ಕುಂಭಮೇಳಕ್ಕೆ ಬಂದ ಐಐಟಿ ಬಾಬಾ: ಐಐಟಿ ಮುಂಬೈಯಲ್ಲಿ ಓದಿ, ಈಗ ಸಾಧುವಾಗಿರುವ ವ್ಯಕ್ತಿಯ ವೀಡಿಯೋ ವೈರಲ್

ಜನವರಿ 13ರಿಂದ ಮಹಾ ಕುಂಭಮೇಳ ಶುರುವಾಗಿದೆ, ಲಕ್ಷಾಂತರ ಹಿಂದೂಗಳು ಈ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ.

ಕುಂಭಮೇಳದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಹಾಗೂ ಈ ವಿಶೇಷ ಸಂಭ್ರಮದಲ್ಲಿ ಭಾಗಿಯಾಗುವ ಸಾಧು ಸಂತರು, ಅಘೋರಿಗಳು. ಧಾರ್ಮಿಕ ಕ್ಷೇತ್ರದಲ್ಲಿ ತುಂಬಾ ಸಾಧನೆ ಮಾಡಿದವರು, ಧಾರ್ಮಿಕ, ಆಧ್ಯಾತ್ಮಕವಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು ಈ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ.

Maha Kumbh 2025

ಈ ವರ್ಷ ನಡೆಯುತ್ತಿದೆ ಮಹಾಕುಂಭಮೇಳ
2025ನೇ ಸಾಲಿನ ಕುಂಭಮೇಳ ಇನ್ನಷ್ಟು ವಿಶೇಷವಾಗಿದೆ, ಏಕೆಂದರೆ ಈ ಬಾರಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳೆ ನಡೆಯುತ್ತಿದೆ. ಕುಂಭ ಸ್ನಾನಕ್ಕೆ ತುಂಬಾನೇ ಮಹತ್ವವಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಎಲ್ಲಾ ಕಷ್ಟಗಳು ದೂರಾಗುವುದು, ಮೋಕ್ಷ ದೊರೆಯುವುದು ಎಂಬುವುದು ನಂಬಿಕೆ.

ಕುಂಭಮೇಳದಲ್ಲಿ ಹೆಚ್ಚಾಗಿ ಗಮನ ಸೆಳೆಯುವ ವ್ಯಕ್ತಿಗಳೆಂದರೆ ಸಾಧು ಸಂತರು, ಈ ಬಾರಿ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಐಐಟಿ ಬಾಬಾ ವೈರಲ್‌ಆಗಿದ್ದಾರೆ.

ಇವರ ವಿದ್ಯಾರ್ಹತೆ ಕೇಳಿ ಪತ್ರಕರ್ತನಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯದೆ ಸುಮ್ಮನಾಗಿದ್ದಾರೆ

ಆ ಸಾಧು ನಾನು ಐಐಟಿ ಮುಂಬೈಯಲ್ಲಿ ಓದಿರುವುದು ಎಂದು ಹೇಳಿದ್ದನ್ನು ಕೇಳಿ ಇವರು ಒಂದು ಕ್ಷಣ ಅಚ್ಚರಿಪಟ್ಟರು. ಆ ಬಾಬಾ ಏರೋಸ್ಪೇಸ್‌ ಎಂಜಿನಿಯರ್‌ ಮಾಡಿದ್ದಾರೆ.

ಈ ಬಾಬಾ ಹುಟ್ಟಿ ಬೆಳೆದಿದ್ದು ಹರಿಯಾಣದಲ್ಲಿ, ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಡಿಸೈನರ್ ಕೂಡ ಹೌದು, ಇವರು ಎನಿಮೇಷನ್‌ ಕೂಡ ಗೊತ್ತಿದೆ, ಅವರು ತಮಗೆ ಗೊತ್ತಿರುವ ಟೆಕ್ನಾಲಜಿ ಬಗ್ಗೆ ಹೇಳುವಾಗ ಕೇಳುಗರಿಗೆ ಅಚ್ಚರಿಯಾಗುತ್ತೆ, ಇಷ್ಟೆಲ್ಲಾ ಓದಿ ಈಗ ಸಂಸ್ಯಾಸಿಯಾಗಿದ್ದಾರೆ, ತಮ್ಮ ದಾರಿ ಆಧ್ಯಾತ್ಮದ ಕಡೆಗೆ ಎಂದು ಆ ದಾರಿಯಲ್ಲಿ ಸಾಗುತ್ತಿದ್ದಾರೆ.

ಸಂನ್ಯಾಸಿಗಳಿಗೆ, ಸಾಧು ಸಂತರಿಗೆ ಈ ವಿಜ್ಞಾನ, ಟೆಕ್ನಾಲಾಜಿ ಇವುಗಳ ಬಗ್ಗೆ ಗೊತ್ತಿರಲ್ಲ ಎಂಬುವುದು ತಪ್ಪು ಕಲ್ಪನೆ, ದೊಡ್ಡ ಓದು ಓದಿದವರೂ ಆಧ್ಯಾತ್ಮದ ಕಡೆಗೆ ಒಲವು ತೋರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಈಗ ಈ ಸಾಧುವಿನ ವೀಡಿಯೋ ತುಂಬಾ ವೈರಲ್ ಆಗಿದ್ದು 1 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಬಂದಿದೆ.

ಎಲ್ಲೆಲ್ಲಿ ಕುಂಭಮೇಳ ನಡೆಯುತ್ತದೆ
ನಾಲ್ಕು ಕಡೆಗಳಲ್ಲಿ ಕುಂಭ ಮೇಳ ನಡೆಯುತ್ತದೆ, ಪೌರಾಣಿಕ ಕತೆ ಪ್ರಕಾರ ಇಂದ್ರನ ಮಗ ಎಲ್ಲರ ಕಣ್ತಪ್ಪಿಸಿ ಅಮೃತವನ್ನು ತೆಗೆದುಕೊಂಡು ಹೋಗುವಾಗ ನಾಲ್ಕು ಕಡೆ ಅಮೃತ ತುಂಬಿದ ಕುಂಬ ಇಡುತ್ತಾನೆ, ಆ ಸ್ಥಳಗಳಲ್ಲಿ ಕುಂಭ ಮೇಳೆ ನಡೆಯುತ್ತದೆ.

ಪ್ರಯಾಗ್‌ರಾಜ್‌: ಗಂಗಾ, ಯಮುನಾ, ಸರಸ್ವತಿ ನದಿಗಳು ಸಂಗಮವಾಗುವ ಸ್ಥಳ. ಇಲ್ಲಿ ಮೂರು ವರ್ಷಕ್ಕೊಮ್ಮೆ ಕೂಂಬಮೇಳ ನಡೆಯುತ್ತದೆ, ಈ ವರ್ಷ ಮಹಾಕುಂಭಮೇಳ ಕೂಡ ಇಲ್ಲಿಯೇ ನಡೆಯುತ್ತಿದೆ.

ಹರಿದ್ವಾರ: ಇಲ್ಲಿ ಕುಂಭ, ಅರ್ಧ ಕುಂಬ(6 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ), ಪೂರ್ಣ ಕುಂಭಮೇಳ ನಡೆಯುತ್ತದೆ.

ನಾಸಿಕ್‌: ಇಲ್ಲಿ 12 ವರ್ಷಕ್ಕೊಮ್ಮೆ ಪೂರ್ಣಕುಂಭಮೇಳ ನಡೆಯುತ್ತದೆ

ಉಜ್ಜಯಿನಿ: 2028ರಲ್ಲಿ ನಡೆಯಲಿರುವ ಕುಂಭಮೇಳ ಉಜ್ಜಯಿನಿಯಲ್ಲಿ ನಡೆಯಲಿದೆ.

Story first published: Tuesday, January 14, 2025, 23:35 [IST]
X
Desktop Bottom Promotion