂಡು ಬರಲು ಅದಕ್ಕೆ ಕಷ್ಟವಲ್ಲ. ಒಂದು ವೇಳೆ ಹಾಗೇನದರೂ ಆಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಅರಣ್ಯಾಧಿಕಾರಿ ಈ ವೀಡಿಯೋ ಶೇರ್ ಮಾಡಿ, ಇದರಲ್ಲಿ ನಿಜವಾದ ಪ್ರಾಣಿ ಯಾವುದು ಎಂದು ಗುರುತಿಸಿ ಎಂದು ಕ್ಯಾಪ್ಷನ್ ಹಾಕುವ ಮೂಲಕ ಪ್ರಾಣಾಪಾಯ ಉಂಟಾಗುವ ಇಂಥ ಕಾರ್ಯಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ (Identify the real animal here. Then these giants charge & we call them killers. Dont ever do this, it's life threatening. Video is from Assam.). ಈ ವೀಡಿಯೋ ಕೂಡ ಗಮನ ಸೆಳೆಯುತ್ತಿದೆ.
Identify the real animal here. Then these giants charge & we call them killers. Dont ever do this, it’s life threatening. Video is from Assam. pic.twitter.com/e1yltV4RQP
— Parveen Kaswan, IFS (@ParveenKaswan) December 7, 2023
ಜನರು ಈ ತಪ್ಪುಗಳನ್ನು ಮಾಡುವುದನ್ನು ಬಿಡುವುದೇ ಇಲ್ಲ
ಕಾಡಾನೆ ಕಂಡಾಗ ಜನರು ಇಂಥ ವರ್ತನೆ ತೋರಿರುವ ಎಷ್ಟೋ ವೀಡಿಯೋಗಳಿವೆ, ಸಾಮಾನ್ಯವಾಗಿ ಕಾಡಾನೆಗಳನ್ನು ಕೆಣಕಿದರೆ ದೊಡ್ಡ ಅಪಾಯವೇ ಉಂಟಾಗಬಹುದು, ಅವುಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಏನೂ ಸಂಭವಿಸುವುದಿಲ್ಲ. ಚಪ್ಪಲಿ ಎಸೆದು, ಅದರ ಸಮೀಪ ಹೋಗುವ ಪ್ರಯತ್ನ ಮಾಡುವ ಮೂಲಕ ಅದನ್ನು ಕೆಣಕುವ ಪ್ರಯತ್ನ ಮಾಡಲೇಬಾರದು.
ದಿವ್ಯವೈಷ್ಣು ಪಾಂಡೆ 'RIP in advance for them. Om shanti' ಎಂದು ಕಮೆಂಟ್ ಮಾಡಿದರೆ
ವಿವೇಕ್ ಎಂಬವವರು ಅರ್ಜುನನ ಬಗ್ಗೆ ಕೂಡ ಈ ರೀತಿ ಕೇಳಿದ್ದಾರೆ
ಸರ್ ಕರ್ನಾಟಕದಲ್ಲಿ ಉಂಟಾದ ಅರ್ಜುನನ ಸಾವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವನ ಸಾವಿಗೆ ಹೊಣೆ ಯಾರು, ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಆನೆಗಳಲ್ಲಿ ಒಂದಾಗಿರುವ ಅರ್ಜುನನ ಸಾವಿನಿಂದ ಜನ ಇನ್ನೂ ಹೊರ ಬಂದಿಲ್ಲ ಎಂದು ಬರೆದಿದ್ದಾರೆ.
(Sir , what's your opinion on death of Elephant ARJUNA in Karnataka,
Who is the real responsible for it's death ,
As it is considered as one of the gaint in capitive and Karnataka ppl still didn't came out from shock of its death. it is loved unconditionally)
ಮತ್ತೊಬ್ಬರು ' ಈ ರೀತಿ ಮಾಡುವ ಅಗ್ಯತ ಏನಿತ್ತು? ಅದೇನು ಅವರ ಹೊಲ, ಗದ್ದೆಗೆ ಹೋಯ್ತೇ? ಅದು ಕಾಡಿನಲ್ಲಿ ತಾನೆ ಇತ್ತು, ಅವರನ್ನು ನೋಡಿದರೆ ರೈತರ ಕಾಣಲ್ಲ ಎಂದು ಕಮೆಂಟಿಸಿದ್ದಾರೆ.
We need context, right ? Is it near a field /village? Are they trying tp protect their crops. Have to admit these folks don't look like farmers though.
ಈ ವೀಡಿಯೋ ನೋಡಿ ನಿಮಗೇನು ಅನಿಸಿತ್ತು, ಕಮೆಂಟ್ ಮಾಡಿ...



Click it and Unblock the Notifications











