Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೆಂಪು ಬಣ್ಣಕ್ಕೆ ತಿರುಗಿದ ಮೇಘಾಲಯದ ಅತ್ಯಂತ ಸ್ವಚ್ಛ ನದಿ; ಕಾರಣ ಕೇಳಿ 15 ಲಕ್ಷ ದಂಡ ವಸೂಲಿ!
ನೀವು ಭಾರತದಲ್ಲಿ ಯಾವುದಾದರು ಬೇರೆ ರಾಜ್ಯಕ್ಕೆ ಪ್ರವಾಸ ತೆರಳುವ ಆಲೋಚನೆಯನ್ನು ಹಾಕಿಕೊಂಡರೆ ಬಹುತೇಕರ ಮೊದಲ ಆಯ್ಕೆ ಈಶಾನ್ಯ ಭಾಗದ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನೋಡಬಹದು. ಅದ್ರಲ್ಲೂ ಅಸ್ಸಾಂ, ಸಿಕ್ಕಿಂ, ಮೇಘಾಲಯವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಪ್ರದೇಶಗಳು. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನೀವು ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಪ್ರವಾಸ ಮಾಡುವಿರಿ.
ಇನ್ನು ಅಲ್ಲಿನ ಹವಾಮಾನ ಕೂಡ ಇದಕ್ಕೆ ಪೂರಕವಾಗಿರಲಿದೆ. ನಿಮ್ಮ ಕಣ್ಣುಗಳು ಎಷ್ಟು ದೂರ ನೋಡಿದರು ಬರೀ ಹಸಿರು ಮಾತ್ರ ಕಾಣಿಸಲಿದೆ. ಹಾಗೆ ಅಲ್ಲಿನ ಪರಿಸರ ನಿಮ್ಮಲ್ಲಿ ಹೊಸತನ ತರಲಿದೆ. ಇನ್ನು ಈ ಪ್ರದೇಶಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಸಿರು ಕಣಿವೆಗಳು, ಎತ್ತರದ ಬೆಟ್ಟ, ಪರ್ವತಗಳು, ನದಿ, ಸರೋವರಗಳು ಈಗ ಪ್ರವಾಸಿಗರಿಂದ ತುಂಬಿರಲಿದೆ.

ಇಂತಹ ಅದ್ಭುತ ಸೌಂದರ್ಯ ತನ್ನಲ್ಲಿಟ್ಟುಕೊಂಡಿರುವ ಮೇಘಾಲಯದ ಹಲವು ವಿಡಿಯೋಗಳು ಸಾಮಾಜಿಕ ಜಾಲಾಣದಲ್ಲಿ ನೋಡಬಹುದು. ಅದ್ರಲ್ಲೂ ಏಷ್ಯಾದ ಅತ್ಯಂತ ಸ್ವಚ್ಛ ನದಿ ಅಥವಾ ಕ್ಲೀನ್ ವಾಟರ್ ಹೊಂದಿರುವ ನದಿ ಎಂಬ ಹೆಗ್ಗಳಿಕೆ ಪಡೆದ ಉಮ್‌ಗೋಟ್ ನದಿ ಸಹ ಇಲ್ಲಿಯೇ ಹರಿಯುತ್ತದೆ. ಇಲ್ಲಿನ ಡಾಕಿ ಪ್ರದೇಶದಲ್ಲಿ ಹರಿಯುವ ನದಿ ನೀರು ಅತ್ಯಂತ ಸ್ವಚ್ಛವಾಗಿದೆ. ಗಾಜಿನಂತೆ ಹೊಳೆಯುವ ನೀರು ಹೊಂದಿರುವ ನದಿ ಇದು.
ಆದ್ರೆ ಈಗ ಈ ನದಿ ನೀರು ಸಂಪೂರ್ಣ ಹಾಳಾಗಿದೆ. ಅದ್ರಲ್ಲೂ ಪ್ರವಾಹದ ನೀರಿನಂತೆ ಬಣ್ಣ ಬದಲಾಗಿದ್ದು, ಪ್ರವಾಸಿಗರು ಸೇರಿ ಅಲ್ಲಿನ ಸ್ಥಳೀಯರಿಗೆ ಅಚ್ಚರಿ ತರಿಸಿದೆ. ಮೇಘಾಲಯದ ಪ್ರವಾಸಿಗರಿಗೆ ಇದು ಪ್ರಮುಖ ಕೇಂದ್ರ ಸ್ಥಾನ ಎನಿಸಿತ್ತು ಆದರೆ ಈಗ ನೀರು ಕೆಂಪು ಬಣ್ಣಕ್ಕೆ ತಿರುಗಿಸುರುವುದು ಹೊಸ ಆತಂಕದ ಜೊತೆಗೆ ನಿರಾಸೆ ಕೂಡ ತರಿಸುತ್ತಿದೆ.
ನದಿ ನೀರು ಈ ಬಣ್ಣಕ್ಕೆ ತಿರುಗಿದ್ದು ಏಕೆ?
ಈ ನದಿ ನೀರು ಎಷ್ಟು ತಿಳಿಯಾಗಿತ್ತು ಅಂದರೆ ನದಿಯ ತಳದಲ್ಲಿ ಏನಿದೆ ಎಂಬುದನ್ನು ಮೇಲಿನಿಂದಲೇ ನೋಡಬಹುದಿತ್ತು. ಅಷ್ಟು ಸ್ವಚ್ಛವಾಗಿತ್ತು. ಆದ್ರೆ ಈಗ ಕೆಂಪು ಬಣ್ಣದ ಕೆಸರು ನೀರಾಗಿ ಬದಲಾಗಿದೆ. ಪ್ರವಾಹದಲ್ಲಿ ನೀವು ನೋಡುವ ನೀರಿನ ಬಣ್ಣಕ್ಕೆ ಬದಲಾಗಿದೆ. ಈ ಕುರಿತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಪ್ರವಾಸಿಗರು ನೋಡುಗರು ಇದನ್ನು ಕಂಡು ಶಾಕ್‌ಗೆ ಒಳಗಾಗಿದ್ದಾರೆ.
ಆದರೆ ಈ ನದಿ ನೀರು ತನ್ನ ಬಣ್ಣಬದಲಾಯಿಸಲು ಒಂದು ಮಾನವ ನಿರ್ಮಿತ ಕಾರಣವಿದೆ. ಅದೇ ರಸ್ತೆ ಕಾಮಗಾರಿ. ಈ ನದಿ ದಟ್ಟ ಕಾಡುಗಳ ನಡುವೆ ಹಾದು ಹೋಗುತ್ತದೆ. ಪ್ರವಾಸಿಗರು ಇಲ್ಲಿಗೆ ತಲುಪಬೇಕಾದರೆ ಹರಸಹಸಪಡಬೇಕಿದೆ. ಈ ನಡುವೆ ಅಲ್ಲಿನ ಸರ್ಕಾರವು ಅನುದಾನಿತ ಶಿಲ್ಲಾಂಗ್-ಡಾವ್ಕಿ ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ರೀತಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ನದಿ ನೀರಿನ ಬಣ್ಣ ಬದಲಾವಣೆಗೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಕಾರ್ಯಗತಗೊಳಿಸಿದ 90 ಕಿಮೀ ಯೋಜನೆಯು, ಉತ್ಖನನ ಮಾಡಿದ ಮಣ್ಣು ಮತ್ತು ತ್ಯಾಜ್ಯವನ್ನು ನದಿ ಮತ್ತು ಅದರ ಉಪನದಿಗಳಿಗೆ ಸುರಿದಿರುವುದು ಇದಕ್ಕೆ ಕಾರಣವಾಗಿದೆ. ಮೇಘಾಲಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (MSPCB) ನಡೆಸಿದ ಪರಿಶೀಲನೆಯಲ್ಲಿ ಯೋಜನಾ ಕಾರಿಡಾರ್ ಉದ್ದಕ್ಕೂ ಪರಿಸರ ನಿಯಮಗಳ ಬಹು ಉಲ್ಲಂಘನೆ ಕಂಡುಬಂದಿದೆ. ಹೀಗಾಗಿ ಪ್ರಾಧಿಕಾರಕ್ಕೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸದ್ಯ ನೀರಿನ ಬಣ್ಣ ಬದಲಾಯಿಸಿದ ಹಿನ್ನೆಲೆ ಅಲ್ಲಿನ ಸ್ಥಳೀಯರಿಗೆ ದೊಡ್ಡ ಆಘಾತ ತರಿಸಿದೆ. ಸದ್ಯ ಪ್ರವಾಸಿಗರಿಂದ ತುಂಬಿದ ಸ್ಥಳ ಈಗ ನದಿ ನೀರು ನೊಡಿ ನಿರಾಸೆಯಿಂದ ಮರಳುವಂತಾಗಿದೆ.



Click it and Unblock the Notifications
