Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಮೌನಿ ಅಮವಾಸ್ಯೆ ಯಾವಾಗ? ಪಿತೃದೋಷ, ಶನಿದೋಷ ನಿವಾರಣೆಗೆ ಏನು ಮಾಡಬೇಕು?
ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ, ಹುಣ್ಣಿಮೆಗೆ ತುಂಬಾನೇ ಮಹತ್ವ ನೀಡಲಾಗುವುದು, ಅದರಲ್ಲಿಯೂ ಕೆಲವೊಂದು ಅಮವಾಸ್ಯೆಗಳು ಧಾರ್ಮಿಕ ಕಾರಣದಿಂದ ಮತ್ತಷ್ಟು ಮಹತ್ವವನ್ನು ಪಡೆದಿದೆ, ಅದರಲ್ಲೊಂದು ಮೌನಿ ಅಮವಾಸ್ಯೆ, ಇದೀಗ ಕುಂಭಮೇಳ ನಡೆಯುತ್ತಿದೆ, ಈ ದಿನದಂದು ಕುಂಭಮೇಳದಲ್ಲಿ ಭಾಗವಹಿಸಲೆಂದು ಭಕ್ತರ ದಂಡೇ ಹರಿದು ಹೋಗುತ್ತಿದೆ. ಈ ಮೌನಿ ಅಮವಾಸ್ಯೆ ಯಾವಾಗ? ಈ ಅಮವಾಸ್ಯೆಯ ಪ್ರಾಮುಖ್ಯತೆ ಏನು? ಈ ದಿನ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂಬ ಧಾರ್ಮಿಕ ಮಾಹಿತಿಗಳ ಬಗ್ಗೆ ತಿಳಿಯೋಣ:

ಈ ವರ್ಷ ಮೌನಿ ಅಮವಾಸ್ಯೆ ಯಾವಾಗ?
2025ರಲ್ಲಿ ಮೌನಿ ಅಮವಾಸ್ಯೆನ್ನು ಜನವರಿ 29ರಂದು ಆರಿಸಲಾಗುತ್ತಿದೆ. ಅಮವಾಸ್ಯೆ ತಿಥಿ ಜನವರಿ 28 ರಾತ್ರಿ 7:35ಕ್ಕೆ ಶುರುವಾಗಿ ಜನವರಿ29 ಸಂಜೆ 06:05ಕ್ಕೆ ಮುಕ್ತಾಯವಾಗಲಿದೆ.
ಈ ದಿನ ಲಕ್ಷಾಂತರ ಭಕ್ತರು ಕುಂಭಮೇಳಕ್ಕೆ ಹೋಗುತ್ತಿರುವುದು ಏಕೆ?
ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಭಕ್ತರು ಕುಂಭಮೇಳಕ್ಕೆ ಬರ್ತಾ ಇದ್ದಾರೆ, ಅದರಲ್ಲಿಯೂ ಮೌನಿ ಅಮವಾಸ್ಯೆಯ ದಿನದಂದು ಕುಂಭಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗುವುದು, ನಮಗೆ ಮೋಕ್ಷ ಸಿಗುತ್ತದೆ ಅಲ್ಲದೆ ರೋಗ ರುಜಿನಗಳಿಂದ ಮುಕ್ತರಾಗುತ್ತೇವೆ ಎಂಬ ನಂಬಿಕೆ, ಹೀಗಾಗಿ ಈ ದಿನ ತ್ರಿವೇಣಿ ಸಂಗಮದಲ್ಲಿ ಮಾಡುವ ಸ್ನಾನಕ್ಕೆ ತುಂಬಾನೇ ವಿಶೇಷವಿದೆ, ಈ ಸುವರ್ಣ ಸಂದರ್ಭ ಮಿಸ್ ಮಾಡಬಾರದು ಎಂದು ಕುಂಭಮೇಳದತ್ತ ಹೋಗ್ತಾ ಇದ್ದಾರೆ.
ಈ ದಿನ ಪಿಂಡ ಪ್ರಧಾನ ಮಾಡಲಾಗುವುದು
ಈ ದಿನ ಪಿತೃ ತರ್ಪಣ ನೀಡುವುದರಿಂದ ಗತಿಸಿದ ಹಿರಿಯರಿಗೆ ಮೋಕ್ಷ ಸಿಗುವುದು. ಪಿತೃದೋಷವಿದ್ದರೆ ಮನುಷ್ಯ ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ, ಪಿತೃದೋಷ ನಿವಾರಣೆಯಿಂದ ನಮ್ಮ ಬದುಕಿಗೆ ಒಳಿತಾಗುತ್ತದೆ, ಆದ್ದರಿಂದ ಪಿತೃದೋಷ ನಿವಾರಣೆಗೆ ಮೌನಿ ಅಮವಾಸ್ಯೆಯಂದು ಪಿತೃತರ್ಪಣ ನೀಡುವುದು ಒಳ್ಳೆಯದು.
ಮೌನಿ ಅಮವಾಸ್ಯೆಯಂದು ಈ ಪರಿಹಾರ ಮಾಡಿದರೆ ಒಳ್ಳೆಯದು
ಈ ದಿನ ಶ್ರೀವಿಷ್ಣುವಿಗೆ ಪೂಜೆ ಸಲ್ಲಿಸಿ ಬಡವರಿಗೆ ನಿಮ್ಮಿಂದಾಗುವಂತೆ ದಾನ ಮಾಡಿ, ಆಹಾರ ವಸ್ತುಗಳನ್ನು, ವಸ್ತ್ರಗಳನ್ನು ದಾನ ಮಾಡಿ ಇದರ ಜೊತೆಗೆ ನೀವು ಕಪ್ಪು ಎಳ್ಳು ಇಟ್ಟು ದಾನ ಮಾಡಿ. ಹೀಗೆ ದಾನ ಮಾಡುವುದರಿಂದ ಒಳಿತಾಗುತ್ತದೆ ಎಂದು ಹೇಳಲಾಗುವುದು.
ಈ ದಿನ ಪವಿತ್ರ ನದಿಯಲ್ಲಿ ದಾನ ಮಾಡಿದರೆ ದೇಹಕ್ಕೆ, ಮನಸ್ಸಿಗೆ ಒಳ್ಳೆಯದು ಎಂದು ಹೇಳಲಾಗುವುದು.
ಇನ್ನು ಶನಿ ದೋಷವಿರುವವರು ಈ ದಿನ ಶನಿ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾನೇ ಒಳ್ಳೆಯದು, ಇದರಿಂದ ಶನಿದೋಷ ಸ್ವಲ್ಪ ಕಡಿಮೆಯಾಗುವುದು.
ಈಗ ಮಕರ ರಾಶಿ, ಕುಂಭ ರಾಶಿ, ಮೀನ ರಾಶಿಯಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ. ಈ ರಾಶಿಯವರು ಈ ದಿನ ಪರಿಹಾರ ಮಾಡುವುದರಿಂದ ಶನಿದೋಷ ನಿವಾರಣೆಯಾಗಲಿದೆ.
ಜ್ಯೋತಿಷ್ಯ ದೃಷ್ಟಿಯಿಂದಲೂ ಈ ದಿನ ಮಹತ್ವದ್ದಾಗಿದೆ
ಈ ದಿನದಂದು ಸೂರ್ಯ, ಬುಧ, ಚಂದ್ರ ಮಕರ ರಾಶಿಯಲ್ಲಿ ಸಂಯೋಗವಾಗುವುದರಿಂದ ತ್ರಿಗ್ರಾಹಿ ಯೋಗ ಉಂಟು ಮಾಡುತ್ತಿದೆ. ಅಲ್ಲದೆ ಶುಕ್ರನು ಮೀನ ರಾಶಿಯಲ್ಲಿರುವುದರಿಂದ ಮಾಳವ್ಯ ಯೋಗ, ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ ಕೂಡ ಇರಲಿದೆ. ಈ ಕಾರಣದಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ.
ಈ ದಿನದ ಪೂಜಾ ವಿಧಿಗಳು
ಬೆಳಗ್ಗೆ ಬೇಗನೆ ಎದ್ದು ಗಂಗಾ ಸ್ನಾನ ಮಾಡಬೇಕು, ಸ್ನಾನ ನೀರಿಗೆ ಗಂಗಾಜಲ ಹಾಕಿಯೂ ಮಾಡಬಹುದು
ನಂತರ ಮಡಿ ಬಟ್ಟೆ ಧರಿಸಿ ಸೂರ್ಯನಿಗೆ ಆರ್ಘ್ಯ ಅರ್ಪಿಸಲಾಗುವುದು
ನಂತರ ಉಪವಾಸವಿದ್ದ ತೀರಿ ಹೋದ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿ
ನಂತರ ದೇವರ ಪೂಜೆ ಮಾಡಿ
ಈ ದಿನ ಶ್ರೀ ವಿಷ್ಣುವಿಗೆ ವಿಶೇಷ ಪೂಜೆ ಮಾಡಿ.



Click it and Unblock the Notifications